http://www.sahityabooks.com/wp-content/uploads/2015/10/127.jpg

ಹಂಪಿ ಚಕ್ರತೀರ್ಥದ ಬಗ್ಗೆ ಯಾರ್ ಕೇಳಿಲ್ಲ ಹೇಳಿ? ವ್ಯಾಸತೀರ್ಥರು ನಿರ್ಮಿಸಿದ 732 ಹನುಮ ವಿಗ್ರಹಗಳಲ್ಲಿ ಇದು ಮೊದಲ್ನೇದು. ಇದರ ಹಿಂದೆ ಒಂದು ಕಥೆ ಇದೆ. ಅದೇನು ಅಂತ ನಾವ್ ಹೇಳ್ತೀವಿ ಕೇಳಿ.

ವ್ಯಾಸತೀರ್ಥರು ವಿಜಯನಗರ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ರು

ವಿಜಯನಗರದ ಅರಸರಿಗೆ ಉಪದೇಶ ಕೊಡೋದರ ಜೊತೆಗೆ ವಿಜಯನಗರ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದು ವ್ಯಾಸತೀರ್ಥರು. ಅವ್ರಿಗೆ ತಮ್ಮ ಶಿಷ್ಯ ಪುರಂದರ ದಾಸರ ಜೊತೆ ಒಂದು ಅಪರೂಪದ ಸಂಬಂಧ ಇತ್ತು. ಪುರಂದರದಾಸರು ಯಾವಾಗಲೂ ವ್ಯಾಸರಾಜರ ಕೂಗಳತೆ ದೂರದಲ್ಲೇ ಇರ್ತಿದ್ರು. ವ್ಯಾಸರಾಜರು ಬೋಧನೆ ಮಾಡುತ್ತಿದ್ದದ್ದನ್ನೇ ಪುರಂದರ ದಾಸರು ಹಾಡಿ ಕುಣೀತಿದ್ರು.

ಮೂಲ

ವ್ಯಾಸರಾಜರಿಗೆ ಪುರಂದರದಾಸರ ಜೊತೆ ಇದ್ದಷ್ಟೇ ಗಾಢವಾದ ಸಂಬಂಧ ಚಕ್ರತೀರ್ಥದ ಜೊತೆಗೂ ಇತ್ತು

ವಿಜಯನಗರದಲ್ಲಿದ್ದಷ್ಟು ಕಾಲಾನೂ ವ್ಯಾಸರಾಜರು ವಿರೂಪಾಕ್ಷ ದೇವಸ್ಥಾನದಿಂದ ಚಕ್ರತೀರ್ಥದಲ್ಲಿರೋ ಕೋದಂಡರಾಮಸ್ವಾಮಿ ದೇವಸ್ಥಾನದವರೆಗೂ ನಡ್ಕೊಂಡು ಬರ್ತಿದ್ರು. ಈ ಜಾಗದಲ್ಲೇ ವಾಲೀನ ಕೊಂದ ನಂತರ ಶ್ರೀರಾಮ ಸುಗ್ರೀವನ್ನ ಕಿಷ್ಕಿಂಧೆ ರಾಜನಾಗಿ ಘೋಷಣೆ ಮಾಡಿದ್ದು.

ಮೂಲ

ಚಕ್ರತೀರ್ಥಕ್ಕೆ ದಿನಾ ಬರ್ತಿದ್ದ ಹನುಮ ರೂಪಿ ವಾನರಂಗೆ ಇಲ್ಲೇ ನೆಲೆಸಿ ಜನರನ್ನ ಹರಸು ಅಂತ ಕೇಳ್ಕೊತಾರೆ

ಇದೇ ಚಕ್ರತೀರ್ಥದಲ್ಲಿ ವ್ಯಾಸರಾಜರು ದಿನಾ ಸ್ನಾನ ಮಾಡ್ತಿದ್ರು. ಸ್ನಾನ ಆದ್ಮೇಲೆ ಪಕ್ಕದಲ್ಲೇ ಇದ್ದ ಗುಡ್ಡದ ಮೇಲೆ ಧ್ಯಾನ ಮಾಡ್ತಿದ್ರು. ಚಕ್ರತೀರ್ಥದಲ್ಲಿ ಬರೋ ನೀರಲ್ಲಿ ವ್ಯಾಸರಾಜರಿಗೆ ರಾಮ-ಸೀತೆ-ಲಕ್ಷ್ಮಣರ ಬಿಂಬ ಕಾಣ್ತಿತ್ತಂತೆ. ಒಂದಿನ ಆ ಬಿಂಬಾನ ಅಲ್ಲೇ ಇದ್ದ ಒಂದು ಬಂಡೆ ಮೇಲೆ ಬಿಡಿಸೋ ಪ್ರಯತ್ನ ಮಾಡಿದಾಗ, ಅದರ ಮೇಲೆ ಒಂದು ಕೋತಿ ಬಂದು ಕೂತು ಅಳಿಸಿ ಹಾಕ್ತಿತ್ತು. ಆದರೆ ಅವರ ಪೂಜೆ ಮುಗಿದ ತಕ್ಷಣ ಆ ವಾನರ ಅಲ್ಲಿಂದ ಮಾಯ ಆಗೋಯ್ತು. ಇದು ಸುಮಾರು ದಿನ ಹೀಗೇ ನಡೀತಿತ್ತು. 12 ದಿನ ಅಂತ ಕೆಲವರು ಹೇಳ್ತಾರೆ. ಆಮೇಲೆ ಒಂದಿನ ವ್ಯಾಸರು ಆ ವಾನರನ್ನ ಇಲ್ಲೇ ಇದ್ದು ಜನರನ್ನ ಹರಸು ಅಂತ ಕೇಳ್ಕೊಂಡು, ರಾಮ-ಲಕ್ಷ್ನಣ-ಸೀತೆಯರ ಚಿತ್ರದ ಜೊತೆ ಹನುಮ ರೂಪಿ ವಾನರಂಗೆ ದಿಗ್ಬಂಧನ ಹಾಕ್ತಾರೆ.

ಮೂಲ

ಅದೇ ಸಮಯದಲ್ಲಿ ವ್ಯಾಸರಾಜರು 'ಯಂತ್ರೋದ್ದಾರಕ ಹನುಮ' ಸ್ತೋತ್ರ ರಚನೆ ಮಾಡ್ತಾರೆ

ಹನುಮನ ಸುತ್ತ ಷಟ್ಕೋನ ಯಂತ್ರ ಬರೀತಾರೆ. ಇದಾದ ನಂತರ ಹನುಮನ ಚಿತ್ರ ಅಲ್ಲೇ ಉಳಿಯುತ್ತೆ. ಈಗ ಈ ಜಾಗ 'ಯಂತ್ರೋದ್ದಾರಕ ಹನುಮ ಕ್ಷೇತ್ರ' ಅಂತಲೇ ಪ್ರಸಿದ್ಧ. ಇಲ್ಲೇ ವ್ಯಾಸರಾಜರು ಧ್ಯಾನ ಮಾಡಿದ್ದು, ಪುರಂದರ ದಾಸರು ಹನುಮನಿಗೆ ಹಸ್ತೋದಕ ನೀಡಿದ್ದು.

ವಿಜಯನಗರದ ತಮ್ಮರಾಯ ಅರಸರು ಆಮೇಲೆ ಈ ಬಂಡೆಗೆ ದೇವಸ್ಥಾನ ಕಟ್ಟಿಸಿದ್ರು. ಹಲವು ಮಧ್ವರು ಹಾಗು ದಾಸರು ಮುಂಚಿನಿಂದಲೂ ಇಲ್ಲಿಗೆ ಬರ್ತಿದ್ರು.  ಪುರಂದರದಾಸರ ಮೂರನೇ ಮಗ ಮಧ್ವಪತಿದಾಸರು ಇಲ್ಲಿ ದಿನಾ ಪೂಜೆ ಮಾಡ್ತಿದ್ರು. ಹನುಮ ಈ ರೀತಿ ಕೂತಿರೋ ದೇವಸ್ಥಾನಗಳು ನಮ್ಮಲ್ಲಿ ಕೆಲವೇ ಸಿಗುತ್ತೆ. ಇನ್ನೊಂದೇನಪ್ಪಾ ಅಂದ್ರೆ , ರಾಮ-ಲಕ್ಷ್ಮಣರು ಕಿಷ್ಕಿಂಧೆಗೆ ಬಂದಾಗ ಇಲ್ಲೇ ಹನುಮನ್ನ ಭೇಟಿ ಮಾಡಿದ್ದಂತೆ.

ಮೂಲ

ರಾಘವೇಂದ್ರ ಸ್ವಾಮಿಗಳು ಇಲ್ಲಿ ಪೂಜೆ ಮಾಡಿ ಆಮೇಲೆ ನವ ಬೃಂದಾವನಕ್ಕೆ ಹೋಗ್ತಿದ್ರು

ರಾಘವೇಂದ್ರರನ್ನ ವ್ಯಾಸರಾಜರ ಮುಂದಿನ ಅವತಾರ ಅಂತಾರೆ. ಈ ವಿಗ್ರಹಾನ ಬೇರೆ ಬೇರೆ ಕಾಲಗಳಲ್ಲಿ ಸುರೇಂದ್ರ ತೀರ್ಥರು, ವಿಜಯೇಂದ್ರ ತೀರ್ಥರು, ವಾದಿರಾಜ ತೀರ್ಥರು, ರಾಮ ತೀರ್ಥರು, ಕನಕದಾಸರು, ಜಗನ್ನಾಥದಾಸರು, ಗೋಪಾಲದಾಸರು, ಗುರು ಜಗನ್ನಾಥದಾಸರು, ಮೋಹನದಾಸರು – ಎಲ್ಲರೂ ಪೂಜೆ ಮಾಡಿದ್ದಾರೆ ಎನ್ನಲಾಗುತ್ತೆ.

ಮೂಲ

ಇಲ್ಲಿ ವಿಷ್ಣೂಗೆ ತನ್ನ ಚಕ್ರ ಸಿಕ್ಕಿ ಜೊತೆಗೆ ತುಂಗಭದ್ರೆ ಹರಿಯೋದ್ರಿಂದ ಇದಕ್ಕೆ ಚಕ್ರತೀರ್ಥ ಅಂತ ಹೆಸ್ರು ಬಂತು

ವಿಷ್ಣುಗೆ ತನ್ನ ಚಕ್ರ ಸಿಕ್ಕಿರೋ ಈ ಜಾಗ ಹಂಪಿಯಲ್ಲಿ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲೇ ತುಂಗಭದ್ರೆ ಹರಿಯೋದ್ರಿಂದ ಇದಕ್ಕೆ ಚಕ್ರತೀರ್ಥ ಅನ್ನೋ ಹಸರು ಬಂತು. ಚಕ್ರತೀರ್ಥದ ಹತ್ರಾನೇ ಪುರಂದರ ಮಂಟಪ ಹಾಗೆ ಒಂಭತ್ತು ಮಧ್ವ ಯತಿಗಳ ಬೃಂದಾವನ ಇದೆ. 

ಮೂಲ

ಇನ್ನು ಯಂತ್ರೋದ್ದಾರಕ ಹನುಮನ ವಿಗ್ರಹದ ನಂತರ ವ್ಯಾಸರಾಜರು ವಿಜಯನಗರದ ಸುತ್ತಲೂ 731 ವಿಗ್ರಹಗಳನ್ನ ಸ್ಥಾಪಿಸಿದ್ದಾರೆ. ಅದರಲ್ಲಿ 360 ಪೆನಕೊಂಡದಲ್ಲೇ ಇದೆ. ಚಕ್ರತೀರ್ಥ ಹಂಪಿಯಲ್ಲಿ ಪುಣ್ಯ ಸ್ನಾನಕ್ಕೆ ಹಾಗು ತುಂಗಭದ್ರೆ ದಾಟೋಕೆ ಹೆಸರುವಾಸಿ ಆಗಿದೆ. ಹತ್ತಿರದಲ್ಲೇ ವ್ಯಾಸರಾಜರ ಗುಡೀನೂ ಇದೆ.

ಇವತ್ತು ಕರ್ನಾಟಕದಲ್ಲಷ್ಟೇ ಅಲ್ಲದೆ ಆಂಧ್ರ, ತಮಿಳುನಾಡಲ್ಲೂ ವ್ಯಾಸರಾಜರು ಸ್ಥಾಪಿಸಿರೋ ವಿಗ್ರಹಗಳು ಸಿಗುತ್ತವೆ. ಬೆಂಗಳೂರಿನ ಗಾಳಿ ಅಂಜನೇಯ ದೇವಸ್ಥಾನ, ಮಿಂಟೋ ಆಸ್ಪತ್ರೆ ಹತ್ತಿರ ಇರೋ ಕಣ್ಣಾಸ್ಪತ್ರೆ ಹನುಮಂತ, ಮಾರ್ಕೆಟ್ ಹತ್ತಿರ ಇರೋ ಕೋಟೆ ಆಂಜನೇಯ ದೇವಸ್ಥಾನ, ಕೆಂಗಲ್ ಹನುಮಂತ ದೇವಸ್ಥಾನ ಹಾಗೆ ದೊಡ್ಡಬಳ್ಳಾಪುರದ ರಸ್ತೇಲಿ ಹೊನ್ನೇನಹಳ್ಳಿ ಹತ್ತಿರ ಇರೋ ಆಂಜನೇಯ ದೇವಸ್ಥಾನ ಎಲ್ಲಾ ಸೇರಿದೆ.