https://static1.squarespace.com/static/544f64cee4b096fed12928cd/544fa1e3e4.jpeg

ಎಷ್ಟೋ ಸತಿ ನಮ್ಮ ಮನಸ್ಸು ಹೇಳುತ್ತೆ ಏನೋ ಸರಿ ಹೋಗ್ತಿಲ್ಲ ಅಂತ, ಅವಾಗ ನಾವದನ್ನ ಕಡೆಗಣಿಸಬಾರ್ದು, ಆಗ ನಿಜ ಗೊತ್ತಾಗತ್ತೆ. ಎದುರಿಗಿರೋರು ಸುಳ್ಳು ಹೇಳ್ತಿದಾರ ನಿಜ ಹೇಳ್ತಿದಾರ ಅಂತ ಗೊತ್ತಾಗ್ದೆ ಕೆಲವೊಮ್ಮೆ ಯಾಮಾರಿಬಿಡ್ತೀವಿ. ಇನ್ಮೇಲೆ ಯಾಮಾರಬೇಡಿ, ಸರಿಯಾಗಿ ಹೇಗೆ ಕಂಡುಹಿಡಿಯೋದು ಅಂತ ತಿಳ್ಕೊಳಿ.

1. ತುಂಬ (ಮುಜುಗರ ಆಗುವಷ್ಟು) ಕಣ್ಣು ನೋಡ್ಕೊಂಡು ಮಾತಾಡೋದು

ಮುಂಚೆ ಅಂದ್ಕೊಂಡಿದ್ವಿ ಯಾರದ್ರು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಿಲ್ಲ ಅಂದ್ರೆ ಸುಳ್ಳು ಹೇಳ್ತಿದಾರೆ ಅಂತ, ಆದ್ರೆ ಜಾಸ್ತಿ ಜನರ ಜೊತೆ ಬೆರೆಯಕ್ಕೆ ಹಿಂಜರಿಯವ್ರು ಸ್ವಭಾವ ಅಷ್ಟೆ. ಹಾಗಂತ ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋರೆಲ್ಲಾ ಸುಳ್ಳು ಹೇಳ್ತಾರೆ ಅಂತ ಅಲ್ಲ. ನಿಜ ಏನಪ್ಪಾ ಅಂದ್ರೆ ಸುಳ್ಳು ಹೇಳೋರು ಬೇಕು ಅಂತ ಜಾಸ್ತಿಹೊತ್ತು ಕಣ್ಣನ್ನೇ ನೋಡ್ತಾ ಮಾತಾಡ್ತಾರೆ. ಮಾಮೂಲಿಯಾಗಿ ಯಾರೇ ಮಾತಾಡುದ್ರು ಯಾವಾಗ್ಲೂ ಕಣ್ಣನ್ನೇ ನೊಡಲ್ಲ, ಆದ್ರೆ ಸುಳ್ಳು ಹೇಳ್ತಿರೋವ್ರು ಮರೆ ಮಾಚಬೇಕು ಅಂತ ಹೀಗ್ ಮಾಡ್ತಾರೆ.

2. ತೀರ ಹೆಚ್ಚು ಅಥ್ವಾ ತೀರ ಕಮ್ಮಿ ಕಣ್ಣು ಮಿಟುಕಿಸೋದು

ಸುಳ್ಳು ಹೇಳಿದಾಗ ಸ್ವಲ್ಪ ಬೇಗ ಬೇಗ ಕಣ್ಣು ಮಿಟುಕಿಸ್ತಾರೆ ಇಲ್ಲ ಅಂದ್ರೆ ತುಂಬಾ ನಿಧಾನವಾಗಿ ಕಣ್ಣು ಮಿಟುಕಿಸ್ತಾರೆ. ಸಾಮಾನ್ಯವಾಗಿ ನಿಜ ಹೇಳುವಾಗ ಇವೆರಡೂ ಲಕ್ಷಣ ಇರಲ್ಲ. ಕಣ್ಣು ಮಿಟುಕಿಸುವ ಸ್ಪೀಡ್ ಮಾಮೂಲಾಗಿರತ್ತೆ.

ಮೂಲ

3. ತುಂಬ ಆಣೆ ಪ್ರಮಾಣ ಮಾಡೋದು, ಸತ್ಯ ಹೇಳ್ತಿದೀನಿ ಅನ್ನೋದು

ಯಾವಾಗಲೂ ಒಂದೇತರ ಮಾತಾಡುವ ವ್ಯಕ್ತಿ 'ನಿಜವಾಗ್ಲೂ' 'ಪ್ರಮಾಣ ಮಾಡಿ ಹೇಳ್ತೀನಿ' 'ದೇವ್ರ ಮೇಲೆ ಆಣೆ' ಹೀಗೆಲ್ಲ ಮಾತಾಡ್ತಿದಾನೆ ಅಂತ ಅಂದ್ರೆ ಅದು ನೀವು ನಂಬಲೇಬೇಕು ಅಂತ ಹೇಳೋ ಮಾತು, ಹೀಗೆ ಮಾಡಿದ್ರೆ ಸುಳ್ಳು ಹೇಳ್ತಿದಾರೆ ಅಂತ ಗೊತ್ತಾಗೋಗತ್ತೆ.

4. ಕೈ ಕಟ್ಟಿಕೊಂಡು ಮಾತಾಡೋದು

ನೀವೇ ಯೋಚ್ನೆ ಮಾಡಿ, ಮಾಮೂಲಿಯಾಗಿ ಮಾತಾಡುವಾಗ ಕೈ ಕಟ್ಟಿಕೊಂಡು ಮಾತಾಡ್ತಾರ? ಇಲ್ಲ ಅಲ್ವಾ? ಸುಳ್ಳು ಹೇಳೋವ್ನಿಗೆ ಸುಳ್ಳು ಹೇಳ್ತಿದೀನಿ ಅಂತ ಒಳಗೆ ಗೊತ್ತಿರತ್ತೆ ಅದಕ್ಕೆ ತನ್ನ ಮನಸನ್ನ ಮರೆಮಾಚಲು ಕೈ ಕಟ್ಕೊಂಡಿರ್ತಾನೆ. ಯಾವತ್ತೂ ನಾಲಿಗೆ ಸುಳ್ಳು ಹೇಳಬಹುದು ಆದರೆ ಮನಸ್ಸು ಸುಳ್ ಹೇಳಲ್ಲ, ಅದಕ್ಕೆ ಕೈ ಕಟ್ಟಿ ಮಾತಾಡ್ತಾರೆ.

ಮೂಲ

5. ನಾನು ಹೇಳೋದು ಯಾವಾಗಲೂ ಎಲ್ಲರಿಗೂ ಅನ್ವಯಿಸುತ್ತೆ ಅನ್ನೋಹಾಗೆ ಮಾತಾಡೋದು

ಸುಳ್ಳು ಹೇಳೋವ್ರು 'ಆದರೆ' 'ಇದನ್ನ ಬಿಟ್ಟು' 'ಹಾಗಿದ್ರೆ' 'ಹಾಗೂ ಇರ್ಬೋದು' ಅನ್ನೊ ಪದಗಳನ್ನ ಕಮ್ಮಿ ಬಳಕೆ ಮಾಡ್ತಾರೆ. ಬರೀ ಇವಷ್ಟೇ ಅಲ್ಲ, ತುಂಬ ನೆಗೆಟಿವ್ ಪದ 'ವೇಸ್ಟ್' 'ಬೇಜಾರು' 'ಇಷ್ಟಾನೇ ಇಲ್ಲ' 'ಪ್ರಯೋಜನ ಇಲ್ಲ' ಜಾಸ್ತಿ ಬಳಸ್ತಾರೆ. ಸುಳ್ಳು ಹೇಳೋವ್ರ ಆಳದ ಮನಸ್ಸಲ್ಲಿ ತಾವು ತಪ್ಪು ಮಾಡ್ತಿದೀವಿ ಅನ್ನಿಸೊದ್ರಿಂದ ಹೀಗೆ ಹೆಚ್ಚು ನಕಾರಾತ್ಮಕ ಪದ ಬಳಕೆ ಗೊತ್ತಾಗ್ದೇ ಮಾಡ್ತಾರೆ.

6. ತುಂಬ ವೇಗವಾಗಿ ಅಥವಾ ತುಂಬ ನಿಧಾನವಾಗಿ ಮಾತಾಡೋದು

ಸುಳ್ಳು ಹೇಳುವಾಗ ಮಾಮೂಲಿಯಾಗಿ ಮಾತಾಡಕ್ಕಿಂತ ಜಾಸ್ತಿ ಸ್ಪೀಡಾಗಿ ಅಥವಾ ತುಂಬಾ ನಿಧಾನವಾಗಿ  ಮಾತಾಡ್ತಾರೆ. ಯಾಕೆ ಹೀಗೆ ಮಾಡ್ತಾರೆ ಅಂದ್ರೆ ಒಂದು ಬೇಗ ಹೇಳಿ ಮುಗಿಸಿಬಿಡ್ಬೇಕು ಅನ್ನೊದ್ರಿಂದ ಅಥವಾ ಅವ್ರು ಮೊದಲು ತಣ್ಣಗಾಗ್ಲಿ ಆಮೇಲೆ ಹೇಳಣ ಅನ್ನೊ ಭಾವನೆಯಿಂದ ಹೀಗೆ ಮಾಡ್ತಾರೆ.

ಮೂಲ

7. ಸಂದರ್ಭನೆಲ್ಲ ತೀರಾ ವಿವರಿಸಿ ಹೇಳೋದು

ಸುಳ್ಳು ಹೇಳೋವ್ರು ನಂಬಿಸಲೇ ಬೇಕು ಅನ್ನೊ ಆತುರದಿಂದ ತುಂಬ ವಿವರಿಸಿ ಮಾತಾಡ್ತಾರೆ. ಉದಾಹರಣೆಗೆ ಒಬ್ಬ ಕಳ್ಳನಿಗೆ ಕಳ್ಳತನವಾದ ಸಮಯದಲ್ಲಿ ನೀನು ಎಲ್ಲಿದ್ದೆ ಅಂದರೆ 'ನಾನು ಸರಸ್ವತಿಪುರಂ ಹೋಟೆಲಲ್ಲಿ ನನ್ನ ಸ್ನೇಹಿತನ ಜೊತೆ ಕಾಫಿ ಕುಡೀತಿದ್ದೆ, ಕಾಫಿ ಬಿಲ್ಲು ನನ್ನ ಹತ್ತಿರ ಇದೆ' ಅಂತಾನೆ. ಆಗ್ಲೇ ಗೊತ್ತಾಗತ್ತೆ ಅವನು ಸುಳ್ಳು ಹೇಳ್ತಿದಾನೆ ಅಂತ. ಮಾಮೂಲಾಗಿ ಇಷ್ಟೆಲ್ಲಾ ವಿವರಣೆ ಯಾರು ಕೊಡಲ್ಲ ತಾನೇ?

8. ಏನೇನೊ ಹೇಳಿ ಬೇಕಿರೋದನ್ನ ಕಮ್ಮಿ ಹೇಳೋದು

ಅದೇನು ಅಂತ ಸರಿಯಾಗಿ ನೆನಪಿಲ್ಲ ಅಂತ ಹೇಳೋದು, ಅವತ್ತು ನಾನು ಊರಲ್ಲಿ ಇರ್ಲಿಲ್ಲ ಅಂತ ಮತ್ತೆ ಮತ್ತೆ ಹೇಳೋದು, ಅವನ ಮುಖ ಹೇಗಿತ್ತು ಅಂತ ಕೇಳಿದರೆ ಚೆನ್ನಾಗಿತ್ತು ಸ್ವಲ್ಪ ಬೆಳ್ಳಗಿದ್ದ ಅಂತ ಹೇಳೋಬದಲು ಯಾಕೋ ನೆನಪಾಗ್ತಾ ಇಲ್ಲ… ಇವೆಲ್ಲ ಸುಳ್ಳು ಹೇಳುವವರ ಲಕ್ಷಣ.

ಮೂಲ

9. ನಗೋ ಹಾಗೆ ನಾಟಕ ಮಾಡೋದು

ಮುಖಾ ಮನಸ್ಸಿನ ಕನ್ನಡಿ. ಈ ಮಾತು ಯಾವತ್ತೂ ಸುಳ್ಳಾಗಲ್ಲ. ಮನಸಲ್ಲಿ ಸುಳ್ಳು ಹೇಳ್ತಿದ್ರೆ ಒಂದು ಭಯ ಇರತ್ತೆ, ಅದನ್ನ ಮರೆಮಾಚಕ್ಕೆ ಸುಮ್ಮನೆ ನಾಗಾಡೋದು, ನಗು ಬಾರದ ಮಾತಿನಲ್ಲೂ ಸುಮ್ಮನೆ ಹಲ್ಲು ಬಿಡೋದು, ಬೇಡದ ಭಾವನೆಗಳೆಲ್ಲ ವ್ಯಕ್ತವಾಗ್ತಿದ್ರೆ ಸುಳ್ ಹೇಳ್ತಿದಾರೆ ಅಂತ.

10. ಅವರು ಕೊಡೋ ಆಧಾರಗಳ್ನ ಪರೀಕ್ಷೆ ಮಾಡಿದಾಗ ಎಲ್ಲಾ ಟೊಳ್ಳಾಗಿರೋದು

ಬಾಡಿ ಲ್ಯಾಂಗ್ವೇಜ್ ತಿಳ್ಕೊಂಡಂಗೆ ಸ್ವಲ್ಪ ಪತ್ತೇದಾರಿ ಕೆಲಸಾನೂ ತಿಳ್ಕೊಳಿ. ಆಧಾರಗಳು ಸರಿಯಾಗಿದ್ಯ ಅಂತ ಒಂದ್ಸಲ ಪತ್ತೆ ಮಾಡಿ. ಉದಾಹರಣೆಗೆ ಕಳ್ಳತನ ಆದಾಗ ಅಂಗಡಿ ಹತ್ರ ಇದ್ದೆ ಅಂತ ಅಂದ ಅಂದ್ಕೊಳಿ, ನೀವು ಅಂಗಡಿ ನೋಡಿ ಬನ್ನಿ ಒಮ್ಮೆ. ಆ ಜಾಗದ ಬಗ್ಗೆ ಪ್ರಶ್ನೆ ಮಾಡಿ. ಗಾಡಿ ಎಲ್ಲಿ ನಿಲ್ಲಿಸಿದ್ದೆ, ಅಲ್ಲಿ ರಿಪೇರಿ ಕೆಲಸ ನಡೀತಿತ್ತಲ್ವ ಅಂತ. ಸುಳ್ಳು ಹೇಳ್ತಿದಾರೆ ಅಂತ ತಕ್ಷಣ ಗೊತ್ತಾಗ್ದಿರ್ಬೋದು, ಆದ್ರೆ ಸ್ವಲ್ಪ ಹುಡುಕಿದ್ರೆ ಎಲ್ಲಾ ಗೊತ್ತಾಗೋಗತ್ತೆ.

ಮೂಲ