https://4.bp.blogspot.com/-vj-qlYzBW7Q/V1JqPFgWUeI/AAAAAAAAALk/KiUmNlidIrk3mdn2zX4GWvmJIm-_ORt9gCLcB/s1600/DSC_2549.jpg

ಅಲ್ರೀ… ಚೆನ್ನಾಗ್ ಕಾಣ್ಬೇಕು ಅಂದ್ರೆ ಮೇಕಪ್ ಮಾಡ್ಲೇಬೇಕಾ. ನಾವೇನಾದ್ರು ಚೆನ್ನಾಗ್ ಕಂಡ್ರೆ ಹುಡುಗ್ರು ಕೇಳೋದೇ ಎಷ್ಟೋತ್ತಾಯ್ತು ಮೇಕಪ್ ಮಾಡ್ಕೊಳ್ಳಕ್ಕೆ ಅಂತ.

ಅಯ್ಯೋ ಮೇಕಪ್ ಮಾಡೋವಷ್ಟು ಟೈಮ್ ಇಲ್ಲ್ರೀ. ನಾವು ಇರೋದು ಹೀಗೆನೆ. ಯಾವಾಗ್ಲೂ "ನ್ಯಾಚುರಲ್" ತಿಳ್ಕೊಳ್ಳಿ ಅಂತ ಹುಡ್ಗೀರು ಡೈಲಾಗ್ ಹೊಡ್ಯೋದೇನ್ ಹಳೇದಾ?

ಅದೇನೆ ಇರ್ಲಿ, ವಿಷ್ಯಕ್ಕೆ ಬರ್ತೀವಿ. ಮಾರ್ಕೇಟ್ನಲ್ಲಿ ಸಿಕ್ಕಾಪಟ್ಟೆ ಮೇಕಪ್ ಐಟಮ್ಸ್ ಸಿಗತ್ತೆ. ಜೊತೆಗೆ ಅದನ್ನೆಲ್ಲಾ ಹಾಕೊಂಡು ನಮ್ ಹೀರೋಯಿನ್ಗಳು ಮಿಂಚ್ತಾರಲ್ಲಾ ಆಗ ಎಂಥಾ ಹುಡ್ಗೀಗೂ ಮೇಕಪ್ ಮಾಡ್ಕೊಳ್ಳೋಣ ಅನ್ಸತ್ತೆ.

ಸ್ವಲ್ಪ ಮಾಡ್ಕೊಂಡ್ರೆ ಪರ್ವಾಗಿಲ್ಲಾ, ಆದ್ರೆ ಸಿಕ್ಕಾಪಟ್ಟೆ ತೀಡೀ ತೀಡಿ ಮಾಡ್ಕೊಂಡ್ರೆ ಅದು ಒಮ್ಮೊಮ್ಮೆ ನೋಡಕ್ಕೆ ಹಿಂಸೆ ಆಗತ್ತೆ ಅಲ್ವಾ? ಅದಕ್ಕೆ ಇಲ್ಲಿ ಕೊಟ್ಟಿರೋ ಒಂದು ಹತ್ತು ರೂಲ್ಸ್ ಫಾಲೋ ಮಾಡಿ, ಯಾವ್ ಮೇಕಪ್ಪೂ ಇಲ್ದೆ ನೀವು ಯಾವ್ ಮೇಕ್ ಅಂತ ಕೇಳೋ ಹಾಗೆ ಆಗತ್ತೆ 🙂

1. ಐಬ್ರೌಸ್ ಶೇಪ್ ಮಾಡ್‌ಸ್ಕೊಳ್ರಿ. ಅದೇನ್ ಮೇಕಪ್ ಅಲ್ಲಾ!

ಐಬ್ರೌಸ್ ಚೆನ್ನಾಗಿದ್ರೆ ಹೇಗಿದ್ರೂ ಚೆನ್ನಾಗಿ ಕಾಣ್ತಾರೆ ಗೊತ್ತಾ. ಅದು ಶೇಪ್ನಲ್ಲಿದ್ರೆ ಮುಖಕ್ಕೇನೆ ಒಂದು ಶೇಪ್ ಬರುತ್ತೆ. ನಿಮ್ಗೆನಾದ್ರೂ ನ್ಯಾಚುರಲ್ ಆಗಿ ದಪ್ಪ ಐಬ್ರೌಸ್ ಇಲ್ಲಾಂದ್ರೆ ತಲೆ ಕೇಡ್‌ಸ್ಕೋಬೇಡಿ. ಹರಳೆಣ್ಣೆ ಮತ್ತೆ ವಿಟಮಿನ್ ಆ ಟ್ಯಾಬ್‌ಲೆಟ್ ನಾ ಮಿಕ್ಸ್ ಮಾಡಿ ದಿನಾ ರಾತ್ರಿ ಹಚ್ಕೊಳ್ಳಿ. 15 ದಿನ ಆದ್ಮೇಲೆ ರಿಸಲ್ಟ್ ನಮಗೆ ಹೇಳಿ.

ಮೂಲ

2. ಕಣ್ಣಿಗೆ ಕಾಡಿಗೆ ಹಚ್ಚಿ

ಕಣ್ಣಿನ ಅಂದಾನೆ ಸೌಂದರ್ಯದ ಗುಟ್ಟು ಗೊತ್ತಾ. ಕಣ್ಣು ನೋಡಿದ್ರೆ ಜನ ಬಿದ್ಧೊಗ್ಬೇಕಪ್ಪ. ಹೊಟ್ಟೆ ತುಂಬಾ ಊಟ ಮಾಡಿ. ಚೆನ್ನಾಗಿ ನಿದ್ದೆ ಮಾಡಿ. ಕಣ್ಣ ಸುತ್ತ ಡಾರ್ಕ್ ಸರ್ಕಲ್ ಬರ್ದೆ ಇರೋಹಾಗೆ ನೋಡ್ಕೊಳ್ಳೋದು ಎನ್ ಕಷ್ಟಾ ನಾ? ಇದರ ಜೊತೆ ಕಣ್ಣು ಸ್ವಲ್ಪ ಅಗಲ ಕಾಣ್ಬೇಕು ಅಂದ್ರೆ ರೆಪ್ಪೆಕೂದ್ಲನ್ನ ಕರ್ಲ್ ಮಾಡಿ. ಆಮೇಲೆ ಹಾಗೂ ಡಾರ್ಕ್ ಸರ್ಕಲ್ಸ್ ಬಂದ್ರೆ ಅದು ಕಾಣ್ಸ್ದೆ ಇರೋಹಾಗೆ ಕ್ರೀಮ್ ಹಚ್ಕೊಳ್ಳಿ.

ಮೂಲ

3. ಒಳ್ಳೆ ಕ್ವಾಲಿಟೀ ಪೇಸ್ಟ್ ತೊಗೊಂಡು ಹಲ್ಲು ಉಜ್ಜಿ

ಒಳ್ಳೆ ಕ್ವಾಲಿಟೀ ಪೇಸ್ಟ್ ತಗೊಳ್ಳಿ. ಟೀ ಕಾಫೀ ಊಟ ಆದ್ಮೇಲೆ ಚೆನ್ನಾಗಿ ಬ್ರಶ್ ಮಾಡಿ. ಹಾಗಂತ ದಿನ ಉಜ್ಜತಾನೆ ಇರ್ಬೆಡಿ. ಹಲ್ಲೂ ಬೆಳ್ಳಗಿದ್ದಷ್ಟು ಚಂದಾ ಗೊತ್ತಾ. ನಕ್ಕಿದ್ರೆ ಮುತ್ತು ಉದ್ರಿದ್ ಹಾಗೆ ಇರುತ್ತೆ.

ಮೂಲ

4. ತುಟಿ ತೊಂಡೆ ಹಣ್ನಂತೆ ಇರೋ ಮಾಯ್ಸ್ಚರೈಸ್ ಮಾಡಿ

ತುಟಿಗೆ ಲಿಪ್ಬಾಲ್ಮ್ ಹಚ್ಚಿ. ಆಮೇಲೆ ಆಲಿವ್ ಆಯಿಲ್, ಜೇನುತುಪ್ಪ ಎಲ್ಲ ಹಚ್ಚಿ ಮಾಯ್ಸ್ಚರೈಸ್ ಮಾಡಿ. ಕೆಂಪಗೆ ತೊಂಡೆ ಹಣ್ಣಂಗೆ ಇರೋ ತುಟಿ ನೋಡಿದ್ರೆ ಯಾವನು ನಿಮ್ಮ ನೋಡಿ ಬೀಳಲ್ಲ ಹೇಳಿ.

ಮೂಲ

5. ಕೂದ್ಲಿಗೆ ವಾರಕ್ಕೆರಡು ಸಲ ಕೊಬ್ಬ್ರಿ ಎಣ್ಣೆ ಹಾಕಿ ಮಸಾಜ್ ಮಾಡಿ

ಮುಖದಷ್ಟೇ ಕೂದ್ಲು ಕೂಡ ಇಂಪಾರ್ಟೆಂಟ್ ಗೊತ್ತಾ. ಯಾವ್ಯವ್ದೋ ಕಲರ್ ಎಲ್ಲ ಹಾಕ್ಕೋಬೇಡಿ. ನಿಮ್ಮ ಬಣ್ಣಕ್ಕೆ ಸೂಟ್ ಆಗೋಹಾಗಿದ್ರೆ ಮಾತ್ರ ಕಲರ್ ಮಾಡ್ಸಿ.

ಮೂಲ

6. ಬಿಸಿಲಿಗೆ ಹೋದ್ರೆ ಸ್ಕಿನ್ ಬಾಡದೆ ಇರೋ ಹಾಗೆ ಸನ್‌ಸ್ಕ್ರೀನ್ ಹಚ್ಕೊಳ್ಳಿ

ಈಗೇನು ಬಿಸಿಲಿಗೆ ಬರನಾ? ಒಂದು ಸಲ ಹೋರ್ಗೆ ಹೋಗ್ಬಂದ್ರೆ ಮೈ ಎಲ್ಲ ಸುಟ್ಟು ಸುಣ್ಣ ಆಗಿರುತ್ತೆ. ಒಳ್ಳೆ ಸನ್‌ಸ್ಕ್ರೀನ್ ಹಚ್ಕೊಳ್ಳಿ. ಇಲ್ಲಾಂದ್ರೆ ಅಷ್ಟೇ ಮುರುಟಿದ ಹೂವು ತರ ಆಗುತ್ತೆ ನಿಮ್ಮ ಚರ್ಮ. 

ಮೂಲ

7. ಮುಖದ ಚರ್ಮಕ್ಕೆ ಸ್ವಲ್ಪ ಬೆಲೆ ಕೊಡಿ

ಮುಖದ ಚರ್ಮ ಸಿಕ್ಕಾಪಟ್ಟೆ ಡ್ರೈ ಇರೋರು ಪ್ರತಿದಿನ ಮುಖ ತೋಳಿಲೆ ಬಾರ್ದು. 

ಇನ್ನೊಂದೇನ್ ಗೊತ್ತಾ? ಬೆಳ್ಳಿಗೆ ಎದ್ದ ಕೂಡ್ಲೆ ತೊಳೆಯೋದಕ್ಕಿಂತ ರಾತ್ರಿ ಮಲ್ಗೊ ಮುಂಚೆ ತೊಳೇದ್ರೆ ಒಳ್ಳೆದಂತೆ. ಹಾಗಂತ ಹೇಳಿ ಸಿಕ್ಕದಾಂಗೆ ಮುಖನ್ಣ ಉಜ್ಜಿಬಿಡ್ಬೇಡಿ. ಹೂವು ತರ ನೋಡ್ಕೊಳ್ಳಿ.
 

ಮೂಲ

8. ಯಾರ್ ಏನ್ ಅಂದ್ರೂ ನಿದ್ದೆ ಮಾತ್ರ ಚೆನ್ನಾಗಿ ಮಾಡಿ

ಬೇಗ ಮಲ್ಗಿ ಬೇಗ ಎದ್ದ್ರೆ ಆಯ್ತಪ್ಪ. ಯಾರ್ ತಂಟೆ ನಮಗ್ಯಾಕೆ. ದಿನಾ ಏಳರಿಂದ ಒಂಬತ್ತು ಘಂಟೆ ನಿದ್ದೆ ಮಾಡ್ಬೇಕು ಗೊತ್ತಾ. ಚೆನ್ನಾಗಿ ನಿದ್ದೆ ಮಾಡಿದ್ರೆ ಎಷ್ಟು ಫ್ರೆಶ್ ಅನ್ಸ್ತೀರ ಅಂತ ನಿಮಗೆ ಗೊತ್ತಾಗುತ್ತೆ ನೋಡಿ.

ಮೂಲ

9. ಸಿಕ್ಕಿದ್ನೆಲ್ಲ ತಿನ್ಬೇಡಿ

ಹಸಿವಾದ್ರೆ ಸಿಕ್ಕಿದ್ನೆಲ್ಲ ತಿನ್ಬೆಡ್ರಿ. ಚರ್ಮ ಹೊಳಿಬೇಕು ಅಂದ್ರೆ ತರಕಾರಿ ತಿನ್ನಿ, ಬೇಳೆಕಾಳು ತಿನ್ನಿ. ಫಿಶ್ ತಿನ್ನಿ. ಸಿಕ್ಕಿದ್ನೆಲ್ಲ ತಿಂದ್ರೆ ಹೊಟ್ಟೆ ಕೆಟ್ಟೊಗುತ್ತೆ ಅಷ್ಟೇ.

ಮೂಲ

10. ಚಂದ ಚಂದ ಬಟ್ಟೆ ಹಾಕಿ

ಚಂದ-ಚಂದಾ ಅಂತ ಸಿಕ್ಕೆದ್ದೆಲ್ಲ ಹಾಕ್ಕೊಂಡ್ರೆ ನಮಗೆ ಒಪ್ಬೇಕಲ್ವಾ? ನಮ್ಮ ಕಲರ್ಗೆ ಸೂಟ್ ಆಗೋ ಬಟ್ಟೆ ತಗೊಳ್ಳಿ. ನಮ್ಮ ಹೈಟಿಗೆ, ನಮ್ಮ ವೇಟ್ಗೆ ತಕ್ಕಂತ ಬಟ್ಟೆ ತೊಟ್ಕೊಂಡು ಹೋದ್ರೆ ಯಾರ್ ತಾನೇ ತಿರ್ಗಿ ತಿರ್ಗಿ ನೋಡಲ್ಲ ಹೇಳಿ.

ಮೂಲ

ಇಷ್ಟು ನ್ಯಾಚುರಲ್ ಆಗಿ ರೆಡೀ ಆಗಿ ಹೋದ್ರೆ, ನಿಮ್ಮ ಒಂದು ಸ್ಮೈಲ್ ಗೆ  ಒಂದ್ರಾಶಿ ಜನ ಬೀಳಿಲ್ಲ ಅಂದ್ರೆ ಕೇಳಿ 😉

ಇದನ್ನೂ ಓದಿ:

ಮೇಕಪ್ ಇಲ್ಲದೆ ಕನ್ನಡದ ಹೀರೋಯಿನ್ಗಳು ಹೆಂಗ್ ಕಾಣಿಸ್ತಾರೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ಮಾರುಕಟ್ಟೇಲಿ ಸಿಗೋ ಮೇಕಪ್ ಸಾಮಾನುಗಳ ಬಗ್ಗೆ ಈ 12 ಸತ್ಯಗಳ್ನ ತಿಳ್ಕೊಂಡು ಇನ್ಮೇಲೆ ಹುಷಾರಾಗಿರಿ