https://www.elitereaders.com/wp-content/uploads/2017/06/how-garbage-affects-animals-7.jpg?x28005

ಸುತ್ತಲೂ ಹರಡಿರೋ ಕಸಾನ ಎಷ್ಟೋ ಸರ್ತಿ ಪ್ರಾಣಿಗಳು ಊಟ ಅಂತ ಅನ್ಕೊಂಡ್ ತಿಂದು, ಪ್ಲಾಸ್ಟಿಕ್, ಕಾಗದ ಮತ್ತಿತರ ಕಸ ಅವುಗಳ ಹೊಟ್ಟೆ ಸೇರಿ ಅವುಗಳ ಜೀವಕ್ಕೇ ಅಪಾಯ ತಂದಿಟ್ಟಿವೆ. ಫ್ಯಾಕ್ಟರಿಯಿಂದ ಹೋಗಿರೋ ಎಷ್ಟೊ ಕಸ ಮೀನುಗಳ ಹೊಟ್ಟೆ ಸೇರಿದೆ. ಎಷ್ಟೋ ಸರ್ತಿ ಫಿಶಿಂಗ್ ಹುಕ್ಕ್ಗಳಿಂದ ಹಕ್ಕಿಗಳ ಕಣ್ನು ಚುಚ್ಕೊಂಡಿದೆ. ಇದೇ ಥರ ಎಷ್ಟೆಷ್ಟೋ ತೊಂದ್ರೆಗಳಿಗೆ ಪ್ರಾಣಿಗಳು ಸಿಕ್ಕಾಕೊಂಡಿವೆ. ನೀವೇ ನೋಡಿ.

1. ಈ ಆಮೆ ಮೈಗೆ ಪ್ಲಾಸ್ಟಿಕ್ ಸಿಕ್ಕಾಕೊಂಡು ಎಷ್ಟ್ ಒದ್ದಾಡ್ತಿದೆ ನೋಡಿ!

ಮೂಲ

2. ಇದಕ್ಕಂತೂ ಬಲೆ ಮೈಗೆಲ್ಲ ಸುತ್ಕೊಂಡು ಉಸಿರಾಡಕ್ಕೆ ಕಷ್ಟ ಆಗ್ತಿದೆ ಪಾಪ!

ಮೂಲ

3. ನಾವು ಕಸದಲ್ಲಿ ಹಾಕೋ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಸಾಮಾನಿಂದ ಈ ಆಸ್ಟ್ರಿಚ್ ಕರುಳೇ ಬ್ಲಾಕಾಗಿ ಏನ್ ಗತಿ ಬಂದಿದೆ ನೋಡಿ!

ಮೂಲ

4. ಕೊಕ್ಕಿಗೆ ಪ್ಲಾಸ್ಟಿಕ್ ಸಿಕ್ಕೊಂಡು ಏನೂ ತಿನ್ನಕ್ಕಾಗ್ತಿಲ್ಲ!

ಮೂಲ

5. ಬಲೆಯಲ್ಲಿ ಸಿಕ್ಕೊಂಡಿರೋ ಈ ಪ್ರಾಣಿಗಳನ್ನ ನೋಡಿದ್ರೆ ಕರುಳು ಚುರುಕ್ ಅನ್ನಲ್ವಾ?

ಮೂಲ

6. ಇಂಥ ಕಸದಲ್ಲಿ ಆ ಮೀನುಗಳು ಹೇಗ್ ಉಸಿರಾಡ್ತವೆ ಹೇಳಿ?

ಮೂಲ

7. ಹಣ್ಣು, ಕಡ್ಲೇಕಾಯಿ ತಿನ್ಬೇಕಾಗಿರೋ ಅಳಿಲಿನ್ ಬಾಯಲ್ಲಿ ಪೇಪರ್ರು!

ಮೂಲ

8. ನೀರಲ್ಲಿ ಈಜಾಡೋದು ಬಿಟ್ಟು ಗಂಟು ಬಿಡ್ಸ್ಕೊಳೊ ಕೆಲ್ಸ ನೋಡಿ ಇವಕ್ಕೆ… ಪಾಪ!

ಮೂಲ

9. ಪ್ಲಾಸ್ಟಿಕ್ ತಿನ್ನೋ ಗತಿ ಬಂತಲ್ಲ ದೇವ್ರೇ!

ಮೂಲ

10. ಈ ಜನ ಎಲ್ಲೆಲ್ಲೋ ಏನೇನೋ ಬಿಸಾಕಿ ನನಗೆ ಈ ಸ್ಥಿತಿ ತಂದಿಟ್ಟಿದ್ದಾರೆ!

ಮೂಲ

11. ಈ ಹಸು ಹೊಟ್ಟೆಗೆ ಪ್ಲಾಸ್ಟಿಕ್ ಸಿಕ್ಕೊಂಡು ಒದ್ದಾಡೋದು ಯಾವ ದೇವ್ರಿಗ್ ಪ್ರೀತಿ ಹೇಳಿ?

ಮೂಲ

12. ಪ್ಲಾಸ್ಟಿಕ್ ಕವರ್ರಲ್ಲಿ ತಿಂಡಿ ಸಿಗತ್ತೆ ಅಂತ ಅನ್ಕೊಂಡು ಮೋಸ ಹೋಗಿ, ಕವರ್ ತುಂಡು ಬಾಯೊಳಗ್ ಹೋಯ್ತಲ್ಲಪ್ಪಾ!

ಮೂಲ

13. ಭೂಮಿ ಮೇಲೆ ಆಯ್ತು, ನೀರಲ್ಲೂ ಪ್ಲಾಸ್ಟಿಕ್ಕಾ?

ಮೂಲ

14. ಕುತ್ತಿಗೆಗೆ ಬಲೆ ಬಿದ್ದಿರೋದು ನೋಡಿದ್ರೆ ಏನಾದ್ರೂ ತಿನ್ನೋದಿರ್ಲಿ, ಉಸಿರಾಡೋದು ಕಷ್ಟ ತಾನೇ?

ಮೂಲ

15. ಒಂದ್ಕಾಲ್ದಲ್ಲಿ ಕಾಡೆಷ್ಟು ಹಚ್ಚ ಹಸಿರಾಗಿತ್ತು… ಈಗ ಎಲ್ನೋಡಿದ್ರೂ ಕಾಗದ, ಪ್ಲಾಸ್ಟಿಕ್ಕೂ!

ಮೂಲ

ಈ ಭೂಮಿ ಬೇರೆ ಪ್ರಾಣಿ ಪಕ್ಷಿಗಳ್ಗೂ ಸೇರಿದ್ದು ಅಂತ ಈಗ್ಲಾದ್ರೂ ಅರ್ಥ ಮಾಡ್ಕೊಬೇಕು.