http://antekante.com

ಮನುಷ್ಯನ ದೇಹ ಮತ್ತು ಮನಸ್ಸಿನ ಮ್ಯಾಲೆ ಯಾವು ಯಾವ ರೀತಿ ಪ್ರಭಾವ ಬಿರ್ತಾವು ಅಂತ ವಿಜ್ಞಾನಕ್ಕ ಇಲ್ಲಿತನಕಾನೂ ಸರಿಯಾಗಿ ನಿರ್ಧರಿಸಾಕಾಗಿಲ್ಲ. 

ಆದ್ರ ನಮ್ಮ ಹಿರಿಕರು ಅದರ ಬಗ್ಗೆ ಚೊಲೊತ್ತಂಗ ತಿಳ್ಕೊಂಡಿದ್ರು ಅಂತ ಹೇಳ್ಬಹುದು. ಪಾಶ್ಚಾತ್ಯ ವಿಜ್ಞಾನಿಗಳು ಹೇಳಂಗ ಸಮೀಕರಣ, ಸೂತ್ರ ಅಂತೆಲ್ಲ ಇವರು ಹೇಳಂಗಿಲ್ಲ. ಆದರ ಕೆಲವೊಂದು ಮುಖ್ಯವಾದ ವಿಷಯಗಳನ್ನ ತಿಳಕೊಂಡಿದ್ರು. ಅದ್ರಾಗೊಂದು ಮುಖ್ಯವಾದ ಪರಿಕಲ್ಪನೆ ಏನಂದ್ರ………

ಮನ್ಯಾಗ ಕೂಡ್ಕೊಳ್ಳುವಂತ ಕೆಟ್ಟ (ನಕಾರಾತ್ಮಕ) ಶಕ್ತಿ

ಮನ್ಯಾಗಿರೋರು ಮಾತಾಡುವಂತ ಕೆಟ್ಟ ಮಾತಿಂದ, ಕೆಲವ ಸರ್ತಿ ಗೊತ್ತಿದ್ದೊ ಗೊತ್ತಿಲ್ದೆನೋ ಆಗೊ ಕೆಟ್ಟ ಕೆಲಸದಿಂದ, ನಮ್ಮಲ್ಲಿರೋ ಯೋಚನೆಗಳಿಂದ ಸಹ ಕೆಟ್ಟ/ನಕಾರಾತ್ಮಕ ಶಕ್ತಿಗಳು ಮನ್ಯಾಗ ಸೇರ್ಕೊತಾವು. ಅಲ್ದ ಹೋರಗಿಂದಾನೂ ಬಂದ ಸೇರ್ತಾವು. ಆ ಶಕ್ತಿ ಮನ್ಯಾಗ ಅಶಾಂತಿಯನ್ನ ಉಂಟಮಾಡ್ತತಿ, ಇದ ಅತೀಯಾದ್ರ ಮನ್ಯಾಗ ಏನೆನೋ ವ್ಯತ್ಯಾಸ ಹುಟ್ಕೊಬಹುದು.

ಇಂತಾದ್ರಿಂದ ದೂರ ಇರ್ಬೇಕಾದ್ರ ನಕಾರಾತ್ಮಕ ಶಕ್ತಿಗಳನ್ನ ಮನಿಂದ ಒದ್ದ ಓಡಿಸ್ಬೇಕು, ಆದ್ರ ಇವನ್ನೆಲ್ಲ ಹ್ಯಾಂಗ ಕಿತ್ತಾಕೊದು. ಇದಕ್ಕಂತ ಸುಮಾರು ವಿಧದ ವಿಧಾನಗಳನ್ನ ಕಂಡ್ಕೊಂಡಾರ. ಅದ್ರಾಗ ಒಂದ ಕೆಲಸಾನ ಎಲ್ಲಾರು ಪ್ರತಿದಿನಾನೂ ಮಾಡ್ತಾರ…. ಅದ್ಯಾದಂದ್ರ ಮನಿನ ಕಸಾ ಹೊಡದು ನೆಲಾ ಒರಸೋದು……

ಪ್ರತಿದಿನ ಕಸ ಹೊಡಿಯೋದ್ರಿಂದ ಮನ್ಯಾಗಿನ ಕೆಟ್ಟ ಶಕ್ತಿಗಳನ್ನ ಹೊಡದ ಎಬಸ್ದಂಗಾಕ್ಕತಿ, ಸೇರಕೊಳ್ಳಾಕಾಗಂಗಿಲ್ಲ.  

ಯಾರು ಈ ಶಕ್ತಿನ ಕಣ್ಣಾರೆ ಕಂಡಿರಂಗಿಲ್ಲ. ಕಸ ಹೊಡೆಬಕಾರ ಅಲ್ಲಲ್ಲೆ ಸೇರ್ಕೊಂಡಿರೋ ಕೆಟ್ಟ ಶಕ್ತಿಗಳೆಲ್ಲ ಹಾಳಾಗಿ ಮನ್ಯಾಗ ಒಂದ ಕಡೆ ಕೋಡ್ಕೊಂಡಿರಾಕಾಗಲ್ಲ, ಅನ್ನೋ ನಂಬಿಕೆ ನಮ್ಮೊಳಗ ಬಾಳ ಹಿಂದಿದಾನ ಐತಿ..

ಹಂಗಾ…… ಕಸಾ ಹೊಡದ ಮ್ಯಾಲೆ ನೆಲ ಒರಸೋದು ಸ್ವಚ್ಛ ಮಾಡಾಕಲ್ಲ, ಕಸಾ ಹೋಡದ ಮ್ಯಾಲೂ ಉಳ್ಕೊಂಡಿರೋ ಕೆಟ್ಟ ಶಕ್ತಿನ ಹೋಗಸಾಕ 

ಹಿಂದಿನ ಕಾಲದಾಗ ಮನಿನ ಸಗಣಿಲೆ ಬಳಿತಿದ್ರು…..

ಸಗಣ್ಯಾಗ ಬಾಳಷ್ಟು ಧನಾತ್ಮಕ  ಶಕ್ತಿ ಇರ್ತತಿ. ಈಗ ಸಗಣಿಯಿಂದ ಮನಿ ಸಾರಿಸೋರು ಬಾಳ ಕಡಿಮೆ ಅನಬಹುದು. ಈ ಕಾರಣಕ್ಕ ದಿನಾಲೂ ಹಿಂಗ ಮಾಡಿ ನೋಡ್ರಿ.

ಮನ್ಯಾಗ ನೆಲ ಒರಸಬಕಾರ ನೀರಿನ್ಯಾಗ ಒಂದ ಹಿಡಿ ಹಳಕುಪ್ಪ ಹಾಕಿ ಒರಸ್ರಿ…. ಅಮ್ಯಾಲ ನೋಡ್ರಿ ನಿಮ್ಮ ಮನ್ಯಾಗ ಎಲ್ಲಾರು ಅವತ್ತಿನ ದಿನ ಎಷ್ಟ ಲವಲವಿಕೆಯಿಂದ ಇರ್ತಾರ ಅಂತ…..

ಇದನ್ನೆಲ್ಲನು ವಿಜ್ಞಾನಿಗಳ ಹತ್ರ ಹೇಳಿದ್ರ “ ಇದೆಲ್ಲ ಮೂಢನಂಬಿಕೆ” ಅಂತ ಹೇಳ್ತಾರಷ್ಟ. ಆದ್ರ ಈ ಸತ್ಯಗಳನ್ನ ಅರ್ಥ ಮಾಡ್ಕೊಳ್ಳಷ್ಟು ವಿಜ್ಞಾನ ಇನ್ನು ಬೆಳದಿಲ್ಲ….