ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರು ಕನ್ನಡಿಗರಷ್ಟೆ ಅಲ್ಲ, ಪ್ರಪಂಚವೇ ಮರೆಯುವಂತಿಲ್ಲ. ಅವರು ಮಾಡಿದ ಕೆಲಸ ಅಷ್ಟಿಷ್ಟಲ್ಲ.

markrajarathnam

ತಮ್ಮ 43ನೇ ವಯಸ್ಸಿನಲ್ಲಿ ಅವರು ಆಗಲೇ 25 ವರ್ಷ ರಾಜ್ಯಭಾರ ಹೊತ್ತಿದ್ದಾಗಿತ್ತು.

8 ಆಗಸ್ಟ್ 1927ರಂದು ತಮ್ಮ ಪ್ರಜೆಗಳಿಗೆ ಈ ಸುಂದರವಾದ ಪತ್ರವನ್ನು ಬರೆದು ಎಲ್ಲರ ಮನಸ್ಸು ಗೆದ್ದಿದ್ದರು:

flickr/churumuri

ಕೃಷ್ಣರಾಜ ಒಡೆಯರಿಗೆ ಬೊಟ್ಟು ಮಾಡಿ ಅವರು ಅದು ಮಾಡಲಿಲ್ಲ ಇದು ಮಾಡಲಿಲ್ಲ ಅನ್ನಕ್ಕೆ ಸಾಧ್ಯವೇ ಇಲ್ಲ.

ಅವರು "ಪ್ರತಿಯೊಬ್ಬರೂ ಸುಖವಾಗಿರಲೆಂದು ಹೃದಯದಲ್ಲಿ ಹಾರೈಸಿ"ದ್ದು ಇವತ್ತಿನ ದಿನದ ರಾಜಕಾರಣಿಗಳು ಹಾರೈಸಿದಂತಲ್ಲ.

1927ರ ಒಳಗೆ ಅವರು ಏನೇನು ಸಾಧಿಸಿದ್ರು ನೋಡಿ:

 • 1902- ನೀರಿನಿಂದ ವಿದ್ಯುತ್ ಉತ್ಪಾದನೆ ಯೋಜನೆ (ಶಿವನಸಮುದ್ರ)
 • 1903 – ಕಣ್ಣಿನ ಚಿಕಿತ್ಸೆಗಾಗಿ ಶುರುವಾದ ಜಗತ್ತಿನ ಮೊಟ್ಟಮೊದಲ ಆಸ್ಪತ್ರೆಗಳಲ್ಲಿ ಒಂದಾದ ಮಿಂಟೋ ಕಣ್ಣಾಸ್ಪತ್ರೆ (ಬೆಂಗಳೂರು)
 • 1905 – ಬೆಂಗಳೂರು ಭಾರತದಲ್ಲೇ ಮೊಟ್ಟಮೊದಲು ಕರೆಂಟಿಂದ ನಡೆಯುವ ಬೀದಿ ದೀಪಗಳನ್ನು ಪಡೆದ ಪಟ್ಟಣವಾಯಿತು
 • 1907 – ವಾಣಿವಿಲಾಸ ಸಾಗರ ಎಂಬ ಹೆಸರಿನ ಕರ್ನಾಟಕದ ಮೊಟ್ಟಮೊದಲ ಅಣೆಕಟ್ಟಿನ ಉದ್ಘಾಟನೆ (ಚಿತ್ರದುರ್ಗ)
 • 1907 – ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಎಂಬ ಹೆಸರಿನಲ್ಲಿ ಪ್ರಜಾಪ್ರಭುತ್ವದೆಡೆಗೆ ಇಂಡಿಯಾದಲ್ಲೇ ಮೊಟ್ಟಮೊದಲ ಹೆಜ್ಜೆ
 • 1909 – ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆ (ಬೆಂಗಳೂರು)
 • 1909 – ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಬಾಯ್ ಸ್ಕೌಟ್ಸ್ ಸಂಸ್ಥೆ ಸ್ಥಾಪನೆ: ಮೈಸೂರು ಬಾಯ್ ಸ್ಕೌಟ್ಸ್
 • 1913 – ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸ್ಥಾಪನೆ
 • 1915 – ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ (ಬೆಂಗಳೂರು)
 • 1916 – ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ, ಯುವರಾಜ ಕಾಲೇಜು ಸ್ಥಾಪನೆ (ಮೈಸೂರು), ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ
 • 1917 – UVCE ಸ್ಥಾಪನೆ, ಮೈಸೂರು ಸ್ಟೇಟ್ ರೈಲ್ವೆ ಸ್ಥಾಪನೆ, ಬೆಂಗಳೂರು ಶ್ರೀಗಂಧದ ಎಣ್ಣೆ ಫ್ಯಾಕ್ಟರಿ ಸ್ಥಾಪನೆ, ಮಹಾರಾಣಿ ಸೈನ್ಸ್ ಕಾಲೇಜು ಸ್ಥಾಪನೆ (ಮೈಸೂರು)
 • 1918 – ಮರ ಸಂಸ್ಕರಣೆ ಫ್ಯಾಕ್ಟರಿ ಸ್ಥಾಪನೆ (ಭದ್ರಾವತಿ), ಮೈಸೂರು ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ ಸ್ಥಾಪನೆ
 • 1921 – ಲಲಿತಮಹಲ್ ಅರಮನೆ ಉದ್ಘಾಟನೆ
 • 1923 – ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ (ಭದ್ರಾವತಿ, ಆಗಿನ ಹೆಸರು ಮೈಸೂರು ಐರನ್ ವರ್ಕ್ಸ್)
 • 1924 – ಕೃಷ್ಣರಾಜ ಸಾಗರ ಅಣೆಕಟ್ಟು ಉದ್ಘಾಟನೆ, ಮೈಸೂರು ಮೆಡಿಕಲ್ ಕಾಲೇಜು ಸ್ಥಾಪನೆ
 • 1925 – ಕೃಷ್ಣರಾಜನಗರ ಸ್ಥಾಪನೆ (ಕಾವೇರಿಯಲ್ಲಿ ನೆರೆ ಬಂದು ಎಡತೊರೆ ಕೊಚ್ಚಿಕೊಂಡು ಹೋದ ನಂತರ)
 • 1927 – ಮೈಸೂರಿನ ಕೃಷ್ಣರಾಜೇಂದ್ರ (ಕೆ.ಆರ್.) ಆಸ್ಪತ್ರೆ ಸ್ಥಾಪೆನೆ

ಇಂಥ ರಾಜಕಾರಣಿ ಇವತ್ತು ನಮಗೆ ಸಿಗಕ್ಕೆ ಸಾಧ್ಯ ಇದ್ಯಾ?

ಸೆಲ್ಯೂಟ್ ಸಾರ್!