http://coloursphotofilm.co.uk/wp-content/uploads/2013/11/indian-wedding-photographer.jpg

ಗಂಡ-ಹೆಂಡತಿರಿಗೆ ಒಬ್ಬರ ಮೇಲೆ ಇನ್ನೊಬ್ರಿಗೆ ಗೌರವ ಇರ್ಬೇಕು. ಇಬ್ರಿಗೂ ಬದುಕಲ್ಲಿ ಉತ್ಸಾಹ ಇರ್ಬೇಕು,ಒಂದೇ ರೀತಿಯ ಕನಸುಗಳಿರ್ಬೇಕು. ಇದೆಲ್ಲ ಇಲ್ಲದೆ ಹೋದ್ರೆ ಮದುವೆ ನರಕ ಆಗ್ಬಿಡತ್ತೆ. ಮದುವೆ ಆಗೋ ಮೊದಲು ಸಾಕಷ್ಟು ಸಮಯ ತೆಗೊಂಡು ನಿಮಗೆ ಅವರು ಸರೀನಾ ಅಂತ ಅರ್ಥ ಮಾಡ್ಕೊಳ್ಳಿ. ಈ 15 ಗುಣಗಳು ಅವರಲ್ಲಿ ಇದ್ದರೆ ದೂರ ಇಡೋದೇ ಒಳ್ಳೇದು.

1. ಸಣ್ಣತನ, ಅಪನಂಬಿಕೆ ಇರೋರು

ನಂಬಿಕೆ ತುಂಬಾ ಮುಖ್ಯ. ಸಂಗಾತಿಯಲ್ಲಿ ನಂಬಿಕೆ ಇಲ್ಲದೆ ಸದಾ ಸಂಶಯ ಪಡೋರಾದ್ರೆ ನೀವು ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ತುಂಬಾ ತಲೆ ಕೆಡಿಸಿಕೊಳ್ಳೋ ಹಾಗೆ ಮಾಡ್ಬಿಡ್ತಾರೆ. ನೀವು ನಾರ್ಮಲ್ ಆಗಿ ನಡ್ಕೊಳ್ಳೋಕೆ ಅವರು ಬಿಡೋದಿಲ್ಲ. ಇಂಥೋರನ್ನ ಮದುವೆ ಆಗದೆ ಇರೋದೇ ಒಳ್ಳೇದು.

2. ಸಾಕುಪ್ರಾಣಿಗಳನ್ನ ಹೀನಾಯವಾಗಿ ಕಾಣೋರು

ನೀವು ಮದುವೆ ಆಗ್ಬೇಕಂತ ಇರೋ ಹುಡುಗ/ಹುಡುಗಿ ಸಾಕುಪ್ರಾಣಿಗಳನ್ನ ದ್ವೇಷಿಸೋರಾದ್ರೆ ಅವರನ್ನ ಮದುವೆ ಆಗದೆ ಇರೋದು ಒಳ್ಳೇದು. ಅಲರ್ಜಿ ಇದ್ರೆ ಬೇರೆ ಮಾತು, ಆದರೆ ಅವ್ರೇನಾದ್ರೂ ಪ್ರಾಣಿಗಳನ್ನ ಕಂಡ್ರೆ ಆಗ್ದಿರೋರಾದ್ರೆ ಅವರು ಮನುಷ್ಯರನ್ನೂ ಮುಕ್ತ ಮನಸ್ಸಿಂದ ಪ್ರೀತ್ಸಲ್ಲ ಅಂತ ಅರ್ಥ ಮಾಡ್ಕೊಳ್ಳಿ.

ಮೂಲ

3. ಸಂಬಂಧದ ನಿಯಮಗಳನ್ನ ಗಾಳಿಗೆ ತೂರೋರು

ಯಾವ್ದೇ ಸಂಬಂಧದದಲ್ಲಿ ಕೆಲವು ನಿಯಮ ಇರುತ್ತೆ. ಅದನ್ನ ಆಗಾಗ ಮುರೀತಾ ಇರೋರ್ಗೆ ಸಂಬಂಧದ ಬೆಲೆ ಅರ್ಥ ಆಗೋಕೆ ಸಾಧ್ಯ ಇಲ್ಲ. ಇಂಥೋರ್ನ ಮದುವೆ ಆಗದಿರೋದೇ ಒಳ್ಳೇದು.

4. ಪ್ರತೀ ಸಲ ಕೊಟ್ಟ ಮಾತು ಉಳಿಸ್ಕೊಳ್ದೋರು

ನಿಮಗೆ ಕೊಟ್ಟ ಮಾತನ್ನ ಉಳಿಸ್ಕೊಳ್ದೆ ಇರೋರಿಗೆ ನಿಮ್ಮ ಬಗ್ಗೆ ಗೌರವ ಇರೋಕೆ ಸಾಧ್ಯ ಇಲ್ಲ. ನಿಮ್ಮ ಭಾವನೆ ಬಗ್ಗೆ ಅವ್ರಿಗೆ ಯಾವ ಚಿಂತೆನೂ ಇಲ್ಲ ಅಂತಾನೇ ಅರ್ಥ. ಯಾವಾಗ್ಲೋ ಒಮ್ಮೆ ಹೀಗ್ಮಾಡಿದ್ರೆ ಪರ್ವಾಗಿಲ್ಲ, ಆದ್ರೆ ಇದು ಮಾಮೂಲಿ ಅಭ್ಯಾಸ ಆದ್ರೆ ಇಂಥೋರ್ನ ಮದುವೆ ಆಗೋದಾ ಬೇಡ್ವಾ ಅಂತ ಯೋಚಿಸ್ಬೇಕಾಗುತ್ತೆ.

ಮೂಲ

5. ನಿಮ್ಮನ್ನ ಸದಾ ಕೀಳಾಗಿ ನಡೆಸ್ಕೊಳ್ಳೋರು

ಮದುವೆ ಅಂದ್ರೆ ಇಬ್ಬರೂ ಸ್ವಲ್ಪ ಶ್ರಮಪಡ್ಬೇಕಾಗುತ್ತೆ. ಸದಾ ನೀವೊಬ್ರೇ ಸಂಬಂಧದ ಬಗ್ಗೆ ಕಾಳಜಿ ಮಾಡ್ತಿದ್ದು ಅವ್ರಿಗೆ ಅದರ ಚಿಂತೆನೇ ಇಲ್ದಿದ್ರೆ  ಬದುಕು ನರಕ ಆಗ್ಬಿಡುತ್ತೆ. ಇಂಥ ಸಂಬಂಧ ನಿಮ್ಗೆ ಬೇಕಾ ಅಂತ ಯೋಚ್ನೆ ಮಾಡಿ.

6. ತಾವು ತಪ್ಪು ಮಾಡೋಕೆ ಸಾಧ್ಯಾನೇ ಇಲ್ಲ ಅಂದ್ಕೊಳ್ಳೋರು

ತಾನು ಎಲ್ಲಾದ್ರಲ್ಲೂ ಪರ್ಫೆಕ್ಟ್ ಅಂತ ಅಂದ್ಕೊಂಡೋರು ಎಲ್ಲ ತಪ್ಪನ್ನ ನಿಮ್ಮ ಮೇಲೇ ಹಾಕ್ತಾರೆ. ಅವರ ತಪ್ಪು ಅವ್ರಿಗೆ ಯಾವತ್ತೂ ಅರ್ಥ ಆಗಲ್ಲ. ಮುಂದೆ ಇದು ನಿಮ್ಮ ಸಂಬಂಧಾನ ಹಾಳು ಮಾಡುತ್ತೆ.

ಮೂಲ

7. ಯಾವಾಗ್ಲೂ ಏನೋ ತಪ್ಪು ಮಾಡಿ ಕುಂಟು ನೆಪ ಕೊಡೋರು

ತಪ್ಪು ಮಾಡಿ ನೆಪ ಹುಡುಕೋರಿಗೆ ಅವರ ತಪ್ಪುಗಳ ಮೇಲೆ ನಿಮ್ಗಿಂತ ಜಾಸ್ತಿ ಪ್ರೀತಿ ಅಂತ ಅಲ್ವಾ ಅರ್ಥ? ಆಗಾಗ ತಪ್ಪು ಮಾಡಿ ಅದನ್ನ ಮುಚ್ಚಿ ಹಾಕೋಕೆ ಸುಳ್ಳು ಸುಳ್ಳು ಕಥೆಗಳನ್ನ ಹೇಳೋರಾದ್ರೆ ಸ್ವಲ್ಪ ಹುಷಾರಗೋದು ಒಳ್ಳೇದು.

8. ಹಳೇ ಜಗಳಗಳನ್ನ ಮರಿಯೋಕೆ ಗೊತ್ತಿಲ್ದಿರೋರು

ಒಮ್ಮೊಮ್ಮೆ ಜಗಳ ಆಡೋದು ಸಂಬಂಧಕ್ಕೆ ಒಳ್ಳೇದು. ಆದರೆ ಸದಾ ಕಿತ್ತಾಡ್ತಿದ್ರೆ ಏನು ಸುಖ? ನಿಮ್ಮ ಮಾತನ್ನ ಅರ್ಥ ಮಾಡ್ಕೊಂಡು ಜಗಳವನ್ನ ಅಲ್ಲಿಗೇ ಮರಿಯೋಕೆ ಗೊತ್ತಿಲ್ದಿರೋರಾದ್ರೆ ಮುಂದೆ ಕಷ್ಟ ಆಗುತ್ತೆ.

ಮೂಲ

9. ನಿಮ್ಮ ಮಾತನ್ನ ಕೇಳಿಸ್ಕೊಳ್ದೇ ಇರೋರು

ಅವರು ತುಂಬಾ ಒಳ್ಳೆ ಮಾತುಗಾರ/ಮಾತುಗಾರ್ತಿ ಆಗಿರ್ಬಹುದು. ಚೆನ್ನಾಗಿ ಮಾತಾಡೋದು ಗೊತ್ತಿರ್ಬಹುದು. ಆದರೆ ನಿಮ್ಮ ಮಾತನ್ನ ಅರ್ಧಕ್ಕೇ ತಡಿಯೋರಾದ್ರೆ ಅವರು ನಿಮ್ಮ ಮಾತಿಗೆ ಬೆಲೆ ಕೊದಲ್ಲ ಅಂತ ಅರ್ಥ. ನಿಮ್ಮ ಮಾತನ್ನ ಕೇಳಿಸ್ಕೊಳ್ಳೋಕೆ ಪುರುಸೊತ್ತಿಲ್ದಿರೋರ ಜೊತೆ ಬದುಕು ಹೇಗೆ?

10. ಸಮಯಕ್ಕೊಂದು ಸುಳ್ಳು ಹೇಳೋರು

ಸುಳ್ಳು ಗೆದ್ದಲು ಹುಳದ ಥರ ಸಂಬಂಧವನ್ನ ಒಳ್ಗಿಂದ್ಲೇ ಹಾಳು ಮಾಡುತ್ತೆ. ಕೆಲವು ಸಲ ಒಳ್ಳೆ ಕಾರಣಕ್ಕೆ ಸುಳ್ಳು ಹೇಳೋದು ಪರ್ವಾಗಿಲ್ಲ, ಆದರೆ ಸಂಬಂಧದ ಬುಡಕ್ಕೇ ಪೆಟ್ಟು ಹಾಕೋ ಥರದ ಸುಳ್ಳುಗಳನ್ನ ಹೇಳೋರ್ನ ಮದುವೆ ಆಗದೆ ಇರೋದೇ ಒಳ್ಳೇದು.

ಮೂಲ

11. ಸದಾ ನಿಮ್ಗೆ ಅಂಟ್ಕೊಂಡೇ ಇರೋರು

ಸಂಬಂಧದಲ್ಲಿ ನಿಮ್ಗೆ ನಿಮ್ದೇ ಸ್ಪೇಸ್ ಇರ್ಬೇಕು. ಸ್ವಲ್ಪ ಉಸಿರಾಡೋಕೆ ಜಾಗ ಇರ್ಬೇಕು. ಸದ ಅವರು ನಿಮ್ಗೇ ಅಂಟ್ಕೊಂಡಿದ್ರೆ ಉಸಿರು ಕಟ್ಟಿ ಹೋಗುತ್ತೆ. ನಿಮ್ಮ ಮೇಲೆ ನಂಬಿಕೆ ಇಲ್ದೇ ಇರೋದ್ರಿಂದ ಈ ರೀತಿ ನಡ್ಕೋತಾರೆ. ಇಂಥೋರ್ನ ದೂರ ಇಡಿ.

12. ಕುಟುಂಬದೋರನ್ನ ಇಷ್ಟ ಪಡದಿರೋರು

ಅವರ ಅಪ್ಪ-ಅಮ್ಮನ ಬಗ್ಗೆ ಅವ್ರಿಗೆ ಗೌರವ ಇಲ್ದಿದ್ರೆ, ಅವ್ರನ್ನ ಇಷ್ಟ ಪಡದಿದ್ರೆ ನಾಳೆ ನಿಮ್ಮನ್ನ ಇಷ್ಟ ಪಡ್ತಾರೆ, ನಿಮ್ಗೆ ಬೆಲೆ ಕೊಡ್ತಾರೆ ಅನ್ನೋದು ಸಂಶಯ. ನಾಳೆ ಮಕ್ಳಿಗೂ ಇವರು ಸಮಯ ಕೊಡೊಲ್ಲ. ಹಾಗಾಗಿ ಇಂಥೋರ್ನ ಮದುವೆ ಆಗದೆ ಇರೋದೇ ಒಳ್ಳೇದು.

13. ವಿಪರೀತ ದುಶ್ಚಟ ಇರೋರು

ದುಶ್ಚಟಗಳಿಗೆ ದಾಸರಾಗಿ ಅದರಿಂದ ಹೊರಗೆ ಬರೋಕೆ ಇಷ್ಟ ಇಲ್ದಿರೋರನ್ನ ಮದುವೆ ಆಗ್ಬೇಡಿ. ಅವ್ರಿಗೆ ಅವರ ಚಟಾನೇ ಬೇರೆ ಎಲ್ಲದ್ಕಿಂತ ಹೆಚ್ಚು. ಸಂಬಂಧಕ್ಕೆ ಅವರು ಸಮಯ ಕೊಡೋರಲ್ಲ.

ಮೂಲ

14. ಎಳಸೆಳಸಾಗಿ ನಡ್ಕೊಳ್ಳೋರು

ಚಿಕ್ಕಚಿಕ್ಕ ವಿಷಯಕ್ಕೆಲ್ಲ ಜಗಳ ಮಾಡ್ಕೊಂಡು ಜನ್ರನ್ನ ದೂರ ಮಾಡ್ಕೊಳ್ಳೋರು ಇರ್ತಾರಲ್ಲ, ಅವರು ನಾಳೆ ನಿಮ್ಮನ್ನೂ ಹೀಗೇ ದೂರ ಮಾಡ್ಬಹುದು. ಈ ರೀತಿ ಚಿಕ್ಕ ಮಕ್ಕಳ ಥರ ನಡ್ಕೊಳ್ಳೋರನ್ನ ದೂರ ಇಡಿ, ಕಟ್ಕೊಂಡು ಒದ್ದಾಡ್ಬೇಡಿ.

15. ಜೋರು ಮಾಡೋರು, ಕೈ ಮಾಡೋರು

ಗಂಡೇ ಆಗ್ಲಿ ಹೆಣ್ಣೇ ಆಗ್ಲಿ, ನಿಮ್ಮ ಮೇಲೆ ಕೈ ಮಾಡೋರನ್ನ ಮದುವೆ ಆಗೋಕೆ ಹೋಗ್ಬೇಡಿ. ಹುಡುಗರು ಮಾತ್ರ ಹೀಗ್ಮಾಡ್ತಾರೆ ಅಂದ್ಕೋಬೇಡಿ, ಹುಡ್ಗೀರೂ ಗಂಡಂದ್ರ ಮೇಲೆ ಕೈ ಮಾಡ್ತಾರಂತೆ. ಈ ರೀತಿಯ ಕ್ರೂರಿಗಳ್ನ ಮದುವೆ ಆಗ್ಬೇಡಿ, ಮದುವೆ ಅಲ್ಲ ಯುದ್ಧ ಆಗುತ್ತೆ ಅದು.

ಮೂಲ

ಯಾರನ್ನ ಮದುವೆ ಆಗ್ಬೇಕು ಅನ್ನೋದು ಮೊದಲೇ ಹೇಳಿದ ಹಾಗೆ ತುಂಬಾ ಸಮಯ ತೆಗೊಂಡು ಯೋಚಿಸಿ ತೆಗೋಬೇಕಾದ ನಿರ್ಧಾರ.