ಕಾಲೇಜಲ್ಲಿ ವೈವಾ ಅಂದ್ರೆ ವಿದ್ಯಾರ್ಥಿಗಳ ಕಾಲು ನಡುಗಕ್ಕೆ ಶುರು!

ಏನು ಕೇಳಿಬಿಡ್ತಾರೋ! ಸಿಲಬಸ್ ಒಳಗೇ ಕೇಳ್ತಾರೋ ಅಥವಾ ಹೊರಗೂ ಕೇಳ್ತಾರೋ! ನಾನು 8ರಲ್ಲಿ 4 ಮಾತ್ರ ಓದಿರೋದು, ಬಿಟ್ಟ 1ರ ಬಗ್ಗೆ ಕೇಳಿಬಿಟ್ಟರೆ???

ಹೀಗೆ ಒಂದರಮೇಲೆ ಇನ್ನೊಂದು ಟೆನ್ಶನ್.

ಆ ಟೆನ್ಶನ್ನಲ್ಲಿ "ಹಲೋ ಬ್ರದರ್!" ಅಂತ ಮುಕ್-ಮುಕಕ್ಕೇ ಉಗಿಯುವ ಇಂಥಾ ವೈವಾ ಎಗ್ಸಾಮಿನರ್ ಬಂದ್ರೆ ಮುಗೀತು ಕತೆ:

ಏನೆಲ್ಲಾ ಮಾಡಿ ಮೆಚ್ಚಿಸಬೇಕಾಗತ್ತೆ ಅಂತ ವೈವಾ ತೊಗೊಂಡವರಿಗೇ ಗೊತ್ತು:

ಈ ವೀಡಿಯೋನಲ್ಲಿ ವೈವಾ ಬಗ್ಗೆ ಒಂದು ಚಿಂದಿ ನಾಟಕ ಮಾಡಿದಾರೆ, ಒಮ್ಮೆ ನೋಡಿ:

ಕ್ಲೈಮ್ಯಾಕ್ಸ್ ಮಾತ್ರ ಮಿಸ್ ಮಾಡಬೇಡಿ!

(ಹೌದು, ಇದು ತೆಲುಗೂಲಿ ಮೊದ್ಲು ಬಂದಿತ್ತು. ಅದಕ್ಕೇನಂತೆ? ತೆಲುಗೂದು ನೋಡಿದ್ದಾಗ ನನಗಂತೂ ಪೂರ್ತಿ ಅರ್ಥವಾಗಿರಲಿಲ್ಲ. ಈಗ ಆಯಿತು, ನಕ್ಕು ನಕ್ಕು ಸಾಕಾಯ್ತು!)