http://static1.squarespace.com/static/525c6dfbe4b0bbf5314070c2/52699bd9e4b0f66c33f70728/52699c83e4b0f66c33f7120d/1382653059259/BestLondonIndianWeddingPhotographer1.jpg

ಯಾರನ್ನಾದ್ರೂ ಪ್ರೀತಿಸಿದ್ರೆ, ಮನಸಿಗೆ ಹಾಯ್ ಅನ್ಸತ್ತೆ ಅಂತ ಎಲ್ಲಾರ್ಗೂ ಗೊತ್ತು! ಆದ್ರೆ ಅದರ ಹಿಂದೆ ಒಂದ್ ವಿಜ್ಞಾನ ಇದೆ ಅಂತ ಗೊತ್ತಿತ್ತಾ?

1. ಪ್ರೀತಿ ನೋವು ಕಡಿಮೆ ಮಾಡತ್ತೆ; 10 ಸೆಕೆಂಡ್ ಯಾರನ್ನಾದ್ರೂ ತಬ್ಬಿಕೊಂಡ್ರೆ ತಲೆನೋವು ಹೋಗತ್ತೆ

ನಮ್ ಮಿದುಳಲ್ಲಿ ಆಕ್ಸಿಟಾಕ್ಸಿನ್ ಅನ್ನೋ ಕೆಮಿಕಲ್ ಇರತ್ತಂತೆ. ನಾವು ಯಾರನ್ನಾದ್ರೂ ಪ್ರೀತಿಯಿಂದ ತಬ್ಬಿಕೊಂಡಾಗ ಇದು ಆಚೆಗೆ ಒಸರತ್ತಂತೆ. ಇದ್ರಿಂದ ತಲೆನೋವು ಕಮ್ಮಿ ಆಗತ್ತಂತೆ. ನೀವು ಪ್ರೀತಿಸೋರ್ ಫೋಟೋ ನೋಡಿದ್ರೂ ಸಾಕು, ನೋವು ಕಮ್ಮಿ ಆಗತ್ತೆ (ಇದು ಸುಮಾರಾದ ಸಂದರ್ಭದಲ್ಲಿ ಶೇ. 40% ಮತ್ತೆ ಜಾಸ್ತಿ ಇದ್ದ ಸಂದರ್ಭದಲ್ಲಿ ಶೇ. 15% ನೋವು ಕಮ್ಮಿ ಮಾಡತ್ತೆ). ಆ ಫೋಟೋ ಅನಾಲ್ ಜೆಸಿಕ್ ಮಾತ್ರೆ ತರ ಕೆಲಸ ಮಾಡಿ, ನೋವು ಕಮ್ಮಿ ಆಗಿಸತ್ತೆ. ಬೆನ್ನುನೋವು, ಆರ್ಥಿಟಿಸ್, ಮತ್ತೆ ಉಳುಕು ನೋವುಗಳೂ ಕಮ್ಮಿ ಆಗತ್ವೆ.

2. ಪ್ರೀತಿಸೋದ್ರಿಂದ ಹೃದಯ ಚೆನ್ನಾಗಾಗತ್ತೆ

ಯಾರನ್ನಾದ್ರೂ ಪ್ರೀತಿಸ್ತಿದ್ರೆ, ನಿಮ್ಮ ಹೃದಯ ವೇಗವಾಗಿ ಬಡ್ಕೊಳ್ಳೋದಿಲ್ಲ. ಲವ್ ಹಾರ್ಮೋನ್ ಅಂತ ಹೇಳ್ತಾರಲ್ಲ – ಆಕ್ಸಿಟಾಕ್ಸಿನ್, ಇದು ಜಾಸ್ತಿ ಆದಷ್ಟೂ ಒತ್ತಡ ಕಮ್ಮಿ ಆಗತ್ತೆ, ರಕ್ತದೊತ್ತಡ, ಮನೇಲಿ ಹೊರಗಡೆ ಇರೋ ಎಷ್ಟೋ ಟೆನ್ಷನ್ ಗಳನ್ನ ಕಮ್ಮಿ ಮಾಡತ್ತೆ, ನಮ್ಮ ಮೇಲೆ ನಮಗೆ ವಿಶ್ವಾಸ ಜಾಸ್ತಿ ಆಗಿ, ಖಿನ್ನತೆ ಎಲ್ಲಾ ಕಮ್ಮಿ ಆಗತ್ತೆ

3. ಪ್ರೀತಿಸೋದ್ರಿಂದ ರೋಗಗಳನ್ನ ಎದುರಿಸೋ ಶಕ್ತಿ ಬರತ್ತೆ

ಪ್ರೀತಿಗೆ ಸಂಬಂಧಿಸಿದ ಕ್ರಿಯೆಗಳು ಅಂದ್ರೆ, ಕೈ ಹಿಡ್ಕೊಳ್ಳೋದು, ತಬ್ಬಿಕೊಳ್ಳೋದು ಇವೆಲ್ಲಾ ಎಂಡಾರ್ಫಿನ್ ನ ಜಾಸ್ತಿ ಮಾಡತ್ತೆ. ಈ ಎಂಡಾರ್ಫಿನ್ ಅನ್ನೋ ಕೆಮಿಕಲ್ ನಮ್ಮ ನರವ್ಯವಸ್ಥೆಗೆ ಶಕ್ತಿ ಕೊಡತ್ತೆ. ಹಾಗೇ ಏನಾದ್ರೂ ರೋಗಗಳಿಂದ ನರಳ್ತಾ ಇರೋರಿಗೆ ಪ್ರೀತಿಸೋವರು ಇದಾರೆ ಅಂತ ಗೊತ್ತಾದ್ರೆ ರೋಗದ ವಿರುದ್ಧ ಫೈಟ್ ಮಾಡೋ ಶಕ್ತಿ ಜಾಸ್ತಿ ಆಗತ್ತಂತೆ.

4. ಪ್ರೀತಿಸಿದ್ರೆ ನಿದ್ರಾಹೀನತೆ ಕಮ್ಮಿ ಆಗತ್ತೆ

ಲವ್ ಹಾರ್ಮೋನ್ ಗಳು ಅಂದ್ರೆ ಆಕ್ಸಿಟಾಕ್ಸಿನ್ ಮತ್ತೆ ಎಂಡಾರ್ಫಿನ್ ಗಳು ಟೆನ್ಷನ್ ಜಾಸ್ತಿ ಮಾಡೋ ಕಾರ್ಟಿಸಾಲ್ ಅನ್ನೋ ಕೆಮಿಕಲ್ ನ ಕಂಟ್ರೋಲ್ ಮಾಡತ್ತೆ. ಅದಿಕ್ಕೆ ಚೆನ್ನಾಗಿ ರೆಸ್ಟ್ ತೊಗೊಂಡು, ಒಳ್ಳೇ ನಿದ್ದೆ ಬರಬೇಕು ಅಂದ್ರೆ ಯಾರನ್ನಾದ್ರೂ ಪ್ರೀತಿಸ್ಬೇಕಂತೆ.

5. ಪ್ರೀತಿಸೋದ್ರಿಂದ ಡ್ರಗ್ ಅಡಿಕ್ಷನ್ ಕಡೆ ದೇಹ ವಾಲಲ್ಲ

ಓಪಿಯೇಟ್ ಗಳು, ಕೊಕೈನ್, ನಿಕೋಟಿನ್, ಆಲ್ಕೋಹಾಸ್ ಇವುಗಳಿಗೆ ನಾವು ದಾಸರಾಗೋದು, ಲವ್ ಮಾಡೋದ್ರಿಂದ ತಪ್ಪತ್ತೆ. ನಮ್ಮ ದೇಹದಲ್ಲಿ ಇರೋ ಡೋಪಾಮೈನ್ ಅನ್ನೋ ಹಾರ್ಮೋನ್ ಮೇಲೆ ಪ್ರೀತಿ ಪರಿಣಾಮ ಬೀರತ್ತಂತೆ. ಅದೇ ತರ, ಯಾರನ್ನಾದ್ರೂ ತುಂಬಾ ಹಚ್ಚಿಕೊಂಡ್ರೂ ಟೆಸ್ಟೆಸ್ಟೀರೋನ್ ಮತ್ತೆ ಆಕ್ಸಿಟಾಕ್ಸಿನ್ ಜಾಸ್ತಿ ಆಗತ್ತೆ. ಇದು ಅಡಿಕ್ಷನ್ ತಪ್ಸಕ್ಕೆ ಒಳ್ಳೇ ಮದ್ದು. ಅಂದ್ರೆ, ಈ ಡ್ರಗ್ಸ್, ಆಲ್ಕೋಹಾಲ್ ಎಲ್ಲಾ ದೇಹಕ್ಕೆ ಯಾವ ತರ ಖುಷಿ ಕೊಡೊತ್ತೋ, ಪ್ರೀತಿನೂ ಅಂತದೇ ಖುಷಿ ಕೊಡತ್ತೆ. ನಮ್ಮನ್ಯಾರಾದ್ರೂ ಪ್ರೀತಿಸ್ತಿದಾರೆ ಅಂತ ಗೊತ್ತಾದ್ರೆ, ಅಂತ ಡ್ರಗ್ಸ್ ಗೆ ಹಪಹಪಿಸೋದೂ ಕಮ್ಮಿ ಆಗತ್ತೆ.

6. ಪ್ರೀತಿಸೋರು ಜಾಸ್ತಿ ವರ್ಷ ಬದುಕಿರ್ತಾರೆ

ಯಾರನ್ನಾದ್ರೂ ತುಂಬಾ ಪ್ರೀತಿಸ್ತಾ ಇರೋರು, ಅದರಲ್ಲೂ ಗಂಡ-ಹೆಂಡತಿ, ಜಾಸ್ತಿ ಪ್ರೀತಿಸ್ತಿದ್ರೆ, ತುಂಬಾ ಆರೋಗ್ಯವಾಗಿದ್ದು, ತುಂಬಾ ದಿನ ಬದುಕ್ತಾರಂತೆ. ಯಾಕಂದ್ರೆ ಅವರ ಜೀವನಶೈಲಿ, ಒಟ್ಟಿಗೆ ಊಟ ಮಾಡೋದು, ಒಳ್ಳೇ ರೆಸ್ಟ್, ಟೆನ್ಷನ್ ಇಲ್ದೇ ಇರೋ ಮನಸ್ಸು ಎಲ್ಲಾ ಸೇರಿ ಆರೋಗ್ಯವಾಗಿರ್ತಾರೆ. ಗಂಡ-ಹೆಂಡತಿ ಜೊತೆಗಿದ್ದಷ್ಟೂ ಅವರನ್ನ ಬೇರೆಯವರು ಕೆಟ್ಟದಾಗಿ ನಡೆಸಿಕೊಳ್ಳೋದು ತಪ್ಪತ್ತೆ.

7. ಪ್ರೀತಿ ಅನ್ನೋದೇ ಒಂದು ಥರ ಔಷಧಿ

ಜನ ಎಷ್ಟೋ ಸಲ ಮನಸ್ಸು ಕೆಟ್ಟು ಥೆರಪಿಗೆ ಅಂತ ಹೋಗ್ತಾರೆ. ಯಾಕಂದ್ರೆ, ಅವರ ಮಾತು ಕೇಳೋರು ಯಾರೂ ಇರಲ್ಲ ಅದಿಕ್ಕೆ. ಆದ್ರೆ ಗಂಡಂಗೆ ಹೆಂಡತಿ, ಹೆಂಡತಿಗೆ ಗಂಡ ಡಾಕ್ಟರ್ ತರ, ಥೆರಪಿಸ್ಟ್ ತರ ಕೆಲಸ ಮಾಡ್ತಾರೆ ಅಂತ ಗೊತ್ತಿತ್ತಾ ನಿಮಗೆ? ನಾವು ಯಾರನ್ನಾದ್ರೂ ಪ್ರೀತಿಸಿದ್ರೆ, ಯಾರಾದ್ರೂ ನಮ್ಮನ್ನ ಪ್ರೀತಿಸ್ತಿದಾರೆ ಅಂತ ನಮಗೆ ಗೊತ್ತಿದ್ರೆ, ನಾವು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿರ್ತೀವಿ. ಯಾಕೆ ಅಂದ್ರೆ ನಮ್ಮ ಭಯ, ಟೆನ್ಷನ್, ರೋಗ ಎಲ್ಲಾ ಓಡೋಗತ್ತೆ ಅದಿಕ್ಕೆ.

ಪ್ರೀತಿ-ಪ್ರೇಮ ಎಲ್ಲಾ ಸುಮ್ಮನೆ ಆಗೋದಿಲ್ಲ. ನಾವು ಚೆನ್ನಾಗಿರಕ್ಕೆ, ಖುಷಿಯಾಗಿ ಆರೋಗ್ಯವಾಗಿರಕ್ಕೆ ನಾವೇ ಕಂಡ್ಕೊಳ್ಳೋ ಮದ್ದು ಇದು. ಹೇಳದೇ ಹೋದ್ರೇ ಎಷ್ಟೇ ಪ್ರೀತಿ ಇದ್ರೂ ಸತ್ತುಹೋಗತ್ತೆ. ಅದಿಕ್ಕೆ ಮನಸ್ಸು ಬಿಚ್ಚಿ ಪ್ರೀತಿಸಿ. ಅರೋಗ್ಯವಾಗಿರಿ.