
ಮಹಾಭಾರತದಲ್ಲಿ ತುಂಬಾ ನಿಗೂಢ ಮತ್ತೆ ವಿಶೇಷ ಅನ್ನಿಸೋ ಹೆಂಗಸರಲ್ಲಿ ದ್ರೌಪದಿ ಹೆಸ್ರೇ ಮೊದ್ಲು ಬರೋದು. ದ್ರೌಪದಿಯಿಂದ್ಲೇ ಕುರುಕ್ಷೇತ್ರ ನಡೆದಿದ್ದು ಅನ್ನೋ ಕತೆ ಜೊತೆ ಆಕೆ ಅದೆಂಥಾ ಧೈರ್ಯವಂತೆ ಆಗಿದ್ಲೂ ಅನ್ನೋದೂ ಕೂಡ ಅದೇ ಕತೇಲಿ ನಾವ್ ನೋಡ್ಬೋದು. ಒಬ್ಬರಲ್ಲ ಇಬ್ರಲ್ಲಾ ಐದು ಜನ ಗಂಡಂದಿರ (ಪಾಂಡವರ) ಹೆಂಡತಿಯಾಗಿ ಆಕೆ ಜೀವನ ಮಾಡಿದ ರೀತಿ ನೋಡಿದ್ರೆ ಕಲೀಬೇಕಾದ್ದು ತುಂಬಾನೇ ಇದೆ.
ಮಹಾಭಾರತದ ಒಂದು ಅಧ್ಯಾಯ… ಸತ್ಯಭಾಮಾ ಕೃಷ್ಣನ ಜೊತೆಗೆ ಮದ್ವೆ ಆಗೋ ಮೊದ್ಲು… ದ್ರೌಪದಿ ಮತ್ತೆ ಸತ್ಯಭಾಮ ಮಾತಾಡ್ತಾ ಕೂತಿದ್ದಾಗ ಈ 12 ಸಂಸಾರದ ಗುಟ್ಟನ್ನ ಸತ್ಯಭಾಮಂಗೆ ಹೇಳ್ಕೊಟ್ಟಳಂತೆ. ಈಗ ನೀವೂ ಓದಿ…