ಇಡೀ ವಿಶ್ವದಲ್ಲಿ ಕೋಟ್ಯಾಂತರ ಜನರು ವಿವಿಧ ಶೈಲಿಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅದರ ರೂವಾರಿ ಹೊತ್ತವರಲ್ಲಿ ಕನ್ನಡಿಗರೇ ಮೊದಲಿಗರು.

ತಿರುಮಲೈ ಕೃಷ್ಣಮಾಚಾರ್ಯ, ಪಟ್ಟಾಭಿ ಜೋಯಿಸ್ ಮತ್ತು ಬಿ.ಕೆ.ಎಸ್.ಐಯ್ಯಂಗಾರ್ ಪ್ರಮುಖವಾಗಿ ಜನಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಷ್ಟಾಂಗ ಯೋಗವನ್ನು ಪ್ರಸಿದ್ಧಗೊಳಿಸಿದ್ದಾರೆ. ಈಗ ಪಟ್ಟಾಭಿ ಜೋಯಿಸರ ಮೊಮ್ಮಗ ಶರತ್ ಜೋಯಿಸ್ ಈ ಪಟ್ಟಿಗೆ ಸೇರ್ಪಡೆಯಾಗಿ ಒಟ್ಟು ನಾಲ್ಕು ಜನ ಕನ್ನಡಿಗರು ಜಗತ್ತಿನಲ್ಲಿ ಯೋಗವನ್ನು ಪ್ರಸಿದ್ಧಪಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ ಅನ್ನಬಹುದು.

ಈ 4 ಜನರ ಬಗ್ಗೆ ಹೆಚ್ಚು ತಿಳಿಯೋಣ, ಬನ್ನಿ…

1. ಯೋಗದ ಮಹತ್ವ ಕ್ಷೀಣಿಸುತ್ತಿದ್ದ ಕಾಲದಲ್ಲಿ (ಇಪ್ಪತ್ತನೇ ಶತಮಾನ) ಪುನರ್ಜೀವ ನೀಡಿದವರು ತಿರುಮಲೈ ಕೃಷ್ಣಮಾಚಾರ್ಯ.

ಕೃಷ್ಣಮಾಚಾರ್ಯರು (18 ನವೆಂಬರ್ 1888 – 28 ಫೆಬ್ರುವರೀ 1989) ಚಿತ್ರದುರ್ಗದಲ್ಲಿ ಜನಿಸಿದರು. ಸಂಸ್ಕೃತ ಮತ್ತು ವೇದಗಳ ಜೊತೆಗೆ ತಮ್ಮ ತಂದೆಯವರಾದ ‘ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ’ ಅವರಿಂದ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿತರು. ಮೈಸೂರು, ಪಟ್ನಾ ಹಾಗೂ ಕಾಶಿಯಲ್ಲಿ ಪಾಂಡಿತ್ಯ ಪಡೆದರು. ಹಿಮಾಲಯದಲ್ಲಿ ವಾಸವಾಗಿದ್ದ ರಾಮ ಮೋಹನ ಬ್ರಹ್ಮಚಾರಿ ಇವರಿಗೆ ಗೂರ್ಖಾ ಭಾಷೆಯಲ್ಲಿ “ಯೋಗ ಕುರುನ್ತ’ ವನ್ನು ಪೂರ್ತಿ ಕಂಠಪಾಟ ಮಾಡಿಸಿದ್ದರು.

03-Krishnamacharya.jpgleyoga

2. ನಂತರ ಮೈಸೂರಿಗೆ ಬಂದು ನಾಲ್ವಡಿ ಶ್ರೀಕೃಷ್ಣ ರಾಜ ಒಡೆಯರ ಆಸ್ಥಾನ ವಿದ್ವಾಂಸರಾದರು.

ಮಹಾರಾಜರ ಪ್ರೋತ್ಸಾಹದಲ್ಲಿ ಭಾರತದಾದ್ಯಂತ ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಯೋಗಾಸವನ್ನೂ ಪ್ರದರ್ಶಿಸಿದರು. ಆಚಾರ್ಯರು ಬರೆದ ಅನೇಕ ಪುಸ್ತಕಗಳಲ್ಲಿ ಮುಖ್ಯವಾದುದು ‘ಯೋಗ ಮಕರಂದ’, ‘ಯೊಗಾಸನಗಳು’, ‘ಯೋಗ ರಹಸ್ಯ’ ಮತ್ತು ‘ಯೋಗವಲ್ಲಿ’.

01-Krishnamacharya.jpgleyoga

3. 1933ರಲ್ಲಿ ಜಗನ್ಮೋಹನ ಅರಮನೆಯಲ್ಲಿ ಯೋಗಾಶಾಲೆಯೊಂದನ್ನೂ ಆರಂಭಿಸಿದರು.

ದುರಾದೃಷ್ಟವಶಾತ್ ಈ ಯೋಗಾಶಾಲೆಯನ್ನು ಸ್ವಾತಂತ್ರ ಭಾರತದ ಮೈಸೂರಿನ ಮೊದಲ ಮುಖ್ಯ ಮಂತ್ರಿಯಾದ ಕೆ.ಸಿ.ರೆಡ್ಡಿಯವರು ಮುಚ್ಚಿಸಿದರು. ಅದರ ಕಾರಣ ಆಚಾರ್ಯರು ಮೈಸೂರಿನಿಂದ ಬೆಂಗಳೂರಿಗೆ ಅನಂತರ ಮದ್ರಾಸಿಗೆ ತೆರಳಿದರು. ಮದ್ರಾಸಿನಲ್ಲಿ ಕೆಲ ಕಾಲ ವಿವೇಕಾನಂದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. 1989ರಲ್ಲಿ ನಿಧನರಾದರು.

04-Demonstration-Palace-Mysore.jpgleyoga

4. ಆಚಾರ್ಯರ ಮೂರು ಶಿಷ್ಯರು ಕೆ.ಪಟ್ಟಾಭಿ ಜೋಯಿಸ್, ಮಗ ದೇಶಿಕಾಚಾರ್ ಹಾಗು ಭಾವಮೈದುನ ಬಿ.ಕೆ.ಎಸ್ ಅಯ್ಯಂಗಾರ್.

ಪಟ್ಟಾಭಿ ಜೋಯಿಸ್ ಅವರು ಮೈಸೂರಿನಲ್ಲಿ, ದೇಶಿಕಾಚಾರ್ ಅವರು ಮದ್ರಾಸಿನಲ್ಲಿ ಮತ್ತು ಬಿ.ಕೆ.ಎಸ್ ಅಯ್ಯಂಗಾರ್ ಅವರು ಪುಣೆಯಲ್ಲಿ ಯೋಗದೀಪವನ್ನು ಪ್ರಜ್ವಲಗೊಳಿಸಿದರು. ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಈ ಮೂವರು ಯೋಗ ಪ್ರಚಾರಣೆಗೆ ಕಾರಣರಾದರು.

12-krishnamacharya_desikachar.jpgleyoga

5. “ಆಧುನಿಕ ಯೋಗದ ಪಿತಾಮಹ” ಕೃಷ್ಣಮಾಚಾರ್ಯರು ಹೇಳಿದಂತೆ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡುವಾಗ …

“ಉಸಿರನ್ನು ತೆಗೆದುಕೊಂಡರೆ ಪರಮಾತ್ಮ ನಮ್ಮಲ್ಲಿಗೆ ಬರುತ್ತಾನೆ,
ಆ ಉಸಿರನ್ನು ಹಿಡಿದರೆ ಪರಮಾತ್ಮ ನಮ್ಮಲ್ಲಿ ಉಳಿಯುತ್ತಾನೆ,
ಆ ಉಸಿರನ್ನು ಬಿಟ್ಟಾಗ ನಾವು ಪರಮಾತ್ಮಾನೆಡೆಗೆ ಹೋಗುತ್ತೇವೆ,
ಆ ಬಿಟ್ಟ ಉಸಿರಿನ ಸ್ಥಿತಿಯನ್ನು ಹಿಡಿದರೆ ನಮ್ಮನ್ನು ನಾವು ಪರಮಾತ್ಮನಿಗೆ ಸಮರ್ಪಿಸುತ್ತೇವೆ”

09-tk_bks_1980.jpgleyoga

6. ಕೆ.ಪಟ್ಟಾಭಿ ಜೋಯಿಸ್ (26-07-1915 – 18-5-2009) ಅಷ್ಟಾಂಗ ವಿನ್ಯಾಸ ಯೋಗವನ್ನು ವಿದೇಶಕ್ಕೆ ಹರಡಿದರು.

37 ವರ್ಷ ಕಾಲ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಯೋಗಶಾಸ್ತ್ರದ ಪ್ರಾಧ್ಯಾಪಕರಾಗಿರು. 1948ರಲ್ಲಿ ಮೈಸೂರಿನಲ್ಲಿ ಅಷ್ಟಾಂಗ ಯೋಗ ರೀಸರ್ಚ್ ಇನ್ಸ್ಟಿಟೂಟ್ ಆರಂಭಿಸಿದರು. “ಯೋಗ ಮಾಲ” ಇವರು ಬರೆದ ಮಹತ್ವದ ಪುಸ್ತಕ. 1964ರಲ್ಲಿ ಬೆಲ್ಜಿಯಂ ದೇಶದ ಅಂಡ್ರೆ ವ್ಯಾನ್ ಲಿಸೆಬೆಥ್ (André Van Lysebeth) ಇವರಲ್ಲಿ 2 ವರ್ಷ ವಿನ್ಯಾಸ ಯೋಗಾಸನಗಳನ್ನು ಕಲಿತು ಯೂರೋಪ್ ದೇಶಕ್ಕೆ ಗುರೂಜಿಯವರ ಪರಿಚಯ ಮಾಡಿಸಿದರು. ಆನಂತರವೇ ಪಾಶ್ಚಾತ್ಯ ದೇಶದಿಂದ ಅನೇಕಾನೇಕ ಜನರು ಮೈಸೂರಿಗೆ ಬಂದು ಯೋಗ ವಿದ್ಯೆಯನ್ನು ಕಲಿತು ಕೊಂಡಿದ್ದಾರೆ. ಈಗಲೂ ಕಲಿಯುತ್ತಿದಾರೆ.

06-K._Pattabhi-Jois-demonstration.jpgleyoga

7. ಮಡೋನ (Madonna), ಸ್ಟಿಂಗ್ (Sting) ಮತ್ತು ಪಾಲ್ಟ್ರೊವ್ (Paltrow) ಪಟ್ಟಾಭಿಯವರ ಶಿಷ್ಯರಾಗಿದ್ದರು.

1950ರಲ್ಲಿ ಗಂಡಭೇರುಂಡಾಸನದಲ್ಲಿ ಪಟ್ಟಾಭಿ ಜೋಯಿಸ್ರ ಮಗಳು ಸರಸ್ವತಿ.

07-Saraswati.jpgleyoga

8. ಜಗತ್ತಿನ 40 ರಾಷ್ಟ್ರಗಳಲ್ಲಿ 180 ಯೋಗ ಕೆಂದ್ರಗಳಲ್ಲಿ ಸುಮಾರು 2000 ಯೋಗ-ಶಿಕ್ಷಕರನ್ನು ತಯಾರು ಮಾಡಿದ ಕೀರ್ತಿ ಬಿ.ಕೆ.ಎಸ್.ಅಯ್ಯಂಗಾರ್ ಅವರಿಗೆ ಸಲ್ಲುವುದು.

ಬಿ.ಕೆ.ಎಸ್.ಅಯ್ಯಂಗಾರ್ (ಡಿಸೆಂಬರ್ 14, 1918 – ಆಗಸ್ಟ್ 20, 2014) ಮೈಸೂರಿನಲ್ಲಿ ಜನಿಸಿದರು. ಬಾಲ್ಯದ ಅನಾರೋಗ್ಯದಿಂದ ಧೃತಿಗೆಡದೆ ಯೋಗಾಭ್ಯಾಸವನ್ನು ತಮ್ಮ ಭಾವಮೈದುನ ಕೃಷಾಮಾಚಾರ್ಯರ ಮಾರ್ಗದರ್ಶನದಿಂದ ಕಟ್ಟುನಿಟ್ಟಾಗಿ ಅಭ್ಯಾಸ ಮಾಡಿ ಭೀಮಕಾಯರಾದರು.

08-_B.K.S._Iyengar.jpgleyoga

9.  ಬಿ.ಕೆ.ಎಸ್.ಅಯ್ಯಂಗಾರ್ ಜಗತ್ತಿನಲ್ಲೇ ಪ್ರಥಮವಾಗಿ ಪತಾಂಜಲಿ ಮಹರ್ಷಿ ದೇವಸ್ಥಾನವನ್ನು 2004ರಲ್ಲಿ ಬೆಳ್ಳೂರಿನಲ್ಲಿ ಕಟ್ಟಿಸಿದರು.

ಇವರ ಯೋಗ ಶಿಕ್ಷಣ ಪ್ರಭಾವಕ್ಕೆ ಒಳಗಾದವರಲ್ಲಿ ಜಿಡ್ಡು ಕೃಷ್ಣಮೂರ್ತಿ, ಜಯಪ್ರಕಾಶ್ ನಾರಾಯಣ್, ಕಾದಂಬರಿಕಾರ ಆಲ್ಡಸ್ ಹಕ್ಸ್‌ಲಿ ಮತ್ತು ವಯಲಿನ್ ವಾದಕ ಯೆಹೂದಿ ಮೆನುಹಿನ್ ಮುಂತಾದವರಿದ್ದಾರೆ. ಅಯ್ಯಂಗಾರರನ್ನು ಕೆಲವರು ‘Michelangelo of Yoga’ ಎಂದರೆ ಮತ್ತೆ ಕೆಲವರು ‘King of Yoga’ ಎನ್ನುತ್ತಾರೆ.

guruji_bks_iyengar-600x469.jpgspeak

10. 1966ರಲ್ಲಿ ಅಯ್ಯಂಗಾರರ ಬೋಧನೆಗಳು ‘ಲೈಟ್ ಆನ್ ಯೋಗ’ ಕೃತಿಯ ರೂಪದಲ್ಲಿ ದೊರೆತವು.

18 ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿತು. ‘ಲೈಟ್ ಆನ್ ಪ್ರಾಣಾಯಾಮ’, ‘ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ’ ಅವರ ಇತರ ಪ್ರಕಟಿತ ಕೃತಿಗಳು.

bks-1-carrieowerko.jpgcarrioe

11. ಬಿ.ಕೆ.ಎಸ್.ಅಯ್ಯಂಗಾರರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.

‘ಟೈಮ್’ ನಿಯತಕಾಲಿಕವು 2014ರಲ್ಲಿ ಪ್ರಕಟಿಸಿದ ವಿಶ್ವದ 100 ಮಂದಿ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ವಿದ್ಯಾರ್ಥಿಗಳ ಅಗತ್ಯಗಳನ್ನು ಅರಿತು ಅವರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಷ್ಟ ಪರಿಹಾರವನ್ನು ಯೋಗದ ಮೂಲಕ ಬೋಧಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು.

BKS-Iyengar-yoga-teacher.jpgrelax

12. ಪಟ್ಟಾಭಿ ಜೋಯಿಸರ ಮೊಮ್ಮಗ ಶರತ್‌ ಜೋಯಿಸ್‌ ಮೈಸೂರಿನಲ್ಲಿ ತಾತನ ಅಷ್ಟಾಂಗ ಯೋಗ ಪದ್ದತಿಯನ್ನು ಮುಂದುವರೆಸುತ್ತಿದ್ದಾರೆ.

ಶರತ್ ಪಟ್ಟಾಭಿ ಜೋಯಿಸರ ನಿರತ ಮಾರ್ಗದರ್ಶನದಿಂದ ವಿನಿ-ಯೋಗದ ಎಲ್ಲಾ ಪ್ರಕಾರಗಳನ್ನು 19 ವರ್ಷದವನಿದ್ದಾಗಲೇ ಕಲಿತಿದ್ದಾರೆ. ಈಗ ಮೈಸೂರಿನಲ್ಲಿರುವ ಅಷ್ಟಾಂಗ ಯೋಗ ನಿಲಯ ನಡೆಸುತ್ತಿದ್ದಾರೆ. ಬೆಳಗ್ಗೆ 1.00 ಗಂಟೆಗೆ ಎದ್ದು ತಮ್ಮ ದಿನನಿತ್ಯದ ಯೋಗಾಭ್ಯಾಸವನ್ನು ಮುಗಿಸಿ ನಂತರ ನೂರಾರು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾರೆ. ಇವರಿಗೆ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ-2013 ದೊರೆತಿದೆ.

sharath_001.jpgpineappleyoga

ಯೋಗ ವಿದ್ಯೆಗೆ ಇವರೆಲ್ಲರ ಕೊಡುಗೆ ಪ್ರಶಂಸನೀಯ!!!