ಮಹಾಭಾರತ ಅನ್ನೋದು ದೊಡ್ಡ ಗ್ರಂಥಾ ಅಂತ ಸುಖಾಸುಮ್ಮನ ಅಂದಿಲ್ಲಾ ಅನ್ನೋದ ಈ ಮುಂದಿನ ಮ್ಯಾಟರ್ ಓದಿದರ ನಿಮಗ ಗೊತ್ತಾಕ್ಕತಿ. ಕುರು ವಂಶದ ರಾಜಾ ಶಂತನು ಮತ್ತ ಗಂಗೆಯ ಮಗ ಭೀಷ್ಮ ಹೇಳಿರೋ ಅಂತಾ ಭಾಳ ಕಿಮ್ಮತ್ತಿನ ಪಾಠಗೋಳ ಯಾರ ಜೀವನಾ ಆದರೂ ಬದಲಾಯಿಸಬೋದು.

ತನ್ನ ಅಪ್ಪನಿಂದಾ ತನಗ ಬೇಕು ಅನಿಸಿದಾಗ ಸಾಯೋ ಅಂತಾ ವರಾ ಪಡದಿದ್ದ ಭೀಷ್ಮಾ ಕುರುಕ್ಷೇತ್ರದ ಯುದ್ಧದೊಳಗ ಬಾಣದಿಂದಾ ಸಾಯೋ ಮುಂದ ಹೇಳಿರೋ ಮಾತುಗಳು ಮುಂದ ಅದಾವು ನೋಡ್ರಿ.

ಸಾಯೋ ಅಂತಾ ಟೈಮಿನ್ಯಾಗ ಸೈರ್ಯಾ ದಕ್ಷಿಣದಿಂದಾ ಉತ್ತರ ದಿಕ್ಕಿಗೆ ಹೋದರ ಅದು ಪುಣ್ಯಾದ ಟಾಯಮ ಆತಿ. ಆ ಕಾರಣಕ್ಕ ತಾನ ಸಾಯೋದನ್ನ ಪೋಸ್ಟಪೋನ್ ಮಾಡಿಕೆಂತ ಧರ್ಮರಾಜ ಮತ್ತ ಇನ್ನ ಉಳದೋರಿಗೆ ಹೇಳಿರೋವು ಇವು ಇಂಪಾರ್ಟೆಂಟ್ ಪಾಯಿಂಟಗುಳು.

1. ಯಾವಾಗನೂ ಸರಳ ಆಗೇ ಇರ್ರಿ.

2. ಬಾಡಿ ಮತ್ತ ಮನಸನ ಯಾವಾಗನೂ ಶುದ್ಧವಾಗಿ ಕ್ಲೀನ್ ಆಗಿ ಇಟಗರ್ರಿ.

ಮೂಲ

3. ಯಾವಗನೂ ಖರೇನ ಹೇಳರಿ, ನಿಮಗೂ ಮತ್ತ ಬ್ಯಾರೇದೋರಿಗೂ….

4. ಕೂಲ್ ಆಗಿ ಇರ್ರಿ, ಯಾವಾಗೂ ನಿಮ್ಮ ಸಿಟ್ಟು ನಿಮ್ಮನ್ನ ಕಂಟ್ರೋಲ್ ಮಾಡೋ ಹಂಗ ಇರಬಾಡರಿ.

ಮೂಲ

5. ಕ್ಷಮಿಸಿ ಬಿಡರಿ, ಎಲ್ಲಾರನೂ, ಯಾವಾಗನೂ.

6. ನಿಮ್ಮ ಹಂಡತಿ ಮಕ್ಕಳನ ಯಾವತ್ತೂ ಕೀಳಾಗಿ ನೋಡಬಾಡರಿ.

ಮೂಲ

7. ಧಾಂ.ಧೂಂ ಅನ್ನಂಗ ಗ್ರ್ಯಾಂಡ್ ಆಗಿ ಇರಬಾಡರಿ.

8. ಯಾವಾಗಲೂ ಕೊಡೋ, ಬ್ಯಾರೇರಿಗೆ ಹೆಲ್ಪ್ ಮಾಡೋ ರೂಢೀ ಇಟಗರ್ರಿ.

ಮೂಲ

9. ಒಪ್ಪಿಗೆಂಡ ಕೆಲಸಾನ ಪೂರಾ ಮಾಡಿ ಜಲ್ದಿ ಮುಗಸರಿ.

ಹಿಡದ ಕೆಲಸಾನ ಅರ್ಧಾಕ್ಕ ಬಿಡೋದು ನಿಮ್ಮಲ್ಲಿನ ನೆಗೆಟಿವ್ ಅಂಶಾನ ತೋರಿಸತತಿ. ಅದಕ್ಕ ಕೆಲಸಾ ಅರ್ಧಾ ಮರ್ಧಾ ಮಾಡಬಾಡರಿ.

10. ಈ ನಾಲ್ಕ ಟೈಪಿನ ಜನರಿಂದಾ ದೂರ ಇರ್ರಿ.

* ಜಲ್ದೀ ಸಿಟ್ಟ ಬರೋ ಅಂಥಾರು- ಇಂಥಾರು ತೂ ನೆಮ್ಮದಿ ಇಂದಾ ಇರಲ್ಲ, ತಮ್ಮ ಸುತ್ತಾ ಇರೋರನ್ನೂ ಸೈತ ನೆಮ್ಮದಿ ಆಗಿ ಇಡಂಗಿಲ್ಲ. ಇಂಥಾ ಜನಾ ಇರೋ ಕಡೆ ನೆಗೆಟಿವ್ ತನಾ ಅನ್ನೋದ ಹೆಚಿಗಿ ಇರತತಿ.

* ದರಿದ್ರ ಜನಾ – ಇಂಥಾ ಜನರೊಳಗೂ ನೆಗೆಟಿವ್ ಅಂಶಾ ಹೆಚಿಗಿ. ಜತೀಗೆ ಇಂತಾರನ ನಂಬಾಕೂ ಆಗದಿಲ್ಲ. ನಮಗ ಹೆಲ್ಪ್ ಮಾಡದ ದೂರ ಉಳೀತು ತಮಗ ತಾವ ಹೆಲ್ಪ ಮಾಡಿಕೆಳ್ಳಾಕ ಆಗಲ್ಲ ಇವರಿಗೆ.

* ಯಾರನ್ನೂ ನಂಬಲಾರದ ಜನಾ – ಇಂಥೋರಿಗೆ ತಮ್ಮನ ಬಿಟ್ಟ ಬ್ಯಾರೇದರನ ನಂಬೋ ಅಂತಾ ಅಭ್ಯಾಸಾ ಇರಂಗಿಲ್ಲ.

* ಕೆಟ್ಟೋರು – ಇಂಥಾರು ತಮ್ಮ ಅನುಕೂಲದ ಸಲವಾಗಿ ಯಾರನಾದರೂ ಯೂಸ್ ಮಾಡಿಕೆಂತಾರಾ.. ದೂರ ಇರ್ರಿ.

ಮೂಲ

11. ಯಾರನೂ ಸೈತ ಹೆಚಿಗಿ ಹಚಿಗ್ಯಾಬಾಡರಿ.

ಲೈಫಿನ್ಯಾಗ ಫ್ರೆಂಡ್ಸಿಪ್ಪು- ರಿಲೇಶನ್ನು ಎಲ್ಲಾ ಭಾಳ ಕಾಮನ್ನು. ಆದರ ಬದಲಾವಣಿ ಅನ್ನದ ಜಗತ್ತಿನ ನೇಮಾ ಅನ್ನೋ ಮಾತೇ ಐತೆಲ್ಲ. ಹಂಗ ಲೈಫಿನ್ಯಾಗ ಚೇಂಜ್ ಅಗೋದನ್ನ ಒಪ್ಪಿಗೆಳ್ಳದನ್ನ ರೂಢೀ ಮಾಡಿಕೆರ್ರಿಪಾ…

12. ಲೈಫು ಹೆಂಗ ಐತೋ ಹಂಗ ಒಪಿಗೆರ್ರಿ, ಅದನ್ನ ಅಪಿಗೆರ್ರಿ…

ಲೈಫಿನ್ಯಾಗ ಸುಖಾ ಇರಲಿ ದುಃಖಾ ಇರಲಿ, ಆರೋಗ್ಯಾ- ಅನಾರೋಗ್ಯಾ, ಸಂತೋಷಾ- ಖುಷಿ ಎನಾರ ಇರಲಿ ಎಲ್ಲಾನೂ ಲೈಫಿನ ಒಂದ ಭಾಗ ಅಂತ ಅಂದಕರ್ರಿ. ಎಲ್ಲಾನೂ ನಕ್ಕಂತ ಸ್ವೀಕರಿಸಿದರ ನಿಮ್ಮ ಹಂತೇಲೆ ಪೊಸಿಟಿವ್ ಅಂಶಗೋಳ ಹೆಚಿಗಿ ಆಕ್ಕಾವು.

ಮೂಲ

13. ಎಲ್ಲಾದಕಿಂತ ಫಸ್ಟ್ ನಿಮ್ಮ ಡ್ಯೂಟಿ ಏನ ಐತಿ ಅದನ್ನ ಪಾಲನಾ ಮಾಡರಿ.

ನಿಮ್ಮ ಕಾಯಕಾ ಫಸ್ಟ್, ನಿಮಗ ನಿಮ್ಮ ಕಾಯಕಕ್ಕಿಂತ ಬ್ಯಾರೇ ಇಂಪಾರ್ಟೆಂಟ್ ಯಾವದೂ ಇಲ್ಲ ಅನ್ನದ ಯಾವಾಗಲೂ ತಲ್ಯಾಗ ಇರಲಿ.

14. ಲೈಫಿನ್ಯಾಗ ಎಲ್ಲಾ ಫೀಲ್ ಮಾಡಬೇಕು ಅಂದರ ನಿಮಗ ನಾಕ ಟೈಪಿನ ಗೆಳೆಯಾರ ಇರಲಿ.

* ಸಹಜ ಗೆಳೆಯರು

* ಒಂದ ಸಿಂಗಲ್ ಗುರಿ ಇರೋ ಗೆಳೆಯಾರು

* ಫ್ಯಾಮಿಲಿ ಒಳಗ ಫ್ರೆಂಡ್ಸ

* ಮೋಸಾ ಮಾಡೋ ಫ್ರೆಂಡ್ಸ್.

ಮೂಲ

15. ಕಷ್ಟಾ ಪಟ್ಟ ಕಾಯಕಾ ಮಾಡರಿ

ಬರೇ ನಿಮ್ಮ ಏಳಿಗಿ ಸಲವಾಗಿ ಅಲ್ಲ, ನಿಮ್ಮ ಫ್ಯಾಮಿಲಿಯವರ ಏಳಿಗಿ ಸಲವಾಗಿನೂ ಸೈತ. ಸಾಧ್ಯಾ ಆದಷ್ಟೂ ಗಳಿಸಿದ್ದನ್ನ ಉಳಿತಾಯ ಮಾಡರಿ.

16. ನಿಮ್ಮವರ ರಕ್ಷಣಾ ಮಾಡಾಕ ನಿಲ್ಲರಿ

ಒಬ್ಬ ಮನಿಶಾ ತನ್ನನ್ನ, ತನ್ನ ಫ್ಯಾಮಿಲಿನ, ಫ್ರೆಂಡ್ಸ್ ಗುಳನ, ಗಳಿಸಿದ್ದನ್ನ, ಊರನ, ದೇಶಾನ ಹಿಂಗ ಎಲ್ಲಾನೂ ರಕ್ಷಣಾ ಮಾಡಬೇಕು. ಎಲ್ಲಾರಿಗೂ ನಿಮ್ಮ ಕೈಲೇ ಏನ ಆಕ್ಕತಿ ಅದನ್ನ ಹೆಲ್ಪ್ ಮಾಡೋ ಚಟಾ ಇಟಗರ್ರಿ.

ಮೂಲ

17. ಯಾರಿಂದಾನೂ ಏನನ್ನೂ ಅಪೇಕ್ಷಾ ಮಾಡಬಾಡರಿ, ಯಾರಿಗೂ ನೋವ ಮಾಡಬಾಡರಿ.

ಯಾರಿಂದಾನಾದ್ರೂ ಅಪೇಕ್ಷಾ ಮಾಡೋದ ಹೆಚಿಗಿ ಆದಷ್ಟೂ ನಿಮಗ ನೋವ ಆಗೋದ ಹೆಚ್ಚಿಗಿ. ಅದಕ್ಕ ಯಾರಿಂದಾನೂ ಏನನ್ನೂ ಅಪೇಕ್ಷಾ ಮಾಡಬಾಡರಿ.

ಹಂಗ ಯಾರನ ಆಗಲೀ ಫಿಸಿಕಲ್ ಆಗಲೀ ಮೆಂಟಲೀ ಆಗಲೀ ನೋವ ಮಾಡದಂಗ ಇರೋದ ಭಾಳ ಛೋಲೋ.

ಪೇಶನ್ಸ ಇಂದಾ ಮತ್ತ ಸಹಾನುಭೂತಿ ಇಟಗಂಡ ಎಲ್ಲಾನೂ – ಎಲ್ಲಾರನೂ ನೋಡರಿ, ನಡೆಸಿಗೆರ್ರಿ. ಯಾರ ಮನಸಿಗೂ ನೋವ ಮಾಡಬಾಡರಿ.

18. ಲೈಫಿನ್ಯಾಗ ಎಚ್ಚರದಿಂದಾ ಇರ್ರಿ, ಬ್ಯಾಲೆನ್ಸ ಕಾಪಾಡಿಕೆರ್ರಿ.

ಫ್ರೆಂಡ್ಸ್ ಜತೀಗೆ ಇರ್ರಿ ಆದರ ಬೆನ್ನಾಗ ಚಾಕು ಹಾಕೋ ಅಂತಾರ ಬಗ್ಗೆ ಯಾವಗನೂ ಎಚ್ಚರಾ ಇರಲಿ.

ರೊಕ್ಕಾ, ಗಳಿಸೋದರ ಬಗ್ಗೆ ಯಾವಾಗನೂ ಎಚ್ಚರಾ ಇರಲಿ, ನಿಮ್ಮ ಆಸ್ತಿ ನಿಮ್ಮ ಜೀವಕ್ಕ ಅಪಾಯಾ ತರದಂಗ ಇರಲಿ.

ಮನಿಶಾ ಟಾಯಮಿಗೆ ತಕ್ಕಂಗ ವಜ್ರದ ಹಂಗ ಗಟ್ಟಿ ಆಗಿ ಇರಾಕೂ ರೆಡಿ ಇರಬೇಕು ಹಂಗ ಸ್ಮೂತ್ ಆಗಿ ಇರಾಕೂ ಗೊತ್ತಿರಬೇಕು.

ಮೂಲ

ಇವನ್ನೆಲ್ಲಾ ಪಾಲನಾ ಮಾಡಿದರ ಲೈಫು ಅನ್ನೋದು ಹೂವಿನ ಹಾಸಿಗಿ ಹಂಗ ಆಗೋದ ಗ್ಯಾರಂಟಿ!!!