https://cache-graphicslib.viator.com/graphicslib/thumbs674x446/5832/SITours/private-tour-bangalore-city-tour-including-bangalore-palace-and-in-bangalore-141689.jpg

ಕರ್ನಾಟಕದ ಶಕ್ತಿಸೌಧ ವಿಧಾನಸೌಧಾನ ಗುಡಿ ಥರದ್ದ ವಾಸ್ತುಶಿಲ್ಪದ ಪ್ರಕಾರ ಕಟ್ಟ್ಯಾರಾ. 46 ಮೀಟರ ಹೈಟ್ ಇರ ಈ ಬಿಲ್ಡಿಂಗ ಬೆಂಗಳೂರಿನ ಫೇಮಸ್ ಹೆಗ್ಗುರತು ಅನ್ನದ ಎಲ್ಲಾರಿಗೂ ಗೊತ್ತೈತಿ. ವಿಧನಸೌಧದ ಬಗ್ಗೆ ಕೆಲವೊಂದ ವಿಷಯಾ ಕೇಳಿದ್ರ ರೋಮಾಂಚನಾ ಆಕ್ಕತಿ. ಅಂಥಾ 10 ಸ್ಪೆಶಾಲಿಟಿ ಇಲ್ಲೈತಿ.

1. ಇದನ್ನ ವಾಸ್ತು ಪ್ರಕಾರ ಕಟ್ಟ್ಯಾರಾ

ಕಂಪ್ಲೀಟ್ ಸ್ವದೇಶಿ ವಾಸ್ತು ಪ್ರಕಾರ ಇದನ್ನ ಕಟ್ಟಿರೋದ ವಿಶೇಷ. ಈ ಬಿಲ್ಡಿಂಗಿನ ನಾಕೂ ಮೂಲ್ಯಾಗ ಗುಮ್ಮಟ ಇದ್ದು, ಮುಂದಗಡೆ ದ್ವಾರದಾಗ ಇಂಡಿಯಾದ ಸಾರ್ವಭೌಮತೆ ಸಾರೋ ನಾಕ ತಲೀ ಸಿಂಹ ಐತಿ.

vs3.jpg

2. ಕಟ್ಟಾಕ ನಾಕ ವರ್ಷಾ ತಗಂಡತಿ

ಇಂತಾ ದೊಡ್ಡ ಬಿಲ್ಡಿಂಗಿನ್ಯಾಗ ರಾಜ್ಯ ಸರಕಾರದ 22 ಇಲಾಖೆಗುಳ ಇದ್ದ ಅವೆಲ್ಲಾ 300 ನಂಬರಿನ ರೂಮಿನ್ಯಾಗ ಕೆಲಸಾ ಮಾಡತಾವು. 1952 ರಾಗ ವಿಧಾನಸೌಧಾ ಕಟ್ಟಾಕ ಸ್ಟಾರ್ಟ್ ಮಾಡಿದ್ರು. ಇದಕ್ಕ 5000 ಜನಾ, 1500 ಜನ ಗೌಂಡಿ ಕೆಲಸಾ, ಕಲ್ಲ ಒಡಿಯೋರ, ಬಡಗೇರು ಕೆಲಸಾ ಮಾಡಿದ್ದ, ಕಟ್ಟಾಕ ನಾಕ ವರ್ಷಾ ಬೇಕಾತು. ಮಾಡರ್ನ್ ಮತ್ತ ದ್ರಾವಿಡ ಶೈಲೀದು ವಾಸ್ತುಶಿಲ್ಪ ಉಪೇಗಿಸಿಗೆಂಡ ಇದನ್ನ ಕಟ್ಟ್ಯಾರ.

vs4.jpg

3. ಇದನ್ನ ಕಟ್ಟಾಕ 5000 ಜನಾ ಕೂಲಿಯೋರು, 1500 ಮಂದಿ ಬ್ಯಾರೆಬ್ಯಾರೆ ಕೆಲಸದೋರು ಬೇಕಾಗಿದ್ರು

ಸಂಜೀ ಟಾಯಮಿನ್ಯಾಗ ಈ ಗ್ರಾನೈಟ್ ಬಿಲ್ಡಿಂಗನ ನೋಡಾಕ ಸುಟೇಬಲ್ ಟಾಯಮ ಅಂತ ಹೇಳಬೋದು. ಒಟ್ಟ 5000 ಜನಾ ಕೂಲಿ ಕಾರ್ಮಿಕರು, 1500 ಮಂದಿ ಬ್ಯಾರೇ ಬ್ಯಾರೇ ಕೆಲಸದೋರು ಬೆವರ ಸುರಿಸಿ ಇದನ್ನ ಕಟ್ಟಿ ಮುಗಿಸಿದ್ದ 1956ರಾಗ.
vs5.jpg

4. ಒಟ್ಟ 5,50,505 ಚದರ ಅಡಿ ಬಿಲ್ಡಿಂಗ ಇದು

ವಿಶಾಲವಾಗಿರ ಮೆಟ್ಟಲಾ ಹತಿಗೆಂಡ ಒಳಗ ಹೋಗತಿದ್ದಂಗ ‘ಸರಕಾರಿ ಕೆಲಸ ದೇವರ ಕೆಲಸ’ ಅನ್ನ ಬೋರ್ಡ್ ಕಾಣತತಿ. ವಿಧಾನಸೌಧದ ಮುಂದ ಡಾll ಬಿ.ಆರ್. ಅಂಬೇಡ್ಕರ್ ಮತ್ತ ಜವಾಹರಲಾಲ್ ನೆಹರು ಅವರ ಮೂರ್ತಿಗೂಳ ಅದಾವು.

vidhanasoudha1.jpg

5. ಇದನ್ನ ನಮ್ಮ ಶೈಲಿ ಒಳಗ ಕಟ್ಟಿದ್ದಕ್ಕ ರಷ್ಯಾದೋರ ಕಾರಣ ಅನ್ನಬೋದು!

ಕೆ.ಸಿ.ರೆಡ್ಡಿ ಆದ ಮ್ಯಾಲ ಚೀಫ್ ಮಿನಿಸ್ಟರ್ ಆಗಿ ಬಂದ ಕೆ. ಹನುಮಂತಯ್ಯ ವೃತ್ತಿ ಒಳಗ ವಕೀಲರಾಗಿದ್ದರೂ ಅವರ ಹಾರ್ಟಿನ್ಯಾಗ ಒಬ್ಬ ಛೊಲೋ ಆರ್ಕಿಟೆಕ್ಟ್ ಇದ್ರು. ಒಂದ್ಸಲಾ ರಷ್ಯಾದಿಂದ ಪ್ರತಿನಿಧಿಗುಳ ಬೆಂಗಳೂರಿಗೆ ಬಂದಿದ್ರಂತ. ಹನುಮಂತಯ್ಯನೋರ ಹತ್ತರಾ ಅವರ ಹಿಂಗ ಮಾತಾಡಿಕೆಂತ ಬೆಂಗಳೂರಿನ್ಯಾಗಿರೋ ಎಲ್ಲಾ ಬಿಲ್ಡಿಂಗಗೂಳೂ ಯುರೋಪ್ ಸ್ಟೈಲಿನ್ಯಾಗ ಅದಾವು ಅಂತ ಅಂದ್ರಂತ. ಅವಾಗ ಹನುಮಂತಯ್ಯ ಈ ಬಿಲ್ಡಿಂಗ ಹಂಗ ಇರಬಾರದು ಅಂತೇಳಿ ಒಂದ ಅಂತಸ್ತ ಬದ್ಲೀಗೆ ಮೂರ ಅಂತಸ್ತಿನ ಬಿಲ್ಡಿಂಗ್ ಕಟ್ಟಸಬೇಕು ಅಂತ ಡಿಸೈಡ್ ಮಾಡ್ತಾರ. ಶಾಸಕಾಂಗ ಮತ್ತ ಸಚಿವಾಲಯ ಒಂದ ಕಡೆ ಇರ ಹಂಗ ಮಾಡತಾರ.

vs6.jpg

6. ಬಾಲ್ಕನಿಗೂಳ ರಾಜಸ್ಥಾನ ಸ್ಟೈಲಿನ್ಯಾಗ ಅದಾವು

ವಿಧಾನಸೌಧದ ಪಶ್ಚಿಮ ದ್ವಾರಾನ ರಾಜಸ್ಥಾನಿ ಸ್ಟೈಲಿನ್ಯಾಗ ಕಟ್ಟಿದ್ದರ, ಉತ್ತರ ಭಾಗಾನ ಕೃಷ್ಣರಾಜ ಸಾಗರ ಡ್ಯಾಮಿನ ಸ್ಟೈಲಿನ್ಯಾಗ ಕಟ್ಟ್ಯಾರ. ಸೊರಬ ಮತ್ತ ಸಾಗರದ ಕಡೆ ಈ ಥರಾ ಕೆತ್ತನಿ ಕೆಲಸಕ್ಕ ಫೇಮಸ್. ಈ ಬಿಲ್ಡಿಂಗಿನ ಗೋಪುರ, ಗುಮ್ಮಟಗುಳ ಗುಡಿ ಸ್ಟೈಲಿನ್ಯಾಗ ಅದಾವು.

vs2.jpg

7. ಇದರ ಟೋಟಲ್ ಹೈಟ್ 720 ಫೂಟು, ಅಗಲ 360 ಫೂಟು.

ಒಳಗಡೆ ಇರ ಚತುರ್ಭುಜಾಕೃತಿ ವಿಸ್ತೀರ್ಣ 260×260 ಫೂಟ ಐತಿ. ಪೂರ್ವದ ಹಾಲಿನ್ಯಾಗ ಇರ ಎಂಟ ಕಂಬಗುಳ 6000 ಟನ್ ವಜ್ಜಿ ಹೊತಗಂಡ ನಿಂತಾವು. ಕ್ಯಾಬಿನೆಟ್ ಮೀಟಿಂಗ್ ನಡೀಯೋ ಹಾಲು ಪಶ್ಚಿಮಕ್ಕ ಇದ್ದು ಮೂರನೇ ಅಂತಸ್ತಿನ್ಯಾಗ ಐತಿ. ಬಾಗಲದ ಮ್ಯಾಲ ಚಂದಾಗಿರ ಕೆತ್ತನಿ ಇರದಲ್ಲದ ಗಂಧದ ಕಟಿಗಿ ಯೂಜ್ ಮಾಡಿ ಬಾಗಲಾ ಮಾಡ್ಯಾರ.

vs1.jpg

8. ಇದನ್ನ ಕಟ್ಟಾಕ ಬೆಂಗಳೂರಿನ ಸುತ್ತಮುತ್ತ ಸಿಗೋ ಗ್ರಾನೈಟ್ ಯೂಜ್ ಮಾಡ್ಯಾರ

ಅರಹಳ್ಳಿ ಮತ್ತ ಹೆಸರಘಟ್ಟದಿಂದ ತಂದ ಕಲ್ಲುಗುಳನ ಬಿಲ್ಡಿಂಗಿನ ಹೊರಗಡೆ ಭಾಗಕ್ಕ ಬಳಸ್ಯಾರ. ಹಸರ ಮತ್ತ ನೀಲಿ ಕಲರ್ ಮಿಕ್ಸ ಇರ ಗ್ರಾನೈಟನ ಮಲ್ಲಸಂದ್ರದಿಂದಾ ತಂದಾರ. ಇನ್ನ ಅಲಂಕಾರಕ್ಕ ಯೂಜ್ ಮಾಡಿರ ಕಲ್ಲುಗುಳ ಮಾಗಡಿಯಿಂದಾ ತಂದಿರೋದು.

vs7.jpg

9. ಕಟ್ಟಾಕ ಟೋಟಲ್ಲಾಗಿ 1.75 ಕೋಟಿ ರೂಪಾರಿ ಖರ್ಚಾಗೇತಿ (ಆಗಿನ ಕಾಲದಾಗ ಇದ ಭಯಂಕರ ಹೆಚಿಗಿ)

ಈ ಬಿಲ್ಡಿಂಗ ಕಟ್ಟಬೇಕಾದ್ರ ಅವಾಗನೂ ಭಾಳಸ್ಟ ವಿರೋಧ ಬಂದಿತ್ತು. ಇದನ್ನ ಕಟ್ಟಾಕ ಆಗಿನ ಕಾಲಕ್ಕನ 175 ಲಕ್ಷ ರೂಪಾಯಿ ಖರ್ಚಾಗಿತ್ತು. ಆದರ ಈ ಹೊತ್ತಿಗೆ ಆ ಅಮೌಂಟು ಏನೇನೂ ಅಲ್ಲಾ ಅಂತ ಅನಸತತಿ. ಬೆಂಗಳೂರಿಗೆ ಯಾರೇ ಬರಲಿ ವಿಧಾನಸೌಧಾನ ನೋಡದಂಗ ಹೋಗದಿಲ್ಲ. ನಮ್ಮ ಬೆಂಗಳೂರಿನ ಹೆಮ್ಮೆಯ ಬಿಲ್ಡಿಂಗು ಇದ. ಈ ಬಿಲ್ಡಿಂಗ ಕಟ್ಟಿದ್ದರಿಂದ ಟೋಟಲ್ಲ ಖರ್ಚಿನ್ಯಾಗ ಶೇ.30 ಉಳಿತಾಯ ಆಗೇತಿ ಅಂತ ಪಿಡಬ್ಲ್ಯೂಡಿ ಡಿಪಾರ್ಟಮೆಂಟನ ಒಪಿಗೆಂಡತಿ.

vs8.jpg

ಒಟ್ಟಿನ್ಯಾಗ ನಮ್ಮ ವಿಧಾನಸೌಧದ ಕಥಿ ಇದ. ಇಂಥಾ ಬಿಲ್ಡಿಂಗಗೂಳ ಇಡೀ ಜಗತ್ತಿನ್ಯಾಗನ ಕೆಲವ ಅಸ್ಟ ಅದಾವು. ನಿಮ್ಮ ಅಂಗಿ ಕಾಲರ್ನ ಮ್ಯಾಲೆ ಮಾಡಿಕೆರ್ರಿಪಾ ಒಂದೀಟ 🙂