http://a4.images.thrillophilia.com/image/upload/s--sOpfLAIM--/c_fill,f_auto,fl_strip_profile,h_800,q_jpegmini,w_1300/v1/images/photos/000/108/298/original/1487833089_snowcity_image_no1.JPG.jpg?1487833089

ದಿನಾ ಬೆಳಿಗ್ಗೆ ಅದೇ ಆಫೀಸ್ಸು, ಅದೇ ಬಾಸು, ಕಂಪ್ಯೂಟರ್ ಮುಂದೆ ಕೂತ್ಕೊಂಡ್ ಟಕ್-ಟಕ್ ಅಂತ ಕೀಬೋರ್ಡ್ ಕುಟ್ಟ್ಕೊಂಡ್ ಕೆಲಸ ಮಾಡಿ ಮಾಡಿ ಸಾಕಾಗಿರತ್ತೆ, ಸಿಕ್ಕಾಪಟ್ಟೆ ಟೆನ್ಷನ್ನು… ಈ ಗ್ಯಾಪಲ್ಲಿ ಇಷ್ಟ ಪಡೋ ಹುಡ್ಗೀನ ಎಲ್ಲಿಗಾದ್ರೂ ಕರ್ಕೊಂಡ್ ಹೋಗಣ ಅಂದ್ರೆ ಎಲ್ಲಿಗೆ ಕರ್ಕೊಂಡ್ ಹೋಗೋದು ಅನ್ನೋ ಡೌಟು… ಅದಕ್ಕೆ ಬೆಂಗ್ಳೂರಲ್ಲಿರೋ ಎಲ್ಲರಿಗೂ ಸ್ವಲ್ಪ ಸುಲಭ ಆಗ್ಲಿ ಅಂತ ನಾವೇ ಒಂದಿಷ್ಟ್ ಒಳ್ಳೆ ಜಾಗ ಯಾವ ಯಾವ್ದು ಅಂತ ನಿಮಗೆ ಹೇಳ್ತೀವಿ, ಬನ್ನಿ ನೋಡಿ 

1. ಚಾಕ್ಲೆಟ್ ರೂಮ್ 

ಇದೇನಪ್ಪ ರೂಮ್ ಭರ್ತಿ ಚಾಕ್ಲೆಟ್ ಇರತ್ತ ಅಂತ ಅಂದ್ಕೋಬೇಡಿ, ಯಾರಿಗ್ ಇಷ್ಟ ಇಲ್ಲ ಅಂದ್ರು ಹುಡ್ಗೀರಿಗಂತೂ ಚಾಕ್ಲೆಟ್ ಸಿಕ್ಕಾಪಟ್ಟೆ ಇಷ್ಟ, ಈ ಜಾಗಕ್ಕೆ ಕರ್ಕೊಂಡ್ ಹೋಗಿ… ಚಾಕ್ಲೇಟಲ್ಲಿ ಏನೆಲ್ಲಾ ಮಾಡಬೋದು ಅದನ್ನೆಲ್ಲಾ ಇವ್ರ್ ಮಾಡ್ತಾರೆ. ಹಾಗಂತ ದುಡ್ಡೇನ್ ಸಿಕ್ಕಾಪಟ್ಟೆ ಇಲ್ಲ, ಆದ್ರೆ ಜಾಗ, ರುಚಿ ಎಲ್ಲ ಚೆನ್ನಾಗಿದೆ. ಜಯನಗರ, ಕೋರಮಂಗಲ, ವೈಟ್-ಫೀಲ್ಡ್ ಹೀಗೆ ಸುಮಾರ್ ಕಡೆ ಇದೆ.

ಮೂಲ

2. ಹಕುನ ಮಟಾಟ 

ಕಡಿಮೆ ದುಡ್ಡಲ್ಲಿ ಅದ್ದೊರಿತನ ಇಲ್ಲಿ ನೋಡಬಹುದು. ಜೆ ಪಿ ನಗರದಲ್ಲಿದೆ. ಮಾಕ್ಟೇಲ್, ಪನ್ನೀರ್ ಟಿಕ್ಕಾ, ಸೀ ಫುಡ್ ಇಲ್ಲಿ ಸೂಪರ್ರಾಗಿರತ್ತೆ. ಹುಡ್ಗಿನ ಡಿನ್ನರ್ಗೆ ಕರ್ಕೊಂಡೋದ್ರೆ ತುಂಬಾ ಚೆನ್ನಾಗಿರತ್ತೆ. ಆದಷ್ಟು ವೀಕೆಂಡಲ್ಲಿ ಹೋಗ್ದೆ ಇದ್ರೆ ವಾಸಿ, ಸಿಕ್ಕಾಪಟ್ಟೆ ರಶ್ ಇರತ್ತೆ!

ಮೂಲ

3. 13th ಫ್ಲೋರ್ ರೆಸ್ಟೋರೆಂಟ್ 

ಎಂ.ಜಿ. ರೋಡಲ್ಲಿ 13ನೇ ಮಹಡೀಲಿ ಇದೆ. ಇಲ್ಲಿಂದ ಬೆಂಗಳೂರು ಸಿಕ್ಕಾಪಟ್ಟೆ ಚೆನ್ನಾಗಿ ಕಾಣತ್ತೆ. ರಾತ್ರಿ ಊಟಕ್ಕೆ ಹೋದ್ರೆ ಬೆಂಗಳೂರು ಜಗ-ಮಗ ಅಂತ ಹೊಳಿತಿರತ್ತೆ. ನಿಮ್ಮ ಹುಡುಗೀಗೆ ಪ್ರೊಪೋಸ್ ಮಾಡೋ ಟೈಮ್ ಬಂದಾಗ ಇಲ್ಲಿಗೆ ಕರ್ಕೊಂಡು ಹೋಗಿ. ಸ್ವಲ್ಪ ದುಡ್ಡ್ ಜಾಸ್ತಿ/ ಆದ್ರೆ ಒಂದ್ಸತಿ ಹೋಗಕ್ಕೆ ಸೂಪರ್ ಜಾಗ ಮಾತ್ರ!

 

ಮೂಲ

4. ಆಲಿವ್ ಬೀಚ್, ಅಶೋಕ್ ನಗರ 

ಸಕತ್ ರೋಮ್ಯಾಂಟಿಕ್ ಜಾಗ ಇದು. ಇಲ್ಲಿ ಯುರೋಪಿಯನ್ ಕೇಕು ಸಖತ್ತಾಗಿರತ್ತೆ. ಹುಡುಗಿ ಜೊತೆ ಆರಾಮಾಗಿರಕ್ಕೆ ಒಳ್ಳೆ ಜಾಗ.

ಮೂಲ

5. ಸ್ನೋ ಸಿಟಿ 

ಪ್ರತಿಯೊಬ್ಬ ಮನುಷ್ಯ ಎಷ್ಟೇ ದೊಡ್ಡೋನಾದ್ರೂ ನಮ್ಮೊಳಗೆ ಒಂದು ಸಣ್ಣ ಮೂಗು ಇದ್ದೇ ಇರತ್ತೆ. ನಮ್ಮ ಮನಸ್ಸು ಆ ಮಗು ತರಾನೇ ಖುಷಿಯಾಗಿರ್ಬೇಕು ಅಂದ್ರೆ, ಸ್ನೋ ಸಿಟಿಗೆ ಹೋಗೋದು ಒಳ್ಳೆ ಚಾಯ್ಸ್. ಸ್ನೋ ಫಾಲ್, ಸ್ನೋ ಕ್ಲೈಂಬಿಂಗ್ ಅಂಥ ಮಜಾ ಮಾಡ್ಕೊಂಡು ಹಾಯಾಗಿರಕ್ಕೆ ಒಳ್ಳೆ ಜಾಗ. ಶಿಮ್ಲಾ ಮನಾಲಿ ಅಂತೆಲ್ಲಾ ದುಡ್ಡು ಖರ್ಚ್ ಮಾಡ್ಕೊಂಡು ಹೋಗಕ್ಕಿಂತಾ ಇಲ್ಲೇ ಅದರ ಆನಂದ ಸವೀಬೋದು… 45 ನಿಮಿಷದ ಒಂದು ಸ್ಲಾಟ್ಗೆ 900 ರುಪಾಯಿ… 

ಮೂಲ

6. ಶಾಪಿಂಗ್ ಮಾಲ್ಗಳು

ಯಾವ್ ಹುಡ್ಗಿಗೆ ಶಾಪಿಂಗ್ ಅಂದ್ರೆ ಇಷ್ಟ ಇಲ್ಲ ಹೇಳಿ? ಬೆಂಗ್ಳೂರಲ್ಲಿ ಶಾಪಿಂಗ್ ಮಾಡಕ್ಕೆ ಏನ್ ಬರ? ಓರಿಯನ್ ಮಾಲ್, ಸೆಂಟ್ರಲ್ ಮಾಲ್, ಗೋಪಾಲನ್ ಮಾಲ್… ಹೇಳ್ತಾ ಹೋದ್ರೆ ಲಿಸ್ಟ್ ಭಯಾನಕವಾಗಿದೆ. ಯಾವ್ದಾದ್ರು ಒಳ್ಳೆ ಮಾಲಲ್ಲಿ ನಿಮ್ಮ ಹುಡ್ಗೀನ ಶಾಪಿಂಗಿಗೆ ಕರ್ಕೊಂಡ್ ಹೋಗಿ… ಫುಲ್ ಖುಷ್ ಆಗ್ಬಿಡ್ತಾರೆ. 

ಮೂಲ

7. ಗುಹಾಂತರ – ಅಂಡರ್ಗ್ರೌಂಡ್ ರೆಸಾರ್ಟ್ 

ನಮ್ ದೇಶದ ಮೊದಲ ಅಂಡರ್ಗ್ರೌಂಡ್ ರೆಸಾರ್ಟ್ ಇದು. ಆರಾಮಾಗಿ ರಜಾ ಸಮಯದಲ್ಲಿ ಹೋಗಕ್ಕೆ ಸಖತ್ತಾಗಿರತ್ತೆ. ಪೈಂಟಬಾಲ್, ಟನಲ್ ಟ್ರಕಿಂಗ್… ಹೀಗೆ ಸುಮಾರು ಸಾಹಸಮಯ ಆಟ ಇರತ್ತೆ. ಒಟ್ನಲ್ಲಿ ಈ ಜಾಗ ನಿಮ್ಮ ಹುಡುಗಿ ಜೊತೆ ಹೋಗಕ್ಕೆ ಒಳ್ಳೆ ಜಾಗ.

ಮೂಲ

8. ಪ್ಯಾರಾಸೈಲಿಂಗ್ ಮಾಡಕ್ಕೆ ಜಕ್ಕೂರ್

ನಿಜವಾದ ಥ್ರಿಲ್ ಇಲ್ಲಿ ಸಿಗತ್ತೆ. ಮಿಸ್ಸೇ ಮಾಡ್ಕೋಬೇಡಿ ಇದನ್ನ. ಯಾರ್ಗ್ತಾನೆ ಆಕಾಶದಲ್ಲಿ ಸ್ವಚ್ಚಂಧವಾಗಿ ಹಾರಾಡಕ್ಕಿಷ್ಟ ಇಲ್ಲ ಹೇಳಿ? ಅದೂ ಅಲ್ದೆ ಮೇಲಿಂದ ನಮ್ ಬೆಂಗ್ಳೂರ್ ನೋಡೋ ಮಜಾನೇ ಬೇರೆ! ಏನಂತೀರಾ? ಇದು ಬರೀ ವೀಕೆಂಡ್ಸ್ ಮಾತ್ರ ಓಪನ್ ಇರತ್ತೆ.

ಮೂಲ

9. ಅವಳ ಬೆಟ್ಟ 

ಹೋಟೆಲ್ಲು, ಪಾರ್ಕು, ಸಿನೆಮಾ ಇದೆಲ್ಲ ಮಾಮೂಲಿ… ನಂದಿ ಬೆಟ್ಟದ ಹತ್ತಿರ ಇರೋ ಈ ಜಾಗಕ್ಕೆ ನಿಮ್ಮ ಹುಡುಗೀನ ಕರ್ಕೊಂಡು ಹೋಗಿ. ಹೈಕಿಂಗ್ ಮಾಡಕ್ಕೆ ಒಳ್ಳೆ ಜಾಗ. 

ಮೂಲ

10. ದೋಸೆ ತಿನ್ನಕ್ಕೆ ಊರ್ತುಂಬಾ ಫೇಮಸ್ ಹೋಟಲ್ಗಳು

ಅಯ್ಯೋ ಬೆಂಗಳೂರಲ್ಲಿ ದೋಸೆಗೆ ಫೇಮಸ್ಸಾಗಿರೋ ಜಾಗ ಸಿಕ್ಕಾಪಟ್ಟೆ ಇದೆ. ಆಹ್! ಎಂಥಾ ರುಚಿನಪ್ಪಾ ಅಂತ ನೀವು, ನಿಮ್ಮ್ ಹುಡುಗಿ ಒಟ್ಟಿಗೆ ಹೇಳೋ ಜಾಗಗಳು ಇಲ್ಲಿದೆ. ಕೆಳಗಿರೋ ಲಿಂಕಲ್ಲಿ ಮಾಹಿತಿ ಇದೆ.

ನೀವು ಇಲ್ಲೆಲ್ಲಾ ದೋಸೆ ತಿಂದಿಲ್ಲ ಅಂದ್ರೆ ಏನೋ ಮಿಸ್ ಮಾಡ್ಕೊಂಡಿದೀರ ಅಂತ

ಮೂಲ

11. ಡಿಸ್ನಿ ಬೇಕರಿ

ಬೆಳಿಗ್ಗೆ 6 ಗಂಟೆಗೆ ತೆಗೀತಾರೆ ಈ ಅಂಗಡೀನ… ಬೆಳಿಗ್ಗೆ ಬೆಳಿಗ್ಗೆ ಎದ್ದು ಹುಡುಗಿ ಜೊತೆ ಬಿಟಿ ಎಮ್ ಲೇಔಟ್ಗೆ ಬೈಕಲ್ಲಿ ರೈಡ್ ಹೋಗಿ ಈ ಬೇಕರೀಲಿ ಚಾಯ್ ಕುಡಿಯೋ ಮಜಾನೇ ಬೇರೆ 

ಮೂಲ

ನೋಡಿ ಇವೆಲ್ಲ ಮಾಡಿ, ಲೈಫಲ್ಲಿ ಒಂತರಾ ಕಿಕ್ ಸಿಗತ್ತೆ!