1 . ಸಮೃದ್ಧಿಗೆ ಉತ್ಸಾಹವೇ ದಾರಿ. ಉತ್ಸಾಹ ಇದ್ದರೆ ಸಂತೋಷ ಇರುತ್ತೆ. ಉತ್ಸಾಹದಿಂದ ಮಾಡೋ ಎಲ್ಲ ಕೆಲಸಗಳು ಒಳ್ಳೆ ಫಲ ಕೊಡುತ್ತೆ.

2 . ಒಳ್ಳೆ ಗುಣ ಇಲ್ದೆ ಬರೀ ಸುಖಕ್ಕೆ ಆಸೆ ಪಡೋದು ಒಳ್ಳೇದಲ್ಲ. ಅದು ಮರದ ಮೇಲೆ ಮಲಗಿ ಕೆಳಗೆ ಬಿದ್ದಮೇಲೆ ಎಚ್ಚರ ಆದಂತೆ.

3 . ಒಳ್ಳೆ ಮನಸ್ಸು ಇರೋರು ಯಾರಿಗೂ ಸಹಾಯ ಮಾಡದೆ ಇರೋದಿಲ್ಲ. ಸಹಾಯ ಕೇಳಿಕೊಂಡು ಬಂದವರು ಶತ್ರುಗಳೇ ಆದ್ರೂ, ಪ್ರಾಣನೂ ಲೆಕ್ಕಿಸದೆ ಸಹಾಯ ಮಾಡ್ಬೇಕು.

4 . ತಪ್ಪು ಮಾಡದೆ ಇರೋ ಮನುಷ್ಯರೇ ಇಲ್ಲ.

5 . ಯಾವುದೇ ಕೆಲಸ ಮಾಡೋ ಮುಂಚೆ ಮನೆಯವರು, ಗೆಳೆಯರ ಜೊತೆ ಮಾತಾಡಿ ಚೆನ್ನಾಗಿ ಯೋಚನೆ ಮಾಡಬೇಕು. ಯಶಸ್ಸಿಗೆ ದೇವರ ಮೇಲೆ ನಂಬಿಕೆ ಇಡಬೇಕು.

6 . ಒಂದು ಯುದ್ಧದಲ್ಲಿ ಸೋಲು ಅಥವಾ ಗೆಲುವು ಅನ್ನೋದು ಯಾವುದೇ ಸಿದ್ಧಾಂತಗಳ ಪ್ರಕಾರ ಬರೋದಿಲ್ಲ.

7 . ಮಹಾನ್ ವ್ಯಕ್ತಿಗಳು ಯಾವತ್ತೂ ಅವರು ಕೊಟ್ಟ ಮಾತಿಗೆ ತಪ್ಪೋದಿಲ್ಲ.

8 . ಯಾವ ಪರಿಸ್ಥಿತಿನಲ್ಲಾದ್ರೂ ಗೆಳೆಯರಿಗೆ ಸಹಾಯ ಮಾಡ್ಬೇಕು.

9 . ಕೇಳೋಕೆ ಚೆನ್ನಾಗಿರೋ ಮಾತು ತುಂಬಾ ಜನ ಆಡ್ತಾರೆ. ಆದ್ರೆ ಒಳ್ಳೆ ಉದ್ದೇಶ ಇಟ್ಕೊಂಡು ಇರೋದನ್ನ ಇರೋಹಾಗೆ ಹೇಳೋ ಜನ ತುಂಬಾ ಕಡಿಮೆ, ಕೇಳೋರು ಇನ್ನೂ ಕಡಿಮೆ.

10 . ದೈನ್ಯತೆಯಿಂದ ಯಾರೇ ಏನು ಕೇಳಿದರೂ ನಡೆಸಿಕೊಡಬೇಕು.