https://cdn-images-1.medium.com/max/800/1*YqupUVAnacuIA8QYgiVr5g.png

1. ನಮಗೆ ಸಹಾಯ ಬೇಕು ಅಂತ ಕೇಳೋದು ನಮ್ಮ ವೀಕ್ನೆಸ್ಸ್ ಅಲ್ಲ

"ನನ್ನಿಂದ ಈ ಕೆಲಸ ಮಾಡಕ್ಕೆ ಆಗುತ್ತೆ" 

"ನಾನೊಬ್ಬನೆ ಈ ಕೆಲಸ ಮಾಡಬಹುದು"

"ನಂಗೆ ಇದನ್ನ ಹ್ಯಾಂಡಲ್ ಮಾಡಕ್ಕಾಗುತ್ತೆ"

"ನಾನೊಬ್ಬ ದಡ್ಡ ಅದಕ್ಕೆ ನಾನು ಇನ್ನು ಮುಂದುವರಿದಿಲ್ಲ"…. ಹೀಗೆಲ್ಲ ನಮಗೆ ನಾವೇ ಹೇಳ್ಕೊಳ್ಳೋದು ಸುಲಭ. ಹೀಗೆ ಅನ್ಕೋಳ್ಳೋದ್ರಿಂದ ನಮ್ಮ ಗಮನ ಬೇರೆ ಕಡೆಗೆ ಹೋಗತ್ತೆ, ಕೆಲಸ ಇನ್ನೂ ಹದಗೆಡುತ್ತೆ ಹೊರತು ಉಪಯೋಗ ಏನು ಆಗಲ್ಲ. ನಮ್ಮ ನ್ಯೂನ್ಯತೆಗಳನ್ನ ಮುಚ್ಚ್ಚಿಡೋ ಬಿಟ್ಟು ಧೈರ್ಯವಾಗಿ ಈ ಕೆಲಸ ಗೊತ್ತಿಲ್ಲ ಅಂತ ಒಪ್ಪಿಕೊಳ್ಳಿ.

ಎಲ್ಲಿವರ್ಗೂ ನಾವು ಒಪ್ಪಿಕೊಳ್ಳಲ್ವೋ ಅಲ್ಲಿವರ್ಗೂ ನಮ್ಮ ದೌರ್ಬಲ್ಯಾನ ಮೆಟ್ಟಿ ನಿಂತು ಮುಂದುವರ್ಯೋಕ್ಕಾಗಲ್ಲ.

ಮೂಲ

2. ಸಹಾಯ ಕೇಳಿ ಪಡ್ಕೋಳೋದ್ರಿಂದ ನಿಮ್ಮ ಟೈಮ್ ಹಾಗು ಪರಿಸ್ಥಿತಿ ಇನ್ನೂ ಹದಗೆಡೋದು ತಪ್ಪತ್ತೆ

ಯಾವ ಕೆಲ್ಸಾನೇ ಆದ್ರೂ ಬೇರೆಯವರ ಸಹಾಯ ಇಲ್ದೆ ಮಾಡಿ ಮುಗಿಸೋದು ಎಲ್ರೂ ಹೆಮ್ಮೆ ಪಡೋ ವಿಷ್ಯಾನೇ.

ಆದ್ರೆ ಒಂದಿಷ್ಟು ಕೆಲಸ ಮಾಡೋವಾಗ ಬೇರೆಯವರ ಸಹಾಯ ಬೇಕೇಬೇಕು. ಅದಕ್ಕೆ ಮನಸಿಲ್ಲದೆ ಒಬ್ರೇ ಮಾಡಿ ಮುಗಿಸ್ಬೇಕು ಅಂತ ಟ್ರೈ ಮಾಡ್ತಾ ಮಾಡ್ತಾ ನಾವು ತುಂಬಾ ಟೈಮ್ ವೇಸ್ಟ್ ಮಾಡ್ಬಿಟ್ಟಿರ್ತೀವಿ.

ಆದ್ರೆ ಇದು ನಮಗೆ ಗೊತ್ತೇ ಆಗಿರೋಲ್ಲ. ಕೆಲವೊಂದ್ಸಲ ಇದ್ರಿಂದ ತೊಂದ್ರೇನು ಆಗ್ಬಹುದು. ಇಂಥಾ ಸಂದರ್ಭದಲ್ಲಿ ಸಹಾಯ ಎಷ್ಟು ಬೇಗ ಪಡ್ಕೋತೀವೋ ಅಷ್ಟೇ ಒಳ್ಳೇದಾಗುತ್ತೆ.

ಪ್ರಾಬ್ಲಮ್ ಸ್ಟಾರ್ಟ್ ಆದ್ರೆ ಅದ್ರಿಂದ ಅಪಾಯ ಆಗಕ್ಕೆ ಮುಂಚೆ ಫಿಕ್ಸ್ ಮಾಡೋದು ಒಳ್ಳೇದು. 

ಮೂಲ

3. ಸಹಾಯ ಕೇಳೋದ್ರಿಂದ ಬೇರೆಯೋರಿಗೆ ಸೇವೆ ಮಾಡೋ ಅವಕಾಶ ಸಿಗುತ್ತೆ

ನೀವ್ ಎಲ್ಲಾದ್ರೂ ಹೋಗೋಕ್ಕೆ ರೆಡಿ ಆಗಿದ್ದು ಕ್ಯಾಬ್, ಆಟೋ ಏನೂ ಸಿಗದೇ ಪರ್ದಾಡ್ತ್ತಿದ್ದಾಗ… ನಿಮ್ಮ ಮನೇಲಿರೋ ಮಂಚ ಬೇರೆ ಕಡೆಗೆ ಹಾಕ್ಬೇಕಾದಾಗ ಕಷ್ಟ ಆಗ್ತಿದ್ರು ನಿಮ್ಮ್ ಫ್ರೆಂಡ್ ಅಥವಾ ಪಕ್ಕದ ಮನೆಯವರನ್ನ ಸಹಾಯ ಕೇಳಿದ್ರೆ ಏನಂದ್ಕೊತ್ತಾರೋ ಅನ್ಕೊಂಡು ಸುಮ್ನೆ ಇರೋದೇ ಜಾಸ್ತಿ.

ಈ ತರ ಅವರೇನು ಅಂತಾರೋ ಇವ್ರೇನು ಅಂತಾರೋ ಅನ್ಕೊಂಡು ಸುಮ್ನೆ ಮೌನವಾಗಿರೋದು ಸರಿಯಲ್ಲ. ಕೆಲವೊಂದು ರಿಸರ್ಚ್ ಏನ್ ಹೇಳುತ್ತೆ ಅಂದ್ರೆ, ಬೇರೆಯವರ ಹೆಲ್ಪ್ ಕೇಳೋದ್ರಿಂದ ನೀವೇ ಅವ್ರಿಗೆ ಹತ್ರ ಆಗ್ತೀರಿ, ಇಷ್ಟ ಆಗ್ತೀರಿ.

4. ಕಷ್ಟ ಪಡ್ತ್ತಿರೋರು ನೀವೊಬ್ಬರೇ ಅಲ್ಲ

ನೀವು ಆಫೀಸಲ್ಲಿ ಕೆಲಸ ಮಾಡೋವಾಗ, ಕಾಲೇಜಲ್ಲಿ ಪಾಠ ಕೇಳೋವಾಗ ಎನೂ ಅರ್ಥ ಆಗ್ದೇ ಕಷ್ಟ ಆಗ್ತಿದ್ರೆ, ನಾನೇ ತುಂಬ ಕಷ್ಟ ಪಡ್ತಿರೋದು, ಎಲ್ಲಾ ಕಷ್ಟಾನೂ ನಂಗೆ ಬರ್ತಿದೆ ಅಂತ ಹೇಳ್ಕೊಳೋದು ಸಾಮಾನ್ಯ.

ಆದ್ರೆ ನಿಮ್ ತರಾನೇ ನಿಮ್ ಜೊತೆ ಇರೋವ್ರಿಗೂ ಕಷ್ಟ ಆಗ್ತಿರಬಹುದು ಅನ್ನೋದನ್ನ ಮರೀಬೇಡಿ. ಬೇರೆಯವರು ನಿಮ್ಮಷ್ಟು ಧೈರ್ಯ ತೋರ್ಸಿ ನಂಗೆ ಇದು ಅರ್ಥ ಆಗ್ತಿಲ್ಲ, ಇದು ಕಷ್ಟ ಆಗ್ತಿದೆ ಅಂತ ಹೇಳ್ಕೊಳ್ದೆ ಇರ್ಬಹುದು.

ಆದ್ರೆ ನೀವು ಧೈರ್ಯವಾಗಿ ಹೇಳಿದ್ದು ನೋಡಿ ಬೇರೆಯವರು ನಿಮ್ ಸಪೋರ್ಟ್ಗೆ ಬರ್ಬಹುದು ಅಥವಾ ಅವ್ರು ನಿಮ್ಮ ಹಾಗೆ ಹೇಳಕ್ಕೆ ಮುಂದೆ ಬರ್ಬಹುದು.

ಮೂಲ

5. ಸಹಾಯ ಕೇಳೋದ್ರಿಂದ ರಿಲ್ಯಾಕ್ಸ್ ಆಗತ್ತೆ

ತಕ್ಷಣಕ್ಕೆ ನಿಮಗೆ ಸಹಾಯ ಕೇಳೊಕ್ಕೆ ಮುಜುಗರ, ನಾಚಿಕೆ ಆಗ್ತಿರಬಹುದು, ಆದ್ರೆ ಸಹಾಯ ಕೇಳಿ ಪಡ್ಕೋಳೋದ್ರಿಂದ ನಿಮ್ಮ ಮನಸ್ಸು ಹಗುರ ಆಗ್ಬಹುದು, ನೆಮ್ಮದಿ ಸಿಗಬಹುದು ಹಾಗೆ ಮುಂದೆ ಆಗ್ತಿದ್ದ ದೊಡ್ಡ ಅನಾಹುತದಿಂದ ತಪ್ಪಿಸಬಹುದು. ಮುಂದೆ ಆಗಬಹುದಾದ ಅವಮಾನದಿಂದಾನು ಬಚಾವ್ ಆಗ್ಬಹುದು.

 

ಸಹಾಯ ಕೊಳೋದು ಒಂದು ತರ ಎಕ್ಸ್ ಪೆರಿಮೆಂಟ್ ಮಾಡಿದಹಾಗೆ, ಇದು ನಿಮ್ ಬಗ್ಗೆ ನೀವೇ ಅನ್ಕೊಂಡಿರೋ ನೆಗೆಟಿವ್ ಕಲ್ಪನೆಗಳನ್ನ ಹೋಗಿಸುತ್ತೆ.

ಸಹಾಯ ಕೇಳಿದಾಗ ಬೇರೆಯವರು ಅದಕ್ಕೆ ಹೇಗೆ ರಿಯಾಕ್ಟ್ ಮಾಡ್ತಾರೆ ಅಂತ ಗೊತ್ತಾಗುತ್ತೆ.

ಅವಾಗವಾಗ ಹೀಗೆ ಮಾಡೋದ್ರೀನ ನಿಮಗೆ ನಿಮ್ಮಮೇಲಿರೋ ವಿಶ್ವಾಸ ಹೆಚ್ಚಾಗಿ, ಮುಜುಗರ, ಅವಮಾನ, ಹಿಂಜರಿಕೆ ಇಲ್ಲದ ಹಾಗೆ ಮಾಡಕ್ಕೆ ಸಹಾಯ ಆಗತ್ತೆ.