http://bilder.bild.de/fotos/immer-mehr-handynutzer-fallen-auf-die-schadsoftware-rein-31224734-43782994/Bild/2.bild.jpg

ಮಾಡರ್ನ್ ಯುಗದ ಸೆಲ್ ಫೋನ್‌ಗಳು ಏನೆಲ್ಲಾ ಕೆಲಸ ಮಾಡುತ್ತೆ ಅಂತ  ಹೇಳೋದು ನಿಜವಾಗ್ಲೂ ಕಷ್ಟ. ಆದ್ರೆ ನಮ್ಮೆಲ್ಲರಿಗೂ ಸಾಮಾನ್ಯವಾಗಿ ಗೊತ್ತಿರೋ ವಿಚಾರ ಅಂದ್ರೆ ಪ್ರಪಂಚದ ಬೇರೆ ಯಾವುದೋ ಒಂದು ಮೂಲೇಲಿರೊ ನಿಮ್ಮ ಫ್ರೆಂಡ್ಗೋ, ಮತ್ತೊಬ್ಬರಿಗೊ ಕೆಲವೇ ಕೆಲವು ಕ್ಷಣಗಳಲ್ಲಿ ಸಂದೇಶ ಕಳಿಸಬಹುದು, ಅವರ ಜೊತೆ ಮಾತಾಡ್ಬೋದು ಹಾಗು ಪ್ರಪಂಚದ ಯಾವುದೇ ವಿಷಯದ ಬಗ್ಗೆ ಇಂಟೆರ್ನೆಟಲ್ಲಿ ವಿಷಯಗಳನ್ನ ಹುಡುಕಬಹುದು…ಹೀಗೆ. ಆದರೆ ಇದ್ರಿಂದಾಚೆಗೂ ನಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಎಂತೆಂತಾದೋ ಕರಾಮತ್ತು ಮಾಡ್ಬೋದು ಗೊತ್ತಾ? ಸಾಮಾನ್ಯವಾಗಿ ಈ 7 ಟ್ರಿಕ್ಗಳು ನಿಮ್ಮ ಸ್ಮಾರ್ಟ್‌ಫೋನ್ನಲ್ಲಿ ಇದೆ ಅನ್ನೋದು ತುಂಬ ಜನಕ್ಕೆ ಗೊತ್ತಿರೋದಿಲ್ಲ. ಅದೇನು ಅಂತ ನೋಡಿ.

1. ಡಿಟೆಕ್ಟಿವ್ ಮೈಕ್ ಥರ ಬಳಸೋದು

ಕೆಲವು ಸಿಂಪಲ್ ಬದಲಾವಣೆಗಳಿಂದ ನಿಮ್ಮ ಸೆಲ್ಫೋನ್ನ ಡಿಟೆಕ್ಟಿವ್ ಮೈಕ್ ಅಥವಾ ಬೇಬೀ ಮಾನಿಟರ್ ತರ ಉಪಯೋಗಿಸ್ಬಹುದು. ನೀವು ಟೆಸ್ಟ್ ಮಾಡ್ಬೇಕು ಅಂದ್ರೆ, ಇದನ್ನ ಹೇಗೆ ಮಾಡೋದು ಅಂತ ಕೆಳಗಡೆ ವಿಡಿಯೋ ನೋಡಿ.

ನಿಮ್ಗೆ ಬೇಕಾಗಿರೋ ಒಂದು ಜಾಗದಲ್ಲಿ ನಿಮ್ಮ ಸೆಲ್ಫೋನಿಟ್ಟು ಸ್ವಲ್ಪ ದೂರದ ಜಾಗದಿಂದ ನೀವು ಸೆಟ್ ಮಾಡಿರೋ ನಿಮ್ಮ ಹ್ಯಾಂಡ್‌ಸೆಟ್ಗೆ ಕಾಲ್ ಮಾಡಿ. ಆಗ ನಿಮ್ಮ ಈ ಡಿವೈಸ್ ಅದಾಗದೆ ಉತ್ತರ ಕೊಡತ್ತೆ. ಜೊತೆಗೆ ನಿಮಗೆ ನಿಮ್ಮ ಹ್ಯಾಂಡ್‌ಸೆಟ್ ಇಟ್ಟಿರುವ ಜಾಗದಲ್ಲಿ ಏನೆಲ್ಲಾ ನಡೀತಿದೆ ಅನ್ನೋದೂ ಕೇಳ್ಸತ್ತೆ . ಇದು ಕೇವಲ ಡಿಟೆಕ್ಟೀವ್ಗಳಿಗೆ ಮಾತ್ರ ಅಲ್ಲ. ಇದನ್ನ ಯಾರ್ಬೇಕಾದ್ರೂ ಬಳಸ್ಬೋದು.

ನೀವು ಕೆಲಸಕ್ಕೆ ನಿಮ್ಮ ಮಗೂನ ಬಿಟ್ಟು ಹೋಗೋವಾಗ ಈ ರೀತಿ ಬೇಬಿ ಮಾನಿಟರ್ ಸೆಟ್ ಮಾಡಿಟ್ರೆ, ನಿಮ್ಮ ಮಗು ಹೇಗಿದೆ, ಏನ್ಮಾಡ್ತಿದೆ ಅಂತ ಗೊತ್ತಾಗತ್ತೆ… ಮಗೂನ ಮನೇಲಿ ಬಿಟ್ಟು ಬಂದಿರೋ ಚಿಂತೆ ಇರಲ್ಲ.

2. ಕಳ್ಳತನ ಆದ್ರೆ ಕೂತಲ್ಲೇ ಶಾಶ್ವತವಾಗಿ ಲಾಕ್ ಮಾಡೋದು

ಅಕಸ್ಮಾತಾಗಿ ನಿಮ್ಮ ಸೆಲ್ಫೋನ್ ಕಳೆದು ಹೋದ್ರೆ ಅಥವಾ ಯಾರಾದ್ರೂ ಅದನ್ನು ಕದ್ದು ಬಿಟ್ರೆ, ನಿಮ್ಮ ಫೋನಲ್ಲಿರುವ  ಪರ್ಸನಲ್ ವಿಷಯಗಳನ್ನ ಬೇರೆಯವರು ದುರುಪಯೋಗ ಮಾಡಿಕೊಳ್ಳದೇ ಇರೋ ಥರ ಕಾಪಾಡ್ಕೊಬೋದು. 

ಅದು ಹೇಗೆ ಅಂದ್ರೆ, ಪ್ರಪಂಚದಾದ್ಯಂತ ಪ್ರತಿ ಸಿಮ್ ಕಾರ್ಡ್ಗೆ 15 ಡಿಜಿಟ್ ಇರುವ "ಐ ಎಂ ಈ ಐ" ಅನ್ನೋ ನಂಬರ್ ಕೊಟ್ಟಿರ್ತಾರೆ. ಫೋನ್ ಕಳೆದು ಹೋಗಿದೆ ಅಂದಾಕ್ಷಣ ನಿಮ್ಮ ಮೊಬೈಲ್ ಕಂಪನೀಗೆ ಕಾಲ್ ಮಾಡಿ ಈ ನಂಬರ್ ಬಳಸಿ ನಿಮ್ಮ ಮೊಬೈಲ್ನ ಬ್ಲಾಕ್ ಮಾಡೋಕೆ ಹೇಳಿ. ಅಷ್ಟೇ… ಒಂದು ಸಲ ಬ್ಲಾಕ್ ಆದ್ಮೇಲೆ ಬೇರೆಯವರು ನಿಮ್ಮ ಮೊಬೈಲ್ನ ಬಳಸೋಕೆ ಆಗೋಲ್ಲ.

ಇದೆ ರೀತಿ ನಾವೆಲ್ಲರೂ ನಮ್ಮ ಮೊಬೈಲ್ ಕಳುವಾದಾಗ ಕಂಪ್ಲೇಂಟ್ ಕೊಟ್ಟು ಮೊಬೈಲ್ ಬ್ಲಾಕ್ ಮಾಡಿಸಿದ್ರೆ ಮೊಬೈಲ್ ಕಳ್ಳತನ ಇರೋದೇ ಇಲ್ಲ.

ಈಗಲೇ ನಿಮ್ಮ ಮೊಬೈಲ್ "ಐ ಎಂ ಈ ಐ" ಕೋಡ್ ತಿಳ್ಕೋಬೇಕು ಅಂತಿದ್ರೆ  "*#06ಎ #" ಒತ್ತಿ. ಬ್ಲಾಕ್ ಮಾಡಿ ಆರಾಮಾಗಿರ್ಬೋದು.

 

3. ಮೈಕ್ರೋಸ್ಕೋಪ್ ತರ ಬಳಸೋದು

ಈ ವಿಷಯ ನಂಬೋಕಾಗ್ದೇ ಇರ್ಬೋದು. ಆದರೆ ಬರಿಗಣ್ಣಿಗೆ ತುಂಬಾ ಚಿಕ್ಕದಾದ ವಸ್ತುಗಳನ್ನ ನೋಡೋದಕ್ಕೆ ಅಂತ ನೀವು ದುಬಾರಿ ವಸ್ತುಗಳ ಮೇಲೆ ಖರ್ಚು ಮಾಡೋದು ಬೇಕಿಲ್ಲ.

ಒಂದು ಚಿಕ್ಕದಾದ ಲೆನ್ಸ್ (ಯಾವುದೇ ಲೇಸರ್ ಪಾಯಿಂಟರ್ನಲ್ಲಿ ಸಿಗತ್ತೆ) ಮತ್ತು ಸೆಲ್ ಫೋನ್ ಬಳಸಿ, ನೀವು ಅದ್ಭುತವಾದ ಡಿಜಿಟಲ್ ಮೈಕ್ರೋಸ್ಕೋಪ್ ಮಾಡ್ಬೋದು. ಇದ್ರಿಂದ ಚಿಕ್ಕ ಚಿಕ್ಕ ವಸ್ತುಗಳನ್ನ ದೊಡ್ಡದಾಗಿ ನೋಡ್ಬೋದು ಮತ್ತು ಮಕ್ಕಳು ಕೂಡ ಜೀವಕೋಶದಲ್ಲಿರೋ ನ್ಯೂಕ್ಲಿಯಸ್ ನೋಡಕ್ಕೆ ಬಳಸ್ಬೋದು. ಹೇಗೆ ಅಂದ್ರೆ…

4. ನೀರೊಳಗೆ ಫೋಟೋ ತೆಗಿಯೋದು

ಈಗಿನ ಎಲ್ಲಾ ಸ್ಮಾರ್ಟ್ಫೋನ್ಗಳು ವಾಟರ್ಪ್ರೂಫ್ ಆಗಿರೋದು ಕಮ್ಮಿ . ಆದರೂ ನಿಮ್ಮ ಸ್ಮಾರ್ಟ್‌ಫೋನ್ನ ನೀವು ನೀರಿನೊಳಗೆ ಶೂಟಿಂಗ್ ಮಾಡಕ್ಕೆ ಉಪಯೋಗಿಸ್ಬೋದು . ಅದು ಹೇಗೆ ಸಾಧ್ಯ ಅಂತೀರಾ?

ಕೇವಲ ಎರಡೇ ಎರಡು ನಿಮಿಷದಲ್ಲಿ ಸುಲಭವಾದ ಪಾಲೀತಿನ್ ಕೇಸ್ ಮಾಡಿ ಅದ್ರಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಇಟ್ಟು ನೀವು ನೀರಲ್ಲೂ ಫೋಟೋ/ ವಿಡೀಯೋ ತೆಗೀಬೋದು.

 

5. ಫೇಸ್ ಅನ್ಲಾಕ್ ಮಾಡೋದು

ನಿಮ್ಮ ಫೋನ್ ಅನ್ಲಾಕ್ ಮಾಡಕ್ಕೆ ಆಂಡ್ರಾಯ್ಡ್ ಸಾಕಷ್ಟು ಬೇರೆ ಬೇರೆ ರೀತಿಯ ವಿಧಾನಗಳನ್ನು ಕೊಟ್ಟಿದೆ : ಪಿನ್, ಪಾಸ್ವರ್ಡ್ ರೀತಿಯ ಸೂಚಕ ಅಥವಾ ವಿಶಿಷ್ಟ ಅಸುರಕ್ಷಿತವಾದ ಸ್ವೈಪ್ಶೂಟ್ ಆಪ್ಷನ್. ಆದರೆ ಸ್ಮಾರ್ಟ್ಫೋನ್ ಬಳಸೋ ಹೆಚ್ಚಿನ ಜನ ತುಂಬಾ ಸುಲಭವಾಗಿರುವ ಮತ್ತು ಪಾಸ್ವರ್ಡ್ಗಳಿಗಿಂತ ಹೆಚ್ಚು ಸುರಕ್ಷಿತವಾಗಿರುವ ವಿಶಿಷ್ಟ ಫೇಸ್ ಅನ್‌ಲಾಕ್ ರೀತಿಯನ್ನ ಬಳಸಲ್ಲ.

ಇದ್ನ ನಿಮ್ಮ ಮೊಬೈಲ್ನಲ್ಲಿ ಸೆಟ್ ಮಾಡಕ್ಕೆ ಸೆಟ್ಟಿಂಗ್ಸ್ಗೆ ಹೋಗಿ, ಸೆಕ್ಯೂರಿಟೀ ಕೆಳಗೆ ಸ್ಕ್ರೋಲ್ ಮಾಡಿ, ಸ್ಕ್ರೀನ್ ಲಾಕ್ ಟ್ಯಾಪ್ ಮಾಡಿ ನಂತರ ನಿಮಗೆ ಬೇಕಾದ ಆಪ್ಶನ್ ಆರಿಸಿ.

 

6. ಹಾಲೋಗ್ರಾಮ್ ಮಾಡೋದು

ಮ್ಯಾಜಿಕ್ ಟ್ರಿಕ್ ಥರಾ ಸ್ವಲ್ಪ ತಾಳ್ಮೆಯಿಂದ ನೀವು ಅದ್ಭುತವಾದ 3ಡಿ ಹಾಲೋಗ್ರಾಮ್ಸ್ ಮಾಡ್ಬೋದು. ಹೇಗೆ ಅಂತ ಇಲ್ನೋಡಿ.

7. ಸ್ಮಾರ್ಟ್ಫೋನ್ ಬ್ಯಾಟರಿ ಕಾಲ ಹೆಚ್ಚಿಸೋದು

ನಿಮ್ಮ ಫೋನಿನ ಪವರ್ ಜ್ಯಾಕ್ಗೆ ಸ್ವಲ್ಪ ಸಮಯದ ನಂತರ ಧೂಳು, ಕೊಳಕು ಮತ್ತು ಇತರ ಕಸ-ಕಡ್ಡಿ ತುಂಬಿಕೊಳ್ಳುತ್ತೆ.

ತುಂಬಾ ಕಮ್ಮಿ ಜನ್ರಿಗೆ ಗೊತ್ತಿರೋ ವಿಷಯ ಏನಪ್ಪಾ ಅಂದ್ರೆ, ಚಾರ್ಜಿಂಗ್ ಪೋರ್ಟಲ್ಲಿ ಈ ತರ ಧೂಳು ಕೂತ್ಕೊಳೋದ್ರಿಂದ, ಫೋನ್ ಬೇಗ ಹಾಳಾಗತ್ತೆ. ಇದನ್ನ ತಪ್ಸಕ್ಕೆ ಆಗಾಗ ನಿಮ್ಮ ಸ್ಮಾರ್ಟ್ಫೋನ್ ಚಾರ್ಜಿಂಗ್ ಪೋರ್ಟ್ನ ಕ್ಲೀನ್ ಮಾಡ್ತಿರಿ.

ಇದಕ್ಕೇನೂ ಜಾಸ್ತಿ ಕಷ್ಟಪಡ್ಬೇಕಾಗಿಲ್ಲ. ಗಾಳಿ ತುಂಬಿದ ಸಿರಿಂಜ್ ತಗೊಂಡು ಅದರ ಸೂಜಿಯನ್ನು ಪವರ್ ಜ್ಯಾಕ್ನಲ್ಲಿ ಸೇರಿಸಿ ಗಾಳಿ ತೆಗೀರಿ. ಧೂಳು ಮಾಯ! ಸಿಂಪಲ್!

ಇನ್ಯಾತಕ್ ತಡ? ಸ್ಮಾರ್ಟ್ ಫೋನಿನ ಈ ಎಲ್ಲ ಸ್ಮಾರ್ಟ್ ವಿಷಯಗಳನ್ನ ನಿಮ್ಮ ಸ್ನೇಹಿತರ ಜೊತೆ ಹಂಚ್ಕೊಂಡು ಸ್ಮಾರ್ಟ್ ಅನ್ನಿಸ್ಕೊಳಿ!