https://antekante.com/sites/default/files/images/tattoos-to-cover-up-scars-18.jpg

ಮೈ ಕೈ ತುಂಬಾ ಬಣ್ಣ ಬಣ್ಣದ ಟ್ಯಾಟೂ ಹಾಕಿಸ್ಕೊಂಡಿರೋರ್ನ ನೋಡಿರ್ತೀರಿ. ಟ್ಯಾಟು ಹಾಕಿಸ್ಕೊಳಕ್ಕೆ ಕಾರಣಗಳು ಹಲವು. ಒಬ್ಬೊಬ್ರಿಗೆ ಅದು ತಮ್ಮನ್ನ ತಾವು ವ್ಯಕ್ತಪಡಿಸ್ಕೊಳಕ್ಕೆ ಒಂದು ದಾರಿಯಾದ್ರೆ, ಇನ್ನೂ ಕೆಲವರು ತಮಗಿಷ್ಟವಾದೋರ ಹೆಸರು ಹಚ್ಚೆ ಹಾಕಿಸ್ಕೊಂಡು ತಮ್ಮ ಪ್ರೀತಿ ತೋರಿಸ್ತಾರೆ.

ಟ್ಯಾಟು ಕಥೆ ಇಷ್ಟಾದ್ರೆ… ಟ್ಯಾಟು ಹಾಕೋರೂ ಅಷ್ಟೇ ಮುಖ್ಯ. ಯಾಕಂದ್ರೆ ಆ ಟ್ಯಾಟೂ ಜೀವನ ಪರ್ಯಂತ ನಿಮ್ಮ ಮೈಮೇಲೇ ಇರತ್ತೆ. ಬೇಕಾದಾಗ ಹಾಕ್ಕೊಂಡು ಬೇಡದಿದ್ದಾಗ ಅಳ್ಸ್ತೀನಿ ಅಂದ್ರೆ ಆಗಲ್ಲ.

ಟ್ಯಾಟೂ ಬರ್ಸಿಕೊಳ್ಳೋವಾಗ ಎನೋ ಒಂದು ಬರೆದು ತಪ್ಪಾದ್ರೆ ನಿಮ್ಮ ಪರಿಸ್ಥಿತಿ ಹೇಗಿರತ್ತೆ ಹೇಳಿ?  ಜೀವನ ಪರ್ಯಂತ ಆ ಕಲೆ… ಆ ತಪ್ಪು ನಿಮ್ಮ ಜೊತೇನೇ ಉಳ್ಕೊಂಡ್ಬಿಡತ್ತೆ.

ಇನ್ನು ಯಾವ್ದೋ  ಕಾರಣದಿಂದ ದೇಹದ ಮೇಲೇ ಗಾಯ ಮಾಡ್ಕಂಡಿರೋರಿಗೆ ಇನ್ಮುಂದೆ ಆ ಕಲೆ ಬಗ್ಗೆ ಬೇಜಾರ್ ಮಾಡ್ಕೊಳೋ ಅವಶ್ಯಕತೆ ಇಲ್ಲ. ಯಾಕಂದ್ರೆ ಇಲ್ಲೊಂದಿಷ್ಟು ಟ್ಯಾಟೂಗಳ್ನ ಕೊಟ್ಟಿದ್ದೀವಿ. ಇದೆಲ್ಲಾ ಬಣ್ಣಗಳನ್ನ ಉಪಯೋಗ್ಸಿ ಮಾಡಿರೋ ಟ್ಯಾಟ್ಯು . ಮೈ ಮೇಲೆ ಗಾಯ ಆಗಿ, ಅದನ್ನ ಹೇಗಪ್ಪಾ ಸರಿ ಮಾಡ್ಕೊಳೋದು ಅಂತ ತಲೆ ಕೆಡ್ಸಕೊಂಡಿರೋರು ಕೊನೆಗೂ ಕಂಡ್ಕೊಂಡಿರೋ ಒಂದ್ ಉಪಾಯ ಇದು. ಅ ಗಾಯ ಸಣ್ಣದೇ ಆಗಿರ್ಲಿ… ದೊಡ್ದೇ ಆಗಿರ್ಲಿ… ಅಲ್ಲಿ ಬಿಡ್ಸಿರೋ ಆ ಟ್ಯಾಟುಗಳು ನಿಮ್ಮನ್ನ ಪ್ರೇರಿಪಿಸೋದಂತೂ ನಿಜ.

1. ತೋಳ್ಮೇಲೆ ಗೂಬೆ ಬಿಡಿಸ್ಕೊಂಡಿದ್ದೀನಿ ಅಂದ್ರೂ ಪರವಾಗಿಲ್ಲ… ಇದ್ರಲ್ಲೇ ನಂಗೆ ಎನೋ ಒಂದ್ ರೀತಿ ಸಮಧಾನ ಇದೆ…

2. ಈ ತರ ಚಿತ್ರ ಬಿಡ್ಸೋಕೂ ತಲೆ ಬೇಕು ಕಣ್ರೀ!…

3. ನಾವಾದ್ರೆ, ಅಯ್ಯೋ….. ಇರ್ಲಿ ಬಿಡು ಅಂತೀವಿ…

4. ನಂಗ್ಯಾಕೋ ಅನುಮಾನ… ಗುಲಾಬಿ ಮುಳ್ಳಿಂದಾನೇ ಈ ಗಾಯ ಆಗಿದ್ಯಾ ಅಂತ…

5. ಈ ತರ ಟ್ಯಾಟು ಹಾಕಿಸ್ಕೊಂಡು, ನಾನ್ ಸಖತ್ ಕೂಲ್ ಮನುಷ್ಯ ಅಂತ ತೋರಿಸ್ಕೋಬೋದು…

6. ಗಾಯ ಎಲ್ಲಾಗಿದೆ ಅಂತ ಹುಡುಕಿ ನೋಡೋಣ…

7. ಮೊದ್ಲೇ ಬೇರು ಬಿಟ್ಟಿತ್ತು… ಒಂದ್ಸಲ್ಪ ದಿನ ಆದ್ಮೇಲೆ ಈ ತರ ಆಗೋಯ್ತು! ಹಹಹ…

8. ಇದೇ ಮೊದಲ ಸರ್ತಿ ಮುಳ್ಹಂದಿ ಮುದ್ದಾಗಿ ಕಾಣಿಸ್ತಿದೆ!…

9. ಅಬ್ಬಾ! ಏನ್ ತಲೇರೀ! ಹೆಂಗಿದ್ದಿದ್ದನ್ನ ಹೇಗ್ ಮಾಡ್ಬಿಟ್ಟಿದ್ದಾರೆ ನೋಡಿ?…

10. ಯಾರೋ ಫ್ಯಾಷನ್ ಡಿಸೈನರ್ ಇರ್ಬೇಕು…

11. ಅಮೆ ಕೂತೂ ಕೂತು ಹೇಗಾಗಿದೆ ನೋಡಿ…

12. ಜಿಪ್ ಎಳೆಯೋವಾಗ ಕೂದ್ಲು ಸಿಕ್ಕೊಂಡ್ ನೋವಾಗತ್ತೆ… ಸ್ವಲ್ಪ ನೋಡ್ಕೊಂಡ್ ಎಳೀರಪ್ಪಾ!…

ಮೂಲ