https://humanities.uchicago.edu/sites/humanities.uchicago.edu/files/styles/major_feature_retina/public/mahabharata_battle.jpg?itok=k2u5EqYU

ರಾಮಾಯಣ, ಮಹಾಭಾರತವನ್ನ ನಾವು ಚಿಕ್ಕಂದಿನಿಂದ ಕೇಳ್ಕಂಡು ಬಂದಿದ್ದೀವಿ. ಅದ್ರಲ್ ಬರೋ ಒಂದೊಂದ್ ಪಾತ್ರ ಕೂಡಾ ನಮ್ಗೆ ಸಾಯೋವರ್ಗೂ ನೆನಪಿರತ್ತೆ. ಆದ್ರೆ ಅದ್ರಲ್ ಅಡ್ಗಿರೋ ಕೆಲ್ವೊಂದ್ ಕತೆಗಳ್ನ ನಾವ್ ಚಿಕ್ ವಯಸ್ಸಲ್ಲಿ ಕೇಳ್ದೇನೇ ಇರ್ಬಹುದು. ಅಂತಹ ಕತೆಗಳ್ನ ನಾವಿಲ್ಲಿ ಹೇಳ್ತಾ ಇದ್ದೇವೆ ನೋಡಿ. ಮಹಾಭಾರತದ ಅತೀ ಮುಖ್ಯ ಪಾತ್ರಗಳ ಹುಟ್ಟು ಹೇಗಾಯ್ತು ಅನ್ನೋದ್ನ ತಿಳ್ಕೊಳಣ

1) ಭೀಷ್ಮ ಹುಟ್ಟಿದ್ದು ಎಳು ಮಕ್ಕಳು ಸತ್ತ ನಂತರ

ಗಂಗಾ ಮಾತೆ ತನ್ನ ಎಳು ಮಕ್ಕಳನ್ನ ಹತ್ಯೆಗೈದಾಗ ರಾಜ ಶಂತನು ನೋಡ್ತಾನೇ ಇದ್ದಿದ್ದು ಆಶ್ಚರ್ಯವೇ ಸರಿ. ಇದು ಈ ತರ ಮುಂದುವರಿಬಾರ್ದು ಅನ್ಕೊಂಡ ಶಂತನು ಮುಂದಿನಸಲ ಗಂಗೆಯನ್ನ ತಡ್ದೇ ಬಿಟ್ಟ. ಆ ಕೊನೆಯ ಮಗುವೇ ಗಾಂಗೇಯ ಅಥ್ವಾ ಭೀಷ್ಮ.

ಇದೇ ತರ ಶ್ರೀ ಕ್ರಷ್ಣನ ಜನ್ಮ ಕೂಡಾ. ಹಾಗೆ ಎನೋ ಗೊತ್ತಿಲ್ಲ ರಹಸ್ಯವಾಗೇ ಶ್ರೀ ಕ್ರಷ್ಣ ಸಾಕು ತಂದೆ ತಾಯಿಯರ ಜೊತೆ ಬೆಳೆದ. ತನ್ನ ಸ್ವಂತ ಮಾವನನ್ನೇ ಕೊಲ್ಲೋದಕ್ಕೆ ಹುಟ್ಟಿದ್ದನ್ನ ಕೇಳದ್ರೆ ಆಶ್ಚರ್ಯವಾಗತ್ತೆ.

ಮೂಲ

2) ಸತ್ಯವತಿ/ಮತ್ಸ್ಯಗಂಧೆ ಹುಟ್ಟಿದ್ದು ಮೀನಿಂದ

ಮತ್ಸ್ಯಗಂಧೆ ಮೀನಿನಿಂದ ಹುಟ್ಟಿದ್ದಂತೆ. ಅವ್ಳ ದೇಹದ ವಾಸನೆ ಕೂಡಾ ಮೀನಿನದ್ದೆ. ಮೀನಿನ ವಾಸನೆಯಿಂದ ಹೂವಿನ ವಾಸನೆಗೆ ಬದ್ಲಾಗಿದ್ದು ಋಷಿ ಪರಾಶರನಿಂದ. 

ಮೂಲ

3) ಕೃಪಾಚಾರ್ಯ ಮತ್ತೆ ಕೃಪಿ ಹುಟ್ಟಿದ್ದು ಪೊದೆಯಿಂದ

ರಾಜ ಶಂತನು ಕಾಡಿನಲ್ಲಿ ಹೋಗ್ತಾ ಇರೋವಾಗ ಮಗು ಅಳೋ ಶಬ್ದ ಕೇಳ್ಸಕೊಳ್ತಾನೆ. ಆ ಎರಡು ಮಕ್ಕಳನ್ನ ಅರಮನೆಗೆ ತಂದು ಸಾಕಿ ಸಲಹಿ , ದೊಡ್ಡವರ್ನಾಗಿ ಮಾಡಿ ಸರ್ಯಾದ ವಿದ್ಯಾಭ್ಯಾಸ ಕೊಡ್ಸಿ , ಯೋಗ್ಯರನ್ನಾಗಿ ಮಾಡ್ತಾರೆ.

ಕಾಡಿನಲ್ಲಿ ವಾಸ ಮಾಡ್ತಾ ಇರೋ ಯಾರೋ ಒಬ್ಬ ಋಷಿ ಅಪ್ಸರೆಯನ್ನ ನೋಡಿ ವೀರ್ಯ ಸ್ಖಲನ ಮಾಡ್ಕೊಳ್ತಾನೆ.  ಆ ವೀರ್ಯ ಪೊದೆಯ ಮೇಲೆ ಬಿದ್ದು ಇವ್ರಿಬ್ರ ಜನ್ಮಕ್ಕೆ ಕಾರಣವಾಗತ್ತೆ.

ಮೂಲ

4) ದ್ರೋಣಾಚಾರ್ಯ ಹುಟ್ಟಿದ್ದು ಮಡಕೆಯಿಂದ

ದ್ರೋಣಾಚಾರ್ಯರದ್ದು ಕೂಡಾ ಇದೇ ಕತೆ.  ಭರದ್ವಜ ಅನ್ನೋ ಮಹರ್ಷಿ ಅಪ್ಸರೆಯನ್ನ ನೋಡ್ದಾಗ ವೀರ್ಯ ಸ್ಖಲನ ಮಾಡ್ಕೊಳ್ತಾನೆ.

ಆ ವೀರ್ಯ ಹಾಳಾಗ್ ಬಾರ್ದು ಅಂತ ಅದ್ನ ಒಂದ್ ಮಡ್ಕೆಯಲ್ಲಿಡ್ತಾನೆ ಅದ್ರಿಂದ ಹುಟ್ದೋನೆ ಪಾಂಡವರು ಮತ್ತು ಕೌರವರ ಬಿಲ್ವಿದ್ಯೆಯ ಗುರು ದ್ರೋಣಾಚಾರ್ಯ. 

ಮೂಲ

5) ಮಹರ್ಷಿ ವ್ಯಾಸ ಹುಟ್ಟಿದ್ದು ದ್ವೀಪದಲ್ಲಿ

ಮಹರ್ಷಿ ವ್ಯಾಸ ಮತ್ಸ್ಯಗಂಧೆ/ಸತ್ಯವತಿಯಿಂದ ಹುಟ್ಟಿದ್ದು. ಯಮುನಾ ನದಿ ತೀರದಲ್ಲಿ ಮಹರ್ಷಿ ಪರಾಶರ ಸತ್ಯವತಿಯನ್ನ ಮೋಹಿಸ್ತಾನೆ. ಆಗ ಸತ್ಯವತಿ ಕೆಲವು ವರಗಳನ್ನ ಕೇಳಿ ಪಡೀತಾಳೆ. ಅದ್ರಲ್ಲಿ ಒಂದು ತನ್ನ ದೇಹ ಮೀನಿನ ವಾಸನೆಯಿಂದ ಹೂವಿನ ವಾಸನೆಗೆ ಬರ್ಬೇಕಂತ, ಇನ್ನೊಂದು ಮಗು ಹುಟ್ಟಿದ ಮೇಲೂ ತಾನು ಕನ್ಯೆಯಾಗಿರ್ಬೇಕಂತ, ಇನ್ನೋಂದು ಹುಟ್ಟಿದ ಮಗು ಸರ್ವ ವಿದ್ಯಾ ಪಾರಂಗತನಾಗಿರಬೇಕಂತ. ಇವೆಲ್ಲಾ ಪರಾಶರರು "ತಥಾಸ್ತು" ಅಂತಾರೆ. ಆಗ ಅಲ್ಲೇ ಒಂದು ದ್ವೀಪ ಸೃಷ್ಟಿ ಮಾಡಿ ಸುತ್ತ ಮಂಜು ಕವಿಯೋ ಹಾಗೆ ಮಾಡಿ ಅಲ್ಲಿ ಸತ್ಯವತಿಯ ಜೊತೆ ಸೇರ್ತಾರೆ. ಆಮೇಲೆ ಅವತ್ತೇ ಕಾಡು ಕಪ್ಪು ಬಣ್ಣದ ಮಗು ಹುಟ್ಟತ್ತೆ. ಅವರೇ ಕೃಷ್ಣ ದ್ವೈಪಾಯನ ವ್ಯಾಸ ಮಹರ್ಷಿ. ಮಹಾಭಾರತ ಬರೆದ ಪರಮಜ್ಞಾನಿ. ಕೌರವ, ಪಾಂಡವರಿಗೆ ತಾತ.

ಮೂಲ

6) ಧೃತರಾಷ್ಟ್ರ, ಪಾಂಡು, ವಿದುರನ ಜನ್ಮ ಆಗಿದ್ದು ಸಿಂಹಾಸನಕ್ಕೋಸ್ಕರ

ಇವರುಗಳು ಹುಟ್ಟಿರೋದೆ ರಾಜ್ಯ ಆಳೋದಕ್ಕಂತ. ಕುರು ವಂಶದ ಸಿಂಹಾಸನಕ್ಕಾಗಿ ಒಬ್ಬ ಸಮರ್ಥನಾದ ಉತ್ತರಾಧಿಕಾರಿಯ ಅವಶ್ಯಕತೆ ಇರತ್ತೆ. ಈ ಮೊದಲಿದ್ದ ರಾಜ ಅಕಾಲಿಕ ಮರಣ ಹೊಂದಿ ಇಬ್ಬರು ಎಳೆವಯಸ್ಸಿನ ಪತ್ನಿಯರು ವಿಧವೆಯಾಗ್ತಾರೆ. ಮಹರ್ಷಿ ವ್ಯಾಸ ನೈಸರ್ಗಿಕವಾಗಿ ಜನ್ಮ ಪಡೆದಿಲ್ಲವಾದ್ದರಿಂದ ಅವನಿಗೆ ಕುರು ವಂಶದ ಸಿಂಹಾಸನಸಕ್ಕೇರುವ ಅರ್ಹತೆ ಇಲ್ಲವಾಗಿತ್ತು.ಅದ್ಕೆ ಇನ್ನು ಒಂಬತ್ತು ತಿಂಗಳ ಒಳಗೆ ಮಗು ಹುಟ್ಟಬೇಕಿತ್ತು. ರಾಜ ಸತ್ತು ಒಂಬತ್ತು ತಿಂಗಳ ಒಳಗೆ ರಾಜ್ಯವನ್ನ ಆಳೋ ಒಬ್ಬ ಅರಸ ಬರ್ಬೆಕು. ಅಂದಿನ ಕಾಲದ ನಿಯಮವಾಗಿತ್ತು. ಅದ್ಕಾಗಿ ರಾಜಮಾತಾ ಆದಷ್ಟು ಬೇಗನೇ ರಾಜ್ಯ ಆಳೋಕೆ ಗಂಡು ಮಗು ಬೇಕು ಅಂತ ನಿರ್ಧರಿಸಿದಳು.

ಲೈಂಗಿಕ ಸಂಭೋಗ ಮಾಡೋವಾಗ ರಾಣಿ ಕಣ್ಣು ಮುಚ್ಚಿದರ ಫಲವಾಗಿ ಧ್ರತರಾಷ್ಟ್ರ ಕುರುಡನಾಗಿ ಜನಿಸಿದ.

ಇನ್ನೊಂದು ರಾಣಿ ಹೆದರಿ ಹೆದರಿ ಲೈಂಗಿಕ ಸಂಭೋಗದಲ್ಲಿ ತೊಡಗಿದಾಗ ಒಬ್ಬ ನರಪೇತಲ ಅಥ್ವ ಅಂಜುಬುರುಕ ಮಗುವನ್ನ ಪಡೆದಳು. ಅವನೇ ಪಾಂಡು.

ದಾಸಿಯ ಜೊತೆ ಸೇರಿದಾಗ ಅವ್ಳು ಸರ್ಯಾಗಿ ಅನುಭವಿಸ್ದಾಗ ಒಬ್ಬ ಚತುರ ದಷ್ಟಪುಷ್ಟವಾದ ಮಗುವನ್ನ ಪಡೆದಳು. ಅವನೇ ವಿದುರ

ಮೂಲ

7) ಕರ್ಣ ಮತ್ತೆ ಪಾಂಡವರು ಹುಟ್ಟಿದ್ದು ದೇವತೆಗಳಿಂದ

ಮಾನವ ಮತ್ತೆ ದೇವರ ನಡುವಿನ ಸಂಬಂಧದಿಂದ ಜನಿಸಿದ ಕರ್ಣ ಮತ್ತೆ ಪಾಂಡವರು ಅಗಾಧವಾದ ಶಕ್ತಿಯನ್ನ ಹೊಂದಿದ್ದರು.

ಕುಂತಿ ಇನ್ನು ಹರೆಯದಲ್ಲೇ ಇರೋವಾಗ ಸೂರ್ಯ ದೇವನಿಂದ ಕರ್ಣನನ್ನ ಪಡೆದಳು. ಕರ್ಣನ ಚರ್ಮಕ್ಕೆ ಸೂರ್ಯನ ಪ್ರಖರ ಕಿರಣಗಳನ್ನ ತಡ್ಕೊಳ್ಳೋ ಶಕ್ತಿಯಿದೆಯಂತೆ. ನ್ಯಾಯಯುತವಾಗಿ ಮಗುವನ್ನ ಪಡೆಯದೇ ಇದ್ದುದರ ಫಲವಾಗಿ ಕುಂತಿ ಕರ್ಣನನ್ನ ಒಂದು ಬುಟ್ಟಿಯಲ್ಲಿ ಆ ಮಗುವನ್ನಿಟ್ಟು ನದಿಯಲ್ಲಿ ತೇಲಬಿಡ್ತಾಳೆ. 

ಪಾಂಡು ರಾಜನಿಗೆ ಮಕ್ಕಳಾಗಲ್ಲ ಅನ್ನೋ ವಿಷ್ಯ ತಿಳ್ದಾಗ ಕುಂತಿ ಮತ್ತೆ ಮಾದ್ರಿ ತಮ್ಗೆ ಗೊತ್ತಿರೋ ರಹಸ್ಯ ಮಂತ್ರಗಳನ್ನ ಜಪಿಸಿ ದೇವರುಗಳಿಂದ ಮಕ್ಕಳನ್ನ ಪಡೀತಾರೆ.

ಯಮನಿಂದ ಧರ್ಮರಾಜ, ವಾಯುನಿಂದ ಭೀಮ, ಇಂದ್ರನಿಂದ ಅರ್ಜುನ, ಅಶ್ವಿನಿ ದೇವತೆಗಳಿಂದ ನಕುಲ ಸಹದೇವನನ್ನ ಪಡೀತಾರೆ. 

ಮೂಲ

8) ಕೌರವರು ಹುಟ್ಟಿದ್ದು ಹೊಟ್ಟೆಕಿಚ್ಚಿಂದ

ಕುಂತಿಗೆ ಬೇಗ ಮಕ್ಕಳಾಗಿದ್ದನ್ನ ನೋಡಿ ಗಾಂಧಾರಿ ಹೊಟ್ಟೆಕಿಚ್ಚಿಂದ ತನ್ನ ಹೊಟ್ಟೆ ಹೊಡ್ಕೊತಾಳೆ. ಅದ್ರಿಂದ ಅವ್ಳ ಗರ್ಭ 101 ತುಂಡಾಗತ್ತೆ.

ಆ ತುಂಡುಗಳನ್ನ ಮಹರ್ಷಿ ವ್ಯಾಸ ಒಂದೊಂದು ಮಡ್ಕೆಯಲ್ಲಿ ಇಟ್ಟು ಸ್ವಲ್ಪ ಕಾಲ ಕಾಯುವಂತೆ ಹೇಳ್ತಾನೆ. ಅದ್ರಿಂದ ಹುಟ್ಟಿದಂತಹ ಮಕ್ಕಳೇ ಈ 101 ಜನ ಕೌರವರು. ಅವ್ರಲ್ಲಿ ಒಂದು ಹೆಣ್ಣು ಮಗು ದುಃಶಲಾ ಕೂಡಾ ಇತ್ತು.

ಮೂಲ

9) ಶಿಖಂಡಿ ಹುಟ್ಟಿದ್ದು ಹೆಣ್ಣಾಗಿ ಆಮೇಲೆ ಗಂಡಾಗಿದ್ದು ಗಂಧರ್ವನಿಂದ

ಲೈಂಗಿಕ ವ್ಯತ್ಯಯದಿಂದ ಹುಟ್ಟಿದ ಶಿಖಂಡಿ ಮೊದಲು ಹೆಣ್ಣಾಗೇ ಇದ್ದಿದ್ದಂತೆ. ಶಿವನ ವರದಂತೆ ನಂತರ ಗಂಡಾಗ್ತಾನೆ.

ದ್ರುಪದ ರಾಜನ ಮೂರ್ಖತನದಿಂದ ರಾಜ್ಯಕೊಬ್ಬ ಉತ್ತರಾಧಿಕಾರಿ ಬೇಕು ಅನ್ನೋ ಗುಂಗಲ್ಲಿ ಶಿಖಂಡಿಯನ್ನ ಮದ್ವೆಯಾಗ್ತಾನೆ. ಮೊದಲ ರಾತ್ರಿನೇ ಸತ್ಯಾನಾ ಅರಿತ ಶಿಖಂಡಿ ಸ್ಮಾಜಕ್ಕೆ ಹೆದ್ರಿ ಹಾಗೂ ಎರಡು ರಾಜ್ಯಗಳ ಮಧ್ಯೆ ನಡೀತಾ ಇರೋ ಯುದ್ದವನ್ನ ತಡೆಯೋದಕ್ಕೋಸ್ಕರ ಕಾಡಿಗೆ ಹೋಗಿ ಆತ್ಮಹತ್ಯೆ ಮಾಡೋ ಮನಸ್ಸು ಮಾಡ್ತಾಳೆ.

ಇದನ್ನರಿತ ಗಂಧರ್ವನೊಬ್ಬ ಶಿಖಂಡಿಯನ್ನ ಗಂಡನ್ನಾಗಿ ಪರಿವರ್ತನೆ ಮಾಡ್ತಾನೆ. ಅದ್ಕೊಸ್ಕರನೇ ಭೀಷ್ಮ ಶಿಖಂಡಿಯ ಎದುರು ಯುದ್ದ ಮಾಡಲ್ಲ. 

ಮೂಲ

10) ದ್ರುಪದನ ಸೇಡೀಗೆ ಸಹಾಯವಾಗಿ ದ್ರೌಪದಿ ಮತ್ತು ದ್ರಷ್ಟದ್ಯುಮ್ನ ಹುಟ್ಟಿದ್ದು ಯಜ್ಞಕುಂಡದಿಂದ

ಇವರಿಬ್ಬರು ಹುಟ್ಟಿರೋದೆ ಸೇಡನ್ನ ತೀರ್ಸಕೊಳ್ಳಕೆ. ಯಾವಾಗ ಪಂಚಾಲ ದೇಶದ ರಾಜನಾದ ದ್ರುಪದ ತನ್ನ ಸ್ನೇಹಿತ ದ್ರೋಣಾಚಾರ್ಯನ ಎದುರು ಸೋಲ್ತಾನೋ ಆವಾಗ್ಲೇ ದ್ವೇಷದ ಕಿಚ್ಚು ಹತ್ಕೊಂಡಿತ್ತು.

ಒಂದು ರಾಜ್ಯದ ಮಾನ ಮರ್ಯಾದೆಯನ್ನ ಉಳ್ಸೊದಕ್ಕೋಸ್ಕರಾನೇ ಇವರಿಬ್ಬರ ಜನ್ಮ ಆಗಿದೆ ಅಂತಾನೇ ಜನ ನಿರ್ಧರಿಸಿ ಬಿಟ್ಟಿದ್ರು. ಅದ್ರಂತೆ ರಾಜಗೌರವದೊಂದಿಗೆ ದ್ರಷ್ಟದ್ಯುಮ್ನನಿಗೆ ಎಲ್ಲ ತರದ ವಿದ್ಯೆಗಳನ್ನ ಕಲಸ್ತಾರೆ ಅದು ಕೂಡಾ ಯಾವ ರೀತಿ ದ್ರೋಣಾಚಾರ್ಯನನ್ನ ಸೋಲ್ಸಬೇಕಂತ.

ಹಾಗೆ ದ್ರೌಪದಿಗೆ ಅವರನ್ನ ಎದುರಿಸೋ ಪರಾಕ್ರಮಿಯನ್ನೇ ನೀನು ಮದ್ವೆಯಾಗ್ಬೇಕು ಅಂತ ನಿರ್ಧಾರ ಆಗತ್ತೆ. ಯಾದವರನ್ನ ತನ್ನ ಸಹೋದರರಂತೆ ತಿಳ್ಕೊಂಡ ದ್ರೌಪದಿ ಪಾಂಡವರನ್ನ ಮದ್ವೆಯಾಗ್ತಾಳೆ. 

ಮೂಲ

11) ಶಿಶುಪಾಲನ 3 ಕಣ್ಣು 4 ಕೈ ಸರಿಯಾಗಿದ್ದು ಕೃಷ್ಣನಿಂದ

ಹುಟ್ಟಿದಾಗ ಶಿಶುಪಾಲನ ರೂಪ ನೋಡಿದ್ರೆ ಯಾರ್ಗಾದ್ರೂ ಭಯ ಆಗ್ತಿತ್ತಂತೆ. ಅವರಪ್ಪ ಅಮ್ಮಾನೇ ಮಗೂನಾ ಬಿಸಾಕಕ್ಕೆ ಪ್ರಯತ್ನ ಪಾಟ್ಟರಂತೆ. ಆಗ ಆಕಾಶವಾಣಿಯಾಗಿ ಯಾರು ಮಗೂನ ಎತ್ತಿಕೊಂಡಾಗ ಅವನ ಮಿಕ್ಕಿದ ಕಣ್ಣು ಮತ್ತೆ ಕೈ ಬಿದ್ದೋಗತ್ತೋ ಆವರೇ ಈ ಮಗೂನ ಸಾಯ್ಸ್ತಾರೆ ಅಂತ. ಸ್ವಲ್ಪ ದಿನಗಳ ನಂತರ ಕೃಷ್ಣ ಈ ಮಗೂನ ಎತ್ಕೊಂಡಾಗ ಬಿತ್ತಂತೆ. ಆಗ ಶಿಶುಪಾಲನ ಅಮ್ಮ ಕೃಷ್ಣನಿಂದ ಒಂದು ವರ ಪಡ್ಕೊಂಡ್ಳು. ಅದೇನು ಅಂದ್ರೆ ಶಿಶುಪಾಲನ ಮೊದಲ 100 ತಪ್ಪುಗಳು ಕ್ಷಮೆಗೆ ಅರ್ಹರಾಗಿರತ್ತೆ. 101ನೇ ತಪ್ಪು ಮಾಡಿದ ತಕ್ಷಣ ಅವನು ಸಾಯ್ತಾನೆ ಅಂತ.

ಮೂಲ

ಮೈಮೇಲಿರೋ ಕೂದ್ಲು ಎದ್ದು ನಿಲ್ತು ಅಲ್ವಾ?