https://www.cafe.ba/psiholog-otkriva-kako-da-prebolite-raskid-veze/35586ab6caa6efcb4cde7590280a7790-jpeg/

ಮನುಷ್ಯನ ಜೀವನಾನೇ ಒಂಥರಾ ವಿಚಿತ್ರ. ಸಂಬಂಧಗಳು ಬೇಕು. ಜವಾಬ್ದಾರಿ ಬೇಡ ಅನ್ನೋ ಕಾಲದಲ್ಲಿ ಕೆಲವೊಂದು ಸಂಬಂಧಗಳು ತುಂಬಾನೇ ತಲೆ ಕೆಡಿಸತ್ತೆ. ಅವರು ಬೇಕೋ ಬೇಡ್ವೋ…ಜೊತೆ ಇದ್ದರೆ ಸರಿನಾ ? ಇಲ್ಲಾ ಬಿಟ್ಟು ಬಿಟ್ರೆ ಖುಷಿನಾ ಅನ್ನೋ ಗೊಂದಲ ಕಾಡಿದಾಗ ಏನು ಮಾಡೋದು ಅಂತೀರಾ? ಇಲ್ಲಿದೆ ಒಂದು ಹತ್ತು ಪ್ರಶ್ನೆಗಳು. ಇದನ್ನ ನಿಮಗೆ ನೀವೇ ಕೇಳಿಕೊಳ್ಳೋದ್ರಿಂದ ನಿಮ್ಮ ಗೊಂದಲಕ್ಕೆ ಪರಿಹಾರ ಸಿಗತ್ತೆ.

1. ನಿಮ್ಮಲ್ಲಿರೋ ಒಳ್ಳೇ ಅಂಶಗಳು ಈ ಸಂಬಂಧದಿಂದ ಆಚೆ ಬರುತ್ತಾ?

ak3.picdn.net
ನಿಮ್ಮ ಕನಸು ನನಸು ಮಾಡಿಕೊಳ್ಳೋ ಹಾಗೆ ಪ್ರೇರೇಪಿಸೋ, ನಿಮ್ಮ ಪ್ರತಿಭೆಯನ್ನ ಮೆಚ್ಚೋ, ನಿಮ್ಮ ಒಳ್ಳೆ ಗುಣಗಳನ್ನ ಇತರರಿಗೆ ಪರಿಚಯಿಸೋ ಸಂಬಂಧ ಬೇಕು ಕಣ್ರೀ. ಆದರೆ ಸದಾ ನಿಮ್ಮನ್ನ ಕೀಳಾಗಿ ಕಾಣೋ, ಒಂದಲ್ಲ ಒಂದು ರೀತಿ ಹಿಂಸಿಸಿ ನಿಮ್ಮ ಮನಸ್ಸು ಹಾಳು ಮಾಡೋ ಸಂಬಂಧ ಬೇಕಿಲ್ಲ.

2. ಮುಕ್ಕಾಲು ಪಾಲು ಸಮಯ ಅವರ ಜೊತೆ ಖುಷಿಯಾಗಿ ಇತರ್ಿರೋ ಅಥವಾ ಸದಾಕಾಲ ಜಗಳಾನೋ?

ak1.picdn.net
ಸಂಬಂಧ ಅಂದ ಮೇಲೆ ಜಗಳ, ಮುನಿಸು, ಕಿತ್ತಾಟ ಇದ್ದಿದ್ದೇ. ಹಾಗಂದ ಮಾತ್ರಕ್ಕೆ ಸದಾ ಅದೇ ಮಾಡ್ತಿದ್ರೆ, ಅಂತ ಸಂಬಂಧ ಇರೋಕಿಂತ ಮುರಿಯೋದೇ ಒಳ್ಳೇದು. ಯಾವಾಗಲೂ ಖುಷಿಯಾಗೇ ಇತರ್ೀರ, ಆಗೊಮ್ಮೆ ಈಗೊಮ್ಮೆ ಜಗಳ ಅಂದ್ರೆ ತಲೆಕೆಡಿಸ್ಕೋಬೇಕಿಲ್ಲ.

3. ಅಗತ್ಯಕ್ಕಿಂತ ಜಾಸ್ತಿ ತ್ಯಾಗ ಮಾಡ್ತಿದ್ದೀರ?

https://www.poison.org/~/media/images/shared/
ಸಂಬಂಧ ನಿಂತಿರೋದೇ ನಂಬಿಕೆ, ವಿಶ್ವಾಸ , ತ್ಯಾಗದ ಅಡಿಪಾಯದ ಮೇಲೆ ಅಂತ ಬರೀ ನೀವೇ ಬಿಟ್ಟುಕೊಡ್ತಿದೀರೋ ಹೇಗೆ? ನಿಯತ್ತಾಗಿ ಇರೋದು ಅಂದರೆ, ನಾಯಿಬಾಳು ಬಾಳೋದಲ್ಲ. ನಿಮ್ಮ ಸ್ವಾಭಿಮಾನ, ಸ್ವಂತಿಕೆ ಬಲಿ ಕೊಟ್ಟು ಸಂಬಂಧ ಉಳಿಸೋದ್ರಲ್ಲಿ ಅರ್ಥ ಇಲ್ಲ. ಹೊಂದಾಣಿಕೆ ಬೇಕು. ಆದರೆ ಅದಕ್ಕೆ ಮಿತಿ ಇರಬೇಕು. ನಿಮಗೋಸ್ಕರ ಅವರೂ ತ್ಯಾಗ, ಹೊಂದಾಣಿಕೆ ಮಾಡ್ತಿದ್ರೆ, ಆಗ ಪರವಾಗಿಲ್ಲ.

4. ಭವಿಷ್ಯದ ಬಗ್ಗೆ ಇಬ್ಬರಿಗೂ ಒಂದೇ ತರಹದ ಕನಸು ಇದೆಯಾ?

https://encrypted-tbn0.gstatic.co

ನಿಮಗೆ ಸಂಸಾರ, ಮಕ್ಕಳು ಇದೇ ಇಷ್ಟ ಇದ್ದು, ಅವರು ಟೈಂ ಪಾಸ್ ನಿಮ್ಮ ಜೊತೆ ಅನ್ಕೊಂಡಿದ್ರೆ ಏನು ಗತಿ? ಹಾಗಾಗಿ ಕನಸುಗಳು ಹೊಂದೋದು ಮುಖ್ಯ.

5. ನಗೋಕಿಂತ ಜಾಸ್ತಿ ಹೊತ್ತು ಕಿತ್ತಾಡಿ, ಅಳ್ತಿದೀರ?

http://www.lumbinitimes.com/wp-content/uploads/
ಇಂತವರ ಜೊತೆ ಏಗೋಕಿಂತ ಸಾಯೋದೇ ಮೇಲು ಅನ್ನಿಸ್ತಿದ್ಯಾ? ಜೀವನ ಪೂರ್ತಿ ಗೋಳೇ ಆಯ್ತು ಅಂತ ಅಳ್ತೀರ? ನೀವು ನಕ್ಕು ತಿಂಗಳುಗಳೇ ಆಯ್ತಾ? ಅಂತ ಸಂಬಂಧ ಬೇಕಿಲ್ಲ ಅಂತ ಹೊರಗೆ ನಡೀರಿ.

6. ಒಬ್ಬರು ಮತ್ತೊಬ್ರಿಗೆ ಅಂತ ಸಮಯ ಕೊಟ್ಟು, ಪಡೀತಿದೀರ?

https://i2.wp.com/bohemianontherun.com/wp-content/uploads/
ಸಮಯ ಇಲ್ಲ ಅನ್ನೋದು ಕುಂಟು ನೆಪ. ನಮಗೆ ಮುಖ್ಯವಾಗಿರೋದಕ್ಕೆ ಯಾವತ್ತೂ ಸಮಯ ಇದ್ದೇ ಇರತ್ತೆ. ನೀವು ಅವರಿಗೆ ಮುಖ್ಯ ಆಗಿದ್ರೆ, ಅವರು ನಿಮಗೆ ಮುಖ್ಯ ಆಗಿದ್ರೆ, ಖಂಡಿತ ಒಬ್ಬರಿಗೊಬ್ರು ಸಮಯ ಮಾಡ್ಕೋತೀರ.

7. ನೀವು ನಿಜಕ್ಕೂ ಅವರು ಏನೋ ಅದನ್ನೇ ಪ್ರೀತಿಸ್ತೀರ? ಅಥವಾ ಅವರ ಬಗ್ಗೆ ಇರೋ ನಿಮ್ಮ ಕನಸನ್ನಾ?

https://ak0.picdn.net/shutterstock/videos/
ಇದು ತುಂಬಾ ಮುಖ್ಯ ಕಂಡ್ರೀ. ನಿಮ್ಮ ಕಣ್ಣಿಗೆ ಆತ ಮಹಾತ್ಮನ ತರ ಕಾಣಬೋದು. ಆದರೆ ಆತ ಶುದ್ಧ ಪೊಕರ್ಿ ಅಂತ ಮೇಲ್ನೋಟಕ್ಕೇ ಎಲ್ಲರಿಗೂ ತಿಳೀತಿರಬೋದು. ನಿಮಗೂ ಆಗಾಗ ಇವನು ನಾನಂದುಕೊಂಡಂಗಲ್ಲ ಅನ್ನಿಸಬೋದು. ಆಗ ಹುಷಾರು.

8. ಈಗ ಈ ಸಂಬಂಧದಿಂದ ಆಚೆ ಬರದಿದ್ರೆ, ಮುಂದೆ ಪಶ್ಚಾತಾಪ ಪಡಬೇಕಾಗತ್ತಾ?

https://www.wikihow.com/images/thumb/1/
ಬಿಟ್ಟು ಬರೋಕೆ ಧೈರ್ಯ ಸಾಲದೆ, ಈಗ ಸುಮ್ಮನಿದ್ರೆ ಮುಂದೆ ಅನುಭವಿಸಬೇಕಾತ್ತೆ ಅಂತ ಅನ್ನಿಸಿದ್ರೆ ಖಂಡಿತ ಆ ಸಂಬಂಧ ಮುರೀರಿ. ಹೋದ ಕಾಲ ಮತ್ತೆ ಬರಲ್ಲ. ಈಗಿರೋ ವಯಸ್ಸು, ಆರೋಗ್ಯ, ಅವಕಾಶ ಇನ್ನು 20 ವರ್ಷದ ನಂತರ ಸಿಗೋಕೆ ಸಾಧ್ಯ ಇಲ್ಲ.

9. ನಿಮ್ಮ ಜೀವನಕ್ಕೆ ಒಂದು ಅರ್ಥ, ಸಂತೋಷ ತರ್ತಾ ಇದ್ದಾರ?

https://ak8.picdn.net/shutterstock/videos/
ಅವರ ಜೊತೆ ಕಳೆದ ಪ್ರತಿ ಕ್ಷಣ ಸಾರ್ಥಕ ಅಂತಲೋ, ಅವರು ಜೊತೆ ಇದ್ರೆ ಹಾಯನಿಸತ್ತೆ ಅಂತಲೋ ನಿಮಗೆ ಅನ್ನಿಸಿದ್ರೆ, ಅವರೇ ಸರಿಯಾದ ವ್ಯಕ್ತಿ. ಹಾಗಿಲ್ಲದೆ, ಯಾಕಾಗಿ ಇಂತೋರ ಹತ್ರ ಸಿಕ್ಕಾಕೊಂಡೆ ಅನ್ನಿಸಿದ್ರೆ ಸಂಬಂಧ ಮುರಿದು ಬನ್ನಿ.

10. ಅವರಿಲ್ಲದೆ ಇದ್ರೆ ನಿಮ್ಮ ಜೀವನ ಇನ್ನೂ ಸಂತೋಷವಾಗಿರತ್ತಾ?

http://ak0.picdn.net/shutterstock/videos/7552510/thumb/1.jpg
ನಿಮ್ಮ ನೋವಿಗೆ ಕಾರಣ ಅವರೇ ಆಗಿದ್ರೆ, ಅವರಿಲ್ಲದೆ ನೀವು ಸುಖವಾಗಿ ಬಾಳೋದು ನಿಜ ಅನ್ನಿಸಿದ್ರೆ ಅವರ ಜೊತೆ ಏಗಬೇಕಿಲ್ಲ. ಬಿಟ್ಟು ಬನ್ನಿ. ಸಮಯ ಯಾರಿಗೂ ಕಾಯಲ್ಲ.

ಈ 10 ಪ್ರಶ್ನೆಗೆ ಸಮಾಧಾನವಾಗಿದ್ದಾಗ ಉತ್ತರ ಯೋಚಿಸಿ, ಒಂದು ನಿರ್ಧಾರಕ್ಕೆ ಬನ್ನಿ. ನೆನಪಿರಲಿ. ಕೋಪದಲ್ಲಿ ಅಪ್ಪಿತಪ್ಪಿನೂ ದುಡುಕಬೇಡಿ. ಕೋಪದಲ್ಲಿ ಕುಯ್ಕೊಂಡ ಮೂಗು ವಾಪಸ್ಸು ಬರಲ್ಲ!!!!