http://www.moneyhouseindia.com/img/SliderImages/Confused%20carrer.jpg

ನೀವು ಯಾರ ಹತ್ರರ ಹೋಗಿ ಒಂದ ವಿಷಯವನ್ನ ನೆನಪಿಟ್ಕೊಳೊದು ಹೇಂಗ ಅಂತ ಕೇಳಿದ್ರ ಸಾಮಾನ್ಯವಾಗಿ ಅವರಿಂದ ಬರೋ ಉತ್ತರ, “ಪದೇ ಪದೇ ಮಾಡೋದ್ರಿಂದ” ಅನ್ನೊದು. ಅವರೆಲ್ಲ ಈ ತರ ಹೇಳಾಕ ಕಾರಣ ಐತಿ ಅಂತಾ ತಿಳ್ಕೊರಿ….. ಶಾಲೆಗೆ ಹೋಗ್ತಿದ್ದಾಗ ಕಲ್ತಿದ್ದು ಇದನ್ನ. ಈ ಕಾರಣಕ್ಕೆ ನೆನಪಿನಲ್ಲಿ ಉಳ್ಕೊಂತಿತ್ತು ಅಂತ ಎಲ್ಲಾರು ಅನ್ಕೊಂಡಾರ. ಆದರೆ ನೆನಪಿನಲ್ಲಿಟ್ಕೊಳೊದು ಒಂದು ಕಲೆ. ಒಂದೇ ಒಂದ್ ಸಲ ನಿಮಗ ಇದರ ಹಿಡ್ತಾ ಸಿಕ್ಕತಂದ್ರ ಸಾಕು, ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ವಿಷಯಗಳನ್ನ ನೆನಪಿಟ್ಕೊಂತಿರಿ.   

ಕೆಲವೊಬ್ಬರು ಕೇಳೊದ್ರಿಂದ ವಿಷಯಗಳನ್ನ ನೆನಪಿಟ್ಕೊಂತಾರ, ಇನ್ನ ಕೆಲವರು ನೋಡೋದ್ರಿಂದ ವಿಷಯಗಳನ್ನ ನೆನಪಿಟ್ಕೊಂತಾರ. ಇನ್ನೂ ಕೆಲವು ಜನಗಳು ಸ್ವತಃ ತಾನೇ ಅನುಭವಿಸಿ, ಕಲಿತು ನೆನಪಿಟ್ಕೊಂತಾರ. ಇದ್ರೊಳಗ ನಿಮಗ ನೆನಪಿರಾಕ ಯಾವ್ದು ಸೂಕ್ತ? ಸಾಮಾನ್ಯವಾಗಿ ನಮ್ಮೆಲ್ಲರಿಗೂ ಇದರೋಳಗಿರೋ ಎರಡು ಅಂಶಗಳು ಒಟ್ಟಿಗೆ ಇದ್ರ ಚನ್ನಾಗಿ ನೆನಪಿರ್ತೈತಿ.

ಒಟ್ಟಾರೆ, ನೆನಪಿಟ್ಕೊಳ್ಳೊ ಕಲೆಯನ್ನ ಕೈವಶ ಮಾಡ್ಕೊಳ್ಳಾಕ ಸುಮಾರು ದಾರಿಗಳಿವೆ. ಸಾಮಾನ್ಯವಾಗಿ ಪ್ರಪಂಚದಲ್ಲಿ ಎಲ್ಲಾರೂ ಬಳಸೋ ಹಲವು ವಿಧಾನಗಳನ್ನ ನಾವು ನೋಡೋಣಂತ.

1. ಸರಿಯಾದ ಸ್ಥಳ ಹುಡಿಕ್ಕೊಂತಾರ

ನೆನಪಿನ್ಯಾಡಿಟ್ಕೊಳೊ ಕೆಲಸ ಸರಿಯಾಗ್ಬೇಕಂದ್ರ, ಅದಕ್ಕಿಂತ ಮೊದಲು ನಿಮಗ ಯಾವ ಜಾಗ ಸರಿ ಹೊಂದತೈತಿ ಅನ್ನೊದನ್ನ ತಿರ್ಮಾನ ಮಾಡ್ಕೊಬೇಕು. ಕೆಲವೊಬ್ಬರಿಗೆ ಜನಸಂಪರ್ಕನೇ ಇಲ್ದಿರೋ ಸ್ಥಳ ಬೇಕಸ್ನಿದ್ರ, ಕೆಲವರಿಗೆ ಅತ್ತಾಗ-ಇತ್ತಾಗ ಗಮನ ಸೇಳಿಯುವಂತ ಸ್ಥಳಗಳು ಬೇಕನಸ್ತಾವು, ಇನ್ನೂ ಕೆಲವರಿಗೆ ಸ್ವಚ್ಛಂದವಾಗಿ ಮನೆಹೊರಗಡೆ ಕುತ್ಕೊಂಡು ಅಭ್ಯಾಸ ಮಾಡಿದ್ರ ನೆನಪಿರ್ತೈತಿ. ಇದ್ರಾಗ ನಿಮಗ ಯಾದ ಸರಿಹೊಗ್ತೈತಿ? ಅದನ್ನ ತಿಳ್ಕೊಂಡು ನೀವು ಅಲ್ಲೇ ನಿಮ್ಮ ಅಭ್ಯಾಸ ಆರಂಭಿಸಿ.

ಕೆಲವು ಅಧ್ಯಯನಗಳಿಂದ ತಿಳಿದು ಬಂದ ವಿಷವೇನಂದ್ರ, ಚಹಾದೊಳಗ ಅದ್ರಾಗೂ ಗ್ರೀನ್ ಟೀಯೊಳಗ ನೆನಪಿನ ಶಕ್ತಿ ಜಾಸ್ತಿ ಮಾಡೋ ಅಂಶ ಇರ್ತೈತಂತ. ನಾವೇನರ ನೆನಪ ಮಾಡ್ಕೊಬೇಕಂದ್ರ ನಮ್ಮ ಮೆದಳಿಂದ ನಮಗ ಸಂದೇಶ ಕಳಿಸೊ ನರಗಳು ಶಕ್ತಿಶಾಲಿಯಾಗಿರ್ಬೇಕು. ಈ ನರಗಳಿಗೆ ಸಂಬಂಧ ಪಟ್ಟ ವ್ಯಾಯಾಮಗಳನ್ನ ಮಾಡ್ಕೊಂತ ಇದ್ರ ಅವು ಬಲಶಾಲಿಯಾಕ್ಕಾವು ಹಂಗ ನೆನಪಿನ ಶಕ್ತಿನೂ ಚನ್ನಾಗಿರ್ತೈತಿ.

ವಯಸ್ಸು ಹಚ್ಚಾದಂಗ ನರಗಳು ಬಲಹೀನ ಆಕ್ಕಾವು. ಇದ್ರಿಂದ ನೆನಪಿನ ಶಕ್ತಿ ಕಡಿಮೆಯಾಗಿ ಆಲ್ಝೈಮರ್ ಬರೋ ಸಾಧ್ಯತೆ ಇರ್ತೈತಿ. ಗ್ರೀನ್ ಚಹಾ ಕುಡಿಯೋಕೆ ಶುರು ಮಾಡಿದ್ರ ಅದ್ರಾಗಿನ ನೈಸರ್ಗಿಕ ಗುಣಗಳು ಈ ನರಗಳನ್ನ ಬಲಹೀನ ಆಗ್ದಿರಂಗ ನೋಡ್ಕೊಂತಾವು, ನೆನಲಿನಶಕ್ತಿ ಹೆಚ್ಚಾಗೊಕೆ ಸಹಾಯ ಮಾಡ್ತತಿ.

2. ಯಾವಾಗ ಬೇಕೊ ಅವಾಗ ಕೇಳಿಸ್ಕೊಳ್ಳಾಕ ರೆಕಾರ್ಡ ಮಾಡ್ಕೊಂತಾರ

ನೀವು ಕೇಳ್ತಿದ್ದ ಪಾಠ, ಪ್ರವಚನ, ಭಾಷಣದೊಳಗ ನಿಮಗ ಬೇಕಾಗೊ ಕೆಲವು ವಿಷಯಗಳು ಅದ್ರಾಗಿರ್ತಾವು. ಅಲ್ಲಿಂದ ಹೊರಗಡೆ ಬಂದಮ್ಯಾಲೆ ನೆನಪ ಮಾಡ್ಕೊಳಾಕ ಕಷ್ಟಾಕ್ಕೈತಿ. ಹಿಂಗಾದಾಗ ನಿಮಗ ಪ್ರಯೋಜನಕ್ಕ ಬರಂತ ವಿಷಯಗಳನ್ನ ಮೇಲಿಂದ ಮೇಲೆ ಕೇಳಿ ನೆನಪಿನಲ್ಲಿರೋ ಹಂಗ ಮಾಡ್ಕೊಳಾಕ ಅವನ್ನೆಲ್ಲ ರೆಕಾರ್ಡ ಮಾಡಿಟ್ಕೊರಿ….. ಈಗ ಮೊಬೈಲನ್ಯಾಗ ರೆಕಾರ್ಡ ಮಾಡಿಟ್ಕೊಳೊದು ಸರ್ವೆಸಾಮಾನ್ಯ ಯಾಕಂದ್ರ ಮೊಬೈಲ ಒಳಗ ರೆಕಾರ್ಡ ಮಾಡ್ಕೊಳೊ ಸೌಲಭ್ಯ ಐತಿ. ಮಾಡ್ಕೊಂಡಿರೋ ರೆಕಾರ್ಡನ ಟೈಮ್ ಸಿಕ್ಕಾಗೆಲ್ಲಾ ಕೇಳ್ಕೊಂತ ಇದ್ರ ನೇನಪಿನ್ಯಾಗಿರ್ತೈತಿ.  

ಭಾಷಣ ನೀವ ಮಾಡಾಕತ್ತಿದ್ರ, ಬರ್ಕೊಂಡಿದ್ದ  ಭಾಷಣವನ್ನ ಜೋರಂಗ ಓದ್ಕೊಂತ ರೆಕಾರ್ಡ ಮಾಡ್ಕೊಂಡಿಟ್ಕೊಂಡು ಆಮೇಲೆ ನೀವು ಅದನ್ನ ಕೇಳಿಸ್ಕೊರಿ. ಬರದಿದ್ದನ್ನ ಹತ್ತಸಾರ್ತಿ ಓದಿ ನೆನಪಿಟ್ಕೊಳೊದಕ್ಕಿಂತ ಇದನ್ನ ಮಾಡೋದು ಸುಲಭ.

ಮೂಲ

3. ನಾಲ್ಕೈದು  ಸಲ ಬರ್ದು ನೆನಪಿಟ್ಕೊತಾರ

ನಿಮಗ ನೆನಪಲ್ಲಿರ್ಬೇಕಾದ ವಿಷಯಗಳನ್ನ ನಾಲ್ಕೈದು ಸಾರ್ತಿ ಬರಿಯೊದ್ರಿಂದ ನೆನಪಿನ್ಯಾಗಿರ್ತತಿ. ಟೀವಿ ನೋಡೊವಾಗ್ಲಾದ್ರೂ, ಹಾಡು ಕೇಳೊವಾಗ್ಲಾದ್ರೂ, ನಿಮಗ ನೆನಪಿರ್ಬೇಕಾದ ಕೆಲಸ ಅಥವಾ ವಿಷಯಗಳನ್ನ ಹಿಂಗ ಬರದು ರೂಢಿ ಮಾಡ್ಕೊಂಡ್ರ ನಿಮ್ಮ ಮನಸ್ಸನ್ಯಾಗ ಗಟ್ಟಿಯಾಗಿರ್ತೈತಿ. ಸುಲಭವಾಗಿ ನೆನಪಾಕ್ಕೈತಿ. ಬೇಕಾದ್ರ ನೀವು ಇದನ್ನ ಪ್ರಯತ್ನಿಸಿ ನೋಡಿ, ಕಲಿಬೇಕು ಅನ್ನೋ ಹುಮ್ಮಸ್ಸಿರೋರಿಗೆ ಇದು ಬಾಳ ಉಪಯೋಗಾಕ್ಕತಿ.

4. ಬರೆದಿಟ್ಟಿರುವಂತ ಟಿಪ್ಪಣಿಗಳನ್ನ ಬೇರೆ ಬೇರೆ ಮಾಡ್ಕೊಂತಾರ

ನೀವು ಬ್ಯಾರಬ್ಯಾರೆ ವಿಷಯಗಳ ಬಗ್ಗೆ ಬರದಿಡ್ಕೊಂಡಿದ್ರ, ಅವುಗಳ ಪ್ರಕಾರ ಬರದಿರುವಂತ ಚೀಟಿಗಳನ್ನ ಬ್ಯಾರೆ ಬ್ಯಾರೆಯಾಗಿ ವಿಂಗಡಿಸಿ ಇಟ್ಕೊರಿ. ಬ್ಯಾರಬ್ಯಾರೆ ಬಣ್ಣದ ಹಾಳಿಯೊಳಗ, ಬ್ಯಾರಬ್ಯಾರೆ ಇಂಕ್ ಉಪಯೋಗ್ಸಿ ಬರದ್ರ, ಅವುಗಳನ್ನ ವಿಭಜಿಸಿಟ್ಕೊಂಡು ನೆನಪ ಮಾಟ್ಕೊಳಾಕ ಬಾಳ ಸಲೀಸಾಕ್ಕತಿ. ಮೊದಲ ತಿಳಿಸಿದಂಗ ಕೆಲವರಿಗೆ ಅವರು ನೋಡೊ ಬಣ್ಣ, ಆಕಾರ, ದೃಷ್ಯ ಇವೆಲ್ಲವುಗಳ ಆಧಾರದ ಮ್ಯಾಲೆ ಸಲೀಸಾಗಿ ನೆನಪಿಟ್ಕೊಳೊ ಶಕ್ತಿ ಇರ್ತೈತಿ. ನಿಮಗೂ ಕೂಡಾ ಇದು ಉಪಯೊಗಾಗ್ಬಹುದು.

ಮೂಲ

5. ಪೂರ್ತಿ ಬರೋತನಕಾನೂ ಪುನಾವರ್ತಿನೆ ಮಾಡ್ತಿರ್ಬೇಕು

ನಿವೂ ಬರೆದಿಟ್ಕೊಂಡಿರೋ ಟಿಪ್ಪಣಿಯೋಳಗಿನ ಪ್ರತಿಯೋಂದು ವಿಷಯಾನೂ ನೆನಪಿರ್ಬೇಕಂದ್ರ, ಪುನಃ ಪುನಃ ನೀವು ಬರೆದಿಟ್ಕೊಂಡಿರೊದನ್ನ ನೋಡ್ಕಂತ ಮನಸ್ಸನ್ಯಾಗ ಓದ್ರಿ. ಮುಂದಿನ ಸಾಲಿಗೆ ಹೋಗೋಕು ಮುನ್ನ ಹಿಂದಿನ ಸಾಲು ನೆನಪೈತೊ ಇಲ್ವೊ ಅಂತಾ ಮೇಲಕುಹಾಕಿ, ನಂತರ ಹೊಸ್ತಾಗಿ ಓದಿರೋದನ್ನ ನೆನಪ ಮಾಡ್ಕೊರಿ. ನಡುವ ಎಲ್ಲಾದ್ರು ಮರಿತಂದ್ರ ಮತ್ತ ಮೊದಲಿಂದ ಹೇಳ್ಕೊರಿ, ಹಿಂಗ ನಿಮಗ ಪೂರ್ತಿ ವಿಷಯ ನೆನಪ ಉಳಿಯೋತನಕಾನೂ ಮಾಡ್ಕೊಂತ ಇರ್ರಿ. ನೋಡಿರೊದನ್ನ ಮಾಡಿ ಕಲಿಯೋದು ಹಿಂಗ.

6. ಮತ್ತ ಮತ್ತ ನೆನಪ ಮಾಡ್ಕೊಂಡ ಬರಿತಿರ್ತಾರ

ಈಗ ನೀವು ಪುನರಾವರ್ತನೆ ಮಾಡ್ಕೊರಿ. ಕಲ್ತದ್ದನ್ನೆಲ್ಲ ನೆನಪ ಮಾಡ್ಕೊಂಡು ಪೂರ್ತಿಯಾಗಿ ಒಮ್ಮೆ ಬರೀರಿ. ಹಿಂಗ ಮಾಡೊದು ಪ್ರಾಯೋಗಿಕವಾಗಿ ನೀವು ಕಲ್ತದ್ದು ನಿಮ್ಮ ನೆನಪಲ್ಲಿ ಸ್ಥಿರವಾಗಿ ಉಳ್ಕೊಳೊಹಂಗ ಮಾಡ್ತತಿ.

7. ಬ್ಯಾರೇಯವರಿಗೆ ಹೇಳಿಕೊಡ್ತಾರ

ಶಾಲೆ ಕಾಲೇಜುಗಳಲ್ಲಿ ಓದುವಂತ ಮಕ್ಕಳಿಗೆ ಇದು ತುಂಬಾ ಸಹಾಯವಾಕ್ಕೈತಿ. ನೀವು ಓದಿದ್ದು ನಿಮ್ಮಲ್ಲೆ ಉಳ್ಕೊಬೇಕಂದ್ರ ನೀವದನ್ನ ಮತ್ತೊಬ್ಬರಿಗೆ ಹೇಳಿಕೊಡ್ಬೇಕು. ಅವರು ನಿಮ್ಮ ಜೋತೆಗಿರುವವರಾದ್ರ ಬಾಳ ಉತ್ತಮ. ಹಿಂಗ ಮಾಡೋದ್ರಿಂದ ನಿಮಗೂ ನೆನಪಿರ್ತೈತಿ ಮತ್ತ ನಿಮ್ಮ ಜೋತೆಗಿರೋರು ಕಲಿಯೋಕೆ ಸಹಾಯ ಆಕ್ಕೈತಿ. ನೀವು ಹತ್ತಾರು ಪ್ರಶ್ನೆಗಳನ್ನ ಸಂಗ್ರಹಿಸಿ ಅವುಗಳಿಗೆ ಉತ್ತರವನ್ನ ಕೇಳಿ. ನೀವು ಕಲ್ತಿದ್ದ ಉತ್ತರಗಳಿಗಿಂತ ಬೇರೆಬೇರೆ ಉತ್ತರಗಳು ನಿಮಗ ಸಿಗ್ತಾವು ಆಗ ನಿಮ್ಮ ಅಭ್ಯಾಸಕ್ಕ ಅನುಕೂಲಾಕ್ಕೈತಿ. ಹೆಚ್ಚನ ವಿಷಯಗಳನ್ನ ತಿಳ್ಕೊಳಾಕೂ ಸಹಾಯ ಆಗ್ತೈತಿ. ಇದೊಂತರಾ ಅನುಭವಿಸಿ ಕಲ್ಕೊಳೊದು. ನಿವಿದನ್ನ ಅನುಭವಿಸೋದ್ರಿಂದ ನಿಮಗ ತುಂಬಾ ದಿನಗಳ ಕಾಲ ನೆನಪಿನಲ್ಲಿರ್ತೈತಿ.

8. ಪುನಃ ಪುನಃ ರೆಕಾರ್ಡ ಮಾಡಿರೋದನ್ನ ಕೇಳ್ತಿರ್ತಾರ

ನೀವು ರೆಕಾರ್ಡ ಮಾಡಿದ್ದನ್ನ ಒಂದ ಸಾರ್ತಿ ಲಕ್ಷಗೊಟ್ಟು ಕೇಳ್ಬೇಕಂತಿಲ್ಲ. ನೀವು ಯಾವ್ದರ ಕೆಲಸ ಮಾಡಬೇಕಾದ್ರ, ಸುಮ್ಮನ ಕುಂತಾಗ, ವಾಕಿಂಗ್ ಮಾಡಬೇಕಾದ್ರ…. ಹಿಂಗ ಟೈಮ್ ಸಿಕ್ಕಾಗೆಲ್ಲಾ ಮ್ಯಾಲಿಂದ ಮ್ಯಾಲೆ ಕೇಳ್ಕೊಂತ ಇರ್ರಿ. ಸಲಿಸಾಗಿ ನೆನಪಾಕ್ಕೈತಿ. ಇದೊಂತರ ಕೇಳಿ ಕೇಳಿ ಕಲಿತು ನೆನಪಿಟ್ಕೊಳ್ಳೊದು.

ಇಷ್ಟೆಲ್ಲಾ ಕಲ್ಕೊಂಡ್ರಿ… ಈಗ ಸ್ವಲ್ಪ ವಿಶ್ರಾಂತಿ ತಗೊಂಡ ಹೋರಗ ಅಡ್ಯಾಡ್ಕೊಂಡ ಬರ್ರಿ. ಸ್ವಲ್ಪ ರಿಲ್ಯಾಕ್ಸ ಮಾಡ್ಕೊಂಡ ಬಂದು ನೀವು ಕಲತಿದ್ದನ್ನ ಮೇಲಕಹಾಕೋಕೆ ಪ್ರಯತ್ನ ಮಾಡಿ, ನಿಜವಾಗ್ಲೂ ನಿಮಗ ಸಿಕ್ಕಾಪಟ್ಟೆ ವಿಷಯಗಳು ನೆನಪನ್ಯಾಗ ಬರ್ತಾವು. ಯಾವ್ದಾದ್ರು ಒಂದೇರಡು ವಿಷಯ ನೇನಪಾಗ್ಲಿಲ್ಲ ಅಂದ್ರ ಮತ್ತೊಮ್ಮೆ ಲಕ್ಷೆಯಿಟ್ಟು ನೋಡ್ಕೊರಿ ಅಷ್ಟ. ಅದ್ಯಾಕ ತಲೆ ಕೆಡಿಸ್ಕೊಂತಿರಿ… ಸರಿ ಹೌದಲ್ಲ?