https://media2.s-nbcnews.com/i/newscms/2016_50/1182361/microwave-stock-today-161215-tease_d4c57cabe05c4ad3a007406e1c16238d.jpg

ನೀವು ಎಷ್ಟೇ ಚೆನ್ನಾಗಿ ಅಡುಗೆ ಮಾಡೋರಾಗಿದ್ರೂ, ಕೆಲಸ ಬೇಗ ಆಗತ್ತೆ, ಸುಲಭವಾಗಿ ಆಗತ್ತೆ ಮತ್ತೆ ವಿದ್ಯುತ್ ಬಳಕೆ ಕೂಡ ಕಮ್ಮಿ ಅಂತ ಮೈಕ್ರೋವೇವ್ ಮೊರೆ ಹೋಗೋದು ಸಹಜ. ಆದರೆ ಅದರಿಂದ ಉಂಟಾಗೋ ಖಾಯಿಲೆಗಳ ದೊಡ್ಡ ಪಟ್ಟಿ ಇದೆ. ಸೋಂಬೇರಿತನದಿಂದ ನಮ್ಮ ಅಡುಗೆಯನ್ನೆಲ್ಲಾ ಅದರಲ್ಲಿ ಇಡೋದ್ರಿಂದ ಕಣ್ಣಿನ ಪೊರೆಯಿಂದ ಕ್ಯಾನ್ಸರ್ ವರೆಗೆ ಆಗುವ ಗಂಭೀರ ಸಮಸ್ಯೆಗಳ ಬಗ್ಗೆ ವಿಕಿರಣ ತಜ್ಞರು ಇಲ್ಲಿ ಹೇಳಿದ್ದಾರೆ.

ಮೈಕ್ರೋವೇವ್ ಯಾಕೆ ಅಪಾಯಕಾರಿ?

ಮೈಕ್ರೋವೇವ್ ಒಳಗೆ ಇರೋ ಲೋಹದ ಪರದೆ ವಿಕಿರಣಗಳು(Radiations) ಲೀಕ್ ಆಗದೇ ಇರೋ ಹಾಗೆ ತಡೀಬೇಕು. ಆದರೆ ಪರೀಕ್ಷೆ ಮಾಡಿರೋ ಒವೆನ್ ಗಳಲ್ಲಿ ನೂರಕ್ಕೆ ತೊಂಭತ್ತು ಭಾಗ ಲೀಕ್ ಆಗುವಂತವೇ.

ಆಹಾರದ ಮೇಲೆ ಅದರ ಪರಿಣಾಮ

hips.hearstapps.com

ಮೈಕ್ರೋವೇವ್ ಅಹಾರದಲ್ಲಿರುವ ಪೌಷ್ಟಿಕಾಂಶವನ್ನ ನಾಶ ಮಾಡತ್ತೆ. ನೀವು ಹಾಗೇ ಆಹಾರ ಸೇವಿಸಿದ್ರೆ ಎಷ್ಟು ಪೌಷ್ಟಿಕಾಂಶ ಸಿಗುತ್ತಿತ್ತೋ ಅದರಲ್ಲಿ ಒಂದು ಸಣ್ಣ ಭಾಗದಷ್ಟು ಮೈಕ್ರೋವೇವ್ ಆದ ನಂತರ ಉಳಿದಿದ್ರೆ ಹೆಚ್ಚು. ಕುರಿ ಸಾಕಣೆ ಕೇಂದ್ರಗಳಲ್ಲಿ ಒಂದು ಕುರಿ ಮರಿ ಹುಟ್ಟಿದಾಗ ಅದಕ್ಕೆ ತಾಯ ಹಾಲು ಕುಡಿಸೋದು ತುಂಬ ಮುಖ್ಯ. ಕೆಲವು ಕಡೆ ಈ ಹಾಲನ್ನ ಕರೆದು ಎತ್ತಿಡೋ ಅಭ್ಯಾಸ ಇದೆ. ಆದರೆ ಅದರಲ್ಲಿರೋ ಪೌಷ್ಟಿಕಾಂಶ ಉಳಿಸೋಕ್ಕೆ ಯಾವುದೇ ಕಾರಣಕ್ಕೂ ಈ ಹಾಲನ್ನ ಮೈಕ್ರೋವೇವ್ ಮಾಡಬಾರದೆಂಬ ಸೂಚನೆ ಇದೆ.

ನಿಮ್ಮ ಮೇಲೆ ಅದರ ಪರಿಣಾಮ

ಮೈಕ್ರೋವೇವ್ ವಿಕಿರಣಗಳನ್ನ ನೀರನ್ನ ಕಾಯಿಸೋಕ್ಕೆ ಉಪಯೋಗಿಸ್ತಾರೆ. ನಮ್ಮ ದೇಹದಲ್ಲಿ ಕೂಡ ಹೆಚ್ಚಾಗಿ ನೀರಿನಾಂಶ ಇರೋದ್ರಿಂದ ಈ ವಿಕಿರಣಗಳನ್ನ ನಮ್ಮ ದೇಹ ಹೀರಿಕೊಳ್ಳತ್ತೆ.

ಕಣ್ಣಿನ ಪೊರೆ

nejm.org

ಮೈಕ್ರೋವೇವ್ ಇಂದ ಕಣ್ಣಿನ ಪೊರೆ ಆಗತ್ತೆ ಅನ್ನೋದು ಎಲ್ಲಾ ವಿಜ್ಞಾನಿಗಳೂ ಒಪ್ಪೋ ಮಾತು. 40 ವರ್ಷ ಮೇಲ್ಪಟ್ಟವರಲ್ಲಿ ದೃಷ್ಟಿ ಮಂದ ಆಗೋದಕ್ಕೆ ಮುಖ್ಯ ಕಾರಣ ಈ ಪೊರೆ. ಗ್ಲುಕೊಮಾ ನಂತರ ದೃಷ್ಟಿಹೀನತೆಗೆ ಎರಡನೇ ಕಾರಣ ಪೊರೆ. ಮೈಕ್ರೋವೇವ್ ಎದುರು ನಿಂತು ನಿಮ್ಮ ಆಹಾರ ಬೇಯುತ್ತಿರೋದನ್ನ ವೀಕ್ಷಿಸೋದು ಈಗಲೇ ನಿಲ್ಲಿಸಿ.

ಕ್ಯಾನ್ಸರ್

1.bp.blogspot.com

ನೀವು ಆಹಾರ ಹಾಕೋ ಪಾತ್ರೆ ಪ್ಲಾಸ್ಟಿಕ್ ಆಗಿದ್ರೆ ಅದು ಬಿಸಿ ಆಗ್ತಾ ಇದ್ದ ಹಾಗೆ ಅದರಿಂದ ಬರೋ ಹಾನಿಕಾರಕ ಅಂಶಗಳು ಆಹಾರವನ್ನ ಸೇರತ್ತೆ. ಅಷ್ಟೇ ಅಲ್ಲ, ಮೈಕ್ರೋವೇವ್ ಮಾಡಿರೋ ಆಹಾರದಲ್ಲಿ ಕ್ಯಾನ್ಸರ್ ಉಂಟು ಮಾಡುವಂತಹ ಹಲವು ಹಾನಿಕಾರಕ ಅಂಶಗಳು ಇರುತ್ತವೆ.

ಹೃದಯಕ್ಕೆ ತೊಂದರೆ

ಮೈಕ್ರೋವೇವ್ ವಿಕಿರಣಗಳು ಹೃದಯಕ್ಕೂ ಒಳ್ಳೇದಲ್ಲ. ಒವೆನ್ ಬಳಿ ನಿಂತವರ ಹೃದಯ ಬಡಿತದಲ್ಲಿ ಏರುಪೇರಾಗೋದಷ್ಟೇ ಅಲ್ಲ, ಅವರ ರಕ್ತದ ಪ್ರಮಾಣದಲ್ಲೂ ವ್ಯತ್ಯಾಸ ಆಗತ್ತೆ. ಮೈಕ್ರೋವೇವ್ ಆಹಾರ ತಿಂದವರಲ್ಲಿ ಆರ್.ಬಿ.ಸಿ. ಕಡಿಮೆಯಾಗಿ ಕೊಬ್ಬಿನಾಂಶ ಜಾಸ್ತಿ ಆಗತ್ತೆ.

ಎಚ್ಚರಿಕೆ ವಹಿಸೋದು ಹೇಗೆ?

ಮೈಕ್ರೋವೇವ್ ಆನ್ ಆಗಿದ್ದಾಗ ಅಡುಗೆಮನೆಯಿಂದ ಹೊರಗೆ ಹೋಗಿ. ಅಲ್ಲೇ ಗೋಡೆ ಬಳಿ ನಿಂತಿರಬೇಡಿ. ಕಿರಣಗಳು ಗೋಡೆ ದಾಟಿ ಬರಬಹುದು. ಮಕ್ಕಳು ಮನೇಲಿರುವಾಗ ಮೈಕ್ರೋವೇವ್ ಬಳಸಬೇಡಿ.

ನಿಮ್ಮ ಮೈಕ್ರೋವೇವ್ ಲೀಕ್ ಆಗ್ತಿದ್ಯಾ ಅಂತ ಪತ್ತೆ ಹಚ್ಚೋದು ಹೇಗೆ?

wikihow.com

ಒಳ್ಳೆ ನೆಟ್ವರ್ಕ್ ಇರೋ ಮೊಬೈಲ್ ಫೋನನ್ನ ಮೈಕ್ರೋವೇವ್ ಒಳಗಿಟ್ಟು ಬಾಗಿಲು ಹಾಕಿ. ಮೈಕ್ರೋವೇವ್ ಆನ್ ಮಾಡಬೇಡಿ. ಬೇರೊಂದು ನಂಬರಿಂದ ಆ ಮೊಬೈಲ್ಗೆ ಕರೆ ಮಾಡಿ. ರಿಂಗ್ ಆಯ್ತು ಅಂದ್ರೆ ಆ ಕಿರಣಗಳನ್ನ ತಡೆಯಬೇಕಾದ ಪರದೆ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಅರ್ಥ.