ಇತ್ತೀಚಿನ ದಿನಗಳಲ್ಲಿ ಹೆಂಗಸು ಬಸುರಿ ಆದಾಗ ಒಂದ್ ಕಡೆ ಸಂತೋಷ ಆದರೆ ಇನ್ನೊಂದ್ ಕಡೆ ಹೆದರಿಕೆ ಶುರುವಾಗುತ್ತೆ.

ಸಿಕ್ಕಾಪಟ್ಟೆ ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡು 9 ತಿಂಗಳು ಡಾಕ್ಟರ್ ರೆಕಾರ್ಡ್ನ ಜೋಪಾನ ಮಾಡಿ ಕಡೆಗೆ "ನಾರ್ಮಲ್" ಆಗತ್ತೋ "ಸಿಝೇರಿಯನ್" ಆಗತ್ತೋ ಅನ್ನೋದೇ ದೊಡ್ಡ ಪ್ರಶ್ನೆ. ಒಂದ್ ಥರಾ ಭಯ, ಆತಂಕ. ಹೆರಿಗೆ ನೋವು ಯಾವಾಗ ಕಾಣಿಸತ್ತೋ? ನೋವು ತಡೆದುಕೊಳ್ಳಕ್ಕೆ ಆಗತ್ತೋ ಇಲ್ಲವೋ? ಹೀಗೆಲ್ಲ ಯೋಚಿಸಿ ಯೋಚಿಸಿ ಕೊನೆಗೆ ಹೆರಿಗೆಯ ನೋವಿಂದ ಪಾರಾಗಕ್ಕೆ ಸಿಸೇರಿಯನ್ ಮೊರೆ ಹೋಗೋರು ಎಷ್ಟೋ ಜನ ಇದಾರೆ. ಬೆಂಗಳೂರು, ಮುಂಬೈ, ಡೆಲ್ಲಿ ಮುಂತಾದ ನಗರಗಳಲ್ಲಷ್ಟೇ ಅಲ್ಲ, ಈಗ ಎಲ್ಲೆಲ್ಲೂ ಬಸುರಿ ಅಂದಾಕ್ಷಣ ಯಾವ ಆಸ್ಪತ್ರೆಗೆ ಕರ್ಕೊಂಡ್ ಹೋಗೋದು, ಯಾವ ಡಾಕ್ಟರ್ಗೆ ತೋರ್ಸೋದು ಅಂತ ಮನೇಲಿ ಚರ್ಚೆ ಶುರುವಾಗತ್ತೆ.

ಕೆಲವು ಡಾಕ್ಟರ್ಗಳಂತೂ ಸಿಝೇರಿಯನ್ಗಾಗಿ ಕಾಯ್ತಾನೇ ಇರ್ತಾರೆ ಅನ್ನಿಸುತ್ತೆ.

ನಿಮಗೆ ಬೇಕಾದ ದಿನ ಮಾಡ್ಕೊಡ್ತೀನಿ ಅಂತಾನೂ ಹೇಳ್ತಾರೆ. ಪಾಪ ಅವರಿಗೂ ಖರ್ಚಿರುತ್ತಲ್ಲ?!

ಕರ್ನಾಟಕದಲ್ಲಿ ಇವತ್ತಿನ ದಿನ ಶೇಕಡ 30ರಷ್ಟು ಹೆರಿಗೆಗಳು ಸಿಝೇರಿಯನ್ನು.

ಆದರೆ ನಮ್ಮ ಹಿಂದಿನ ಪೀಳಿಗೆ… ಅಂದ್ರೆ ನಮ್ ತಂದೆ+ತಾಯಿ ಕಾಲದಲ್ಲಿ… ಸುಮಾರು ಮನೆಯಲ್ಲೇ ಹೆರಿಗೆ ಮಾಡ್ತಿದ್ರು. ಸೂಲಗಿತ್ತೀರ್ನ ಕರೆಸಿ ಮನೇಲಿ ಬೇಕಾದ ತಯಾರಿ ಮಾಡ್ಕೊಂಡು ಅಚ್ಚುಕಟ್ಟಾಗಿ ಹೆರಿಗೆ ಮಾಡಿಸ್ತಾ ಇದ್ರು. ಆಮೇಲೆ ಇದೆಲ್ಲ ಆಸ್ಪತ್ರೆಗೆ "ಶಿಫ್ಟ್" ಆಯ್ತು. ಆಸ್ಪತ್ರೆಯಲ್ಲಿ ಹೆರಿಗೆಯಾಗೋದು ಹೆಚ್ಚು ಅನುಕೂಲ ಅಂತ ಅಭಿಪ್ರಾಯ ಬಂತು. ಆದ್ರೇ ಆಧುನಿಕ ಜೀವನಶೈಲಿಯಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಹೆಚ್ಚಾಗಿ "ಸಿಝೇರಿಯನ್" ಅನಿವಾರ್ಯ ಅನ್ನೋಹಂಗೆ ಬಿಂಬಿಸ್ತಾ ಇದಾರೆ. ಸಿಝೇರಿಯನ್ ಆಪರೇಷನ್ ಮಾಡಿಸಿಕೊಂಡ ಹೆಂಗಸು+ಮಗು ಇಬ್ಬರಿಗೂ ಆ ಸಮಯದಲ್ಲಿ ಕೊಡೋ ಔಷಧಿಗಳಿಂದ ಸಾಕಷ್ಟು ಅನಾನುಕೂಲ ಇದೆ ಅಂತ ಎಲ್ಲರಿಗೂ ಗೊತ್ತೆ ಇರೋ ವಿಷಯ.

ಇಂಥಾ ಸಂದರ್ಭದಲ್ಲಿ ಮುಂಬೈನಲ್ಲಿ ಶಿವಾನಿ ಅನೋಳೊಬ್ಬಳು ಮನೇಲೇ ಹೆತ್ತ ಸುದ್ದಿ ಇತ್ತೀಚೆಗೆ ಸಕ್ಕತ್ ಓಡ್ತಿದೆ. ಅದರ ಅದ್ಭುತವಾದ ಫೋಟೋಗಳು ಕೆಳಗಿವೆ, ನೋಡಿ.

ನಾವು ಹೇಳೋದು ಹೆಚ್ಚೇನಿಲ್ಲ. ಎಲ್ಲಾ ನಿಮಗೇ ಅರ್ಥವಾಗುತ್ತದೆ. ಒಂದೇನೂಂಡ್ರೆ ಮನೆ ಒಳಗೆ ಒಂದು ಮಿನಿ ಸ್ವಿಮಿಂಗ್ ಪೂಲ್ ಮಾಡ್ಕೊಂಡು ಅದರಲ್ಲಿ ಹೆರಿಗೆ ನಡೆಸಿದಾರೆ.

ಬಸುರಿಗೆ ಧೈರ್ಯ ತುಂಬೋ ಕೆಲಸ ಗಂಡಂದು. ಸುತ್ತಮುತ್ತಲು ಬೇರೆ ಯಾರೂ ಇಲ್ಲದಿದ್ದಾಗ ಅವನೇ ಮಾಡಬೇಕಲ್ಲ?

20150610_ShivaniBirth-34-700x500.jpg

20150610_ShivaniBirth-64-700x500.jpg

20150610_ShivaniBirth-65-700x500.jpg

ಒಬ್ಬ ಸೂಲಗಿತ್ತಿ ಸಹಾಯಕ್ಕೆ ಬಂದಿದ್ದಳು.

20150610_ShivaniBirth-83-700x500.jpg

ಮಿನಿ ಸ್ವಿಮಿಂಗ್ ಪೂಲ್ ನೀರೊಳಗೆ ಹೆರಿಗೆ…

20150610_ShivaniBirth-102-700x500.jpg

20150610_ShivaniBirth-101-Edit-700x500.jpg

ಆಮೇಲೆ ಗಂಡ-ಹೆಂಡತಿ, ಮತ್ತೆಲ್ಲರ ಸಂತೋಷಕ್ಕೆ ಕೊನೇನೇ ಇಲ್ಲ!

20150610_ShivaniBirth-118-700x500.jpg

20150610_ShivaniBirth-135-700x500.jpg

20150610_ShivaniBirth-144-700x500.jpg

20150610_ShivaniBirth-175-Edit-700x500.jpg

ಮೊದಲನೆ ಮಗಳು ಜಾಹ್ನವಿ ಹೊರಗೆ ಕಾಯ್ತಾ ಕೂತಿದ್ದಳಂತೆ…

20150610_ShivaniBirth-169-700x500.jpg

ಈಗ ಹುಟ್ಟಿದ ಮಗು ಹೊಕ್ಕಳಬಳ್ಳಿ ಇನ್ನೂ ಕತ್ತರಿಸದೆ ಇರುವಾಗ ತೆಗೆದ ಫೋಟೋ…

20150610_ShivaniBirth-193-700x500.jpg

ತಮ್ಮನ ಜೊತೆ ಜಾಹ್ನವಿ ಫೋಟೋ!

20150610_ShivaniBirth-199-700x500.jpg

ಹೀಗಾಯಿತು ಶಿವಾನಿ ನಾರ್ಮಲ್ ಹೆರಿಗೆ ಕತೆ… ಎಷ್ಟು ಚೆನ್ನಾಗಿದೆ ನೋಡಿ ಮಗು!

20150610_ShivaniBirth-208-Edit-700x500.jpg

ವಿಪರ್ಯಾಸ ಏನಂದ್ರೆ ಬಸುರಿ ಹೆತ್ತರೆ ಇವತ್ತು ವಿಶೇಷವಾಗಿ ಹೇಳಬೇಕಾಗಿದೆ! ಡಾಕ್ಟರ್ ಹೆರೋದೇ ಈಗ ನಾರ್ಮಲ್ಲು!

ಮುಂಬೈನಲ್ಲಿ ಶಿವಾನಿ ಹೀಗೆ ಹೆರಬಹುದಾದರೆ ನಮ್ಮಲ್ಲಿ ಸಾಧ್ಯ ಇಲ್ಲವಾ? ನಮ್ಮಲ್ಲೂ ಯಾಕೆ ಇವತ್ತಿನ ಸಿಝೇರಿಯನ್ ಹುಚ್ಚು ಹಿಡಿಸಿಕೊಳ್ಳದೆ ಇಂಥ ಪ್ರಯತ್ನಗಳ್ನ ಮಾಡಬಾರದು? ಇದೇನು ಯಾರೂ ಮಾಡದೆ ಇರೋ ಕೆಲಸ ಅಲ್ಲವಲ್ಲ? ಅನಾದಿಕಾಲದಿಂದ ನಮ್ಮಲ್ಲಿ ಹೆಂಗಸರು ಹೆರ್ತಾ ಇರಲಿಲ್ಲವಾ? ಎಲ್ಲರೂ ಆಸ್ಪತ್ರೆಗೆ ಹೋಗ್ತಿದ್ರಾ? ಇವತ್ತಿಗೂ ಎಂಥಾ ಡಾಕ್ಟರ್ಗಳ್ನೂ ಮೀರಿಸೋ ಸೂಲಗಿತ್ತೀರು ನಮ್ಮಲ್ಲಿ ಇದಾರೆ…

ಆದರೆ ತೀರ್ಮಾನ ನಿಮ್ಮದು. ಇಂಥ ವಿಷಯಗಳ್ನ ನಿಮ್ಮ ಮುಂದಿಡೋ ಕೆಲ್ಸ ಮಾತ್ರ ನಮ್ಮದು.

ಮಾಹಿತಿ, ಚಿತ್ರಗಳು: bib