https://files.brightside.me/files/news/part_40/406910/17430260-31509360-51-0-1511525821-1511525997-1499-1-1511525997-650-a9764f6d9e-1512114377.jpg

ಈ ಫೋಟೋಲಿರೋ ಯಾವ್ದಾದ್ರು ಒಂದು ಮರ ಆಯ್ಕೆ ಮಾಡ್ಕೊಳಿ…ಅಂತೆಕಂತೆ ತಂಡದ ಈ ಹೊಸ ಪ್ರಯತ್ನದಲ್ಲಿ ನಿಮ್ಮ ಜೀವನದಲ್ಲಿ ಈ ವರ್ಷ ನಿಮಗೆ ಸಿಗಬಹುದಾದ ಅವಕಾಶಗಳ ಬಗ್ಗೆ ತಿಳ್ಕೊಳಿ…

files.brightside.me

1. ಹೊನ್ನೆ

ನೀವು ಯಾವಾಗ್ಲೂ ಲೋಟ ಅರ್ಧ ತುಂಬಿದೆ ಅಂತ ಯೋಚ್ನೆ ಮಾಡೋ ಜನ. ನೀವು ಯಾವಾಗ್ಲೂ ಬದಲಾವಣೆಗೆ ಸಿದ್ಧವಾಗಿರ್ತೀರಿ. ಹೊಸತನ್ನ ಪ್ರಯತ್ನ ಮಾಡೋದು ನಿಮಗೆ ತುಂಬಾ ಖುಷಿ ಕೊಡತ್ತೆ. ಈ ವರ್ಷ ನಿಮಗೆ ಹೊಸ ಅವಕಾಶಗಳು ಜಾಸ್ತಿ ಸಿಗತ್ತೆ, ನಿಮಗೆ ಚಾಲೆಂಜಿಂಗ್ ಅನ್ನಿಸೋ ಕೆಲಸ ಜಾಸ್ತಿ ಸಿಗತ್ತೆ 

files.brightside.me

2. ತೇಗ

ನೀವು ಒಂತರ ಸ್ವತಂತ್ರವಾಗಿ ಇರ್ತೀರ, ನೀವು ಮಾಡುವ ಕೆಲಸಕ್ಕೆ ಯಾವುದು ಅಡಚಣೆ ಅಂತ ನಿಮಗೆ ಅನ್ನಿಸಲ್ಲ. ನಿಮಗೆ ಕಲೆಯಲ್ಲಿ ಆಸಕ್ತಿ ಜಾಸ್ತಿ. ಈ ವರ್ಷ ನಿಮ್ಮ ಕಲೆಯಿಂದ ನಿಮಗೆ ದುಡ್ಡು ಸಂಪಾದನೆಯಾಗತ್ತೆ. ನೀವು ಸಿಕ್ಕಾಪಟ್ಟೆ ಕಷ್ಟ ಪಡೋದು ಬೇಕಿಲ್ಲ, ನೀವು ನಂಬಿದ ವಿಷಯಗಳನ್ನ ಹಾಗೆ ನಂಬಿ ಕೆಲಸ ಮಾಡಿದರೆ ಸಾಕು

files.brightside.me
3. ಅಶೋಕ

ನೀವು ಸಿಕ್ಕಾಪಟ್ಟೆ ಸೂಕ್ಷ್ಮ ಜೀವಿಗಳು, ನೀವು ನಿಮ್ಮ ಬಗ್ಗೆ ಮತ್ತೆ ಸುತ್ತ ಮುತ್ತ ಇರುವವರ ಬಗ್ಗೆ ತುಂಬಾ ಯೋಚ್ನೆ ಮಾಡ್ತೀರಿ. ಈ ವರ್ಷ ನಿಮಗೆ ನಿಮ್ಮ ಬಾಳ ಸಂಗಾತಿ ಸಿಗೋ ಸಾಧ್ಯತೆ ಜಾಸ್ತಿ ಇದೆ 

files.brightside.me
4. ಶ್ರೀಗಂಧ

ನೀವು ಸ್ವಲ್ಪ ಪ್ರಾಕ್ಟಿಕಲ್ಲಾಗಿ ಯೋಚಿಸೋರು. ವಾಸ್ತವ ಏನು ಅನ್ನೋದನ್ನ ತಿಳ್ಕೊಂಡು ಎಲ್ಲದನ್ನು ಬ್ಯಾಲೆನ್ಸ್ ಮಾಡ್ತೀರ. ಈ ವರ್ಷ ನಿಮಗೆ ನಿಮ್ಮ ಒಳ್ಳೆತನವನ್ನ ಮೆಚ್ಚಿಕೊಳ್ಳುವವರು ಸಿಕ್ತಾರೆ 

files.brightside.me

5. ಅರಳಿ

ನೀವು ಸ್ವಲ್ಪ ಜಾಸ್ತಿ ಭರವಸೆ ಇರೋ ಜನ, ಆತ್ಮ ವಿಶ್ವಾಸ ನಿಮಗೆ ಜಾಸ್ತಿ. ನೀವು ಯಾವದೇ ಕೆಲಸಾನ ಮುಂದಕ್ಕೆ ಹಾಕಲ್ಲ, ನಿಮಗೆ ಕೆಲಸ ಮಾಡಿ ಮುಗಿಸಿದರೆ ಒಂತರ ನಿರಾಳ. ಈ ವರ್ಷ ನಿಮಗೆ ನಿಮ್ಮ ಕೆಲಸದಲ್ಲಿ ಒಳ್ಳೆ ಹೆಸರು, ಮೇಲಿನ ಹುದ್ದೆಗೆ ಪ್ರಮೋಷನ್ ಸಿಗಲಿದೆ 

files.brightside.me

6. ಮಾವು

ನೀವು ಶಾಂತ ಸ್ವಭಾವದವರು, ನಿಮಗೆ ನಿಮ್ಮ ಸಮಯಾನ ಸ್ನೇಹಿತರ ಜೊತೆ ಕಳೆಯಕ್ಕೆ ಇಷ್ಟ ಹಾಗೆ ನಿಮ್ಮ ಸಮಯಾನ ಸ್ವಲ್ಪ ನಿಮಗೆ ಕೊಟ್ಟುಕೊಂಡು ಏಕಾಂತದಲ್ಲೂ ಕಳೆಯಕ್ಕೆ ಇಷ್ಟ. ನಿಮಗೂ ಈ ವರ್ಷ ಬಾಳ ಸಂಗಾತಿ ಸಿಗೋ ಎಲ್ಲ ಸಾಧ್ಯತೆ ಇದೆ. ನಿಮ್ಮನ್ನ ಮನಸಿಂದ ಅರ್ಥ ಮಾಡ್ಕೊಳೋ ವ್ಯಕ್ತಿ ಸಿಕ್ತಾರೆ.

files.brightside.me

7. ನೇರಳೆ

ನೀವು ಕನಸಿನ ಹಿಂದೆ ಹೋಗೋ ವ್ಯಕ್ತಿ, ನೀವು ಮನಸಿನ ಮಾತನ್ನ ಕೇಳೋರು. ಅತಿಯಾಗಿ ಲೆಕ್ಕಾಚಾರ ಹಾಕೋದು ನಿಮಗೆ ಇಷ್ಟ ಆಗಲ್ಲ. ನಿಮಗೆ ನಿಮ್ಮದೇ ರೀತಿ ವ್ಯಕ್ತಿ ಸಂಗಾತಿಯಾಗಿ ಸಿಕ್ತಾರೆ. ಭಾವನೆಗಳಿಗೆ ನೀವು ತುಂಬಾ ಬೆಲೆ ಕೊಡ್ತೀರಿ.

files.brightside.me
8. ನೆಲ್ಲಿ

ನಿಮಗೆ ಜವಾಬ್ದಾರಿ ತೊಗೊಳೋದು ತುಂಬಾ ಇಷ್ಟ, ಸಿಕ್ಕಾಪಟ್ಟೆ ಇಷ್ಟ ಪಟ್ಟು ಕೆಲಸ ಮಾಡ್ತೀರ. ನಿಮಗೆ ಒಂದೇ ರೀತಿ ಕೆಲಸ ಮಾಡಿ ಮಾಡಿ ಒಂತರ ಬೋರ್ ಆಗಿದೆ. ಒಂದೊಳ್ಳೆ ಅವಕಾಶಕ್ಕೆ ಕಾಯ್ತಿದೀರ. ನೀವು ಒಳ್ಳೆ ಆಕಾಶಕ್ಕಾಗಿ ಇನ್ನು ಜಾಸ್ತಿ ಕಾಯೋದು ಬೇಕಿಲ್ಲ. ನೀವು ನಿಮ್ಮ ಗುರಿ ಮುಟ್ಟೋಕೆ ಈ ವರ್ಷ ಒಳ್ಳೆ ಅವಕಾಶ ಇದೆ 

files.brightside.me

9. ನಿಂಬೆ

ನೀವು ಸಿಕ್ಕಾಪಟ್ಟೆ ಆತ್ಮವಿಶ್ವಾಸ ಇರುವ ವ್ಯಕ್ತಿ, ಜನ ನಿಮ್ಮನ್ನ ನಂಬುತ್ತಾರೆ, ಇದಕ್ಕೆ ಕಾರಣ ನೀವು ಅವರ ಭಾವನೆಗೆ ಕೊಡೊ ಬೆಲೆ. ನಿಷ್ಠೆಯಿಂದ, ಶ್ರದ್ದೆಯಿಂದ  ಕೆಲಸ ಮಾಡೋ ವ್ಯಕ್ತಿಗಳು ನಿಮಗೆ ಇಷ್ಟ ಆಗ್ತಾರೆ. 

files.brightside.me
ನೀವ್ ಯಾವ್ ಮರ ಆಯ್ಕೆ ಮಾಡಿದ್ರಿ?