ಮನುಸ್ಮೃತಿಯ ಪ್ರಕಾರ ನಮ್ಮಲ್ಲಿ 8 ತರಹದ ಮದುವೆಗಳು ನಡೆದುಕೊಂಡು ಬಂದಿವೆ. ಪುರಾಣಗಳಲ್ಲಿ ಇದರ ಉಲ್ಲೇಖವಿದೆ.

1. ಬ್ರಾಹ್ಮ ವಿವಾಹ

ಈ ಪದ್ದತಿಯಲ್ಲಿ ಹುಡುಗಿ ಮನೆಯವರು ತಮ್ಮ ಹುಡುಗಿಗೆ ಅನುರೂಪನಾದ ಗಂಡನ್ನು ಹುಡುಕುತ್ತಾರೆ. ಹುಡುಗಿ ಒಪ್ಪಿದ ನಂತರವೇ ಅವಳ ತಂದೆ-ತಾಯಿ ಭಾವಿ ಅಳಿಯನ ಜೊತೆ ಶಾಸ್ತ್ರೋಕ್ತವಾಗಿ ಮದುವೆ ಮಾಡುತ್ತಾರೆ. ತಮ್ಮ ಮನೆಯ ಹುಡ್ಗಿಯನ್ನು ಅವನಿಗೆ ದಾನವಾಗಿ ಕೊಡುತ್ತಾರೆ. ಯಾವುದೇ ವರದಕ್ಷಿಣೆ ಕೊಡಲ್ಲ ಆದರೆ ಹುಡುಗಿಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಿ ಒಪ್ಪಿಸುತ್ತಾರೆ.

kanyadaan-thebigfatindianwedding.com_.jpgbigfatwedding

2. ದೈವ ವಿವಾಹ

ಈ ಪದ್ದತಿಯಲ್ಲಿ ವಧುವಿನ ತಂದೆ-ತಾಯಿಯರು ತಮ್ಮ ಹುಡುಗಿಗೆ ಎಷ್ಟು ದಿನವಾದರೂ ಸರಿಯಾದ ಗಂಡು ಸಿಗಲಿಲ್ಲ ಅಂತ ಯಜ್ಞಕರ್ಮ ನಡೆಯುವ ಜಾಗಕ್ಕೆ ಕರ್ಕೊಂಡು ಹೋಗಿ ಅಲ್ಲಿ ಯಾಗ ಮಾಡುವ ವೇದ ಪಾರಂಗತನಾದ ಬ್ರಾಹ್ಮಣನಿಗೆ ಯಜ್ಞದ ಕಾಣಿಕೆಯಾಗಿ ಕೊಡುತ್ತಾರೆ. ಜೊತೆಗೆ ಒಡವೆ, ವಸ್ತ್ರ ದಾನ ಮಾಡುತ್ತಾರೆ.

yagna-en.wikipedia.org_.jpgwiki

3. ಆರ್ಷ ವಿವಾಹ

ಈ ಪದ್ಧತಿಯಲ್ಲಿ ಹುಡುಗಿಯ ತಂದೆ-ತಾಯಿಯರು ಮದುವೆ ಗಂಡಿನಿಂದ ಎರಡು ಹಸು ಪಡೆದು ತಮ್ಮ ಹುಡುಗಿಯನ್ನು ಅವನಿಗೆ ಕೊಡುತ್ತಾರೆ.

baalika-pinterest.jpgpinterest

4. ಪ್ರಾಜಾಪತ್ಯ ವಿವಾಹ

ಈ ಪದ್ಧತಿಯಲ್ಲಿ ಹುಡುಗಿಯ ತಂದೆ ತನ್ನ ಅಳಿಯ ಮತ್ತು ಮಗಳಿಗೆ ಜೀವನ ಧರ್ಮವನ್ನು ಇಬ್ಬರೂ ಸಮಾನವಾಗಿ ಆಚರಿಸಿ ಅಂತ ಹೇಳಿ ಮದುವೆ ಮಾಡಿಸುತ್ತಾರೆ.

brahma-www.indiatimes.com_.jpgindiatimes

5. ಆಸುರ ವಿವಾಹ

ಈ ಪದ್ಧತಿಯಲ್ಲಿ ಮದುವೆ ಗಂಡು ತಾನು ಇಷ್ಟಪಟ್ಟ ಹುಡುಗಿಯ ತಂದೆ-ತಾಯಿಗೆ ಹಣ-ಆಸ್ತಿ ಮೂಲಕ ತೃಪ್ತಿ ಪಡಿಸಿ ಆ ಹುಡುಗಿಯನ್ನು ಮದುವೆಯಾಗುತ್ತಾನೆ.

marriage-sharathkomarraju.com_.jpgblog

6. ಗಾಂಧರ್ವ ವಿವಾಹ

ಈ ಪದ್ಧತಿಯಲ್ಲಿ ಹುಡುಗ ಮತ್ತು ಹುಡುಗಿ ಇಷ್ಟಪಟ್ಟು ಮದುವೆಯಾಗುತ್ತಾರೆ. ಪ್ರೇಮಾತಿರೇಕದಲ್ಲಿ ಯಾರನ್ನೂ ಹೇಳದೆ-ಕೇಳದೆ ಮದುವೆ ಮಾಡಿಕೊಂಡಿರುತ್ತಾರೆ.

ಇದನ್ನ ನಮ್ಮ ಇಂದಿನ ಲವ್ ಮ್ಯಾರೇಜ್ಗೆ ಹೋಲಿಸ್ಬಹುದು.

gandharva-mattersindia.com_.jpgmattersindia

7. ರಾಕ್ಷಸ ವಿವಾಹ

ಈ ಪದ್ಧತಿಯಲ್ಲಿ ಹುಡುಗ ಹುಡುಗಿ ಇಬ್ಬರೂ ಪರಸ್ಪರ ಒಪ್ಪಿರುತ್ತಾರೆ. ಆದರೆ ಹುಡುಗಿ ಕಡೆಯವರು ಒಪ್ಪಿರುವುದಿಲ್ಲ. ಆಗ ಹುಡುಗನು ತನ್ನ ಹುಡುಗಿಯನ್ನು ಅವರಿಂದ ಕಸಿದುಕೊಂಡು ದೂರ ಓಡಿಹೋಗಿ ಮದುವೆ ಮಾಡ್ಕೊತಾರೆ. ಹುಡುಗಿಯ ರಕ್ಷಣೆಗೆ ನಿಂತಿದ್ದವರು ಒಮ್ಮೊಮ್ಮೆ ಏಟು ತಿನ್ನುತ್ತಾರೆ.

hands-cuspconcepts.com_.jpgcuspconcepts

8. ಪೈಶಾಚ ವಿವಾಹ

ಈ ಪದ್ಧತಿಯಲ್ಲಿ ಮದುವೆ ಹುಡುಗ ಹುಡುಗಿಯನ್ನು ಮೋಸದಿಂದ, ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮದುವೆ ಮಾಡ್ಕೊತಾನೆ. ಇದು ಅನ್ಯಾಯದ ಮಾರ್ಗ ಅಂತ ಮನುಸ್ಮೃತಿ ಹೇಳತ್ತೆ.

forced-marrs-walizahid.com_.jpgmarriages

ಹೊರಚಿತ್ರ: studioumablog