https://brightside.me

ನಮಗೆ ಇಷ್ಟವಾಗೋ ಆಕಾರ ಮತ್ತು ರೂಪಗಳು ನಮ್ಮ ಗುಪ್ತ ಲಕ್ಷಣಗಳಬಗ್ಗೆ ಸಾಕಷ್ಟು ಹೇಳುತ್ತೆ. ಶಾಸ್ತ್ರ, ಪುರಾಣ, ಇತಿಹಾಸ ಯಾವುದನ್ನೇ ತೊಗೊಂಡ್ರು ಸೂರ್ಯನಿಗೆ ಯಾವಾಗ್ಲೂ ವಿಶೇಷ ಸ್ಥಾನಮಾನ. ಮೊದಲು ಸೂರ್ಯನ ಈ 8 ರೂಪಗಳನ್ನ ನೋಡಿ. ಸಮಾಧಾನದಿಂದ ನಿಮಗೆ ಯಾವುದು ಹೆಚ್ಚು ಹಿಡಿಸಿತು ಅನ್ನೋದನ್ನ ನೆನಪು ಮಾಡ್ಕೊಂಡು, ಅದು ನಿಮ್ಮ ಬಗ್ಗೆ ಏನು ಹೇಳುತ್ತೆ ನೋಡಿ.

1. ನಿಮ್ಮ ಮನಸೂರೆಗೊಂಡಿದ್ದು 1 ನೇ ಚಿತ್ರ ಆಗಿದ್ರೆ.

ನೀವು ಯಾವಾಗ್ಲೂ ಒಳ್ಳೇದನ್ನೇ ಯೋಚಿಸ್ತೀರಿ, ನಿಮ್ಮಲ್ಲಿ ಕೆಟ್ಟ ಆಲೋಚನೆಗೆ ಹೆಚ್ಚು ಅವಕಾಶ ಇಲ್ಲ. ಯಾವಾಗ್ಲೂ ನಿಮ್ಮನ್ನ ನೀವು ಹೇಗೆ ಉತ್ತಮ ಪಡಿಸ್ಕೊಬಹುದು, ನಿಮ್ಮಲಿ ಏನು ಸುಧಾರಣೆ ಮಾಡ್ಕೋಬಹುದು ಅನ್ನೋದನ್ನ ಯೋಚಿಸ್ತಿರ್ತೀರಿ. ನೀವು ಸುಲಭವಾಗಿ ಧೈರ್ಯಗೇಡೋ ವ್ಯಕ್ತಿ ಅಲ್ಲ. ನಿಮ್ಮ ನಿಲುವಿಗೆ ಬದ್ಧರಾಗಿರ್ತೀರಿ. ಅರ್ಧ ನೀರಿರೋ ಲೋಟ ನಿಮಗೆ ಯಾವಾಗ್ಲೂ ಅರ್ಧ ತುಂಬಿದೆ ಅಂತಾನೆ ಅನ್ನಿಸೋದು.

ನೀವು ಜೀವನ ನೋಡೋ ರೀತಿ, ನಿಮ್ಮ ಈ ಚೇತರಿಸ್ಕೊಳ್ಳೋ ಪುಟಿದೇಳೊ ಸ್ವಭಾವಾನೆ ನೀವು ನಿಮಗೆ ಬೇಕಾದವರಿಗೆ, ನಿಮ್ಮ ಸ್ನೇಹಿತರಿಗೆ ಯಾವುದೇ ಸಂದರ್ಭದಲ್ಲೇ ಆದರೂ ಅವರ ಜೊತೆ ಇರ್ತೀರಿ ಅನ್ನೋದನ್ನ ತೋರ್ಸುತ್ತೆ. ಸಾಮಾನ್ಯವಾಗಿ ನೆರವಿಗೆ ಮಾತಾಡೋ ಸ್ವಭಾವ ನಿಮ್ಮದು, ಆದ್ರೆ ಅದರಿಂದ ಬೇರೆಯವರಿಗೆ ನೋವಾಗುತ್ತೆ ಅಂತ ಅನ್ನಿಸಿದ್ರೆ, ನಿಮ್ಮ ಮನಸಿನೊಳಗೆ ಇಟ್ಕೋಳೊವ್ರು ನೀವು. ಇದು ನಿಮಗೆ ಬೇಕಾದವರನ್ನ ನೀವು ಆರಿಸಿಕೊಳ್ಳೋದಕ್ಕೆ ಸಹಾಯ ಮಾಡುತ್ತೆ, ಕೊನೆಗೆ ನಿಮ್ಮಜೊತೆ  ಕೆಲವೇ ನಿಜವಾದ ಸ್ನೇಹಿತರು ಮಾತ್ರ ಇರ್ತಾರೆ.

https://brightside.me
2. ನಿಮ್ಮ ಮನಸೂರೆಗೊಂಡಿದ್ದು 2 ನೇ ಚಿತ್ರ ಆಗಿದ್ರೆ.

ನಿಮಗೆ ತುಂಬಾನೇ ಮುಖ್ಯವಾದ ಎರಡು ವಿಷಯ ಅಂದ್ರೆ ವೈಯಕ್ತಿಕ ಗೌರವ ಹಾಗೆ ಪರ್ಸನಲ್ ಸ್ಪೇಸ್ ಎರಡನ್ನೂ ನಿಮ್ಮ ಸ್ನೇಹಿತರಿಂದ ಹಾಗೆ ನೀವು ಪ್ರೀತಿಸ್ತಿರೋವರಿಂದ ಅಪೇಕ್ಷೆಪಡೋದು.. ನೀವು ಅಂತರ್ಮುಖಿ ಹಾಗಂತ ನೀವು ಬೇರೆ ಜನರಿಂದ ದೂರ ಇದ್ದು ಒಂಟಿ ಗೂಬೆ ಅಂತಾರಲ್ಲ ಹಾಗೇನಿರಲ್ಲ. ಆದ್ರೆ ಎಲ್ಲರಿಂದ ಸ್ವಲ್ಪ ಅಂತರ ಕಾಯ್ಕೋತೀರಿ. ಒಂತರಾ ಸಂಕೋಚ, ಬಿಗುಮಾನ ಇದೆ.

ನೀವು ತುಂಬಾನೇ ಸಿಂಪಲ್ ಆಗಿರೋ ಕರುಣೆ, ಪ್ರಾಮಾಣಿಕತೆಯಂತ ಗುಣಗಳಿಗೆ ಬೆಲೆ ಕೊಡ್ತೀರಿ. ನಿಮ್ಮ ಸ್ನೇಹಿತರಿಗಾಗಿ ನೀವು ಯಾವಾಗ್ಲೂ ಇದ್ದೆ ಇರ್ತೀರಿ. ಆದರೆ ನಿಮ್ಮನ್ನ ಪದೇ ಪದೇ ಉಪಯೋಗಿಸ್ಕೊಳ್ಳೋ ಸ್ನೇಹಿತರಬಗ್ಗೆ ಎಚ್ಚರಿಕೆಯಿಂದ ಇರಿ. ಯಾವಾಗ್ಲೂ ನಿಮ್ಮ ಒಳ ಮನಸ್ಸು (6 ನೇ ಸೆನ್ಸ್ ) ಏನು ಹೇಳುತ್ತೋ ಅದರಬಗ್ಗೆ ನಂಬಿಕೆ ಇಡಿ. ಅದೇ ನಿಮಗೆ ಯಾವುದೇ ಸಂದರ್ಭದಲ್ಲೇ ಆಗಲಿ ಹೊರಬರೋದಕ್ಕೆ ಸಹಾಯ ಮಾಡುತ್ತೆ.

https://brightside.me
3. ನಿಮ್ಮ ಮನಸೂರೆಗೊಂಡಿದ್ದು 3 ನೇ ಚಿತ್ರ ಆಗಿದ್ರೆ.

ತಿಳುವಳಿಕೆ, ಬುದ್ದಿ ಹಾಗೆ ಸಾಹಸದ ವಿಷಯಗಳಿಗೆ ಬಂದಾಗ ನೀವು ತುಂಬಾನೇ ಚುರುಕು ಹಾಗೂ ಕುತೂಹಲಕಾರಿ ವ್ಯಕ್ತಿ. ತುಂಬಾನೇ ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಕ್ತಿತ್ವ ನಿಮ್ಮದು. ಮುಕ್ತ ಮನಸ್ಸನ್ನ ಹೊಂದಿರೋ ನೀವು ನಿರ್ಧಾರ ತೊಗೊಳೋವಾಗ ಯಾವುದೇ ಗಲಿಬಿಲಿ ಇರಲ್ಲ. ನಿರಾತಂಕವಾಗಿ ಯೋಚಿಸಿ ನಿರ್ಧಾರ ಮಾಡ್ತೀರಿ.

ನಾಯಕತ್ವದ ಗುಣ ನಿಮ್ಮಲ್ಲಿ ಹುಟ್ತಾನೇ ಬಂದಿದೆ ಹಾಗಾಗೇ ನೀವು ಮುನ್ನಡೆದು ಬೇರೆಯವರಿಗೂ ದಾರಿ ತೋರ್ಸಿತ್ತೀರಿ. ಅವರೆಲ್ಲ ನಿಮ್ಮನ್ನ ಕಣ್ಣು ಮುಚ್ಚಿ ನಂಬೋದಲ್ಲದೆ ನಿಮ್ಮ ತೂಕದ ಮಾತು, ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಕೊಡ್ತಾರೆ.

https://brightside.me
4. ನಿಮ್ಮ ಮನಸೂರೆಗೊಂಡಿದ್ದು 4 ನೇ ಚಿತ್ರ ಆಗಿದ್ರೆ.

ನಿಮ್ಮಲ್ಲಿರೋ ಶ್ರೇಷ್ಠ ಗುಣ ಅಂದ್ರೆ ಯಾವತ್ತೂ ನಿಮ್ಮಲ್ಲಿ ಶಕ್ತಿ ಕಮ್ಮಿ ಆಗಲ್ಲ, ಯಾವುದೇ ವಿಶ್ರಾಂತಿ ಇಲ್ಲದೆ ಇದ್ರೂ ಅಷ್ಟೇ ಚುರುಕಾಗಿ ಓಡಾಡಿಕೊಂಡು ಇರ್ತೀರಿ. ಹೊಸ ಹೊಸ ಚಾಲೆಂಜ್ ತೊಗೊಳೋದು, ಹೊಸ ಹೊಸ ಅವಕಾಶಗಳಿಗೆ, ಏನಾದ್ರೂ ಹೊಸತನ್ನ ಮಾಡೋ ಪ್ರಯತ್ನ ಮಾಡೋದು ನಿಮ್ಮ ಗುಣ.

ನೀವು ಜೀವನದ ಬಗ್ಗೆ ಒಂದು ವಿಶೇಷ ಪ್ರೀತಿ ತೋರಿಸ್ತೀರಿ. ಅದೇ ನಿಮ್ಮ ಜೀವನದಲ್ಲಿ ಅನೇಕ ಗುರಿಗಳನ್ನ ಇಟ್ಕೋಳೊಹಾಗೆ ಮಾಡಿದೆ. ಗಮನೇ ಬೇರೆ ಕಡೆ ಹೋಗದಹಾಗೆ ನೋಡ್ಕೊಳಿ. 

https://brightside.me
5.ನಿಮ್ಮ ಮನಸೂರೆಗೊಂಡಿದ್ದು 5 ನೇ ಸೂರ್ಯನ ಚಿತ್ರ ಆಗಿದ್ರೆ.

ನಿಮ್ಮಲ್ಲಿರೋ ಅತ್ಯುತ್ತಮ ಗುಣ ಅಂದ್ರೆ ಬೇರೆಯವರು ತೊಂದರೆಯಲ್ಲಿದ್ದಾಗ ಅವರಿಗೆ ಸಯಹ ಮಾಡೋದು. ನಿಮಗೆ ಸಹಾಯ ಮಾಡೋದು ಎಷ್ಟು ಇಷ್ಟ ಅಂದ್ರೆ ನಿಮ್ಮನ್ನ ನಿಜವಾದ ಹೀರೋ ಅಂದ್ರೂ ತಪ್ಪಾಗಲ್ಲ, ಯಾಕೆ ಅಂತೀರಾ? ಈ ಪ್ರಪಂಚ ಉಳಿಸೋದಕ್ಕೆ ನಿಮ್ಮಿಂದ ಅಲ್ಲದೆ ಯಾರಕೈಯಲ್ಲಿ ಆಗುತ್ತೆ?

ನೀವು ಬೇರೆಯವರಿಗೆ ಒಳ್ಳೆ ಮಾದರಿ, ಉತ್ಸಾಹ ತುಂಬೋವ್ರು, ಬೇರೆಯವರ ಜೀವನಕ್ಕೆ ದಾರಿದೀಪ. ನೀವು ತುಂಬಾನೇ ಬುದ್ದಿವಂತರು, ಆದ್ರೆ ನಿಮ್ಮ ಆಲೋಚನೆಗಳನ್ನ ಎಲ್ಲ ಸಮಯದಲ್ಲೂ ಬೇರೆಯವರ ಮುಂದೆ ಹೇಳಿಕೊಳ್ಳೋದಿಲ್ಲ.

https://brightside.me
6. ನಿಮ್ಮ ಮನಸೂರೆಗೊಂಡಿದ್ದು 6 ನೇ ಸೂರ್ಯನ ಚಿತ್ರ ಆಗಿದ್ರೆ.

ಯಾರು ಈ ಸೂರ್ಯನ್ನ ಆಯ್ಕೆಮಾಡಿಕೊಂಡಿದ್ದಾರೋ ಅವರು ತುಂಬಾನೇ ಜಾಲಿಯಾಗಿರೋವ್ರು. ಯಾವಾಗ್ಲೂ ಖುಷಿ ಖುಷಿಯಾಗಿರ್ತಾರೆ. ಜೀವನದ ಪ್ರತಿಯೊಂದು ಸಣ್ಣ ಪುಟ್ಟ ವಿಷ್ಯದಲ್ಲೂ ಸಂತೋಷ ಪಡ್ತಾರೆ. ಜೀವನದಲ್ಲಿ ಏನೇ ಅಡ್ಡಿ ಆತಂಕ ಬಂದ್ರೂ ಅದು ಜೀವನದಲ್ಲಿ ಏನೋ ಹೊಸತನ್ನೂ ಕಲಿಯೋದಕ್ಕೆ ಕಾರಣ ಅಂತ ಅಂದ್ಕೊಳೋವ್ರು.

ಈ ವ್ಯಕ್ತಿತ್ವ ಇರೋವು ತಮ್ಮ  ಒಳ್ಳೇದಕ್ಕೆ ಅಂತ ಯಾರಾದ್ರೂ ಟೀಕೆ ಮಾಡಿದ್ರೆ, ಅದನ್ನ ಒಳ್ಳೆ ರೀತಿಲೇ ಒಪ್ಕೋತಾರೆ. ಎಲ್ಲರ ಜೊತೇಲೂ ಆತ್ಮೀಯವಾಗಿ, ಖುಷಿಖುಷಿಯಾಗೆ ಇರ್ತಾರೆ. ಜನ ಇಂತವರನ್ನ ವಿಶ್ವಾಸಾರ್ಹ ಹಾಗೆ ಒಳ್ಳೆ ನಾಯಕತ್ವ ಗುಣ ಇರೋವ್ರು ಅಂತಾನೆ ತಿಳ್ಕೋತಾರೆ.

https://brightside.me
7. ನಿಮ್ಮ ಮನಸೂರೆಗೊಂಡಿದ್ದು 7 ನೇ ಸೂರ್ಯನ ಚಿತ್ರ ಆಗಿದ್ರೆ.

ಹೊಸ ಹೊಸ ಗುರಿ ಸಾಧಿಸ್ಬೇಕು ಅಂದ್ರೆ ನಿಮಗೆ ತುಂಬಾನೇ ಉತ್ಸಾಹ. ಅದನ್ನ ತಲುಪೋದಕ್ಕೆ ಹೆಚ್ಚು ಪ್ರಯತ್ನ ಮಾಡೋದಕ್ಕೂ ನೀವು ರೆಡಿ. ಆ ಗುರಿ ಎಷ್ಟಿದೆ ಅಂದ್ರೆ ಜೀವನ್ ಪೂರ್ತಿ ಸಾಕಾಗಲ್ಲ ಎಲ್ಲದನ್ನೂ ತಲುಪೋದಕ್ಕೆ. ನಿಮಗೆ ಯಾವುದು ತುಂಬಾ ಮುಖ್ಯ ಅನ್ಸುತ್ತೋ ಅದನ್ನ ಆರಿಸಿಕೊಂಡು ಮೊದಲು ಆ ಗುರಿ ತಲುಪಿ.

ಜನ ನಿಮ್ಮನ್ನ ಯಾವಾಗ ಇದನ್ನ ಬಿಡಬೇಕು ಅಂತ ಗೊತ್ತಿಲ್ಲದೇ ಇರೋ, ತುಂಬಾನೇ ಶ್ರಮ ವಹಿಸೋ, ಯಾವಾಗ್ಲೂ ಎನೆರ್ಜಿಯಿಂದ ಕೂಡಿರೋ ವ್ಯಕ್ತಿ ಅಂತಾನೆ ನೋಡೋದು. ನೀವು ಎಲ್ಲರಮೇಲೂ ಸಕಾರಾತ್ಮಕ ಭಾವನೆ ಹುಟ್ಟೋ ಹಾಗೆ ಮಾಡೋ ಗುಣ ಹೊಂದಿದ್ದೀರಿ.

https://brightside.me
8. ನಿಮ್ಮ ಮನಸೂರೆಗೊಂಡಿದ್ದು 8 ನೇ ಸೂರ್ಯನ ಚಿತ್ರ ಆಗಿದ್ರೆ.

ನಿಮ್ಮ ತಾಳ್ಮೆ ನೋಡಿ ಯಾರಿಗೆ ಆದ್ರೂ ಅಸೂಯೆ ಆಗುತ್ತೆ. ನೀವು ಯಾರಮೇಲೂ ದ್ವೇಷ ಸಾಧಿಸೋದಿಲ್ಲ ಹಾಗೆ ಸುಲಭವಾಗಿ ಮನಸ್ಸಿಗೆ ನೋವು ಮಾಡ್ಕೊಳ್ಳೋದಿಲ್ಲ. ಒಬ್ಬ ವ್ಯಕ್ತಿಯಾಗಿ ನಿಮ್ಮದು ತುಂಬಾನೇ ಪ್ರಭುದ್ಧವಾದ ಗುಣ ಹೊಂದಿದ್ದೀರಿ. ನೀವು ಯಾವುದನ್ನೇ ಆಗಲಿ ಚೆನ್ನಾಗಿ ಯೋಚನೆ ಮಾಡಿ ಯಾವುದೇ ರೀತಿಯ ತಪ್ಪು ಆಗದಂತೆ ಎಚ್ಚರಿಕೆ ವಹಿಸ್ತೀರಿ. 

ಪ್ರೀತಿ ಹಾಗೆ ಬೇರೆ ಭಾವನೆಗಳಿಗೆ ಪ್ರಾಮುಖ್ಯತೆ ಕೊಟ್ರೂ, ತರ್ಕಭದ್ದವಾಗಿ ಯೋಚನೆ ಹಾಗೆ ಬುದ್ದಿವಂತಿಕೆ ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕ್ತಿರಿ.

https://brightside.me
ನೀವು ಸರಿಯಾದ ಆಯ್ಕೆ ಮಾಡ್ಕೊಂಡಿದ್ರ? ನಿಮ್ಮ ವ್ಯಕ್ತಿತ್ವದ ಬಗ್ಗೆ ಆ ಚಿತ್ರ ಹೇಳ್ತಿರೋದು ಸರೀನಾ?