http://www.cdc.gov/stroke/images/healthy_living.jpg

ಆರೋಗ್ಯನ ಕಾಪಾಡ್ಕೊಳ್ಳೋಕೆ ದಿನ  ಒಂದೊಂದು ಹೊಸ ಹೊಸ ವಿಷ್ಯಗಳು ಸಿಗ್ತಾನೇ ಇರತ್ತೆ. ಹಾಗೇ ಎಂತೆಂತದೋ ಸಾಧನಗಳೆಲ್ಲ ನಮ್ ಆರೋಗ್ಯನ ಕಾಪಾಡತ್ತೆ. ವೈಜ್ನಾನಿಕವಾಗಿ ಕಂಡುಹಿಡಿದಿರೋ ಸಾಧನಗಳು ಒಂದು ಸಮಯದವರೆಗೆ ಮಾತ್ರ ಕೆಲ್ಸ ಮಾಡತ್ತೆ. ಆಮೇಲೆ ಅದು ಕೂಡಾ ಕೈ ಕೊಡತ್ತೆ. ಆ ಸಾಧನಗಳು ಮಾತ್ರೆ ಆಗಿರ್ಬಹುದು ಅಥ್ವಾ ಇನ್ಯಾವ್ದೋ ಆಗಿರಬಹುದು. ಆರೋಗ್ಯನ ನಾವ್ ಬೇರೆ ತರಾನೂ ಕಾಪಾಡ್ಕೊಳ್ ಬಹುದು ಅಂತ ಕೆಲವೊಮ್ಮೆ ಗೊತ್ತಿರಲ್ಲ.  ನಾವಿಲ್ಲಿ ಹೇಳ್ತಾ ಇರೋದು ಚಿಕ್ಕ ಚಿಕ್ಕ ವಿಷ್ಯಗಳು ನಿಮ್ ಆರೋಗ್ಯನ ಹೇಗೆ ಕಾಪಾಡತ್ತಂತ. ಆ ಚಿಕ್ಕ ಚಿಕ್ಕ ವಿಷ್ಯಗಳು ಯಾವ್ದಂತ ಒಮ್ಮೆ ನೋಡೋಣ ಬನ್ನಿ. 

1) ಕಾಫಿ/ಚಹಾ ಕುಡಿದಾದ್ಮೇಲೆ ಸಣ್ಣ ನಿದ್ರೆ ಮಾಡ್ಬೇಕಂತೆ 

ಈ ನಿದ್ರೆ ಇದೆಯಲ್ಲಾ ಅದು ನಿಮ್ಗೆ ಇನ್ನಷ್ಟು ಆರೋಗ್ಯಾನ ತಂದ್ಕೊಡತ್ತಂತೆ. ಕೆಲವೊಬ್ರ ಮೇಲೆ ಈ ಪ್ರಯೋಗವನ್ನ ಮಾಡಲಾಯಿತು. ಕಾಫಿನೋ ಚಹಾನೋ ಕುಡಿದಾದ್ಮೇಲೆ ಅವ್ರಿಗೆ ಕಾರ್ ಒಡ್ಸಲಿಕ್ಕೆ ಹೇಳಿದ್ರಂತೆ. ಆದ್ರೆ ಅವ್ರುಗಳು ಕೆಲ್ವೊಂದು ತಪ್ಪುಗಳನ್ನ ಮಾತ್ರ ಮಾಡಿದ್ರಂತೆ. ತಪ್ಪು ಮಾಡಿದ್ರೂ ಅವ್ರು ಆರಾಂಗಿದ್ರಂತೆ. ಅದ್ಕೆ ವಿಜ್ನಾನಿಗಳು ಹೇಳೋದೇನಂದ್ರೆ ಕಾಫಿನೋ ಚಹಾನೋ ಕುಡಿದಾದ್ಮೇಲೆ ತಕ್ಷಣ ಮಲಗ್ಬೇಕಂತೆ. ನಿಮ್ಗೆ ಇನ್ನೇನ್ ಗಾಢ ನಿದ್ರೆ ಬರತ್ತೆ ಅಂದ್ರೆ ಮಲ್ಗಬೇಡಿ ಎದ್ಬಿಡಿ ಅಂತಾರೆ. ವಿಚಿತ್ರ ಅನ್ಸಿದ್ರೂ ಒಂದ್ಸಲ ಮಾಡ್ನೋಡಿ. 

1077thejewel.com

2) ಹೊಟ್ಟೆಗೆ ಎಷ್ಟ್ ಬೇಕೋ ಅಷ್ಟನ್ನ ಆಯಾಯ ಸಮಯಕ್ಕೆ ಸರ್ಯಾಗಿ ತಿನ್ಬೇಕಂತೆ 

ಬೆಳಿಗ್ಗೆ ತಿಂಡಿಯನ್ನ ರಾಜನಂತೆ ತಿನ್ಬೇಕು. ಮಧ್ಯಾಹ್ನದ ಊಟವನ್ನ ರಾಣಿಯಂತೆ ತಿನ್ಬೇಕು. ರಾತ್ರಿಯ ಊಟವನ್ನ ಭಿಕ್ಷುಕನಂತೇ ತಿನ್ಬೇಕು. ಇದ್ರಲ್ಲಿ ಎನಾದ್ರೂ ತಪ್ಪಾಯ್ತಂದ್ರೆ ನಿಮ್ಗೆ ಕಷ್ಟ್ ಆಗತ್ತೆ. ಹಾಗಾಗಿ ಬೆಳಿಗ್ಗೆನೇ ನೀವು ಕಮ್ಮಿ ತಿಂದ್ಬಿಟ್ರೆ ಸ್ವಲ್ಪ ಹೊತ್ತಾದ್ಮೇಲೆ ತಿನ್ಬೇಕು ಅನ್ಸತ್ತೆ. ಆ ಸಮಯದಲ್ಲಿ ನೀವ್ ತಿನ್ನೋ ಪ್ರಮಾಣ ಮತ್ತೆ ಅದ್ರ ಕ್ಯಾಲೋರಿ ಜಾಸ್ತಿನೇ ಆಗಿರತ್ತೆ ಅನ್ನೋದು ತಿಳಿದಿರ್ಲಿ. ಅದ್ಕೆ ಈ ಮೇಲೆ ಹೇಳಿದ್ ನಿಯಮಾನ ಸರ್ಯಾಗಿ ಪಾಲಿಸಿ. ಆರೋಗ್ಯ ನಿಮ್ದಾಗಿರತ್ತೆ. 

2.bp.blogspot.com

3) ಸ್ನಾನ ಮಾಡಕ್ಕೆ, ಕೈ ಕಾಲು ತೊಳೆಯಕ್ಕೆ ಮಾಮೂಲಿ ಸಾಬೂನ್ ಸಾಕಂತೆ

 ಇದುವರೆಗೆ ಎಲ್ಲಿಯೂ ಕೂಡಾ , ಆಂಟಿ ಬ್ಯಾಕ್ಟೀರಿಯಾ  ಸಾಬೂನುಗಳು ಎಷ್ಟರ ಮಟ್ಟಿಗೆ ಕಮ್ಮಿ ಮಾಡ್ಸಿದೆ ಅಂತ ಯಾರ್ಗೂ ಕೂಡಾ ಗೊತ್ತಿಲ್ಲ.  ನಾವ್ ಉಪಯೋಗ್ಸೋ ಟೂತಪೇಸ್ಟ್ಗಳು , ಡಿಯೋಡ್ರೆಂಟ್ಸ್ , ಲಿಕ್ವಿಡ್ ಆಂಟಿಬ್ಯಾಕ್ಟೀರಿಯಾ ಸೋಪ್ಗಳಲ್ಲಿ ಜಾಸ್ತಿ ಪ್ರಮಾಣದಲ್ಲಿ ಟ್ರೈ ಕ್ಲೋಸನ್ ಇರತ್ತೆ. ಇದು ದೇಹಕ್ಕೆ ಹೋದ್ರೆ ಅಪಾಯ ತಪ್ಪಿದ್ದಲ್ಲ. ಉದಾಹರಣೆಗೆ ನೀವ್ ಉಪಯೋಗ್ಸತಾ ಇರೋ  ಲಿಕ್ವಿಡ್ ಆಂಟಿಬ್ಯಾಕ್ಟೀರಿಯಾ ಸೋಪ್ಗಳಲ್ಲಿ ಇರೋ ಟ್ರೈ ಕ್ಲೋಸನ್ ಸಹಜವಾಗಿ ನಮ್ ದೇಹದಲ್ಲಿ ಇರೋ ಬ್ಯಾಕ್ಟಿರೀಯಾವನ್ನ ಸಾಯ್ಸತ್ತೆ. ಹಾಗೇ ಮೈಕ್ರೋಬಿಮ್ ಅನ್ನೋ ವಿಷವಸ್ತು  ನಮ್ ಕರುಳಿನಲ್ಲಿ ಉತ್ಪಾದನೆಯಾಗಿ ತೊಂದ್ರೆ ಕೊಡತ್ತೆ. ಹಾಗೇ ಭ್ರೂಣಕ್ಕೂ ತೊಂದ್ರೆಯನ್ನ ಕೊಡತ್ತಂತೆ. 

blog.oxforddictionaries.com

4) ಅವಕಾಶ ಸಿಕ್ಕಾಗಲ್ಲ ನಿಂತ್ಕೊಂಡೇ ಕೆಲ್ಸ ಮಾಡ್ಬೇಕಂತೆ

ಬ್ರಿಟೀಷ ವಿಜ್ನಾನಿಯೊಬ್ಬ ಅಲ್ಲಿನ ಬಸ್ ಡ್ರೈವರ್ ಮತ್ತೆ ಕಂಡಕ್ಟರ್ ಮೇಲೆ ಮಾಡಿದ ಪ್ರಯೋಗದಿಂದ ತಿಳಿದ್ ಬಂದಿದೇನಂದ್ರೆ ಯಾರು ಜಾಸ್ತಿ ಹೊತ್ತು ಕೂತ್ಕೊಂಡೇ ಕೆಲ್ಸ ಮಾಡ್ತಾರೋ ಅವ್ರುಗಳಿಗೆ ಕಾಯಿಲೆ ಜಾಸ್ತಿಯಂತೆ. ಅದ್ಕೆ ಕೆಲ್ಸ ಮಾಡೋ ಸಮಯದಲ್ಲಿ ಎಲ್ಲೆಲ್ಲಿ ಅವಕಾಶ ಸಿಗತ್ತೋ ಅಲ್ಲಲ್ಲಿ ನಿಂತ್ಕೊಂಡೇ ಕೆಲ್ಸ ಮಾಡಿ. ಆಗಾಗ್ಗೆ ಮೈ ಮುರಿಯೋಕಾಗತ್ತಾ ನೋಡಿ. ಇತ್ತೀಚಿಗಂತೂ ನಿಂತ್ಕೊಂಡೇ ಕೆಲ್ಸ ಮಾಡೋ ಕುರ್ಚಿಗಳು ಬಂದಿದೆಯಂತೆ.  ಕೂತ್ಕೊಂಡ್ ಕೆಲ್ಸ ಮಾಡೋದ್ರಿಂದ ಆಕ್ಸಿಜನ್ ಮತ್ತೆ ಪೋಷಕಾಂಶ್ಗಳನ್ನ ನಮ್ ರಕ್ತ್ ನಿಧಾನಕ್ಕೆ ಸರಬರಾಜು ಮಾಡತ್ತಂತೆ. ಇದೇ ತರ ಆಗ್ತಾ ಇದ್ರೆ ಒಂದಲ್ಲಒಂದಿನ ಹೈಪೋಡೈನೇಮಿಯಾ ಆನ್ನೋ ದೇಹಕ್ಕೆ  ಬೇಡವಾದ  ಅಂಶ ಹೃದಯದಲ್ಲಿ ಶೇಖರಣೆ ಆಗತ್ತೆ. 

static5.businessinsider.com

5) ಸೇಬುಹಣ್ಣಿನ ಸಿಪ್ಪೆ ತಿನ್ಲೇಬೇಕಂತೆ

ಸಾಧ್ಯ ಆದ್ರೆ ಆದಷ್ಟು ಹಸಿರು ತರಕಾರಿ , ಹಣ್ಣು , ಸೇಬುಹಣ್ಣಿನ ಸಿಪ್ಪೆಗಳನ್ನ ತಿನ್ನಿ. ಇವ್ಯಾವುದು ನಿಮ್ಗೆ ಕೆಟ್ಟದ್ದಲ್ಲ. ಆದ್ರೆ ಇವತ್ತು ಹಣ ಮಾಡೋದಕ್ಕೋಸ್ಕರ ಜನ ತಿನ್ನೋ ಅನ್ನಾನ ಕೂಡಾ ನಕಲಿ ಮಾಡ್ತಾರೆ. ಸ್ವಲ್ಪ ಹುಷಾರಾಗಿ ನೀವ್ ಕೊಂಡ್ಕೊಳ್ಳಿ. ಸೇಬುಹಣ್ಣಿನ ಸಿಪ್ಪೆಯಲ್ಲಿ ಕ್ಯೂರ್ಸಿಟಿನ್ ಅನ್ನೋ ಅಂಶ ಜಾಸ್ತಿ ಇರೋದ್ರಿಂದ ಇದು ಆಂಟಿಸಪಾಸ್ಮೋಡಿಕ್ , ಆಂಟಿ ಇನ್ ಪ್ಲಾಮೇಟಿರಿಯಂತಹ ಅಂಶಗಳನ್ನ ನಮ್ ದೇಹದಲ್ಲಿ ಹೆಚ್ಸತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ ಮಿದುಳಿನ ರಕ್ಷಣೆ ಮಾಡತ್ತೆ. 

boldsky.com

6) ಆದಷ್ಟು ಕೈಯಲ್ಲೇ ನೋಟ್ಸ್ ಬರೆಯೋ ಅಭ್ಯಾಸ ಮಾಡ್ಕೊಬೇಕಂತೆ

ಕಂಪ್ಯೂಟರ್ , ಲ್ಯಾಪ್ಟಾಪ್ ಬಂದ್ಮೇಲೆ ಎಲ್ಲಾ ನೋಟ್ಸಗಳನ್ನ ಅದ್ರಲ್ಲೇ ತಗೊಳ್ಳೋದು ರೂಢಿಯಾಗ್ಬಿಟ್ಟಿದೆ. ವಿಜ್ನಾನಿಗಳ ಪ್ರಕಾರ ಚಿತ್ರ ಬಿಡ್ಸೋಕೆ ಮಾತ್ರ ಕೈಯನ್ನ ಉಪಯೋಗ್ಸಬೇಡಿ ಕೇಳಿದ್ದನ್ನ ಬರ್ಕೊಳ್ಳೋಕು ಕೈಯನ್ನೇ ಉಪಯೋಗ್ಸಿ ಅಂತಾರೆ. ಬರೀತಾ ಇದ್ದಾಗ ನಿಮ್ ಮಿದುಳು , ಗಮನ , ಜ್ನಾಪಕ ಶಕ್ತಿ ಎಲ್ಲಾ ಜಾಸ್ತಿಯಾಗತ್ತೆ. 

abforyou.files.wordpress.com

7) ತಿಂಡಿ ಎನಾದ್ರೂ ತಿಂದಾದ್ಮೇಲೆ ಹಲ್ಲುಜ್ಜೋದಕ್ಕಿಂತ ಚೆನ್ನಾಗಿ ಬಾಯ್ ಮುಕ್ಕಳಿಸ್ಬೇಕಂತೆ 

ತುಂಬಾ ಹಲ್ ಡಾಕ್ಟರು ಹೇಳೋದೇನಂದ್ರೆ ತಿಂಡಿ ಆದ್ಮೆಲೆ ಹಲ್ಲುಜ್ಜೋ ಕೆಲ್ಸ ಇದೆಯಲ್ಲ ಅದು ಹಲ್ಲಿನಲ್ಲಿರುವ ಅಗತ್ಯ ಅಂಶವನ್ನ ಹೊರ್ಗಡೆ ಹಾಕತ್ತೆ. ಇದ್ರಿಂದ ಹುಳುಕಾಗುವ ಸಂದರ್ಭವೇ ಜಾಸ್ತಿ. ಈ ಸಿಟ್ರಸ್ ಕುಟುಂಬದ ಹಣ್ಣುಗಳನ್ನ ತಿಂದಾಗ ಅದ್ರಲ್ಲಿರೋ ಬೀಜಗಳು ಅಥ್ವಾ ಆಸಿಡ್ಗಳು ನಮ್ ಹಲ್ಲಿನ ತಳಮಟ್ಟಕ್ಕೆ ಬೇಗನೇ ಹೋಗತ್ತೆ. ಇದ್ರಿಂದ ಹಲ್ಲಲ್ಲಿ ಹುಳುಕಾಗೋದು ಸಾಮಾನ್ಯ. ಅದ್ಕೆ ಬ್ರಷ್ ಮಾಡೋದ್ರ ಬದ್ಲಾಗಿ ಸರ್ಯಾಗಿ ಯಾವುದಾದ್ರು ಮೌತ್ ವಾಶ್ನಿಂದ ಬಾಯ್ ಮುಕ್ಕಳಿಸಿ. 

smilesonwheels.com

8) ಬೆಳಿಗ್ಗೆ ಎಳ್ಬೇಕಾದ್ರೆ ನಮ್ಗೆ ಅಲಾರಂನ್ನ ಇಡ್ದೇ ಎಳ್ಬೇಕಂತೆ

ಬೆಳಿಗ್ಗೆ ಎಳ್ಬೇಕಾದ್ರೆ ನಮ್ಗೆ ಅಲಾರಂ ಬೇಕೇ ಬೇಕು. ಆ ಅಲಾರಾಂನ್ನ ಬದಿಗಿಟ್ಟು ನೀವ್ ಎಳ್ಬೆಕಂದ್ರೆ ತುಂಬಾ ಕಷ್ಟ್ ಅನ್ಸತ್ತಾ? ಇಲ್ಲೊಂದ್ ಆಶ್ಚರ್ಯಕರವಾದ ಒಂದ್ ವಿಷ್ಯ ಇದೆ. ನಿದ್ರೆಯ ಐದು ಹಂತದಲ್ಲಿ ಮೊದಲ ಮತ್ತು ಎರಡನೇ ಹಾಗೂ ಐದನೇಯ ಹಂತ ನಿಜಕ್ಕೂ ಆರೋಗ್ಯಕರವಂತೆ. ಎರಡ್ ಸಲ ಎಚ್ಚರಿಕೆಯಾದ್ರೆ ಎದ್ಬಿಡಿ ಮಲ್ಗಬೇಡಿ. ಮಲ್ಗಿದ್ರೆ ಐದ್ನೇ ಸಲಕ್ಕೆ ಎಳ್ಬೇಕು ನೆನಪಿಟ್ಕೊಳ್ಳಿ. ಯಾವ್ದಾದ್ರೂ ಒಂದು ಕರ್ಕಶ ಧ್ವನಿಯಿಂದ ನಾವ್ ಎಚ್ಚರವಾದ್ರೆ ಆ ದಿನ ಪೂರ್ತಿ ಮಾನಸಿಕವಾಗಿ ಒಂದೊಂದೇ ಕಾಯಿಲೆಗಳು ಬರತ್ತಂತೆ. ಬುದ್ದಿಯ ಪ್ರಮಾಣ ಕಮ್ಮಿಯಾಗತ್ತೆ. ಜ್ನಾಪಕ ಶಕ್ತಿ , ಹತಾಶೆ , ಸಿಟ್ಟು , ಬೇಜಾರು ಇವೆಲ್ಲ ಶುರುವಾಗತ್ತೆ. ಅದ್ಕೆ ನೀವು ದಿನ ಒಂದೇ ಸಮಯಕ್ಕೆ ಮಲಗ್ಲಿಕ್ಕೆ ಹೋಗ್ಬೇಕು. 

cartalkblogs.com

ಇಷ್ಟು ಸುಲಭವಾಗಿರೋ ಉಪಾಯಗಳು ನಮ್ ಆರೋಗ್ಯಾನಾ ರಕ್ಷಿಸ್ತಾ ಇದೆಯಂದ್ರೆ ನಾವ್ಯಾಕ್ ಇನ್ನೂ ಸೋಮಾರಿ ತರ ಬಿದ್ಕೊಂಡಿರ್ಬೇಕು ಹೇಳಿ. ಆರೋಗ್ಯ ಕೆಟ್ರೆ ಎಲ್ಲಾ ಕೆಟ್ಟಂಗೆ ಅದ್ಕೆ ನೀವ್ ಚೆನ್ನಾಗಿದ್ರೆನೇ ಉಳಿದಿದ್ದೆಲ್ಲ ಆಯ್ತಾ.