ಇವತ್ತಿನ ದಿನದಲ್ಲಿ ಮೊಬೈಲ್ ಎಲ್ಲಿಲ್ಲ ಹೇಳಿ? ಎಲ್ಲ ಕಡೆ ಮೊಬೈಲ್ ಮೊಬೈಲ್ ಮೊಬೈಲ್… ಮೊಬೈಲ್ ಇಲ್ಲದೆ ಜೀವನಾನೆ ಇಲ್ಲ ಅನ್ನೋ ರೀತಿ ಆಗೋಗಿದೆ. ಬೆಳಿಗ್ಗೆ ಎದ್ದು ಗೋಡೆ ಮೇಲೆ ದೇವರ ಫೋಟೋ ನೋಡ್ತಿದ್ವಿ ಆದ್ರೆ ಈಗ ಮೊಬೈಲಲ್ಲೇ ದೇವರ ಫೋಟೋ ನೋಡ್ತೀವಿ. ನಮ್ಮ ಜೀವನದ ಪ್ರತಿ ಕ್ಷಣದಲ್ಲೂ ಮೊಬೈಲಿಗೆ ಪಾಲಿರತ್ತೆ. ಇಂಥ ಮೊಬೈಲ್ ಫೋನ್ ಬಗ್ಗೆ ಈ ೨೦ ಅದ್ಭುತ ವಿಷಯಗಳನ್ನ ಕೇಳಿ ಆಶ್ಚರ್ಯ ಪಡ್ತೀರಿ.
1. ಅಮೇರಿಕಾದಲ್ಲಿ 1983ರಲ್ಲಿ ಪ್ರಪಂಚದ ಮೊದಲ ಮೊಬೈಲ್ ಮಾರಾಟ ಆಗಿದ್ದು ಸುಮಾರು 2.5 ಲಕ್ಷಕ್ಕೆ !
2. ಜಪಾನಲ್ಲಿ ಜನ ಸ್ನಾನ ಮಾಡ್ಬೇಕಾದ್ರೂ ನೋಡೋದ್ರಿಂದ ವಾಟರ್-ಪ್ರೂಫ್ ಮೊಬೈಲ್ಗಳನ್ನೇ ಇಟ್ಕೊತಾರೆ!
3. ಮನುಷ್ಯನ ಉಚ್ಚೆಯಿಂದ ಮೊಬೈಲ್ ಚಾರ್ಜ್ ಮಾಡೋದನ್ನ ವಿಜ್ಞಾನಿಗಳು ಕಂಡ್ಕೊಂಡಿದಾರೆ !
4. ಸ್ವಲ್ಪ ಜನಕ್ಕೆ ಮೊಬೈಲ್ ಇಲ್ಲದೆ, ನೆಟ್ವರ್ಕ್ ಇಲ್ಲದೆ ಇದ್ದಾಗ ಭಯ ಶುರುವಾಗತ್ತಂತೆ. ಈ ಖಾಯಿಲೇನಾ ನೋಮೊಫೋಬಿಯಾ ಅಂತಾರೆ!
5. ಬ್ರಿಟನ್ನಿನ್ನಲ್ಲಿ ವರ್ಷಕ್ಕೆ ಸುಮಾರು 1 ಲಕ್ಷ ಮೊಬೈಲ್ ಶೌಚಾಲಯದಲ್ಲಿ ಬಿದ್ದು ಹಾಳಾಗತ್ತಂತೆ !
6. ಚೀನಾದಲ್ಲಿ ಕಂಪ್ಯೂಟರಲ್ಲಿ ಇಂಟರ್ನೆಟ್ ಬಳಸುವವರಿಗಿಂತ ಮೊಬೈಲಲ್ಲಿ ಇಂಟರ್ನೆಟ್ ಬಳಸುವವರು ಜಾಸ್ತಿ ಇದ್ದಾರೆ !
7. ನೋಕಿಯಾ 1100 ಪ್ರಪಂಚದಲ್ಲಿ ಅತಿ ಹೆಚ್ಚು ಮಾರಾಟವಾಗಿರೋ ಮೊಬೈಲ್ ಮಾಡಲ್!
8. ಸುಮಾರು 65% ಸ್ಮಾರ್ಟ್ ಫೋನ್ ಬಳಸುವವರು ತಿಂಗಳಲ್ಲಿ ಯಾವುದೇ ಆಪ್ ಡೌನ್ಲೋಡ್ ಮಾಡಲ್ಲ !
9. ಒಂದು ಸ್ಮಾರ್ಟ್ ಫೋನ್ ಹಿಂದೆ 250000 ವಯ್ಯಕ್ತಿಕ ಪೇಟೆಂಟ್ ಇದೆ !
10. ಪ್ರತಿಯೊಬ್ಬ ಮನುಷ್ಯ ದಿನಕ್ಕೆ ಕನಿಷ್ಠ 110 ಸಾರಿ ತನ್ನ ಸ್ಮಾರ್ಟ್ಫೋನ್ ಅನ್ಲಾಕ್ ಮಾಡ್ತಾನೆ !
11. ಅಮೆರಿಕಾದಲ್ಲಿರೋ ಜನರಲ್ಲಿ 47% ಜನ ತಮ್ಮ ಸ್ಮಾರ್ಟ್ ಫೋನ್ ಇಲ್ಲದೆ ತಮಗೆ ಬದುಕಕ್ಕೆ ಆಗಲ್ಲ ಅಂತಾರೆ !
12. ಫಿನ್ಲ್ಯಾಂಡಲ್ಲಿ ಮೊಬೈಲ್ ಫೋನ್ ಎಸೆಯೋದೂ ಒಂದು ಆಟ !
13. ಮಲೇಷಿಯಾದಲ್ಲಿ ಮೊಬೈಲ್ ಎಸ್.ಎಂ.ಎಸ್ ಮೂಲಕ ಕಾನೂನು ಬದ್ದವಾಗಿ ವಿಚ್ಛೇದನ ಕೊಡಬಹುದು !
14. 61% ಜನ ಕಾರ್ ಓಡಿಸುವಾಗ ಮೆಸೇಜ್ ಮಾಡ್ತಾರೆ!
15. 45% ಜನ ತಮ್ಮ ಸುತ್ತಮುತ್ತ ಜನರ ಕಾಟ ತಪ್ಪಿಸ್ಕೊಳ್ಳಕ್ಕೆ ಮೊಬೈಲ್ ಬಳಸ್ತಾರೆ!
16. ಆಫ್ರಿಕಾದಲ್ಲಿ ನೀರಿನ ಕನೆಕ್ಷನ್, ವಿದ್ಯುತ್ ಕನೆಕ್ಷನ್ನಿಗಿಂತ ಮೊಬೈಲ್ ಜಾಸ್ತಿ ಇದೆ!
17. ಯುನೈಟೆಡ್ ಕಿಂಗ್ಡೋಮ್ನಲ್ಲಿ ಮೊಬೈಲ್ ಬಳಸಿ ವಾಹನ ಚಲಾಯಿಸಿದರೆ ಜೀವಾವಧಿ ಜೈಲ್ ಶಿಕ್ಷೆ !
18. ಒಂದು ವರ್ಷ ಪೂರ್ತಿ ನಿಮ್ಮ ಫೋನ್ ಚಾರ್ಜ್ ಮಾಡಕ್ಕೆ ನೀವು ಬಳಸೋ ಕರೆಂಟ್ ಬಿಲ್ 60 ರೂಗಿಂತ ಕಮ್ಮಿ !
19. ಮೊಬೈಲಿನ ತರಂಗಗಳು ತಲೆನೋವು ಮತ್ತು ನಿದ್ದೆ ಬರಲ್ಲ ಅನ್ನಕ್ಕೆ ಮೂಲ ಕಾರಣ!
20. ಅಪೋಲೋ 11 ಬಾಹ್ಯಾಕಾಶ ನೌಕೆಗೆ ಇದ್ದ ಲೆಕ್ಕ ಹಾಕುವ ಶಕ್ತಿಗಿಂತ ಜಾಸ್ತಿ ಶಕ್ತಿ ಮೊಬೈಲಿಗಿದೆ!