https://yourstory.com/2016/01/ratan-tata-startups/

ರತನ್ ಟಾಟಾ ಈಗಿನ ಕಾಲದಾಗಿನ ದೊಡ್ಡ ದೊಡ್ಡ ಬಿಜಿನೆಸ್ ಮ್ಯಾನಗುಳ ಒಳಗ ಒಬ್ಬರು. ಭಾಳಾ ಕಷ್ಟಾ ಪಟ್ಟ ಸಾಮ್ರಾಜ್ಯಾನ ಈ ಮಟ್ಟಕ್ಕ ಬೆಳೆಸ್ಯಾರ. ಲೈಫಿನ್ಯಾಗ ಭಾಳಷ್ಟ ಏಳು ಬೀಳು ನೋಡ್ಯಾರ. ಸೋಲ ಬಂದಾಗ ಕುಗ್ಗದ, ಸೆಕ್ಸೆಸ್ಸ ಬಂದಾಗ ಹಿಗ್ಗದ ಎಲ್ಲಾನೂ ಸರಿಸಮಾ ನೋಡದು ಇವರಿಗೆ ಗೊತ್ತೈತಿ. ಇಂಥಾ ರತನ್ ಟಾಟಾ ಸಾಲಿ ಹುಡುಗರ ಜೊತಿಗೆ ಮಾತಾಡಿಕೆಂತ ಹೇಳಿರ ಈ 10 ಜೀವನದ ಪಾಠಗಳಿಂದಾ ನಾವ ಬದುಕಿನ ಬಗ್ಗೆ ಕಲ್ಕಳ್ಳಣ.

1. ಲೈಫಿನ್ಯಾಗ ಏಳು-ಬೀಳ ಇದ್ದ ಇರತಾವ. ಹಂಗಾಗಿ ಲೈಫಿನ್ಯಾಗ ಭಾಳ ಛೊಲೋದು ಇಲ್ಲಾ ಭಾಳ ಕೆಟ್ಟದ್ದು ಅಂತ ಏನೂ ಇಲ್ಲ. ಲೈಫನ ಅದ ಬಂದ ಹಂಗ ತೊಗಾಬೇಕು, ನಮ್ಮ ಕೈಲೆ ಆದಸ್ಟ…. ಸಿಚುವೇಶನ್ನನ  ನಮ್ಮ ಛೊಲೋದಕ್ಕ ಉಪೇಗಿಸಿಕ್ಯಾಬೇಕು.

2. ನಿಮ್ಮ ಬಗ್ಗೆ ನಿಮಗ ರೆಸ್ಪೆಕ್ಟ ಇದ್ದರ ಜಗತ್ತೂ ಸೈತ ನಿಮಗ ರೆಸ್ಪೆಕ್ಟ್ ಕೊಡತತಿ. ಬಂಡವಾಳ ಇಲ್ಲದ ಬಡಾಯಿ ಕೊಚಿಗೆಳ್ಳಾಕ ಹೋಗಬಾರದು. ಮದಲ ನೀವ ಸಾಧಿಸದ ಏನೈತಿ ಸಾಧಿಸರಿ. ಅದಕ್ಕಿಂತ ಮೊದಲ ಶೋ-ಆಫ್ ಮಾಡಬಾರದು.

ಮೂಲ

3. ಕಾಲೇಜಿನಿಂದ ಬಂದ ಕೂಡಲೇ ದೊಡ್ಡ ಕೆಲಸಾ ಸಿಗತತಿ ಅಂತ ಆಗಲೀ, ಬೆಳಕ ಹರೇದರೊಳಗ ಸೆಕ್ಸಸ್ ಹುಡಿಕ್ಕೆಂಡ ಬರತತಿ ಅಂತ ಆಗಲೀ ಕನಸ ಕಾಣಬಾಡರಿ. ಅದಕ್ಕೆಲ್ಲಾ ಭಾಳ ಶ್ರಮಾ ಪಡಬೇಕು.

4. ನಿಮ್ಮ ಟೀಚರ ನಿಮಗ ಭಾಳ ಸ್ಟ್ರಿಕ್ಟ್, ಕೆಟ್ಟೋರ ಅಂತೆಲ್ಲಾ ಅನಿಸಿದ್ದರ…. ತಡಕರ್ರಿ! ಮುಂದ ನಿಮಗ ಒಬ್ಬಂವಾ ಬಾಸ ಬಂದಾಗ ಆ ಟೀಚರ ಛೊಲೋ ಇದ್ದರು ಅಂತ ಅನಿಸತತಿ.

ಮೂಲ

5. ಸೋತಾಗ ನಿಮ್ಮ ಮ್ಯಾಲ ನೀವ ತಪ್ಪ ಹೊರಿಸಿಗೆಂಡ ಕುಗ್ಗಬಾಡರಿ. ಸೋಲಿನಿಂದಾ ಪಾಠಾ ಕಲತ ಜೀವನದಾಗ ಮುಂದ ಹೋಗರಿ.

6. ನೀವ ದೊಡ್ಡರಾದ ಮ್ಯಾಲ ನಿಮ್ಮ ತಂದಿ-ತಾಯಿ ಇಂಟರೆಸ್ಟಿಂಗ್ ಮನಿಶಾರ ಅಲ್ಲ ಅಂತ ಅಂದಕಾಬಾಡರಿ. ನೀವ ಹುಟ್ಟಿದ ಮ್ಯಾಲ ನಿಮ್ಮನ ಸಾಕದೊರಳಗ ಸುಸ್ತ ಹೊಡದ ಅವರ ಹಂಗ ಆಗ್ಯಾರ ಅಸ್ಟ.

ಮೂಲ

7. ಸಾಲ್ಯಾಗ ಅಸ್ಟ ಸೋತರಿಗುನೂ ಸೈತ “ಸಮಾಧಾನಕರ” ಬಹುಮಾನ ಕೊಡದು. ಲೈಫಿನ್ಯಾಗ ಒಮ್ಮೆ ಸೋತರಿಗೆ ಎರಡನೇ ಛಾನ್ಸ್ ಸಿಗದ ಭಾಳ ಕಷ್ಟಾ. ಅದ ಟಾಯಮ ಮತ್ತ ರಿಟರ್ನ ಬರಂಗಿಲ್ಲ ಅಲ್ಲಾ?

8. ನಿಜ ಜೀವನದಾಗ ಸಾಲ್ಯಾಗ ಇರೋ ಹಂಗ ಬ್ಯಾಸಿಗಿ ರಜಾ ಇರಂಗಿಲ್ಲ. ಹಂಗನ ಸರಿ-ತಪ್ಪ ಹೇಳಿ ಕೊಡಾಕ ಟೀಚರೂ ಸೈತ ಇರಂಗಿಲ್ಲ. ಇಲ್ಲಿ ನಿಮಗ ನೀವ ಟೀಚರು.

ಮೂಲ

9. ಟಿ.ವಿ. ಚಾನೆಲ್ಲಿನ್ಯಾಗ ತೋರಿಸದ ಲೈಫ ಅಲ್ಲ. ನಿಜ ಜೀವನದಾಗ ಮಾಡಾಕ ಭಾಳ ಕೆಲಸ ಇರತತಿ. ಯಾವಾಗ ಮಾಡಿದರೂ ಮುಗೀಲಾರದಸ್ಟ ಕೆಲಸಾ ಇರತತಿ.

10. ಯಾವಾಗನೂ ಕಲಿಯೋದ ನಿಲ್ಲಸಬಾಡರಿ. ಫ್ರೆಂಡ್ಸದು ಕಾಲ ಎಳೀಬಾಡರಿ. ಅವರನ ಜಾಸ್ತಿ ಹಂಗಸಾಕ ಹೋಗಬಾಡರಿ. ನಾಳೆ ನೀವ ಅವರ ಕೆಳಗ ಕೆಲಸಾ ಮಾಡ ಅಂತಾ ಸಿಚುವೇಶನ್ ಬಂದರೂ ಬರದೋದು!!

ಮೂಲ

ಇದೆಲ್ಲಾ ಹೇಳಿದ್ದ ಸಾಲಿ ಹುಡುಗೂರಿಗೇನ ಆದರೂ ಲೈಫ ಅನ್ನ ಸಾಲ್ಯಾಗ ನಾವ ಯಾವಾಗಲೂ ಸ್ಟೂಡೆಂಟಗೂಳ ಅಲ್ಲಾ? ಹಂಗಾಗಿ ಇದರಿಂದ ಕಲಿಯೋದ ಭಾಳ ಐತಿ! ಹೌದಿಲ್ಲ ಮತ್ತ?