https://upload.wikimedia.org/wikipedia/commons/4/4b/Baba_Harbhajan_Singh.JPG

ನಾವು ಎಷ್ಟೇ ಮೂಢನಂಬಿಕೆ ಅನ್ಕೊಂಡ್ರೂ ವೀರ ಮರಣ ಹೊಂದಿರೊ ನಮ್ಮ ದೇಶದ ಸೈನಿಕರ ಸಾವಿನ ಸುತ್ತ ಕಥೆಗಳು ಹರಿದಾಡ್ತಾನೇ ಇರುತ್ತೆ. ಕೆಲುವು ಪಾಪ ಅಂತ ದುಃಖ ತರ್ಸಿದ್ರೆ, ಇನ್ನು ಕೆಲುವು ಹೀಗೂ ಆಗಕ್ಕೆ ಸಾಧ್ಯಾನಾ ಅಂತ ಬೆರಗಾಗ್ಸುತ್ವೆ. ಅಂಥದ್ದೇ ಒಂದು ಕಥೆ, ನಮ್ಮ ಇಂಡಿಯನ್ ಆರ್ಮೀ ಸೈನಿಕ ಹರ್ಭಜನ್ ಸಿಂಗ್ದು! 

ಹರ್ಭಜನ್ ಸಿಂಗ್ 1967ರಲ್ಲೇ ಸತ್ತಿದ್ರೂ ಅವನ ಆತ್ಮ ಇನ್ನೂ ಗಡಿ ಕಾಯ್ತಿದೆ ಅನ್ನೋ ಬಲವಾದ ನಂಬಿಕೆ ಇದೆ.

ಇದೇನೂ ಅಂತ ತಲೆಕೆಡಿಸ್ಕೋ ಬೇಡಿ. ಹೇಳ್ತೀವ್ ಕೇಳಿ ಈ ಬಾಬಾ ಹರ್ಭಜನ್ ಸಿಂಗ್ ಪುರಾಣ.

ಮೂಲ

1941ರಲ್ಲಿ ಪಂಜಾಬಿನ ಒಂದು ಚಿಕ್ಕ ಹಳ್ಳೀಲಿ ಹುಟ್ಟಿ,1956ರಲ್ಲಿ ಆರ್ಮೀಗ್ ಸೇರ್ಕೊಂಡ. ಆಮೇಲೆ 1965ರಲ್ಲಿ ರಾಜ್ಪುತ್ ರೆಜಿಮೆಂಟ್ಗೆ ಟ್ರಾನ್ಸ್ಫರ್ ಆಯ್ತು. ಆದರೆ ಇದಾದ 2 ವರ್ಷದಲ್ಲಿ, ಇಂಡೋ- ಚೈನಾ ಬಾರ್ಡರಲ್ಲಿರೊ ನಥುಲ ಪಾಸಲ್ಲಿ  ಆರ್ಮಿ ಸಾಮಾನುಗಳನ್ನ ಸಾಗಿಸ್ತಿದ್ದಾಗ ಹಿಮಪ್ರವಾಹಕ್ಕೆ ಸಿಲುಕಿ ಪ್ರಾಣಕಳ್ಕೊಂಡ. ಇದಾಗಿ 3 ದಿನ ಆದ್ಮೇಲೆ ಅವನ ಶವ ಸಿಕ್ತು. ಪೂರ್ತಿ ಸರ್ಕಾರಿ ಗೌರವದಿಂದ ಆರ್ಮಿ ಅವರು ಅಂತ್ಯ ಸಂಸ್ಕಾರ ಮಾಡಿದ್ರು.

ಹರ್ಭಜನ್ ಸಿಂಗ್ ತನ್ನ ಸ್ನೇಹಿತರ ಕನಸಲ್ಲಿ ಕಾಣಿಸ್ಕೊಂಡು ತನ್ಗೊಂದು ಸಮಾಧಿ ಕಟ್ಟಿಸೋಕ್ಕೆ ಹೇಳಿದ್ನಂತೆ. ಅವನ ಈ ಇಚ್ಚೇನ ಯೋಧರು ಪೂರ್ತಿ ಮಾಡಿದ್ರು.

ಇವತ್ಗೂ ಹರ್ಭಜನ್ ಸಿಂಗ್ ಗಡಿ ಕಾಯ್ತಿದ್ದಾನೆ ಅಂತ ನಥುಲಾ ಪಾಸಲ್ಲಿ ಕೆಲ್ಸ ಮಾಡೊ ಸೈನಿಕರು ಗಟ್ಟಿಯಾಗಿ ನಂಬ್ತಾರೆ. ಪ್ರತೀ ಸರ್ತಿ ಧಾಳಿ ಆಗೋ 3 ದಿನದ ಮುಂಚೆ ಈ ಹರ್ಭಜನ್ ಸಿಂಗ್ ಆತ್ಮ ಯಾವ್ದಾದ್ರೂ ಒಂದು ರೀತೀಲಿ ಸೈನಿಕರಿಗೆ ಸೂಚನೆ ಕೊಡತ್ತಂತೆ. ಇಂಡೋ – ಚೈನೀಸ್ ಫ್ಲ್ಯಾಗ್ ಮೀಟ್ ಟೈಮಲ್ಲಿ ಚೈನೀಸ್ ಸೈನ್ಯದೋರು ಕೂಡ ಅವನಿಗೋಸ್ಕರ ಕುರ್ಚಿ ಕಾಯ್ದಿರ್ಸಿ ಮರ್ಯಾದೆ ತೋರಿಸ್ತಾರಂತೆ. ಆರ್ಮಿ ಯೂನಿಟ್ಗಳು ಇಲ್ಲಿಗೆ ಬಂದು ಸೇವೆ ಮಾಡ್ದಾಗ ಬೋರ್ಡ್ ಹಾಕ್ಸಿ ಅವನಿಗೆ ಮರ್ಯಾದೆ ಸಲ್ಲಿಸ್ತಾರೆ.

ಮೂಲ

ಈ ಬಾಬಾ ಸಮಾಧೀಲಿ ಸಿಗೋ ತೀರ್ಥ ಕುಡಿದ್ರೆ ಸೈನಿಕರ ಎಲ್ಲಾ ಕಾಯಿಲೇನೂ ಮಾಯ ಆಗುತ್ತಂತೆ.

ಅದಕ್ಕೇ ಇಲ್ಲಿ ಬಂದೋರು ಒಂದು ಬಾಟಲ್ ನೀರು ತಗೊಂಡ್ಬಂದು ಪೂಜೆ ಮಾಡ್ಸಿ ತಗೊಂಡ್ ಹೋಗ್ತಾರೆ. ಈ ಸಮಾಧಿ ಕಾಯ್ತಿರೋ ಸೈನಿಕರು ಶೂ ಹಾಕೊಳಲ್ಲ. ಹಾಗೇ, ಸಿಂಗ್ ಯೂನಿಫಾರ್ಮ್ ಮತ್ತು ಶೂನ ಪ್ರತಿದಿನ ಕ್ಲೀನ್ ಮಾಡ್ತಾರಂತೆ. 

ರಾತ್ರಿ ಹೊತ್ತು ಗಡಿ ಕಾಯ್ದೆ ಮಲ್ಗಿರೋ ಸೈನಿಕರನ್ನ ಯಾರೋ ತಟ್ಟಿ ಎಬ್ಸಿದ ಥರ ಆಗುತ್ತಂತೆ.

ಇದು ಬಾಬಾ ಹರ್ಭಜನ್ ಸಿಂಗ್ ಬಿಟ್ಟು ಇನ್ಯಾರು ಆಗಿರಕ್ಕೆ ಸಾಧ್ಯಾನೇ ಇಲ್ಲ ಅಂತ ಅಲ್ಲಿರೋ ಸೈನಿಕರು ಗಟ್ಟಿಯಾಗಿ ನಂಬ್ತಾರೆ. ಈ ರೀತಿ ಕಥೆಗಳು ಕೇಳಕ್ಕೆ ತುಂಬ ಸಿಕ್ತಾವೆ ಅಲ್ಲಿ. 

ಮೂಲ

ಬಾಬಾ ಹರ್ಭಜನ್ ಸಿಂಗ್ ಆತ್ಮದ ಬಗ್ಗೆ ಇರೋ ನಂಬಿಕೆ ಎಷ್ಟು ದೊಡ್ದಿದೆ ಅಂದ್ರೆ…

ಅವನ ರಿಟೈರ್ಮೆಂಟ್ ವಯಸ್ಸಾಗೋ ವರೆಗೂ ಆರ್ಮಿಯಿಂದ ಅವನ ಕುಟುಂಬಕ್ಕೆ ಪ್ರತಿ ತಿಂಗ್ಳು ಅವನ ಸಂಬಳ ಹೋಗ್ತಿತ್ತು.

ಅವನಿಗೆ ಹಾನರರಿ ಕ್ಯಾಪ್ಟನ್ ಆಗಿ ಪ್ರಮೋಶನ್ ಕೂಡ ಕೊಟ್ಟಿದ್ದಾರೆ. ಇದೆಲ್ಲಾದರ ಜೊತೆಗೆ, ಪ್ರತೀ ವರ್ಷ ಸೆಪ್ಟೆಂಬರಲ್ಲಿ ಅವನು ವರ್ಷದ ರಜಕ್ಕೆ ಹೋಗ್ತಿದ್ದಾನೆ ಅನ್ನೋ ಥರ ಇಬ್ರು ಸೈನಿಕರು ಅವನ ಸಾಮಾನೆಲ್ಲಾ ತಗೊಂಡು ಹೋಗಿ ಪಂಜಾಬಲ್ಲಿರೋ ಅವನ ಮನೇಗ್ ತಲುಪ್ಸಿ, ಸ್ವಲ್ಪ ದಿನ ಆದ್ಮೇಲೆ ಮತ್ತೆ ಅದೇ ರೀತಿ ನಥುಲಾ ಪಾಸ್ಗೆ ತಗೊಂಡು ಬರ್ತಿದ್ರು. 

ಇವತ್ಗೂ ಅವನ ಸಮಾಧಿಗೆ ತಪ್ಪದೇ ಪೂಜೆ ನಡಿಯತ್ತೆ, ಸಾವಿರಾರು ಜನ ಬಂದು ದರ್ಶನ ಮಾಡ್ತಾರೆ. ಅದ್ದಕ್ಕೇ ಹೇಳೋದು, ಮನಸಿನಂತೆ ಮಾದೇವ ಅಂತ!