http://www.freepressjournal.in/wp-content/uploads/2016/12/yash-radhika-pandits-mehndi-ceremony-1.jpg

ಪ್ರತಿಯೊಬ್ಬ ಮನಿಶಾನೂ ಮರಿಯಾಕ ಆಗಲಾರದ ಟೈಮು ಅಂದರ ಯಾವದ ಅಂತ ಗೊತ್ತೈತೆನ? “ನೀವ ಏನ ಇಷ್ಟಾಪಟ್ಟಿರೋ ಆ ವ್ಯಕ್ತಿ ನಿಮ್ಮ ಹತ್ರಕ್ಕ ಬಂದ ಅವರ ನಿಮ್ಮನ ಭಾಳ ಇಷ್ಟಾ ಪಡತಾರ ಅಂತ ಹೇಳೋದು” ಹುಡುಗರು ಯಾವದರ ಹುಡಗೀನ ಇಷ್ಟಾ ಪಡಾಕ ಹತ್ಯಾರ ಅಂದರ ಹೆಂಗ ನೆಡಕಂತಾರಾ ಅಂತ ಒಂದ ಸಿಕಾಲಜಿ, ಬಾಡಿ ಲಾಂಗ್ವೇಜ್ ಐತಿ.. ಬರ್ರಿ ಒಂದೀಟ ನೋಡಣು ಅದನ್ನ…..

1. ನಿಮ್ಮ ಜತೀಗೆ ಯಾವಾಗಲೂ ಮಾತಾಡಿಕೆಂತನ ಇರಬೇಕು ಅಂತಾರಾ..

ಬ್ಯಾರೇಯವರು ಭಾಳ ಏನೂ ಪೋನ್ ಮಾಡಂಗಿಲ್ಲ. ಇನ್ನ ಫ್ರೆಂಡ್ಸ್ ಅಂತೂ ಇಂಪಾರ್ಟೆಂಡ್ ಆಗಿರ ಮ್ಯಾಟರ್ ಏನರಾ ಹೇಳದು ಇತ್ತಂದರ ಫೋನ್ ಮಾಡತಾರ. ಇಲ್ಲಾ ಅಂದರ ಹಚ್ಚು ಕಡಿಮಿ ವಾಟ್ಸಾಪು, ಮೆಸೇಜು ಇದರೊಳಗ ಹೇಳಿ ಬಿಡತಾರ. ಆದರ ನಿಮ್ಮ ಬುಟ್ಟಿ ಒಳಗ ಬಿದ್ದಿರೋರ ಮಾತ್ರಾ ಯಾವಾಗಲೂ ನಿಮ್ಮ ಜತೀಗೆ ಫೋನಿನ್ಯಾಗ ಮಾಡಬೇಕು ಅಂತಾರಾ.. ಅಂದರ ಅದರ ಅರ್ಥಾ ನಿಮ್ಮ ಧ್ವನಿ ಅವರಿಗೆ ಕಿವೀಗೆ ಮತ್ತ ಮನಸಿಗೆ ಹಿತಾ ಕೊಡತತಿ ಅಂದಂಗ.

2. ನಿಮಗ ಬ್ಯಾರೇ ಅಡ್ಡ ಹೆಸರ, ಪೆಟ್ ನೇಮ್ ಇಟ್ಟ ಮುದ್ದು ಮುದ್ದಾಗಿನಿಮ್ಮನ್ನ ಕರೀತಾರ..

ಹೆಚ್ಚು ಕಡಿಮಿ ನಿಮ್ಮ ಬುಟ್ಟ್ಯಾಗ ಬಿದ್ದಾರಾ ಅಂದರ ಅವರು ನಿಮಗ ಒಂದ ಪೆಟ್ ನೇಮ್ ಇಟ್ಟ ಬಿಟ್ಟರತಾರ. ಚಿನ್ನು ಮುದ್ದು, ಬಂಗಾರಿ, ಸಿಂಗಾರಿ, ತಿಥಿ ವಡಿ, ಪಸೀನ ಪಸೀನ ಇಂಥಾವೇನರ ಹೆಸರ ಇಟ್ಟ ಬಿಟ್ಟಿರತಾರ. ಯೋಗರಾಜ ಭಟ್ಟರ ಸಿನಿಮಾದಾಗ ಅಂತೂ ಇಂಥಾ ಹೆಸರ ಮಾಮೂಲಿ ಬಿಡ್ರಿ.

 

3. ನೀವು ಏನ ಹೇಳಿದರೂ ನಿಮ್ಮ ಎಲ್ಲಾ ಮಾತೂ ಅವರಿಗೆ ನೆನಪಿನ್ಯಾಗ ಇರತಾವು…

ಯಾವಾಗೋ ಒಂದ ಸಲಾ ನಂಗ ಅದು ಇಷ್ಟಾ ಈ ತಿಂಡಿ ಇಷ್ಟಾ ಇಂತಾ ಹೋಟೆಲ್ಲಿನ್ಯಾಗ ತಿನ್ನಾಕ ಇಷ್ಟಾ ಈಸಿನಿಮಾ ಇಷ್ಟಾ ಅಂತ ಮಾತ ಬಂದಾಗ ಹೇಳಿರತೀರಿ. ಇಂಥಾವೆಲ್ಲಾ ಅವರಿಗೆ ನೆನಪಿನ್ಯಾಗ ಇರತಾವು. ನಿಮ್ಮ ಮಾತು ಅಂದರ ಅಷ್ಟ ಲಕ್ಷ್ಯಾ ಇಟ್ಟ ಕೇಳತಾರ ಮತ್ತ ನಿಮಗ ಅಷ್ಟ ಇಂಪಾರ್ಟೆನ್ಸ್ ಕೊಡತಾರ.

4. ಯಾವಾಗಲೂ ನಿಮ್ಮ ಜತೀಗೆ ಮಾತಾಡಾಕ ನಿಮ್ಮ ಟಚ್ಚಿನ್ಯಾಗ ಇರಾಕ ನೆವಾ ಹುಡಕತಿರತಾರ.

ಫೋನು, ಮಸೇಜು, ಚಾಟು ಹಿಂಗ ಯಾವದರ ಒಂದ ರೂಪದಾಗ ನಿಮ್ಮ ಜತೀಗೆ ಟಚ್ಚಿನ್ಯಾಗ ಇರಾಕ ಒಂದ ನೆವಾ ಹುಡಕತಿರತಾರ. ಯಾವಾಗಲೂ ನಿಮಗ ಇಂಟರೆಸ್ಟ್ ಇರೋ ವಿಚಾರಾನ ನಿಮ್ಮ ಜತೀಗೆ ಶೇರ್ ಮಾಡಿಕೆಂತ ಇರತಾರ. ನಿಮ್ಮ ಫೇಸಬುಕ್ಕಿನ್ಯಾಗಿನ ಫೋಟೋಕ್ಕ ಫಸ್ಟ್ ಲೈಕ್ ಆಗಲೀ ಕಾಮೆಂಟ್ ಆಗಲೀ ಬರೋದ ಅವರದ…….

 

5. ನಿಮ್ಮ ಮ್ಯಾಲ ಭಾಳ ಕಾಳಜಿ ತೋರಿಸತಾರ.

ಇಬ್ಬರೂ ಎಲ್ಲೆರ ಹೋಟೆಲ್ಲಿಗೆ ಹೋದರ ಹೋಟೆಲ್ಲಿನ ಕದಾ ತೆಗೇದು, ನಿಮಗ ಕುಂದರಾಕ ಕುರ್ಚಿ ಎಳದ ಕೊಡೋದು, ರೂಮಿನ ಟೆಂಪರೇಚರ್ ಸರಿ ಐತೇ ಇಲ್ಲ ಅಂತ ಚೆಕ್ ಮಾಡೋದು, ಎಷ್ಟರ ಮಟ್ಟಿಗೆ ಅಂತಂದರ ನಿಮಗೇನರ ಥಂಡಿ ಹತ್ತೇತಿ ಅಂತ ಅವರಿಗೆ ಅನಿಸಿದರ ತಮ್ಮ ಜಾಕೇಟ್ ಸೈತ ಬಿಚ್ಚಿ ನಿಮಗ ಹಕ್ಕೆಳಾಕ ಕೊಟ್ಟ ಬಿಡತಾರ.

6. ನಿಮ್ಮನ ನೋಡಿದ ಕೂಡಲೇ ಅವರ ಮಖದಾಗ ಸಡನ್ನಾಗಿ ಲೈಟ
ಹತ್ತಿದಂಗ ಕಾಣತತಿ.

ಹೌದು ಇದ ಬರೇ ಒಬ್ಬರಿಗೆ ಅಷ್ಟ ಅಲ್ಲ ನೀವ ಇಷ್ಟಾ ಪಟ್ಟೋರು ನೀವ ಇರೋ ಹಂತೇಲೆ ಬರಾಕ ಹತ್ತಿದ್ದ ಕಣ್ಣಿಗೆ ಬಿದ್ದ ತಕ್ಷಣ ನಿಮ್ಮ ಮಖದಾಗ ಸಡನ್ನಾಗಿ ಲೈಟ ಹತ್ತಿದಂಗ ಕಾಣಸತತಿ, ಅಂದರ ನಿಮ್ಮ ತುಟಿ ಮ್ಯಾಲ ಒಂದ ಸಂತೋಷದ ಮುಗಳನಗಿ ತೇಲಿ ಬರತತಿ ಇದನ್ನ ಯಾರಿಂದಾನೂ ತಡ್ಯಾಕ ಆಗಲ್ಲ.

 

7. ನಿಮಗೆ ಅವಾಗವಾಗ ಗಿಫ್ಟ್ಕೊಟಗಂತಾನ ಇರತಾರ.

ಗಿಫ್ಟ್ ಗಳಿಗೇನ ಬಿಡರಿ ಒಂದು, ಎರಡು ಅಂತ ಲೆಕ್ಕ ಹಾಕಂಗಿಲ್ಲ ಒಂದೀಟ ಹೆಚ್ಚಿಗೀನ ಕೊಡತಾರ. ಆದರ ಈ ಗಿಫ್ಟ್ಗಳು ಹೆಚ್ಚಿಗಿ ರೊಕ್ಕದ್ದ ಆಗಿರಬೇಕು ಅಂತೇನು ಇಲ್ಲ. ನೀವು ಲೈಕ್ ಮಾಡೋ ಅಂತಾ ಬುಕ್ಕ ಸೈತ ಕೊಡಬಹುದು. ನಿಮ್ಮ ಜೀವನದಾಗ ಸಣ್ಣ ಪುಟ್ಟ ಖುಷೀನ ಜಾಸ್ತಿ ಮಾಡೋರು ಇವರ!!

8. ನಿಮ್ಮನ್ನ ಕಾಪಾಡತಾರಾ,ಜೋಪಾನವಾಗಿ ನೋಡಿಕೆಂತಾರ…

ನಿಮ್ಮ ಜತೀಗೆ ಇರತಾರ, ನಿಮ್ಮನ ನಿಮ್ಮ ಮನೀತನಕಾನೂ ಬಿಡತಾರ. ಜನಾ ಫುಲ್ ರಶ್ ಇರೋ ಜಗಕ್ಕ ಹೋದ ಟೈಮಿನ್ಯಾಗ ನಿಮ್ಮ ಕೈ ಹಿಡಕಂಡಿರತಾರ. ನಿಮ್ಮ ಹೆಗಲ ಮ್ಯಾಲ ತಮ್ಮ ಕೈ ಇಟ್ಟ ನಡಿಸಿಗೆಂಡ ಹೊಕ್ಕಾರ. ಒಟ್ಟಿನ್ಯಾಗ ನಿಮ್ಮ ನೆರಳಿಗೂ ಸೈತ ತಮ್ಮಿಂದ ನೋವು ಆಗದ ಇರೋ ಹಂಗ ನಿಮ್ಮನ ನೋಡಿಕೆಂತಾರ.

 

9. ಖರೇ ಅಂದ್ರೂ ನಿಮ್ಮ ಬಗ್ಗೆ ಭಾಳ ಅಂದರ ಭಾಳ ಇಟರೆಸ್ಟ್
ತೋರಿಸತಾರ.

ನೀವ ಏನರ ಮಾತಾಡವಲ್ರ್ಯಾಕ ಅವರಿಗೆ ಬೋರ್ ಆಗೋ ಅಂಥಾ ವಿಷಯಾ ಹೇಳಿದರೂ ಸೈತ ಯಾವಾಗಲೂ ಅವರು ಅಸ್ಟ ಇಂಟರೆಸ್ಟ್ ಕೊಟ್ಟ ನಿಮ್ಮ ಮಾತ ಕೇಳಿಸಿಕೆಂತಾರ. ಒಂದ ಕ್ಷಣಾನೂ ನಿಮ್ಮಿಂದ ಆಗಲೀ ನಿಮ್ಮ ಮಾತಿನಿಂದಾ ಆಗಲೀ ಅವರಿಗೆ ಬೋರ್ ಆಗಿಲ್ಲಾ, ಆಗೋದೂ ಇಲ್ಲ.

10. ಇವರ ಫ್ಯೂಚರಿನ್ಯಾಗ ನೀವ ಇದ್ದ ಇರತೀರಿ. 

ನಿಮ್ಮನ ಸತ್ಯವಾಗಲೂ ಇಷ್ಟ ಪಟ್ಟಿರೋರ ಯಾವಗಲೂ ನಿಮ್ಮ ಬಗ್ಗೆ ವಿಚಾರಾ ಮಾಡದಂಗ ಯಾವ ಫ್ಯೂಚರ್ ಪ್ಲ್ಯಾನ್ ಸೈತ ಮಾಡಂಗಿಲ್ಲ. ಹೆಚ್ಚು ಕಡಿಮಿ ಏನಿಲ್ಲ ಅಂದರೂ 4 ರಿಂದ 5 ತಿಂಗಳದ್ದ ಮುಂದಿನ ಪ್ಲ್ಯಾನ್ ಮಾಡಿದಾಗ ಸೈತ ನೀವ ಆ ಪ್ಲ್ಯಾನಿನ್ಯಾಗ ಅವರ ಜತೀಗೆ ಇದ್ದ ಇರತೀರಿ.

ನೋಡಿಕೆರ್ರಿ, ನೋಡಿಕೆರ್ರಿ ನಿಮಗ ಗೊತ್ತಿಲ್ಲದಂಗ ಯಾರರ ನಿಮಗ ಬಿದ್ದರಬೇಕು……