ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ನಮಗೆ ಉತ್ಸಾಹ ಕಡಿಮೆ ಆಗುತ್ತೆ. ಕಾರಣಾನೇ ಇಲ್ಲದೇ ಹೀಗಾದಾಗ ಮನಸ್ಸು ಸರಿ ಇಲ್ಲವೇನೋ ಅನ್ನೋ ಅಂತೆಕಂತೆ ಕಾಡುತ್ತೆ. ಆದರೆ ಅದಕ್ಕೆ ನಿಜವಾದ ಕಾರಣ ಏನಪ್ಪ ಅಂದ್ರೆ ನಿಮ್ಮ ಮೆದುಳಿಗೆ ಸರಿಯಾದ ಪೌಷ್ಟಿಕಾಂಶ ಸಿಗದೇ ಇರೋದು. ಹಾಗಿದ್ದರೆ ಮೆದುಳಿಗೆ ಬೇಕಾಗಿರೋ ಪೌಷ್ಟಿಕಾಂಶ ಏನು ಅಂತ ನಿಮಗೆ ಅಂತೆಕಂತೇಲಿ ನಾವು ಹೇಳ್ತೀವಿ ಕೇಳಿ.

1. ಒಮೇಗಾ -3

ಯಾಕೆ ಬೇಕು – ನಮ್ಮ ಮೆದುಳು 60% ಕೊಬ್ಬಿನಾಂಶದಿಂದ ಕೂಡಿದೆ. ಹಾಗಾಗಿ ಮೆದುಳಿಗೆ ಬೇಕಾದ ಸರಿಯಾದ ಆಹಾರ ನೀಡಿದಾಗ ಅದರ ಬೆಳವಣಿಗೆ ಸರಿಯಾಗುತ್ತೆ.

ಏನಾಗುತ್ತೆ – ಮೆದುಳಿಗೆ ಕೆಲಸ ಮಾಡೋಕೆ ಸರಿ ಪ್ರಮಾಣದ ಶಕ್ತಿ ದೊರಕುತ್ತೆ.

ಯಾವುದರಲ್ಲಿದೆ – ಆಕ್ರೂಟ್, ಸಬ್ಜಾ ಬೀಜ, ಅಗಸೇ ಬೀಜ, ಮೊಟ್ಟೆ, ಕಾರ್ಡ್ ಲಿವರ್ ಆಯಿಲ್, ಸಾಲ್ಮನ್, ಸಾರ್ಡೈನ್ಸ್.

2. ಮಗ್ನೀಶಿಯಂ

ಯಾಕೆ ಬೇಕು – ಮೆದುಳಲ್ಲಾಗೋ ಸಾಕಷ್ಟು ರಾಸಾಯನಿಕ ಕ್ರಿಯೆಗಳಿಗೆ ಮಗ್ನೀಶಿಯಂ ತುಂಬ ಅತ್ಯಗತ್ಯ. ಆದರೂ ಪ್ರಪಂಚದಲ್ಲಿ ಸಾಕಷ್ಟು ಜನರಲ್ಲಿ ಇದರ ಕೊರತೆ ಇದೆ.

ಏನಾಗುತ್ತೆ – ಊತ ಕಡಿಮೆ ಮಾಡುತ್ತೆ, ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್ ನಿಯಂತ್ರಿಸುತ್ತೆ, ಅಗತ್ಯ ಇರೋ ಕೆಲಸಗಳಿಗೆ ನರಗಳನ್ನ ಸಿದ್ಧಪಡಿಸಿ-ಅನಗತ್ಯ ಕೆಲಸಗಳಲ್ಲಿ ದುರ್ಬಲಗೊಳಿಸುತ್ತೆ, ಖಿನ್ನತೆ ಆಗದ ಹಾಗೆ ನೋಡಿಕೊಳ್ಳುತ್ತೆ

ಯಾವುದರಲ್ಲಿದೆ – ಬಾದಾಮಿ, ಗೋಡಂಬಿ, ಬೆಣ್ಣೆ ಹಣ್ಣು, ಪಾಲಾಕ್ ಸೊಪ್ಪು

3. ವಿಟಮಿನ್ ಬಿ1 – ಥಯಾಮಿನ್

ಯಾಕೆ ಬೇಕು – ನಿಮ್ಮ ಮೆದುಳಲ್ಲಿ ನಡೆಯೋ ಎಲ್ಲ ಕ್ರಿಯೆಗಳಿಗೆ ಸಾಕಷ್ಟು ಶಕ್ತಿ ಬೇಕು, ಇದರ ನಿಯಂತ್ರಣಕ್ಕೆ ವಿಟಮಿನ್ ಬಿ೧ ಸಹಾಯ ಮಾಡುತ್ತೆ.

ಏನಾಗುತ್ತೆ – ನಿಮ್ಮ ಮನಸ್ಥಿತಿ, ಶಕ್ತಿ ಹಾಗೆ ಲವಲವಿಕೆ ಹೆಚ್ಚಿಸುತ್ತೆ.

ಇನ್ನು ಕಡಿಮೆ ಆದರೆ ವಿಟಮಿನ್ ಬಿ1 ನರಗಳಲ್ಲಿ ಹಾನಿ, ಸುಸ್ತು, ಮರೆವು, ಗೊಂದಲ ಇವುಗಳಿಗೆಲ್ಲ ಕಾರಣ ಆಗಿತ್ತೆ.

ಯಾವುದರಲ್ಲಿದೆ – ಕಡಲೆಕಾಯಿ, ಸೂರ್ಯಕಾಂತೀ ಬೀಜ, ಮಕಾಡಾಮಿಯಾ ಬಿಝ, ಮಸೂರಗಳು, ಕಪ್ಪು ಹುರುಳಿ

4. ವಿಟಮಿನ್ ಬಿ6

ಯಾಕೆ ಬೇಕು – ನಿಮ್ಮ ಮೆದುಳಲ್ಲಿ ನಿಮ್ಮನ್ನ ಖುಷಿಯಾಗಿ ಇಡೋಕೆ ಉತ್ಪತ್ತಿಯಾಗೋ ಸೆರಟೋನಿನ್ ಅನ್ನೋ ಹಾರ್ಮೋನ್ ಉತ್ಪತ್ತಿಗೆ.

ಏನಾಗುತ್ತೆ – ನಿಮ್ಮ ಮೆದುಳನ್ನ ಚುರುಕಾಗಿ ಇರಿಸುತ್ತ್.

ಕಡಿಮೆ ಆದರೆ ಸಿಡುಕು, ಏಕಾಗ್ರತೆ ಕೊರತೆ, ಸುಸ್ತು, ಮರೆವು ಹಾಗೆ ಮಾಂಸಖಂಡಗಳಲ್ಲಿ ಒತ್ತಡ ಕಾಣಿಸಿಕೊಳ್ಳುತ್ತೆ.

ಯಾವುದರಲ್ಲಿದೆ – ಪಿಸ್ತಾ, ಬೆಣ್ಣೆ ಹಣ್ಣು, ಗೋಮಾಂಸ, ಟ್ಯೂನ ಮೀನು

5. ವಿಟಮಿನ್ ಬಿ9 – ಫೋಲೇಟ್

ಯಾಕೆ ಬೇಕು – ಮೆದುಳಿನ ಸಾಮಾನ್ಯ ಬೆಳವಣಿಗೆಗೆ.

ಏನಾಗುತ್ತೆ – ಪೋಲೇಟ್ ದೇಹದಲ್ಲಿ ಕಡಿಮೆಯಾದರೆ ರೋಗನಿರೋಧಕೆ ಶಕ್ತಿ ಕಡಿಮೆಯಾಗುತ್ತೆ, ನೆನಪಿನ ಶಕ್ತಿ ಕುಗ್ಗುತ್ತೆ ಹಾಗೂ ಆತಂಕ ಹೆಚ್ಚುತ್ತೆ.

ಯಾವುದರಲ್ಲಿದೆ – ಪಾಲಾಕ್, ಗೋಮಾಂಸ, ಶತಾವರೀ, ಬ್ರೊಕ್ಕೋಲೀ

6. ವಿಟಮಿನ್ ಬಿ 12

ಯಾಕೆ ಬೇಕು – ಸೆರಟೋನಿನ್ ಹಾಗೆ ಡೋಪಮೈನ್ ಉತ್ಪತ್ತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತೆ. ಮೆದುಳಿನೆ ಮುಖ್ಯ ಕ್ರಿಯೆಗಳಾದ ಏಕಾಗ್ರತೆ ಹಾಗೆ ನೆನಪಿನ ಶಕ್ತಿ ಯಲ್ಲಿ ಮುಖ್ಯ ಪಾತ್ರ ವಹಿಸುತ್ತೆ.

ಏನಾಗುತ್ತೆ – ಖಿನ್ನತೆ, ಆತಂಕ, ಒತ್ತಡ, ಮರೆವು, ಗೊಂದಲ ಎಲ್ಲವೂ ಈ ವಿಟಮಿನ್ ನ ಕೊರತೆಯಿಂದ ಉಂಟಾಗುತ್ತೆ.

ಯಾವುದರಲ್ಲಿದೆ – ಸಾಮಾನ್ಯವಾಗಿ ಮಾಂಸ ಪದಾರ್ಥಗಳಲ್ಲೇ ನಿಮಗಿದು ಲಭ್ಯ. ಗೋಮಾಂಸ, ಸಾಲ್ಮೊನೆಲ್, ಮೊಟ್ಟೆ, ಯೀಸ್ಟ್, ಸಾರ್ಡೈನ್ಸ್.

7. ವಿಟಮಿನ್ ಸಿ

ಯಾಕೆ ಬೇಕು – ಎಷ್ಟೇ ಕೆಲಸ ಮಾಡಿದರೂ ನಿಮ್ಮ ಮೆದುಳಿಗೆ ಯಾವುದೇ ಹಾನಿ ಆಗದ ಹಾಗೆ ನೋಡಿಕೊಳ್ಳೋಕೆ.

ಏನಾಗುತ್ತೆ – ನಿಮ್ಮ ಮಾನಸಿಕ ಸ್ಥಿತಿ ಶಾಂತವಾಗಿರುತ್ತೆ.

ಯಾವುದರಲ್ಲಿದೆ – ಬ್ರೋಕ್ಕೋಲೀ, ನಿಂಬೆಯಂತಹ ಹುಳಿ ಹಣ್ಣುಗಳು, ಪಾಲಾಕ್, ಕಲ್ಲಂಗಡಿ.

8. ವಿಟಮಿನ್ ಡಿ

ಯಾಕೆ ಬೇಕು – ಸಾಮಾನ್ಯವಾಗಿ ಇದು ಮೂಳೆಗಳ ಹಾಗು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗುತ್ತೆ.

ಏನಾಗುತ್ತೆ – ಅರಿವಿನ ಸ್ಥಿತಿಯಲ್ಲಿನಿಮ್ಮನ್ನ ಇಡೋಕೆ ತುಂಬ ಸಹಾಯಕಾರಿ ಅಂತ ಸಂಶೋಧನೆಗಳು ಹೇಳುತ್ತಿವೆ.

ಯಾವುದರಲ್ಲಿದೆ – ಸೂರ್ಯನ ಕಿರಣಗಳು.

9. ವಿಟಮಿನ್ ಈ

ಯಾಕೆ ಬೇಕು – ನಿಮ್ಮ ಮೆದುಳು ಸಾಕಷ್ಟು ವರ್ಷ ಸರಿಯಾಗಿ ಕೆಲಸ ನಿರ್ವಹಿಸೋಕೆ ಇದು ಬೇಕು.

ಏನಾಗುತ್ತೆ – ಇದೇನಾದರೂ ಕೊರತೆಯಾದರೆ ನಿಮ್ಮ ಅರಿವಿನ ಸ್ಥಿತಿ ಸಮತೋಲನದಲ್ಲಿರೋದಿಲ್ಲ, ನೆನಪಿನ ಶಕ್ತಿ ಕುಂದುತ್ತೆ, ದೇಹ ಸಮತೋಲನ ಇರೋದಿಲ್ಲ ಹಾಗೆ ಮಾಂಸಖಂಡಗಳಲ್ಲಿ ನಿಶ್ಯಕ್ತಿ ಕಾಡಬಹುದು.

ಯಾವುದರಲ್ಲಿದೆ – ಬಾದಾಮಿ, ಹಸಿರು ತರಕಾರಿ ಮತ್ತು ಸೊಪ್ಪು, ಆಲಿವ್ಸ್

10. ಝಿಂಕ್

ಯಾಕೆ ಬೇಕು – ನಿಮ್ಮ ಮಾತು ಕತೆ -ಸಂವಾದದ ಕ್ರಿಯೆ ಸರಿಯಾಗಿ ನಡೆಯೋಕೆ ನಿಮ್ಮ ಮೆದುಳಿಗೆ ಝಿಂಕ್ ಅಗತ್ಯ.

ಏನಾಗುತ್ತೆ – ಭೇದಿ, ಚರ್ಮದಲ್ಲಿ ಕಲೆಗಳು, ಕುಗ್ಗಿದ ರೋಗನಿರೋಧಕ ಶಕ್ತಿ ಹಾಗೆ ಏಕಾಗ್ರತೆ ಕೊರತೆ ನಿಮ್ಮ ದೇಹದಲ್ಲಿ ಝಿಂಕ್ ಕೊರತೆಯಾದರೆ ಕಾಣುತ್ತದೆ.

ಯಾವುದರಲ್ಲಿದೆ -ಗೊಡಂಬಿ, ಬಾದಾಮಿ, ಅಣಬೆ, ಪಾಲಾಕ್, ಕುಂಬಳಕಾಯಿ ಬೀಜ.

ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ಸರಿಯಾದ ಆಹಾರ ಸಿಗಲೇಬೇಕು, ಒಪ್ಕೋತೀರಾ ತಾನೇ?