Close-up portrait of young woman with clean fresh skin. Make-up and manicure.

ನಿಮಗೆ ನಿಮ್ಮ ವಯಸ್ಸಿಗಿಂತ ಚಿಕ್ಕೋರ ಹಾಗೆ ಕಾಣೋ ಆಸೆ ಇದ್ದರೆ ನಾವು ಹೇಳೋ ಹಾಗೆ ಮಾಡಿ. ನಾವು ಹೇಳೋ ಹಾಗೆ ನಿತ್ಯ ಮಾಡೋದ್ರಿಂದ ಕಡೇ ಪಕ್ಷ ನಿಮ್ಮ ವಯಸ್ಸಿಗಿಂತ 3-4 ವರ್ಷ ಆದರೂ ಚಿಕ್ಕೋರಾಗಿ ಕಾಣಬಹುದು ಅಂತ ಸಂಶೋಧನೆಗಳು ಹೇಳುತ್ತವೆ.

ಮುಖದ ಮಾಂಸಖಂಡಗಳಿಗೆ ದಿನ 30 ನಿಮಿಷ ಅಥವಾ ವಾರದಲ್ಲಿ 3-4 ಬಾರಿ ವ್ಯಾಯಾಮ ಮಾಡೋದ್ರಿಂದ ಕೇವಲ 20 ವಾರಗಳಲ್ಲಿ  ಸರಿಸುಮಾರು 3 ವರ್ಷ ಆದರೂ ಚಿಕ್ಕೊರಾಗಿ ಕಾಣಬಹುದು ಅಂತಾರೆ, ಇದನ್ನ ಮನೇಲಿ ಪ್ರಯತ್ನ ಮಾಡಿ ನೋಡಿ ಇದು ನಿಜಾನೋ ಅಥವಾ ಕೇವಲ ಅಂತೆಕಂತೆನೋ ಅಂತ ನೋಡೋ ಸಮಯ ಆಗಿದೆ.

1. ಮೊದಲಿಗೆ ಕೆನ್ನೆಗೆ ವ್ಯಾಯಮ

ಈ ಚಿತ್ರದಲ್ಲಿ ಇರೋ ಹಾಗೆ ನಿಮ್ಮ ಎರಡೂ ಕೈಗಳನ್ನ ಕೆನ್ನೆಮೇಲಿಟ್ಟು, ನಿಧಾನವಾಗಿ ನಿಮ್ಮ ಕೆನ್ನೆಯ ಮಾಂಸಖಂಡಗಳನ್ನ ಕಣ್ಣುಗಳ ಕಡೆ ವಾಲಿಸಿ. ಹೀಗೆ ಮಾಡುತ್ತ 1-5 ಎಣಿಸಿ. ಮತ್ತೆ ಮತ್ತೆ ಇದನ್ನೇ ಮಾಡಿ.

2. ಈಗ ಹಣೆಗೆ ವ್ಯಾಯಾಮ

ಈ ಚಿತ್ರದಲ್ಲಿರೋ ಹಾಗೆ ಕೈಯನ್ನ ನಿಮ್ಮ ಹಣೆಯಮೇಲಿಟ್ಟು, ನಿಮ್ಮ ತುಟಿ, ಗಲ್ಲ ಎಲ್ಲ ಮಾಂಸಖಂಡಗಳನ್ನ ದೃಢವಾಗಿರಿಸಿ. ಇದೇ ಸ್ಥಿತಿಯಲ್ಲಿ ಕೈಗನ್ನೂ ಗಟ್ಟಿಯಾಗಿ ಹಿಡಿದು 1-5 ಎಣೆಸಿ. ನಂತರ ಎಲ್ಲ ಮಾಂಸಖಂಡಗಳನ್ನೂ ಸಡಿಲ ಗೊಳಿಸಿ 1-5 ಎಣೆಸಿ.

ನಂತರ ಕಣ್ಣನ್ನು ಮೇಲೆ ಮಾಡಿ, ಉಬ್ಬನ್ನು ಏರಿಸಿ, ನಾಯಿ ತೆರೆದು, ಗಲ್ಲ ಏರಿಸಿ 1-5 ಬಾರಿ ಎಣೆಸಿ. ಈ ಎರಡೂ ವ್ಯಾಯಾಮಗಳನ್ನ ಆಗಾಗ ಮಾಡಿ.

3. ಕೊನೇದಾಗಿ ಗಲ್ಲಕ್ಕೆ ವ್ಯಾಯಾಮ

ಈ ಚಿತ್ರದಲ್ಲಿ ತೋರಿಸಿರೋ ಹಾಗೆ ಕೈಯನ್ನ ಮುಷ್ಟಿ ಮಾಡಿ ನಿಮ್ಮ ಗಲ್ಲಡ ಕೆಳಗಿಡಿ. ನಂತರ 1-5 ಎಣೆಸಿ, ಮತ್ತೆ ಬಾಯಿ ತೆರೆದು ಮುಷ್ಟಿಯನ್ನ ಗಲ್ಲಕ್ಕೆ ಇಟ್ಟು 1-5 ಎಣೆಸಿ. ಈ ಎರಡನ್ನೂ ಆಗಾಗ ಮಾಡುತ್ತಿರಿ.

ಸೂಪರ್ ಈಜಿ ಅಲ್ವಾ?