ಎಷ್ಟ ಒರಿಸಿಕೊಂಡ್ರೂ ಹಸಿ ಇರೋವಂಥ ಕೈ,ಕಾಲ ಇದ್ದೌರದು ಹೇಳಲಾರದ ತ್ರಾಸು. ಗೊತ್ತ ಇದ್ದಿದ್ದ ಮಂದಿ ಅವರನ್ನ ನೋಡಿ ಹೇಸಗೊತಾರ. ಅವರ ಮುಟ್ಟಿದ್ದ ಸಾಮಾನ ಮುಟ್ಟಂಗಿಲ್ಲಾ ಅನ್ನೋ ನೋವು ಒಂದ ಕಡೆ ಆದ್ರ. ತಾವು ಕುಂತ ಜಾಗಾ ಹಸೀ ಆಗತದ, ಏನರ ಸಾಮಾನ ಮುಟ್ಟಿದ್ರ ಅದುನೂ ಹಸಿ ಆಗತದ ಅನ್ನೋ ಮುಜುಗರಾ ಇನ್ನೋಂದ ಕಡೆ.
ಅದಕ್ಕ ಇಂತಥವರ ತ್ರಾಸ ಸಲ್ಪ ಕಮ್ಮಿ ಮಾಡಬೇಕಂತ ಕೆಲವು ಪರಿಹಾರಾ ತಂದೇನಿ.
ಬರ್ರಿ ಅವೇನು ಅಂತ ನೋಡೋಣ.

1. ಅಡಿಗಿ ಸೋಡಾ :- ಎರಡ ಮೂರ ಚಮಚಾ ಅಡಿಗಿ ಸೋಡಾನ ಸಲ್ಪ ಉಗುರ ಬೆಚ್ಚನ ನೀರಿನ್ಯಾಗ ಹಾಕಿ ,ನಿಂ ಕೈ-ಕಾಲ ಅದರೊಳಗ ಎದ್ದಿ ಹಗರಕ ಸಿಕ್ಕೊತಿರ್ರಿ. ಒಂದ ಇಪ್ಪತ್ತ ನಿಮಿಷ ಆದಮ್ಯಾಲೆ ಛೊಲೋತನ್ಯಾಗಿ ಒರಸಕೊಂಡ ಬಿಡರಿ.

 

2. ರೋಸ್ ವಾಟರ್:- ಆವಾಗ ಆವಾಗ ಗುಲಾಬಿ ನೀರನ್ನ ಕೈ-ಕಾಲಿಗೆ ಹಚ್ಚಕೋತಿರ್ರಿ. ಗುಲಾಬಿ ದಳಾ ನೀರ ಒಳಾಗ ಕುದಿಸಿ ಆರಿದ ಮ್ಯಾಲೆ ಹಚ್ಚಕೊಂಡ್ರೂ ಬರತದ.

3. ತಣ್ಣೀರು:- ನಿಮ್ಮ ಕೈ,ಕಾಲಗುಳನ್ನ 15-20 ನಿಮಿಷ ತಣ್ಣೀರಾಗ ನೆನಸಿ ಆಮೇಲೆ ಮೆತ್ತನ್ನ ಬಟ್ಟಿಯಿಂದ ಒರಸಬೇಕು.

4. ನಿಂಬೆ:- ನಿಂಬಿಹಣ್ಣಿನ ಸಿಪ್ಪಿನ್ನ ಛೊಲೋ ಒಣಗಿಸಿ ಹುಡಿಮಾಡಿ ಆ ಪುಡಿನ್ನ ಕೈಕಾಲಿಗೆ ಹಚ್ಚ್ಕೊರ್ರಿ. ನಿಂಬಿ ಹಣ್ಣಿನ ರಸದ್ದ ಕೂಡ ಉಪ್ಪ ಬೆರಸ್ಕೊಂಡ ಕೈ,ಕಾಲಿಗೆ ಹಚ್ಕೊಂಡ್ರನೂ ಕೈಯಾನ್ನ ತೆವಾಂಶ ಕಮ್ಮಿ ಆಗತದ.

5.  ಆಲೂಗಡ್ಡಿ ರಸಾ, ಟಮೆಟೋ ರಸಾ, ಆ್ಯಪಲ್ ಸೈಡರ್ ವಿನಿಗರ :- ಆಲೂಗಡ್ಡಿ ರಸಾ, ಟಮೆಟೋ ರಸಾ, ಆ್ಯಪಲ್ ಸೈಡರ್ ವಿನಿಗರನ ಕೈ-ಕಾಲಿಗೆ ಸವರಿಕೊಳ್ಳೊದರಿಂದಾನೂ ನೀರಿನ ಪಸೆಯಿಂದಾ ದೂರಿರಬೌದು.

ಇಷ್ಟೊತ್ತನಾ ಏನೇನ ಮಾಡಬೇಕು ಅಂತ ತಿಳಕೊಂಡ್ರಿ ಅಲ್ಲಾ ಈಗ ೇನೇನ ಮಾಡಬಾರದು ಅನ್ನೋದನ್ನ ಹೇಳತೇನಿ ಕೇಳ್ರಿ.

  1. ಸಕ್ಕರಿ,ಮಸಾಲಿ,ಕಾಫಿ ಮತ್ತ ಎಣ್ಣಿ ಪದಾರ್ಥಗಳನ್ನ ಬಾಳ ತಿನ್ನಬಾರದು. ಬಿಟ್ಟಬಿಟ್ಟರಂತೂ ಬಾರೀ ಛೊಲೊ.
  2. ಪೆಟ್ರೋಲಿಯಂ ಜೆಲ್ಲಿ ಇರೋವಂಥಾ ಕ್ರೀಮಗಳನ್ನ ಹಚ್ಚಕೊಬ್ಯಾಡರಿ.

3. ಚಂದ ಒಗೀದ ಬೆವರ್-ಬೆವರ ಇದ್ದಿದ್ದು ಅಥವಾ ಚಂದ ಒಣಗದ ನೀರ್-ನೀರ ಇದ್ದಿದ್ದ ಕಾಲಚೀಲಾ,ಕೈಚೀಲಗಳನ್ನಂತೂ ಮರೇ…. ಬಳಸಬ್ಯಾಡರಿ.

ಇವಿಷ್ಟುನ್ನೂ ಪಾಲಸಿದ್ರ ೊದ್ದಿ ಕೈ-ಕಾಲಿಂದಾ ಮುಜುಗರಾ ಪಡೋದ ತಪ್ಪತದ ನೋಡ್ರಿ.