https://s-media-cache-ak0.pinimg.com/originals/c2/d9/cd/c2d9cdc15f805c56deadf19ed888fc4e.jpg

ದಿನಾ ಮನೇಲಿ ಅಡಿಗೆ ಶುರು ಆಗೋದೇ ಸಾಸಿವೆ ಒಗ್ಗರಣೆ ಇಂದ. ಸಾಸಿವೆ ಎಣ್ಣೇನೂ ಅಡಿಗೆಗೆ ಬಳಸ್ತೀವಿ. ಆದ್ರೆ ಸಾಸಿವೆ ಅಂದ್ರೆ ಅಷ್ಟೇ ಉಪಯೋಗ ಅನ್ಕೊಂಡ್ರಾ? ಛೆ‌ ಛೆ… ಇಲ್ಲಿ ನೋಡಿ…

1. ಎಣ್ಣೆ ಸ್ನಾನ ಮಾಡೋಕೆ ಸಾಸಿವೆ ಎಣ್ಣೆ ತುಂಬ ಒಳ್ಳೇದು

  • ಬಿಸಿಲಲ್ಲಿ ಓಡಾಡಿ ನಿಮ್ಮ ಚರ್ಮ ಟಾನ್ ಆಗಿದ್ರೆ ಅಥವಾ ಕೆಂಪಗಾಗಿ ಉರಿ ಬಂದಿದ್ರೆ ಸಾಸಿವೆ ಎಣ್ಣೆ ಹಚ್ಚಿ ನೋಡಿ ತ್ವಚೆ ಬೆಳ್ಳಗಾಗುತ್ತೆ, ಉರಿನೂ ಕಡಿಮೆ ಆಗುತ್ತ್ತೇ.
  • ನಿಮ್ಮ ಮೈ ಕುಸ್ತಿ ಪಟು ಥರ ಗಟ್ಟು ಮುಟ್ಟಾಗಿ ಆಗ್ಬೇಕು ಅಂತಿದ್ರೂ ಸಾಸಿವೆ ಎಣ್ಣೆ ಹಚ್ಚಿ ಸ್ನಾನ ಮಾಡಿ.
  • ನಿಮಗೆ ವಯಸ್ಸಾಗೋದು ಚರ್ಮದ ಮೇಲೆ ಕಾಣಿಸೋದು ಇಷ್ಟ ಇಲ್ಲ ಅಂದ್ರೆ ದಿನ ಸಾಸಿವೆ ಎಣ್ಣೆಲಿ ಮಾಲಿಶ್ ಮಾಡಿ ಸ್ನಾನ ಮಾಡಿ.
  • ಇದ್ರಲ್ಲಿ ವಿಟಮಿನ್ "ಈ" ಇರೋದ್ರಿಂದ ನಿಮ್ಮ ಚರ್ಮನ ಅಲ್ಟ್ರಾ ವಯಲೆಟ್ ಕಣಗಳಿಂದ ರಕ್ಷಣೆ ಮಾಡೋದಲ್ಲದೆ ನಿಮ್ಮ ಚರ್ಮ ಬೇಗ ಸುಕ್ಕುಗಟ್ಟದ ಹಾಗೆ ಮಾಡುತ್ತೆ.

ಮೂಲ

2. ಯಾವುದೇ ನೋವಿದ್ರೂ ಸಾಸಿವೆ ಎಣ್ಣೆ ರಾಮಬಾಣ

  • ಸಾಸಿವೆ ಎಣ್ಣೆಗೆ  ಕರ್ಪೂರದ ಪುಡಿ ಹಾಕಿ ಬೆರೆಸಿ ಬಿಸಿಲಲ್ಲಿ ಒಂದೆರಡು ದಿನ ಇಡಿ. ಈ ಎಣ್ಣೆನ ಮೈಗೆಲ್ಲ ಹಚ್ಚಿ* ಸಂಧಿವಾತ ಏನಾರು ನಿಮ್ಮನ್ನ ಬಾದಿಸ್ತಿದ್ರೆ, ದಿನ ಸ್ನಾನಕ್ಕೆ ಮುಂಚೆ ಸಾಸಿವೆ ಎಣ್ಣೆನ ನಿಮ್ಮ ಸಂಧಿಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಸಿಲಿಗೆ ಮೈಯೊಡ್ಡಿ ಸ್ನಾನ ಮಾಡಿ.
  • ಸಾಸಿವೆ ಎಣ್ಣೆ ಇಲ್ಲ ಅಂದ್ರೆ ಮನೇಲಿ ಸಾಸಿವೆ ಅಂತೂ ಇದ್ದೆ ಇರುತ್ತೆ, ಸಾಸಿವೆ ಜೊತೆ ಕರ್ಪೂರ ಪೇಸ್ಟ್ ಮಾಡಿ ನೋವಿರೋ ಜಾಗಕ್ಕೆ ಹಚ್ಚಿ ನೋಡಿ, ನೋವು ಮಂಗ ಮಾಯಾ ಆಗುತ್ತೆ.
  • ಸಾಸಿವೆ ಸಕ್ಕರೆ ಮಿಶ್ರಣ ಮಾಡಿ ಇದನ್ನ ನೋವಿರೋ ಜಾಗಕ್ಕೆ ಹಚ್ಚಿ ಅದರ ಮೇಲೆ ಒಂದು ಬಟ್ಟೆ ಕಟ್ಟಿಡಿ, ಸ್ವಲ್ಪ ಹೊತ್ತಿನ ನಂತರ ನೋವು ಕಡಿಮೆ ಆದ್ಮೇಲೆ ಬಿಸಿನೀರಿನಿಂದ ಸ್ನಾನ ಮಾಡಬಹುದು.ಸ್ನಾನ ಮಾಡೋದ್ರಿಂದ ಎಂಥ ನೋವಾದ್ರೂ ಮಾಯಾ ಆಗುತ್ತೆ.
  • ಸಯಾಟಿಕ ಖಾಯಿಲೆ ಇರೋರಿಗೆ ನೋವು ಹೆಚ್ಚಾಗಿದ್ರೆ, ಸೊಂಟದ ಭಾಗಕ್ಕೆ ಅಂದ್ರೆ ನೂವು ಶುರು ಆಗಿರೋ ಭಾಗಕ್ಕೆ ಸಾಸಿವೆ ಪಾಸ್ಟ್ ಹಚ್ಚಿ ನೋಡಿ.
     

ಮೂಲ

3. ಚಳಿಗಾಲದಲ್ಲಿ ಚರ್ಮ ಒಡೆದಿದ್ದರೆ ಸಾಸಿವೆ ಎಣ್ಣೆ ಬಹಳ ಒಳ್ಳೇದು

  • ಚಳಿ ಗಾಳಿಗೆ ಹೆಚ್ಚು ಸಂಪರ್ಕಕ್ಕೆ ಬಾರೋ ಮುಖ , ಕೈ ಕಾಲುಗಳಿಗೆ ದಿನ ಸಾಸಿವೆ ಎಣ್ಣೆ ಹಚ್ಚಿ 10 ನಿಮಿಷ ಬಿಟ್ಟು ಸ್ನಾನ ಮಾಡಿದ್ರೆ ಇಡಿ ದಿನ ನಿಮಗೆ ಚರ್ಮ ಕಾಂತಿಯುತ ಆಗಿರುತ್ತೆ.
  • ಅಯ್ಯೋ ಸ್ನಾನಕ್ಕೆ ಮುಂಚೆ ಎಣ್ಣೆ ಹಚ್ಚೋದು ಮರ್ತೆ ಅಂತೀರಾ? ಹಾಗಿದ್ರೆ ಒಂದು ಸ್ವಲ್ಪ ಎಣ್ಣೆನ ಹೊಕ್ಕಳಿಗೆ ಹಚ್ಚಿ ಬಿಟ್ಬಿಡಿ ಇಡಿ ದೇಹದ ಚರ್ಮಕ್ಕೆ ಇದು ಸಾಕು.

ಮೂಲ

4. ಉಸಿರಾಟದ್ ತೊಂದ್ರೆಗೂ ಇದು ಔಷಧಿ

  • ಮೂಗು ಕಟ್ಟಿದ್ರೆ ಒಂದು ಹನಿ ಸಾಸಿವೆ ಎಣ್ಣೆನ ಹಾಕಿದ್ರೆ ಸಾಕು ಕ್ಷಣದಲ್ಲಿ ಸರಿ ಹೋಗುತ್ತೆ.
  • ಅರ್ಧ ಚಮಚ ಸಾಸಿವೆ ಪುಡಿ ಜೊತೆ ಜೇನುತುಪ್ಪ ಅಥವಾ ಬೆಣ್ಣೆ ಸೇರಿಸಿ ದಿನಕ್ಕೆ ಎರಡು ಸಾರಿ ಸೇವಿಸೋದ್ರಿಂದ ಕಫ ಕಟ್ಟಿ ಉಸಿರಾಟಕ್ಕೆ ತೊಂದ್ರೆ ಆಗಿದ್ರೆ ಅದು ಕಡಿಮೆ ಆಗುತ್ತೆ.
  • ಕೆಮ್ಮು ಹೆಚ್ಚಾಗಿ ತೊಂದ್ರೆ ಆಗ್ತಿದ್ರೆ ಅರ್ಥ ಚಮಚ ಸಾಸಿವೆ ಪುಡಿ ಜೊತೆಗೆ, ಒಂದೆರಡು ಚಿಟಿಕೆ ಬ್ಲಾಕ್ ಸಾಲ್ಟ್ ಹಾಗೆ ಕೆಂಪು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಕಫ ಪೂರ್ತಿ ವಾಸಿ ಆಗುತ್ತೆ.

ಮೂಲ

5. ಕೂದಲು ಉದುರ್ತಾ ಇದ್ಯಾ? ಸಾಸಿವೆ ಎಣ್ಣೆ ಬಳಸಿ

  • ಗೋರಂಟಿ ಎಲೆಗಳನ್ನ ಸಾಸಿವೆ ಎಣ್ಣೆ ಹಾಕಿ ಅದಕ್ಕೆ ಎರಡರಷ್ಟು ನೀರು ಹಾಕಿ, ನೀರು ಆವಿ ಆಗೋವರೆಗೂ ಕುದ್ದಿಸಿಡಿ. ಈ ಎಣ್ಣೆನ ನಿಮ್ಮ ಕೂದಲಿಗೆ ಹಚ್ಚಿದ್ರೆ ಕೂದಲು ಸೊಂಪಾಗಿ ಬೆಳೆಯುತ್ತೆ.
  • ಚಿಕ್ಕ ವಯಸ್ಸಿಗೆ ಬಿಳಿ ಕೂದಲು ನಿಮ್ಮನ್ನ ಬಾದಿಸ್ತಿದ್ರೆ ವಾರಕ್ಕೆರಡು ಸಾರಿ ಆದ್ರೂ ಸಾಸಿವೆ ಎಣ್ಣೆ ಕೂದಲಿಗೆ ಬಳಸಿ.
  • ಸಾಸಿವೆ ಎಣ್ಣೆಲಿ ಒಲಿಯಿಕ್ ಆಸಿಡ್ ಹಾಗೇನೇ ಲಿನೊಲೆನ್ಕ್ ಆಸಿಡ್ ಇರೋದ್ರಿಂದ ತಲೆಗೆ ರಕ್ತಸಂಚಾರ ಸುಗಮ ಆಗಿಸಿ ಕೂದಲು ಬೆಳೆಯೋಕೆ ಸಹಾಯ ಮಾಡುತ್ತೆ.
  • ಸಾಸಿವೆ ಎಣ್ಣೆಗೆ ಕರ್ಪೂರ ಹಾಕಿ ಬಿಸಿಲಲ್ಲಿಟ್ಟು ತಲೆಗೆ ಹಚ್ಚಿದ್ರೆ ಕೂಡದು ದಟ್ಟವಾಗಿ ಕಪ್ಪಾಗಿ ಬೆಳೆಯುತ್ತೆ.
  • ಸಾಸಿವೆ ಪುಡಿ ಇಂದ ಕೂದಲನ್ನ ತೊಳೆಯೋ ಅಭ್ಯಾಸ ಮಾಡ್ಕೊಂಡ್ರೆ ಬೊಕ್ಕತಲೆ, ಹೊತ್ತು ಹಾಗೆ ಹೇನಿನ ಸಮಸ್ಯೆ ಇರೋದಿಲ್ಲ.

ಮೂಲ

6. ಹಲ್ಲುನೋವಿಗೂ ಸಾಸಿವೆ ಎಣ್ಣೆ ಬಳಸಬಹುದು

  • ದಿನ ಸಾಸಿವೆ ಎಣ್ಣೆಲಿ ಬಾಯಿ ಮುಕ್ಕಳಿಸೋದ್ರಿಂದ ನಿಮ್ಮ ವಸಡುಗಳು ಗಟ್ಟಿ ಆಗುತವೆ ಹಾಗಾಗಿ ಹಲ್ಲು ನೋವು, ದೂರ್ವಾಸನ ಅಂಥವಾ ಬಾಯಲ್ಲಿ ರಕ್ತ ಸ್ರಾವ ಆಗೋದಿಲ್ಲ.
  • ಜಾಸ್ತಿ ಹಲ್ಲು ನೋವಿದ್ರೆ ಬಿಸಿನೀರಲ್ಲಿ ಸಾಸಿವೆ ಓದಿ ಹಾಕಿ ಬಾಯಿ ಮುಕ್ಕಳಿಸಿ.

ಮೂಲ

7. ತಲೆನೋವಲ್ಲೂ ಬಳಸಬಹುದು

ಸಾಸಿವೆ ಪೇಸ್ಟ್ ಮಾಡಿ ತಲೆಗೆ ಹಚ್ಚಬೇಕು, ಅಷ್ಟೇ.

ಮೂಲ

ಮಾಮೂಲಿ ಸಾಸಿವೆಗೆ ಇಷ್ಟೆಲ್ಲ ಉಪಯೋಗ ಇದೆ ಅಂತ ಗೊತ್ತಿತ್ತಾ ನಿಮಗೆ?