https://ae01.alicdn.com/kf/HTB1DngbKVXXXXXEXVXXq6xXFXXXk/pia-bajpai-font-b-beautiful-b-font-font-b-indian-b-font-woman-girl-font-b.jpg

ಎಲ್ರೂ ಒಂದಿಲ್ಲ ಒಂದು ಗುಟ್ಟನ್ನ ಎಲ್ರಿಂದ ಮುಚ್ಚಿಟ್ಟಿರ್ತಾರೆ. ಕೆಲವು ಸಲ ಈ ಗುಟ್ಟನ್ನ ರಟ್ಟು ಮಾಡೋಕೆ ತಯಾರಾಗಿರೊಲ್ಲ. ಮತ್ತೆ ಕೆಲವು ಸಲ ಗುಟ್ಟನ್ನ ಅರ್ಗಿಸ್ಕೊಳ್ಳೋಕೆ ಮತ್ತೊಬ್ರು ತಯಾರಾಗಿರೊಲ್ಲ ಅಂತ ಅನ್ಸಿ ಮುಚ್ಚಿಟ್ಟಿರ್ತಾರೆ. ಹಾಗಾಗಿ ಗುಟ್ಟು ಇಟ್ಕೊಳ್ಳೋದು ಅವಶ್ಯ ಅಂತ ಎಲ್ರಿಗೂ ಅನ್ಸುತ್ತೆ.

ಸಂಬಂಧಗಳಲ್ಲೂ ಹೀಗೆನೇ ಗುಟ್ಟು ಇಟ್ಕೊಂಡಿರ್ತಾರೆ. ಚಿಕ್ಕಚಿಕ್ಕ ವಿಶ್ಯಗಳಿಂದ ಹಿಡ್ದು ಬದ್ಕನ್ನೇ ಬದ್ಲಾಯ್ಸಿದ ವಿಶ್ಯಗಳನ್ನೆಲ್ಲ ಪ್ರೇಮಿಗಳು ಮುಚ್ಚಿಟ್ಟಿರೋ ಚಾನ್ಸ್ ಇದೆ. ಹಾಗಂತ ಪ್ರೀತಿ ಇಲ್ಲಾಂತ ಅಲ್ಲ. ಅಥ್ವಾ ನೀನು ಗುಟ್ಟು ಕಾಪಾಡ್ಕೊಂಡಿದ್ದೀಯ ಅಂತ ನಿನ್ ಹುಡುಗಿಗೆ ನಿನ್ ಮೇಲೆ ಪ್ರೀತಿ ಕಡಿಮೆ ಆಗುತ್ತೆ ಅಂತ ಅಲ್ಲ.

ಎಲ್ಲಾದ್ಕೂ ಒಂದು ಸಮಯ ಇರುತ್ತೆ. ಆ ಸಮಯ ಬಂತು ಅಂತ ಅನ್ಸೋವರ್ಗೂ ಗುಟ್ಟನ್ನ ಕಾಪಾಡ್ಕೋಬೇಕಷ್ಟೆ. ಹಾಗೆನೇ ನಿನ್ ಹುಡ್ಗಿ ಏನೇನು ಮುಚ್ಚಿಟ್ಟಿರ್ಬಹುದು ಅಂತ ನಿಮ್ಗೆ ತಲೆ ಕೆಡ್ತಾ ಇದ್ರೆ ಈ ಲಿಸ್ಟ್ ಓದು. ಇದನ್ನೆಲ್ಲ ಅವ್ಳು ನಿನ್ನಿಂದ ಮುಚ್ಚಿಟ್ಟಿರೋದು ಗ್ಯಾರಂಟಿ.

1. ಅವ್ಳ ಬೆಸ್ಟ್ ಫ್ರೆಂಡ್ ಹತ್ರ ಎಲ್ಲ ಹೇಳ್ತಾಳೆ

ನೀನು ಅವ್ಳನ್ನ ನಗ್ಸಿದ್ದು, ಅಳ್ಸಿದ್ದು, ಹುಟ್ಟಿದ್ ಹಬ್ಬಕ್ಕೆ ಅವ್ಳು ಏನೋ ದೊಡ್ಡ ಗಿಫ್ಟ್ ಎಕ್ಸ್ಪೆಕ್ಟ್ ಮಾಡ್ತಿದ್ದಾಗ ನೀನು ಬರೀ ಹೂವು ಕೊಟ್ಟಿದ್ದು – ಎಲ್ಲಾನೂ ಅವ್ಳ ಬೆಸ್ಟ್ ಫ್ರೆಂಡಿಗೆ ಹೇಳಿರ್ತಾಳೆ. ನೀನು ಅವ್ಳನ್ನ ಕೇಳಿದ್ರೆ ಅವ್ಳು ಒಪ್ಕೊಳ್ಲೂಬಹುದು, ಒಪ್ಕೊಳ್ದೇನೂ ಇರ್ಬಹುದು. ಆದ್ರೆ ಎಲ್ಲಾನೂ ಬೆಸ್ಟ್ ಫ್ರೆಂಡಿಗೆ ಹೇಳ್ತಾಳೆ ಅನ್ನೋದ್ರಲ್ಲಿ ಸಂಶಯ ಬೇಡ.

2. ಅವಳ ಸೌಂದರ್ಯದ ರಹಸ್ಯ ಅವ್ಳು ಯಾರಿಗೂ ಹೇಳೊಲ್ಲ

ಅವ್ಳು ಸಹಜವಾಗಿಯೇ ಮೇಕಪ್ ಇಲ್ದೆ ಚೆನ್ನಾಗಿ ಕಾಣ್ತಾಳೆ ಅಂತ ನೀನಂದ್ಕೊಂಡಿರ್ಬಹುದು. ಆದ್ರೆ ಅಲ್ಲಿ ಸದ್ದಿಲ್ದೆ ಯಾವ್ದೋ ಮೇಕಪ್ ಕೆಲ್ಸ ಮಾಡಿರುತ್ತೆ. ಅದನ್ನ ಅವ್ಳು ನಿನ್ಗೆ ಹೇಳೊಲ್ಲ. ಯಾಕಂದ್ರೆ ಹೇಳಿದ್ರೆ ಅದ್ರ ಮಜಾ ಹೋಗುತ್ತೆ.

ಮೂಲ

3. ಕೆಲ್ವು ಸಲ ಅವ್ಳನ್ನ ಅವ್ಳ ಪಾಡಿಗೆ ಬಿಡೋದು ಒಳ್ಳೇದು, ಆದ್ರೆ ಬಿಟ್ಬಿಡು ಅಂತ ಅವ್ಳು ಹೇಳೊಲ್ಲ

ನಿಂಗೂ ಹಾಗೆನೇ ಅಲ್ವಾ? ಕೆಲ್ವು ಸಲ ಒಬ್ನೇ ಇರ್ಬೇಕು ಅನ್ಸೊಲ್ವಾ? ಅದೇ ಥರ ಅವ್ಳಿಗೂ ಅನ್ಸುತ್ತೆ. ಕೆಲವು ಸಲ ಒಬ್ಳೇ ದೂರ ನಡ್ಕೊಂಡು ಹೋದ್ರೆ ಅವ್ಳ ಮನಸ್ಸು ಸರಿ ಹೋಗುತ್ತೆ. ಆದ್ರೆ ಹಾಗಂತ ಅವ್ಳು ನಿನ್ ಹತ್ರ ಹೇಳೊಲ್ಲ.

4. ಅವ್ಳ ಹಳೇ ಬಾಯ್-ಫ್ರೆಂಡ್ ಬಗ್ಗೆ ಸದ್ದಿಲ್ದೆ ತಿಳ್ಕೋತಿರ್ತಾಳೆ

ಇದು ಗೊತ್ತಾಗಿ ಹೊಟ್ಟೆಕಿಚ್ಚು ಪಡ್ಬೇಡ. ಇದರ ಅರ್ಥ ಅವ್ಳಿಗೆ ನಿನ್ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಅವ್ಳಿಗೆ ಕೆಟ್ಟ ಕುತೂಹಲ ಅಷ್ಟೆ. ಅವ್ಳ ಹಳೇ ಬಾಯ್-ಫ್ರೆಂಡ್ ಇನ್ನೂ ಲೈಫಲ್ಲಿ ಒದ್ದಾಡ್ತಿದ್ದಾನೆ ಅಂತ ಆಗಾಗ ಕನ್ಫರ್ಮ್ ಮಾಡ್ಕೋತಾ ಇದ್ರೆ ಅವ್ಳಿಗೆ ನೆಮ್ಮದಿ.

ಮೂಲ

5. ಹೆಚ್ಚಿನಂಶ ನಿನ್ ಅಮ್ಮನ್ನ ಕಂಡ್ರೆ ಅವ್ಳಿಗಾಗೊಲ್ಲ

ಅವ್ಳಿಗೆ ನಿನ್ ಅಮ್ಮನ್ನ ನೀನು ಅಂದ್ಕೊಂಡಷ್ಟು ಇಷ್ಟ ಇರೊಲ್ಲ. ಹಾಗಂತ ಅವ್ಳು ಯಾವತ್ತೂ ನಿನ್ ಹತ್ರ ಹೇಳೊಲ್ಲ. ಆದರೆ ಇದನ್ನ ದೊಡ್ಡ ವಿಷಯ ಮಾಡ್ಬೇಡ. ನಿಂಗೆ ಅವ್ಳ ಅಮ್ಮನ್ನೂ ಅಷ್ಟಕ್ಕಷ್ಟೆ ಅಲ್ವಾ? ಹಾಗಂತ ಅವ್ಳ ಹತ್ರ ಹೇಳೋಕೆ ಹೋಗ್ಬೇಡ. ನೀನೂ ಅದನ್ನ ಗುಟ್ಟಾಗಿಡು.

6. ಅವ್ಳಷ್ಟಕ್ಕೆ ಅವ್ಳು ಖುಷಿಯಾಗಿರೋದು ಗೊತ್ತಿರುತ್ತೆ

ನಿಂಗೆ ಅವ್ಳನ್ನ ಖುಷಿಯಾಗಿಡೋದು ಗೊತ್ತಾಗೋವರ್ಗೂ ಅವ್ಳಷ್ಟಕ್ಕೆ ಖುಷಿಯಾಗಿರೋದನ್ನ ಅವ್ಳು ಕಲಿತ್ಕೊಂಡಿರ್ತಾರೆ. ಅದನ್ನ ಅವ್ಳು ನಿನ್ ಹತ್ರ ಹೇಳೊಲ್ಲ. ಇದ್ಕೂ ತಲೆ ಕೆಡಿಸ್ಕೊಬೇಡ.

ಮೂಲ

7. ಬೇರೆ ಹುಡುಗ್ರಿಂದ ಹೊಗಳಿಸ್ಕೊಳ್ಳೋದು ಅವ್ಳಿಗೆ ಇಷ್ಟ

ಅವ್ಳಿಗೆ ಅವ್ಳು ಚೆನ್ನಾಗಿದ್ದಾಳೆ ಅಂತನೋ ಅವ್ಳ ಕಂಪೆನಿ ಇಷ್ಟ ಅಂತನೋ ಯಾರಾದ್ರೂ ಹೇಳೋದು ಇಷ್ಟ. ಹಾಗಂತ ಯಾರೋ ಅವ್ಳನ್ನ ಹೊಗ್ಳಿದ್ರೆ ಅವ್ಳು ನಿನ್ ಹತ್ರ ಹೇಳೊಲ್ಲ. ಯಾಕಂದ್ರೆ ನಿಂಗೆ ಹೇಳಿದ್ರೆ ಅದ್ನ ನೀನು ಸರಿಯಾದ ಅರ್ಥದಲ್ಲಿ ತೆಗೋತೀಯೋ ಇಲ್ವೋ ಅನ್ನೋ ಭಯ ಅವ್ಳಿಗೆ. ನಿಂಗೆ ಅವ್ಳು ಕೇವಲ ನಿನ್ನವ್ಳಾಗಿರ್ಬೇಕು ಅನ್ನೋ ಕಾಳಜಿ. ಅದು ಸರಿನೇ. ಆದ್ರೆ ಬೇರೆಯವ್ರಿಂದ ಹೊಗಳಿಸ್ಕೊಳ್ಳೋದು ಅವ್ಳಿಗೆ ಇಷ್ಟ ಅಂದ್ರೂ ಅವ್ಳು ನಿನ್ನೋಳೇ ತಾನೇ? ಇದನ್ನ ಅರ್ಗಿಸ್ಕೊಳ್ಳೋದು ಕಲಿತ್ಕೊ.

8. ಅವ್ಳ ಕೊರತೆಗಳನ್ನ ಹೇಳ್ಕೊಳೊಲ್ಲ

ಅವ್ಳು ಕೂದ್ಲಿಗೆ ಬಣ್ಣ ಹಚ್ಚೋದಾಗ್ಲಿ, ಹುಬ್ಬನ್ನ ಶೇಪ್ ಮಾಡಿಸ್ಕೊಳ್ಳೋದಾಗ್ಲಿ ನಿನ್ ಹತ್ರ ಹೇಳೊಲ್ಲ. ಯಾಕಂದ್ರೆ ಇಂಥದ್ದೆಲ್ಲ ಹುಡ್ಗೀರು ಮಾತಾಡ್ಬಾರ್ದು ಅಂತ ನಮ್ ಸಮಾಜ ಮೊದ್ಲಿಂದ್ಲೂ ರೂಲ್ ಮಾಡಿಟ್ಟಿದೆ. ಹಾಗಾಗಿ ಇಂಥದ್ದೆಲ್ಲ ನಿನ್ ಹತ್ರ ಹೇಳೊಲ್ಲ. ಹುಡುಗ್ರ ಹತ್ರ ಇದನ್ನೆಲ್ಲ ಹೇಳೋದು ಅವ್ಳಿಗೆ ಇಷ್ಟ ಇಲ್ಲ. ಇದೆಲ್ಲ ಹೇಳಿದ್ರೆ ನಿಂಗೆ ಅವ್ಳ ಮೇಲೆ ಎಲ್ಲಿ ಇಷ್ಟ ಕಡಿಮೆ ಆಗಿ ಬಿಡುತ್ತೋ ಅನ್ನೋ ಭಯ.

9. ಅವ್ಳಿಗೆ ಮೊದ್ಲು ಯಾರ್ಯಾರ ಜೊತೆ ಪ್ರೀತಿ ಇತ್ತು ಅಂತ ಅವ್ಳು ಹೇಳೊಲ್ಲ

ನಿಂಗೆ ಯಾರ್ಯಾರ ಮೇಲೆ ಪ್ರೀತಿ ಇತ್ತು ಅಂತ ಅವ್ಳು ತಲೆ ಕೆಡಿಸ್ಕೊಳೊಲ್ಲ. ಹಾಗೆನೇ ಅವ್ಳಿಗೆ ಯಾರ್ಯಾರ ಮೇಲೆ ಪ್ರೀತಿ ಇತ್ತು ಅಂತ ಅವ್ಳು ಹೇಳೊಲ್ಲ. ಹೇಳೋದ್ರಿಂದ ನಿಂಗೆ ಸುಮ್ನೆ ಅವ್ಳ ಮೇಲೆ ಅನುಮಾನ, ಆ ಹುಡುಗ್ರ ಬಗ್ಗೆ ಹೊಟ್ಟೆಕಿಚ್ಚು ಎಲ್ಲ ಹುಟ್ಟುತ್ತೆ. ಹಾಗಾಗಿ ಹೇಳ್ದೆ ಇರೋದೆ ಒಳ್ಳೇದು ಅಂತ ಅವ್ಳಿಗೆ ಅನ್ಸುತ್ತೆ.

ಮೂಲ

10. ಹುಡ್ಗೀರು ಭವಿಷ್ಯದ್ ಬಗ್ಗೆ ತುಂಬಾ ಯೋಚ್ನೆ ಮಾಡ್ತಾರೆ

ಅವ್ಳು ನಿಮ್ಮಿಬ್ರ ನಾಳೆಯ ಬದುಕಿನ ಬಗ್ಗೆ ಎಲ್ಲಾ ತಲೇಲೇ ಪ್ಲಾನ್ ಮಾಡಿರ್ತಾಳೆ. ಆದ್ರೆ ನಿಂಗೆ ಹೇಳಿದ್ರೆ ನೀನು ತಲೆ ಕೆಡಿಸ್ಕೊಳ್ತೀಯ ಅಂತ ಅವ್ಳು ಹೇಳೊಲ್ಲ. ಹುಡುಗ್ರಿಗೆ ಇಷ್ಟೆಲ್ಲ ಯೋಚ್ನೆ ಮಾಡಿ ಅಭ್ಯಾಸ ಇಲ್ಲ. ಇಷ್ಟಾನೂ ಆಗೊಲ್ಲ. ಹಾಗಾಗಿ ಸುಮ್ನಿರೋದೇ ಒಳ್ಳೇದು ಅಂತ ಅವ್ಳಿಗನ್ಸಿದ್ರೆ ತಪ್ಪಿಲ್ಲ ಅಲ್ವಾ?

11. ನೀನು ಅವ್ಳನ್ನ ಅರ್ಥ ಮಾಡ್ಕೋಬೇಕು ಅಂತ ಅವ್ಳು ಆಸೆ ಪಡ್ತಾಳೆ

ಹುಡ್ಗೀರಿಗೆ ಅವ್ರೆಷ್ಟು ವಿಚಿತ್ರ ಅಂತ ಗೊತ್ತು. ಅವ್ರು ಬೇಡ ಅಂದಾಗ ಮನಸಲ್ಲಿ ಬೇಕು ಅಂದ್ಕೋತಿರ್ತಾರೆ. ನಿನ್ನ ದೂರ ತಳ್ಳಿದಾಗ ಮನಸಲ್ಲೇ ನೀನು ಇನ್ನೂ ಹತ್ತಿರ ಆಗ್ಬೇಕು ಅಂತ ಆಸೆ ಪಡ್ತಿರ್ತಾಳೆ. ಹೀಗೆ ಅವ್ಳ ವಿಚಿತ್ರಾನೆಲ್ಲ ನೀನು ಅರ್ಥ ಮಾಡ್ಕೋಬೇಕು ಅಂತ ಅವ್ಳಿಗೆ ಆಸೆ ಇರುತ್ತೆ. ಅವ್ಳು ಕಳ್ದು ಹೋದಾಗೆಲ್ಲ ನೀನು ಅವ್ಳನ್ನ ಸರಿ ಮಾಡ್ಬೇಕು ಅಂತ ಅವ್ಳ ಆಸೆ.

ಮೂಲ