http://4.bp.blogspot.com/-3jlaI2vNR8g/Ugmu48hsViI/AAAAAAAAZPA/yXNSRpOIMi8/s1600/1.JPG

ಮೈಸೂರು ಬೆಂಗಳೂರಿಗೆ ಚುಕು ಬುಕು ಟ್ರೈನಲ್ಲಿ ಓಡಾಡೋರಿಗೆ ಮದ್ದೂರ್ ವಡೆ ಅಚ್ಚುಮೆಚ್ಚು. ಮದ್ದೂರ್ ವಡೆ ಸಿಕ್ಕಾಪಟ್ಟೆ ಮಾರಾಟ ಆಗೋದೇ ಈ ಮೈಸೂರ್ ಬೆಂಗಳೂರ್ ಟ್ರೈನಲ್ಲಿ. ಎಷ್ಟೋ ಜನ ಈ ಟ್ರೈನಲ್ಲಿ ಮದ್ದೂರ್ ವಡೆ ಮಾರ್ಕೊಂಡೆ ತಮ್ಮ ಜೀವನ ನಡುಸ್ತಿದಾರೆ. ಹಾಗಾದ್ರೆ ಈ ಮದ್ದೂರ್ ವಡೆ ಅಂತ ಹೆಸರು ಯಾಕೆ ಬಂತು ಅಂತ ತಿಳ್ಕೊಳನ ಬನ್ನಿ.

ಮದ್ದೂರ್ ವಡೆ ಅಂತ ಹೆಸ್ರು ಕೊಟ್ಟಿದ್ದು ಮಂಗಳೂರ್ ಅಡಿಗೆ ಭಟ್ಟ

ಮೂಲ

1881 ರಲ್ಲಿ ಬೆಂಗಳೂರಿಂದ ಮಂಗಳೂರಿಗೆ ಟ್ರೈನ್ ಶುರುವಾಯ್ತು. ಒಬ್ಬ ಅಡಿಗೆ ಭಟ್ಟ ಒಂದು ಕ್ಯಾಂಟೀನ್ ಶುರು ಮಾಕೊಂಡ, ಈ ಕ್ಯಾಂಟೀನಲ್ಲಿ ಇಡ್ಲಿ, ಕಾಫಿ, ಟೀ, ಬೋಂಡಾ, ಸಾಂಬಾರ್ ಎಲ್ಲ ಮಾಡಿ ಟ್ರೈನಲ್ಲಿ ಓಡಾಡೋರಿಗೆ ಮಾರ್ತಿದ್ದ. ಒಂದು ದಿನ ಕಡ್ಲೆ ಹಿಟ್ಟು ಕಾಲಿ ಆಗೋಗುತ್ತೆ, ಬೋಂಡಾ ಮಾಡಕ್ಕಾಗಲ್ಲ. ಏನ್ ಮಾಡೋದು… ಭಟ್ಟ ಯೋಚ್ನೆ ಮಾಡಿ ಈರುಳ್ಳಿ ಹಚ್ಚಿ, ರವೆ, ಉಪ್ಪು, ನೀರ್ ಹಾಕಿ ಕಲಸಿ ಆಮೇಲೆ ತಟ್ಟಿ ಎಣ್ಣೇಲಿ ಕರಿದು ಅದನ್ನೇ ಮಾರಕ್ಕೆ ತೊಗೊಂಡೋದ. ಆಗ ಜನ ಇದೇನು ಅಂತ ಕೇಳುದ್ರು… ಸುಮ್ನೆ ಬಾಯಿಗೆ ಮದ್ದೂರು ಅಂತ ಹೆಸರು ಬಂತು ಮದ್ದೂರ್ ವಡೆ ಅಂತ ಹೇಳ್ದ! ಅವತ್ತಿಂದ ಬಾಯಿಂದ ಬಾಯಿಗೆ ಇಡೀ ಕರ್ನಾಟಕ ಫುಲ್ ಫೇಮಸ್ಸಾಯ್ತು ಈ ಮದ್ದೂರ್ ವಡೆ.

ಮೂಲ

ಇಷ್ಟೇ ಸ್ವಾಮಿ… ಮಂಗಳೂರಿನ ಭಟ್ಟನ ಬಾಯಲ್ಲಿ ಸುಮ್ಮನೆ ಬಂದ ಹೆಸರು ಇವತ್ತು ಫೇಮಸ್ಸಾಗಿರೋದು… ಎಂತ ಬಾಯಿ ಮಾರ್ರೆ ಆ ಭಟ್ಟಂದು…