ಗುಣದಲ್ಲಿ ಮಲ್ಲಿಗೇನ ಮೀರಕ್ಕಾಗತ್ತಾ? ಆಹಾ ಮಲ್ಲಿಗೆ ಅಂತ ಮನಸ್ಸು ರೀ ನಿಮ್ದು ಅಂತಾರೆ. ಆ ಮಾತೇ ಸಾಕಲ್ಲವೇ ಮಲ್ಲಿಗೇ ವಿಶೇಷ ಹೇಳಕ್ಕೆ! ಮಲ್ಲಿಗೆ ಅಂದ್ರೆ ನಮಗೆ ಮೊದಲು ಹೊಳೆಯೋದೇ ಮೈಸೂರು ಮಲ್ಲಿಗೆ. ಆದ್ರೆ ಮಲ್ಲಿಗೆಯಲ್ಲಿ ಹಲವಾರು ವಿಧಗಳಿವೆ. ಕಾಡುಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಮಂಗಳೂರು ಮಲ್ಲಿಗೆ, ಮುತ್ತುಮಲ್ಲಿಗೆ… ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಮಲ್ಲಿಗೆ ಕೇವಲ ಮೂಸಿ ನೋಡಕ್ಕಷ್ಟೆ ಅಲ್ಲ ಇರೋದು. ಹಲವಾರು ಸದ್ಗುಣಗಳ ಹೂವಿದು. ಈ ಹೂವಿನ ವಿಶೇಷಗಳು ಒಂದೆರಡಲ್ಲ. ನಮಗೆ ಗೊತ್ತಿರೋ 19ರ ಪಟ್ಟಿ ಮಾಡಿದೀವಿ ನೋಡಿ:

1. ಮಲ್ಲಿಗೆ ಹೂವು ಮತ್ತು ಇದ್ರ ಎಣ್ಣೆಯಿಂದ ಕಾಸ್ಮೆಟಿಕ್ಗಳು ಮತ್ತೆ ಸುಗಂಧ ದ್ರವ್ಯಗಳನ್ನ ತಯಾರಿಸ್ತಾರೆ

 ಮೂಲ

2. ಮಲ್ಲಿಗೆ ಎಣ್ಣೆ ಮತ್ತದರ ಒಣ ಬೇರ್ನ ನಿದ್ದೆ ಬರ್ಸೋ ಔಷಧಿಗಳಲ್ಲಿ ಬಳಸ್ತಾರೆ

ಮೂಲ

3. ಮಲ್ಲಿಗೆಗೆ ಕಾಮೋತ್ತೇಜಕ ಗುಣಗಳೂ ಇವೆ. ಅಂಥ ಔಷಧಿಗಳಲ್ಲೂ ಬಳಸ್ತಾರೆ.

ಮೂಲ

4. ಹಳದಿ ಬಣ್ಣದ ಮಲ್ಲಿಗೆ ಸಹ ಉಂಟು, ಆದ್ರೆ ನಮ್ಮ ದೇಶದಲ್ಲಿ ಅದು ಸಿಗಲ್ಲ

ಮೂಲ

5. ಮಲ್ಲಿಗೆ ಹೂವು ಸುವಾಸನೆ ಬೀರೋದು ಸೂರ್ಯ ಮುಳುಗಿದ ಮೇಲೆ. ಚಂದ್ರ ಬೆಳಗ್ತಾ ಹೋದಂಗೆ ಇವುಗಳ ಪರಿಮಳನೂ ಹೆಚ್ಚಾಗ್ತಾ ಹೋಗುತ್ತೆ

ಮೂಲ

6. ಅರಳಿದ ಮಲ್ಲಿಗೆ ಹೂವಿಗಿಂತ ಮೊಗ್ಗೇ ಹೆಚ್ಚು ಸುವಾಸನೆ ಬೀರುತ್ತೆ

ಮೂಲ

7. ಮಲ್ಲಿಗೆ ಬಳ್ಳಿ 10-15 ಅಡಿ ಎತ್ತರದವರೆಗೂ ಬೆಳೆಯುತ್ತೆ, ವರ್ಷಕ್ಕೆ ಸರಿಸುಮಾರು 12-24 ಇಂಚು ಬೆಳೆಯುತ್ತೆ

ಮೂಲ 

8. ಕ್ರೀಮುಗಳು, ಮೈಕೈಗೆ ಹಚ್ಚಿಕೊಳೋ ತೈಲಗಳು, ಸೋಪುಗಳು ಹಾಗೂ ಶಾಂಪೂಗಳಲ್ಲಿ ಮಲ್ಲಿಗೆ ಎಣ್ಣೆ ಬಳಕೆಯಾಗುತ್ತೆ

ಮೂಲ

9. ಅನುರಾಗ, ಸಂತೋಷ ಹಾಗೂ ಸಂಸ್ಕೃತಿಯ ಸಂಕೇತ ಈ ಮಲ್ಲಿಗೆ ಹೂವು

ಈಗ ಗೊತ್ತಾಯ್ತಲ್ಲಾ ಗಂಡ ಯಾಕೆ ಹೆಂಡ್ತಿಗೆ ಮಲ್ಲಿಗೆ ಹೂವು ಕೊಡ್ತಾನೆ ಅಂತ?!

ಮೂಲ

10. ಆಯುರ್ವೇದದಲ್ಲಿ ನರಗಳನ್ನು ಪ್ರಶಾಂತಗೊಳಿಸಕ್ಕೆ, ಮಾನಸಿಕ ಸಮಸ್ಯೆಗಳನ್ನು ದೂರಮಾಡಕ್ಕೆ, ಟೆನ್ಷನ್, ತಲೆನೋವು, ಅಕಾಲ ಋತುಚಕ್ರ ಸಮಸ್ಯೆಗಳನ್ನು ಪರಿಹರಿಸಕ್ಕೆ ಮಲ್ಲಿಗೆ ಬಳಸ್ತಾರೆ.

ಮೂಲ

11. ಇದಕ್ಕೆ ಹೆರಿಗೆ ನೋವು ಕಡಿಮೆ ಮಾಡೋ ಗುಣ ಇದೆ

ಮಲ್ಲಿಗೆಯಲ್ಲಿ ಸೆಳೆವು ನಿರೋಧಿಸುವ (antispasmodic) ಗುಣ ಇದೆ. ಹಾಗಾಗಿ ಇದನ್ನು ಗರ್ಭಾಶಯದ ಸೆಳೆತ, ಪ್ರಸವ ವೇದನೆಯನ್ನು ತಡೆಯುವಲ್ಲಿ ಬಳಸ್ತಾರೆ.

ಮೂಲ

12. ಚೀನಾ ವೈದ್ಯಕೀಯ ಪದ್ಧತಿಯಲ್ಲಿ ಮಲ್ಲಿಗೆ ಹೂಗಳನ್ನು ಬಳಸ್ತಾರೆ. ಅಲ್ಲಿಯ ಮಲ್ಲಿಗೆ ಟೀ ಬಹಳ ಹೆಸರುವಾಸಿ.

ದೇಹದ ಟೆಂಪರೇಚರ್ ಕಡಿಮೆ ಮಾಡುವ ಗುಣ ಇದಕ್ಕಿದ್ದು, ಜ್ವರವನ್ನು ನಿಯಂತ್ರಿಸಬಹುದು. ಇದು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಹಾಗೂ ಆಂಟಿ ಟ್ಯೂಮರ್ ಗುಣಗಳನ್ನು ಹೊಂದಿದೆ.

ಮೂಲ

13. ಕಣ್ಣು ಚರ್ಮ ಎಲ್ಲಾ ಕೆಂಪಾಗಿದ್ದರೆ ಮಲ್ಲಿಗೆ ಅದನ್ನ ಕಡಿಮೆ ಮಾಡುವ ಗುಣ ಮಲ್ಲಿಗೆಗಿದೆ

ಮಲ್ಲಿಗೆಯ ಅಂಶಗಳಿರೋ ಔಷಧಿಗಳ್ನ ತೊಗೋಬೇಕು.

ಮೂಲ

14. ಬಾಯಿ ಅಲ್ಸರ್, ಗಂಟಲ ನೋವು ಹೋಗಬೇಕಾದರೆ ಮಲ್ಲಿಗೆ ಎಣ್ಣೆ + ನೀರಿನಿಂದ ಬಾಯಿ ಮುಕ್ಕುಳಿಸದರಾಯಿತು

ನಮ್ಮಲ್ಲಿ ನವ ಶಕ್ತಿ ತುಂಬಿ ಹೊಸ ಚೈತನ್ಯ ತರೋ ಗುಣ ಇದರ್ದು.

ಮೂಲ

15. ಮಾನಸಿಕ ಒತ್ತಡ ಕಡಿಮೆ ಮಾಡೋ ಗುಣ ಇದಕ್ಕಿದೆ

ಇದ್ರ ಸುವಾಸನೆ ನಮ್ಮಲ್ಲಿ ಆತ್ಮವಿಶ್ವಾಸ, ಆಶಾವಾದ ಹಾಗೆನೇ ಉದ್ರೇಕಗೊಳಿಸುತ್ತೆ.

ಮೂಲ

16. ಕರ್ನಾಟದಲ್ಲಿ 3 ತರಹ ಮಲ್ಲಿಗೆ ಫೇಮಸ್ಸು: ಮೈಸೂರು ಮಲ್ಲಿಗೆ, ಹಡಗಲಿ ಮಲ್ಲಿಗೆ ಮತ್ತೆ ಶಂಕರಪುರ ಮಲ್ಲಿಗೆ.

ಮೂಲ

17. ಮೈಸೂರಲ್ಲಿ ಮಲ್ಲಿಗೆ ಬೇಸಾಯ ಜನಪ್ರಿಯಗೊಳಿಸಿದ್ದು ಮೈಸೂರು ಒಡೆಯರು

ದಿನಾ ಸ್ವಲ್ಪ ನೀರಾಕಿ ಪೋಷಿಸಿದ್ರೆ ಸಾಕು ಮನೆ ಮುಂದೆ, ಹಿಂದೆ, ಕೈತೋಟ, ಗೇಟಿನ ಪಕ್ಕ ಹುಲುಸಾಗಿ ಬೆಳೆಯುತ್ತೆ. ಮೈಸೂರು, ಶ್ರೀರಂಗಪಟ್ಟಣ ಹಾಗೂ ಮಂಡ್ಯದಲ್ಲಿ ಹೆಚ್ಚಾಗಿ ಬೆಳೀತಾರೆ. ವರ್ಷಕ್ಕೆ ಎರಡು ಬೆಳೆ ತೆಗೀತಾರೆ.

ಮೂಲ

18. ಹಡಗಲಿ ಮಲ್ಲಿಗೆಗೆ ಪರಿಮಳ ಜಾಸ್ತಿ, ಇದು ಬೇಗ ಬಾಡಿಹೋಗಲ್ಲ

''ವಾಸನೆ ಮಲ್ಲಿಗೆ'' ಅಂತನೂ ಇದನ್ನು ಕರೀತಾರೆ. ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ಹೂವಿನಹಡಗಲಿ ಹೆಚ್ಚಾಗಿ ಬೆಳೀತಾರೆ.

 ಮೂಲ

19. ಶಂಕರಪುರ ಮಲ್ಲಿಗೆಗೆ ನೂರು ವರ್ಷಗಳ ಚರಿತ್ರೆ ಇದೆ

ಇನ್ನು ಶಂಕರಪುರ ಮಲ್ಲಿಗೆ ತನ್ನದೇ ಆದ ಭೌಗೋಳಿಕ ವಿಶಿಷ್ಟತೆಯನ್ನು ಒಳಗೊಂಡಿದೆ. ಉಡುಪಿ ಜಿಲ್ಲೆಯ ಶಂಕರಪುರ ಇದ್ರ ತವರೂರು. ನೂರು ವರ್ಷಗಳ ಹಿಂದೆ ಇದರ ಕೃಷಿ ಆರಂಭವಾಯಿತು. ಭಟ್ಕಳ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡದಲ್ಲಿ ಜಾಸ್ತಿ ಬೆಳೀತಾರೆ.

ಮೂಲ

ಇನ್ಯಾಕ್ ತಡ? ಒಂದ್ ಮೊಳ ಮಲ್ಲಿಗೆ ತೊಗೊಳಿ ಇವತ್ತೇನೇ!

ಮೂಲ