http://www.mygodpictures.com/wp-content/uploads/2015/11/Devi-Revati-Greets-Lord-Balarama-fb509.jpg

ಮಹಾಭಾರತದ ಸೂತ್ರಧಾರಿ ಕೃಷ್ಣ… ಅವನ ಅಣ್ಣ ಬಲರಾಮ ಅಂತ ಸಾಮಾನ್ಯವಾಗಿ ಎಲ್ರಿಗೂ ಗೊತ್ತು. ಈ ಅಣ್ಣ- ತಮ್ಮಂದಿರು ಒಂಥರಾ ’ಪ್ರಾಣವೊಂದು ದೇಹವೆರಡು’ ಅಂತಾರಲ್ಲ… ಹಾಗ್ ಬೆಳೆದೋರು. ಇವರಿಬ್ಬರ ಬಾಲ್ಯದ ಬಗ್ಗೆ ಇರೋ ಕಥೆಗಳು ಲೆಕ್ಕಕ್ಕೇ ಇಲ್ಲ. ಕೃಷ್ಣನ ಜೊತೆ ಸೇರಿ ಬೆಣ್ಣೆ ಕದ್ದಿದ್ದು, ಗೋಪಿಕಾ ಸ್ತ್ರೀಯರನ್ನ ಗೋಳ್ ಹೊಯ್ಕೊಂಡಿದ್ದು, ಸಾಂದೀಪನಿ ಗುರುಕುಲದಲ್ಲಿ ಒಟ್ಟಿಗೇ ಕಲಿತಿದ್ದು, ಕಂಸ ಕಳಿಸಿದ್ದ ಕುಸ್ತಿ ಪಟುಗಳನ್ನ ನೋಲಿಸಿದ್ದು… ಇದೆಲ್ಲಾ ನಮಗೆ ಗೊತ್ತೇ ಇದೆ.

ಇನ್ನು ಕೃಷ್ಣ ಮತ್ತು ಅವನ ಪ್ರೇಯಸಿಯರ ಬಗೆಗಿನ ಕಥೆಗಳು ಎಲ್ಲೆಲ್ಲೂ ಪ್ರಚಲಿತದಲ್ಲಿವೆ. ಆದ್ರೆ, ಕೃಷ್ಣನ ಅಣ್ಣ ಬಲರಾಮನ ಬಗ್ಗೆ ಈ ರೀತಿ ಕಥೆ ಗೊತ್ತಿಲ್ಲ. ಅದೇ ಗೊತ್ತಿಲ್ಲ ಅಂದ್ಮೇಲೆ, ಅವನ ಹೆಂಡತಿ ರೇವತಿ ಬಗ್ಗೆ ಗೊತ್ತಿರೋದು ಸ್ವಲ್ಪ ಡೌಟೇ, ಅವಳ ಬಗ್ಗೆ ನಾವು ನಿಮಗೆ ಹೇಳ್ತೀವಿ… ಕೇಳಿ.

ಬಲರಾಮನ ಹೆಂಡ್ತಿ ರೇವತಿ ಬಗ್ಗೆ ಒಂದಿಷ್ಟು…

ಭಾಗವತದ ಪ್ರಕಾರ, ’ರೇವತಿ’ನ ಬಲರಾಮನ ಹೆಂಡತಿ ಅಂತಾರೆ. ರೇವತಿ ಸೂರ್ಯವಂಶದ ರಾಜರಲ್ಲಿ ಒಬ್ಬನಾದ ಕಾಕುದ್ಮಿಯ ಮಗಳು. ಕಾಕುದ್ಮಿಯನ್ನು ’ರೈವತ’ ಅಂತಾನೂ ಕರೀತಿದ್ರು. ಮಹಾಕವಿ ಕಾಳಿದಾಸ ಅವನ ಪದ್ಯಗಳಲಿ ರೇವತಿಯ ಅಪ್ರತಿಮ ಸೌಂದರ್ಯಾನ ಬಹಳ ಚೆನ್ನಾಗಿ ವರ್ಣಿಸಿದ್ದಾನೆ. ಕಾಳಿದಾಸನ ಪ್ರಕಾರ, ರೇವತಿಯ ಹಳದಿ-ಕೇಸರಿ ಮಿಶ್ರಿತ ಬಣ್ಣದ ಸುಂದರವಾದ ಕಣ್ಣುಗಳು ಅವಳ ಸೌಂದರ್ಯವನ್ನ ಹೆಚ್ಚಿಸ್ತಿತ್ತಂತೆ!

ಭೂಲೋಕದಲ್ಲೇ ಅತೀ ಬಲಶಾಲಿಯನ್ನ ಮದ್ವೆಯಾಗೋ ಆಸೆ ರೇವತಿಗಿತ್ತು!

ತನ್ನ ಹಿಂದಿನ ಜನ್ಮದಲ್ಲಿ ರೇವತಿ, ರಾಜ ಚಕ್ಷುಷ ಮನುವಿನ ಮಗಳು ’ಜ್ಯೋತಿಷ್ಮತಿ’ ಆಗಿ ಹುಟ್ಟಿದ್ಳು. ಆ ಜನ್ಮದಲ್ಲಿ, ಭೂಲೋಕದಲ್ಲೇ ಅತ್ಯಂತ ಬಲಶಾಲಿಯನ್ನ ಮದುವೆಯಾಗ್ಬೇಕು ಅನ್ನೋದು ಅವಳ ಮಹದಾಸೆಯಾಗಿತ್ತು.

ಮಗಳು ಮದುವೆ ವಯಸ್ಸಿಗೆ ಬಂದಾಗ, ರಾಜ ಕಾಕುದ್ಮಿ ಅವನ ಮಗಳಿಗೆ ಯೋಗ್ಯನಾದ ವರನನ್ನು ಸೂಚಿಸು ಅಂತ ಕೇಳಕ್ಕೆ ಅವಳ ಜೊತೆ ಬ್ರಹ್ಮಲೋಕಕ್ಕೆ ಹೋಗಿದ್ನಂತೆ. ಹೀಗೆ ಬ್ರಹ್ಮಲೋಕಕ್ಕೆ ಬಂದ ಕಾಕುದ್ಮಿಗೆ ಬ್ರಹ್ಮದೇವ ನಿನ್ನ ಮಗಳಿಗೆ ಯೋಗ್ಯವಾಗಿರೋ ಒಬ್ಬನೇ ಒಬ್ಬ ವರ ಅಂದ್ರೆ, ವಸುದೇವ ದೇವಕಿಯರ ಹಿರಿಯ ಮಗ ಬಲರಾಮ ಮಾತ್ರ ಅಂತ ಹೇಳ್ತಾರೆ.

ಕಾಕುದ್ಮಿ ಭೂಲೋಕಕ್ಕೆ ಹಿಂತಿರುಗಿ ಬರೋ ಹೊತ್ತಿಗೆ 27 ಯುಗಗಳೇ ಕಳೆದು ಹೋಗಿತ್ತು!

ಕಾಕುದ್ಮಿ ಇಷ್ಟೆಲ್ಲಾ ತಿಳ್ಕೊಂಡು ಬರೋ ಹೊತ್ತಿಗೆ, ಭೂಲೋಕಕ್ಕೋ ಬ್ರಹ್ಮಲೋಕಕ್ಕೂ ಇರೋ ಸಮಯದ ವ್ಯತ್ಯಾಸದಿಂದ ಭೂಲೋಕದಲ್ಲಿ 27 ಮಹಾ ಯುಗಗಳೇ ಕಳೆದು ಹೋಗಿತ್ತಂತೆ. ಭಾಗವತ ಪುರಾಣದ ಪ್ರಕಾರ, ಕಾಕುದ್ಮಿ ಭೂಲೋಕಕ್ಕೆ ಬಂದಾಗ, ಇಲ್ಲಿ ಮನುಷ್ಯರು ಮೊದಲಿಗಿಂತಾ ಕುಳ್ಳಗಾಗಿದ್ದಾರೆ ಅಂತ ಗಮನಿಸ್ತಾನೆ.

ಬಲರಾಮ ರೇವತಿಗೆ ನೇಗಿಲಿಂದ ಹೊಡೀತಾನೆ!

ಇನ್ನು ಕೆಲಸ ಶುರು ಹಚ್ಕೋಬೇಕು ಅಂತಾ, ಕಾಕುದ್ಮಿ ಬಲರಾಮನ ಹತ್ತಿರ ರೇವತಿ ಸಂಬಂಧ ತಗೊಂಡು ಹೋಗ್ತಾನೆ. ರೇವತಿ 27 ಯುಗಗಳ ಹಿಂದೇನೇ ಇದ್ದಿದ್ರಿಂದ, ಬಲರಾಮಂಗಿಂತಾ ತುಂಬಾ ಎತ್ತರ ಇರ್ತಾಳೆ. ಆಮೇಲೆ ರೇವತೀನ ನೋಡಿದ ಬಲರಾಮ, ತನ್ನ ನೇಗಿಲಿಂದ ರೇವತಿ ತಲೆ ಮತ್ತು ಭುಜದ ಮೇಲೆ ಹೊಡೆದ್ನಂತೆ. ಇದ್ರಿಂದ ರೇವತಿ ಬಲರಾಮನಿಗೆ ಸರಿಯಾದ ಜೋಡಿಯಾಗೋ ಗಾತ್ರಕ್ಕೆ ಕುಗ್ತಾಳೆ. ಆಮೇಲೆ ಬಲರಾಮ ಇವಳನ್ನ ತನ್ನ ಹೆಂಡತಿಯಾಗಿ ಸ್ವೀಕರಿಸ್ತಾನೆ.

ಇಷ್ಟಿದೆ ನೋಡಿ ರೇವತಿ ಬಲರಾಮನ ಕಥೆ. ಒಂಥರಾ ಸಿನಿಮಾ ಕಥೆ ತರ ಇದೆ ಅಲ್ವಾ? ಇದು ನಿಮಗ್ಗೊತ್ತಿತ್ತಾ?