ಶ್ರಾವಣ ಮಾಸದ ದೈವಿಕ ಅವಧಿಯಲ್ಲಿ ಹಿಂದೂ ಭಾಂದವರು ಶಿವ ಮತ್ತು ಆತನ ಅವತಾರಗಳ ಪೂಜೆ ಮಾಡುವ ಆಚರಣೆಗಳನ್ನು ಹೊಂದಿದ್ದೇವೆ. ಆದರೆ ಇಲ್ಲಿರುವ  ಶಿವನ ಅವತಾರವನ್ನು ಈ ತಿಂಗಳಿನಲ್ಲಿ ಪೂಜಿಸಲ್ಪಡುವದಿಲ್ಲ ! ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಶಿವನ 19 ಅವತಾರಗಳು

ಎಲ್ಲಾ ಹಿಂದೂ ಪವಿತ್ರ ಗ್ರಂಥಗಳಲ್ಲಿ ಹೇಳಿರುವಂತೆ, ವೀರಭದ್ರ, ರುದ್ರ, ಭೈರವ, ಹನುಮಾನ್, ಮುಂತಾದವುಗಳನ್ನು ಒಳಗೊಂಡಂತೆ ಶಿವನ ಒಟ್ಟು 19 ಅಭಿವ್ಯಕ್ತಿಗಳು ಇವೆ. ಅವುಗಳಲ್ಲಿ ಒಂದನ್ನು ಹೊರತುಪಡಿಸಿ, ಎಲ್ಲವನ್ನು ಶ್ರಾವಣ ಪವಿತ್ರ ತಿಂಗಳಲ್ಲಿ ಪೂಜಿಸಲಾಗುತ್ತದೆ.

ಮಹಾಭಾರತದಲ್ಲಿ ಶಿವನ ಅವತಾರ

ಮಹಾಭಾರತದಲ್ಲೆ ಶಿವನ ಪಾತ್ರ ಅಷ್ಟೇನೂ ಪ್ರಸಿದ್ಧಿ ಹೊಂದಿಲ್ಲ.  ಆದರೆ ಶಿವನ ಅಭಿವ್ಯಕ್ತಿಯ ರೂಪದಲ್ಲೋಂದಾದ ಈ ಪಾತ್ರವು ಶಿವನ ಆಶೀರ್ವಾದದಿಂದ ಜನಿಸಿದ್ದೆಂಬುದು ಹೆಚ್ಚು ಜನರಿಗೆ ತಿಳಿದಿಲ್ಲ .

ಅಶ್ವಥ್ಥಾಮನೆಂಬ ಶಾಪಗ್ರಸ್ತ ಜೀವ

ಅವನ ಬುದ್ಧಿಶಕ್ತಿ, ದೇಹಶಕ್ತಿ ಮತ್ತು  ಸ್ನೇಹದ ಪ್ರತಿ ಅವನಿಗಿದ್ದ ನಿಷ್ಠೆ ಪ್ರಶ್ನಾತೀತವಾಗಿದ್ದರೂ , ಅವನು ಚಿರಂಜೀವಿ ಎಂಬ ಆಶೀರ್ವಾದ ಪಡೆದವನಾಗಿದ್ದರೂ ಒಬ್ಬ ಮುಗ್ಧ ಮಹಿಳೆಗೆ  ಅನ್ಯಾಯವೆಸಗಿದ  ಅಪರಾಧದಿಂದಾಗಿ  ಶ್ರೀ ಕೃಷ್ಣ ಪರಮಾತ್ಮನ ಶಾಪಕ್ಕೆ ಗುರಿಯಾಗಬೇಕಾಯಿತು.

ಶಿವನ ವರ

ದ್ವಾಪರಯುಗದ ಮಹಾಭಾರತದಲ್ಲಿ ಕಂಡುಬರುವ ಅಶ್ವತ್ಥಾಮನು, ಕೌರವ ಹಾಗೂ ಪಾಂಡವರ ಗುರುವಾದ ಗುರು ದ್ರೋಣರ ಮಗ. ದ್ರೋಣಾಚಾರ್ಯರಿಗೆ ಭಗವಾನ್ ಶಿವನ ಪ್ರತಿಇದ್ದ ಅಚಲ ಭಕ್ತಿಯ ಕುರುಹಾಗಿ ಹುಟ್ಟಿದ್ದ ಮಗು ಈ ಅಶ್ವಥ್ಥಾಮ. ಇವನು ಕಾಲ,ಕ್ರೋಧ,ಯಮ ಹಾಗು ಶಿವನ ಸಮ್ಮಿಳಿತನಾಗಿದ್ದು ಅಪೂರ್ವ ಯೋಧನಾಗಿದ್ದವನು.

ಅಶ್ವತ್ಥಾಮನ ತಪ್ಪುಗಳು

ಮಹಾಭಾರತದಲ್ಲಿ ಬರುವ ಪಾಪದ  ಪಾತ್ರಗಳಲ್ಲಿ ಅಶ್ವತ್ಥಾಮ ಕೂಡಾ ಒಂದು. ಅವನು ಕೌರವರ ಪರವಾಗಿ ಹೋರಾಡಿದನು. ಕೋಪದ ಸೆಳವಿಗೆ ಸಿಲುಕಿ ಕ್ಷಮಿಸಲಾಗದಂತಹ ಪ್ರಮಾದವನ್ನು ಮಾಡಿದವನು. ಅವನು ಶಾಪದ ಚಿಹ್ನೆ. ಈಗಲೂ ಕೂಡ ಹಿಂಸೆ ಅನುಭವಿಸುತ್ತಾ ಇಲ್ಲೆ ಎಲ್ಲೋ ಇರುವನೆಂದು ಜನ ನಂಬುತ್ತಾರೆ.

ಶಿವನ ಈ ಅವತಾರದ ಬೋಧನೆಗಳು

ಶಿವನ ಈ ಅವತಾರದ ಅವಾಂತರದಿಂದ  ನಮ್ಮ ಆಕ್ರೋಶವನ್ನು ಏಕೆ ಮತ್ತು ಹೇಗೆ ನಿಯಂತ್ರಿಸಬೇಕೆಂಬುದನ್ನು ಕಲಿಯಬಹುದಾಗಿದೆ.

ಪಾಂಡವರ ಕುಡಿಗಳ ಪ್ರಾಣಹರಣ

ಕುರುಕ್ಷೇತ್ರ ಯುದ್ದದಲ್ಲಿ ತನ್ನ ಮಿತ್ರ ದುರ್ಯೋಧನನಿಗೆ ಸೋಲಾಗಿದ್ದನ್ನು ಸಹಿಸದ ಅಶ್ವತ್ಥಾಮನು ಸೇಡಿನಿಂದ ಮದ್ಯರಾತ್ರಿ ಪಾಂಡವರ ಬಿಡಾರಕ್ಕೆ ತೆರಳಿ ಅಲ್ಲಿ ಸಾಲಾಗಿ ಮಲಗಿದ್ದ ಐವರನ್ನು ಕೊಂದು ಬಂದನು. ನಂತರದ ಜಾವದಲ್ಲಿ  ಕೃಷ್ಣನೊಂದಿಗೆ ಐವರೂ ಪಾಂಡವರನ್ನು ಕಂಡಾಗಲೇ ಅವನಿಗೆ ತಿಳಿದಿದ್ದು ತಾನು ಹತ್ಯೆಗೈದಿದ್ದು ಪಾಂಡವರ ಪುತ್ರರನ್ನು ಎಂದು.ಆಗಲೂ ಅವನು ಸಂಭ್ರಮಿಸಿದ್ದ ಎನ್ನಲಾಗುತ್ತದೆ !

ಅಶ್ವತ್ಥಾಮನ ಬ್ರಹ್ಮಾಸ್ತ್ರ ಕಾಂಡ

ಅರ್ಜುನನನ್ನು ಬಿಟ್ಟರೆ ವಿನಾಶಕಾರಿ ಅಸ್ತ್ರವನ್ನು ಪಡೆದವನೆಂದರೆ ಅಶ್ವತ್ಥಾಮನೊಬ್ಬನೇ. ರಾತ್ರಿ ತಾನು ಕೊಂದಿದ್ದು ಪಾಂಡವರ ಪುತ್ರರನ್ನು ಎಂದು ತಿಳಿದು ಅಶ್ವತ್ಥಾಮ ಅತಿಯಾಗಿ ಸಂಭ್ರಮಿಸಿದನು. ಪಾಂಡವರ ವಂಶ ಬೆಳಗುವವರು ಯಾರೂ ಇಲ್ಲವೆಂದೂ ಅವರು ಗೆದ್ದಿದ್ದರೂ ರಾಜ್ಯವಾಳಲು ಅವರಿಗೆ ಮುಂದೆ ಯಾರೂ ಇಲ್ಲವೆಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಅಬಿಮನ್ಯುವಿನ ಮಗು ಉತ್ತರೆಯ ಗರ್ಭದಲ್ಲಿರುವುದನ್ನು ಕೇಳಿ ಕ್ರೋದಿತನಾದ ಅಶ್ವತ್ಥಾಮ ಗರ್ಭ ನಾಶಮಾಡಲು ಬ್ರಹ್ಮಾಸ್ತ್ರವನ್ನು ಹೂಡಿದನು. ನಾರದಮುನಿಗಳು ಹಾಗೂ ವೇದವ್ಯಾಸರು ಆ ಅಸ್ತ್ರದಿಂದ ಮಹಾಅನಾಹುತ ಸಂಭವಿಸುವದೆಂದು ಅದನ್ನು ಹೂಡದಂತೆ ಪರಿ ಪರಿಯಾಗಿ ಬೇಡಿದರೂ ಕ್ರೋಧದಲ್ಲಿ ಅವರ ಮಾತನ್ನು ಲೆಕ್ಕಿಸದೆ ಅಸ್ತ್ರವನ್ನು ಚಲಾಯಿಸಿ ಬಿಟ್ಟನು.ಮುಂದಿನ ಅವನ ಶಾಪಕ್ಕೆ ಈ ಅಸ್ತ್ರವೇ ಕಾರಣವಾಯಿತು.

ಅಶ್ವತ್ಥಾಮ ಉತ್ತರೆ ಮತ್ತು ಪರಿಕ್ಷಿತರನ್ನು ಕೊಂದನು

ಹೂಡಿದ ಅಸ್ತ್ರವನ್ನು ಹಿಂಪಡೆಯಲು ಅರಿಯದ ಹಾಗೂ ಸೇಡಿನಿಂದ ಕುದಿಯುತ್ತರುವ ಅಶ್ವತ್ಥಾಮ ಉತ್ತರೆ ಮತ್ತು ಪಾಂಡವರ ಕೊನೆಯ ಕುಡಿಯಾದ ಪರಿಕ್ಷಿತರನ್ನು ನಿರ್ದೇಶಿಸಿ ಬಾಣವನ್ನು ಬಿಟ್ಟೇಬಿಟ್ಟನು.

ಅಶ್ವತ್ಥಾಮನ ‘ಮಣಿ’

ಮಣಿಯೊಂದಿಗೆ ಜನಿಸಿದ ಅಶ್ವತ್ಥಾಮನನ್ನು ಚಿರಂಜೀವಿಯಾಗಿಸಿತ್ತು ಆ’ಮಣಿ’. ಆದರೆ ಬ್ರಹ್ಮದೇವರ ವರದಿಂದ ಪಡೆದ ಬ್ರಹ್ಮಾಸ್ತ್ರವನ್ನು ಬಿಟ್ಟಾಗ ಕುಪಿತನಾದ ಶ್ರೀಕೃಷ್ಣನು ಆ ರಕ್ಷಾಮಣಿಯನ್ನು ಅಶ್ವತ್ಥಾಮನಿಂದ ಕಸಿದುಕೊಳ್ಳುವನು.

ಕೃಷ್ಣನ ಶಾಪ

ಪಾಂಡವರ ಪುತ್ರರನ್ನು ಕೊಂದಿದ್ದಕ್ಕಾಗಿ ಹಾಗೂ  ಉತ್ತರೆ ಮತ್ತು ಪಾಂಡವರ ಕೊನೆಯ ಕುಡಿಯಾದ ಪರಿಕ್ಷಿತರನ್ನು ನಿರ್ದೇಶಿಸಿ ಬ್ರಹ್ಮಾಸ್ತ್ರವನ್ನು ಹೂಡಿದ್ದಕ್ಕಾಗಿ ಕೃಷ್ಣನ ಶಾಪಕ್ಕೆ ಗುರಿಯಾಗಬೇಕಾಯಿತು. ಶಿವನು ಅವತಾರ ಎಂದು ಕರೆಯಲ್ಪಡುತ್ತಿದ್ದರೂ ಸಹ, ಅವನು ಎಂದಿಗೂ ಯಾವುದೇ ಮೂಲೆಯಲ್ಲಿ ಪೂಜಿಸಲ್ಪಡುವುದಿಲ್ಲ. ಅವನು ಚಿರಂಜೀವಿಯಾಗಿದ್ದರೂ ವಿಪರೀತ ನೋವು,ಅವಮಾನ,ನಿಂದನೆಗಳಿಗೆ ಗುರಿಯಾಗಿ ತನ್ನ ಜೀವನವನ್ನು ಸವೆಸಬೇಕು. 

ಇವು ಅಶ್ವತ್ಥಾಮನೆಂಬ ವೀರನ, ಅವತಾರ ಪುರುಷನ ಅವಿವೇಕ ಕಾರ್ಯಕ್ಕೆ, ಸರಿಯಾಗಿ ನಿಭಾಯಿಸದ ಕ್ರೋಧಕ್ಕೆ ಸಿಕ್ಕ ಪ್ರತಿಫಲವಾಗಿದೆ.