http://antekante.com

ಮನುಷ್ಯನ ದೇಹದ ಮೇಲೆ, ಮನಸ್ಸಿನ ಮೇಲೆ ಯಾವ್ಯಾವುದರ ಪ್ರಭಾವ ಇರುತ್ತೆ ಅಂತ ಇಲ್ಲೀವರೆಗೂ ವಿಜ್ಞಾನಕ್ಕೆ ಸರಿಯಾಗಿ ತೀರ್ಮಾನ ಮಾಡಕ್ಕಾಗಿಲ್ಲ.

ಆದರೆ ನಮ್ಮ ಹಿಂದಿನವರಿಗೆ ಅದರ ಗಂಧ ಸಾಕಷ್ಟು ಇತ್ತು ಅನ್ಬೋದು. ಅವರೇನು ಇಂಥ ಈಕ್ವೇಶನ್ನು, ಇಂಥ ಫಾರ್ಮುಲಾ ಅಂತ ಪಾಶ್ಚಾತ್ಯ ವಿಜ್ಞಾನದಲ್ಲಿ ಹೇಳೋ ಹಾಗೆ ಎಲ್ಲಾ ಹೇಳಲಿಲ್ಲ, ಆದರೂ ಕೆಲವು ಮುಖ್ಯವದ ವಿಷಯಗಳ್ನ ಅರ್ಥ ಮಾಡ್ಕೊಂಡಿದ್ರು. ಅದರಲ್ಲಿ ಒಂದು ಮುಖ್ಯವಾದ ಪರಿಕಲ್ಪನೆ ಅಂದ್ರೆ…

ಮನೆಯಲ್ಲಿ ಶೇಖರಣೆ ಆಗೋ ಕೆಟ್ಟ (ಅಥವಾ ನಕಾರಾತ್ಮಕ) ಶಕ್ತಿ

ಮನೇಲಿ ನಾವೇ ಅಥವಾ ಅವರಿವರು ಆಡೋ ಕೆಟ್ಟ ಮಾತುಗಳಿಂದ, ಕೆಲವೊಮ್ಮೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆ ನಡೆಯೋ ಕೆಟ್ಟ ಕೆಲಸಗಳಿಂದ, ನಮ್ಮ ಆಲೋಚನೆ ಇಂದ ಕೂಡ ಮನೇಲಿ ಕೆಟ್ಟ ಅಥವಾ ನಕಾರಾತ್ಮಕ ಶಕ್ತಿ ಸೇರಿಕೊಳ್ಳುತ್ತೆ. ಹೊರಗಿಂದ ಕೂಡ ಬಂದು ಸೇರಿಕೊಳ್ಳುತ್ತೆ. ಈ ಶಕ್ತಿ ಮನೆಯಲ್ಲಿ ಅಶಾಂತಿ ತರಬಹುದು, ತೀರಾ ಹೆಚ್ಚಾದರೆ ಏನೇನೋ ಏರುಪೇರುಗಳು ಆಗಬಹುದು.

ಇಂತಹ ಪ್ರಭಾವಗಳಿಂದ ದೂರ ಇರಬೇಕಾದರೆ ಮನೆಯಲ್ಲಿರೋ ನಕಾರಾತ್ಮಕ ಶಕ್ತಿಯನ್ನ ಮಟ್ಟ ಹಾಕಬೇಕು. ಆದರೆ ಹೇಗೆ ಮಟ್ಟಾ ಹಾಕೋದು. ಅದಕ್ಕೆ ಹಲವಾರು ವಿಧಾನಗಳ್ನ ಕಂಡ್-ಹಿಡ್ಕೊಂಡಿದ್ರು. ಅದರಲ್ಲಿ ಪ್ರತಿದಿನ ಎಲ್ಲರೂ ಮಾಡುವಂಥ ಕೆಲಸ ಯಾವುದು ಅಂದ್ರೆ… ಕಸ ಗುಡಿಸೋದು ಮತ್ತೆ ಮನೆ ಒರೆಸೋದು.

ದಿನಾ ಕಸ ಗುಡಿಸೋದ್ರಿಂದ ಮನೇಲಿರೋ ಕೆಟ್ಟ ಶಕ್ತೀನ ಬಡೆದು ಎಬ್ಬಿಸಿದಹಾಗೆ ಆಗುತ್ತೆ, ಶೇಖರಣೆ ಆಗಲ್ಲ

ಈ ಶಕ್ತಿಯನ್ನ ಕಣ್ಣಾರೆ ಯಾರೂ ಕಂಡಿಲ್ಲ. ಆದರೂ ಕಸ ಗುಡಿಸುವಾಗ ಅಲ್ಲಲ್ಲಿ ಶೇಖರಣೆ ಆಗಿರೋ ಕೆಟ್ಟ ಶಕ್ತಿ ಚೆಲ್ಲಾಪಿಲ್ಲಿ ಆದಂಗಾಗಿ ಮನೆಯಲ್ಲಿ ಒಂದೆ ಕಡೆ ಶೇಖರಣೆ ಆಗಲ್ಲ ಅನ್ನೋ ನಂಬಿಕೆ ನಮ್ಮಲ್ಲಿ ಬಹಳ ಹಿಂದಿನಿಂದ ಇದೆ.

ಹಾಗೇ ಒರೆಸೋದು ಕೂಡ ಬರಿ ನೆಲ ಕ್ಲೀನ್ ಮಾಡೊಕಲ್ಲ, ಉಳಿದಿರೋ ಕೆಟ್ಟ ಶಕ್ತೀನೂ ಅಳಿಸಿ ಹಾಕಕ್ಕೆ

3.bp.blogspot.com

ಹಿಂದಿನ ಕಾಲದವ್ರು ಗೋಮಯದಲ್ಲಿ ಮನೆ ಸಾರಿಸ್ತಿದ್ರು.

ಗೋಮಯದಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಇದೆ ಅಂತಾರೆ. ಈಗ ಮನೆಗೆ ಗೋಮಯ ಹಾಕೋರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ ಅನ್ನಬಹುದು. ಅದಕ್ಕೆ ಹೀಗೆ ದಿನ ಮಾಡಿ ನೋಡಿ:

ಮನೆ ಒರೆಸೋ ನೀರಲ್ಲಿ ಒಂದು ಹಿಡಿ ಕಲ್ಲುಪ್ಪು ಹಾಕಿ ಮನೆಯೆಲ್ಲಾ ಸಾರಿಸಿ. ಆಗ ನೋಡಿ ಅವತ್ತೆಲ್ಲಾ ನಿಮ್ಮನೇಲಿ ಎಲ್ರೂ ಎಷ್ಟು ಲವಲವಿಕೆಯಿಂದ ಇರ್ತೀರಿ ಅಂತ.

ಇದನ್ನೆಲ್ಲ ವಿಜ್ಞಾನಿಗಳಿಗೆ ಹೇಳಿದರೆ ಅವರು ಹೇಳೋದು ಒಂದೇ: "ಇದೆಲ್ಲ ಮೂಢನಂಬಿಕೆ". ಆದರೆ ನಿಜಕ್ಕೂ ನೋಡಿದರೆ ವಿಜ್ಞಾನ ಇದನ್ನೆಲ್ಲ ಅರ್ಥ ಮಾಡ್ಕೊಳೋಷ್ಟು ಇನ್ನೂ ಬೆಳೆದಿಲ್ಲ.