1831ರಲ್ಲಿ ಮೈಸೂರಿನ ಆಳ್ವಿಕೆ ಸರಿಯಾಗಿ ನಡೀತಿಲ್ಲ ಅನ್ನೋ ನೆಪ ಕೊಟ್ಟು ಗವರ್ನಲ್ ಜನರಲ್ ವಿಲಿಯಂ ಬೆಂಟಿಂಕ್ ಮೈಸೂರ್ನ ತನ್ನ ತೆಕ್ಕೆಗೆ ತೊಗೊಂಡ.

Bentinck_william_wikimedia.pngwikimedia

ಸಾಕಷ್ಟು ಚರ್ಚೆಗಳ ನಂತರ ಆಳ್ವಿಕೆ ಮತ್ತೆ ಮೈಸೂರ ಅರಸರ ಕೈಗೆ (ಅಂದರೆ ಚಾಮರಜ ಒಡೆಯರ ಕೈಗೆ) 1881ರಲ್ಲಿ ಸಿಕ್ಕಿತು.

ಅಂದರೆ ಐವತ್ತು ವರ್ಷಗಳ ಕಾಲ ಮೈಸೂರು ಪರರ ಆಳ್ವಿಕೆಯಲ್ಲಿತ್ತು.

Chamaraja_Wodeyar_1863-94-wikimedia_commons.jpgwikimedia

ಇದರ ನೆನಪಿಗಾಗಿ ಅರಸರಾದ ಚಾಮರಾಜ ಒಡೆಯರು ಮೈಸೂರು ಆಸ್ಥಾನ ಕವಿ ಶ್ರೀ ಬಸವಪ್ಪ ಶಾಸ್ತ್ರಿಗಳಿಗೆ ಒಂದು ನಾಡಗೀತೆ ಬರೆಯಕ್ಕೆ ಹೇಳಿದರಂತೆ.

ಬಸವಪ್ಪ ಶಾಸ್ತ್ರಿಗಳು ಅಭಿನವ ಕಾಳಿದಾಸರೆಂದೇ ಕರೆಸಿಕೊಳ್ಳುತ್ತಿದ್ದರು…

2-May-Basavappa-sastri-kanaja_in.jpgkanaja

ಶಾಸ್ತ್ರಿಗಳು ‘ಕಾಯೌ ಶ್ರೀ ಗೌರೀ’ ಅನ್ನೋ ಹಾಡು ಬರೆದರು. ಮುಂದಕ್ಕೆ ಹೋಗಬೇಡಿ, ಕೇಳಿ. ಕಿವಿ ತುಂಬ ಕೇಳಿ. ಮತ್ತೆ ಮತ್ತೆ ಕೇಳಿ:

ರಾಗಸಂಯೋಜನೆಗೆ ಶಾಸ್ತ್ರಿಗಳು ಬ್ಯಾಂಡ್ ಮಾಸ್ಟರ್ ಬಾರ್ಟೈಸ್ ಮತ್ತು ಆಸ್ಥಾನವಿದ್ವಾಂಸ ವೈಣಿಕಶಿಖಾಮಣಿ ಶೇಷಣ್ಣನವರ ಸಹಾಯ ಪಡೆದಿದ್ದರು.

ಗೀತೆಯ ಪೂರ್ಣಪಾಠ ಹೀಗಿದೆ:

ಕಾಯೌ ಶ್ರೀ ಗೌರೀ ಕರುಣಾಲಹರೀ

ತೋಯಜಾಕ್ಷೀ ಶಂಕರೀಶ್ವರೀ ||ಪ||

ವೈಮಾನಿಕ ಭಾಮಾರ್ಚಿತ ಕೋಮಲ ಕರಪಾದೇ

ಶ್ರೀಮಾನ್ವಿತ ಭೂಮಾಸ್ಪದೇ ಕಾಮಿತಫಲದೇ ||೧||

ಶುಂಭಾದಿಮ ದಾಂಭೋನಿಧಿ ಕುಂಭಜನಿಭದೇವೀ

ಜಂಬಾಹಿತ ಸಂಭಾವಿತೇ ಶಾಂಭವೀ ಶುಭವೀ ||೨||

ಶ್ರೀ ಜಯಚಾಮುಂಡಿಕೇ ಶ್ರೀ ಜಯಚಾಮೇಂದ್ರ

ನಾಮಾಂಕಿತ ಭೂಮೀಂದ್ರ ಲಲಾಮನಮುದದೇ ||೩||

‘ಓ ಕರುಣೆಯುಳ್ಳವಳೆ! ಓ ತಾವರೆಯ ಕಣ್ಣವಳೆ! ಓ ಶಂಕರೀ! ಓ ಈಶ್ವರೀ! ಓ ಗೌರೀ!’ ಎಂದು ನಾಡದೇವೆತೆಯನ್ನು ಬೇಡಿಕೊಳ್ಳುವ ಹಾಡಿದು.

CHamundeshwari_emysore_com.jpge-mysore

ಬೇಡಿಕೊಳ್ಳುವುದು ಏನಂತ? ಮೈಸೂರ ಅರಸರನ್ನು ನೀನು ಕಾಯವ್ವ (ಕಾಯೌ) ತಾಯೀ ಅಂತ…

ಅಂದರೆ ಮತ್ತೊಮ್ಮೆ ಈ ಬ್ರಿಟಿಷರು ಅಥವಾ ಬೇರೆಯವರು ಯಾರೂ 1831ರಲ್ಲಿ ಕಿತ್ತುಕೊಂಡಂತೆ ಮೈಸೂರಿನ ಆಡಳಿತವನ್ನ ಕಿತ್ತುಕೊಳ್ಳದೆ ಇರುವಂತೆ ಕಾಪಾಡು ಅಂತ.

ರಾಜರೇ ಬರೆಸಿದ ಈ ಹಾಡು ಇಡೀ ಮೈಸೂರು ಸಾಮ್ರಾಜ್ಯದಲ್ಲಿ ಮನೆಮಾತಾಗಿತ್ತು. ಎಂದರೆ ಸಾಮ್ರಾಜ್ಯದ ಮೂಲೆಮೂಲೆಗಳಲ್ಲೂ ಜನರು ಗೌರಿಯನ್ನು ಬೇಡಿಕೊಳ್ಳುತ್ತಿದ್ದರು… ನಮ್ಮ ಅರಸನನ್ನು ಕಾಯಮ್ಮಾ ತಾಯಿ ಅಂತ…

ಮುಂದೆ ಚಾಮರಾಜ ಒಡೆಯರ ನಂತರ 1894ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸಿಂಹಾಸನವನ್ನು ಏರಿದರು.

krishnarajawodeyar-pinterest.jpgpinterest

ಆಗ ನಾಡಗೀತೆಯಲ್ಲಿ "ಚಾಮ" ಎನ್ನುವ ಬದಲು "ಕೃಷ್ಣ" ಎಂಬ ಪದ ಬಳಸಿ ಕಡೆಯ ಚರಣವನ್ನು ಹೀಗೆ ಬದಲಾಯಿಸಲಾಯಿತು:

ಶ್ಯಾಮಾಲಿಕೆ ಚಾಮುಂಡಿಕೆ ಸೊಮಕುಲಜ ಕೃಷ್ಣ

ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ ||೩||

ಈಗಿನ ಅರಸನನ್ನಲ್ಲವೇ ಕಾಯಬೇಕಿರುವುದು? ಅದಕ್ಕೆ…

ವೈಣಿಕಪ್ರವೀಣ ಶ್ರೀ. ವಿ. ವೆಂಕಟಗಿರಿಯಪ್ಪನವರು ಗೀತೆಗೆ ಮತ್ತೆ ರಾಗಸಂಯೋಜನೆ ಮಾಡಿದರು. ಈ ಬಾರಿ ಇದು ಶಂಕರಾಭರಣ ರಾಗದಲ್ಲಿ ತಿಶ್ರಜಾತಿಯ ಏಕತಾಳದಲ್ಲಿ ಮೈಸೂರಿನಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿತ್ತು.

1940ರಲ್ಲಿ ಕೃಷ್ಣರಾಜ ಒಡೆಯರು ತೀರಿಕೊಂಡಾಗ ಜಯಚಾಮರಾಜೇಂದ್ರ ಒಡೆಯರು ಸಿಂಹಾಸನವೇರಿದರು.

jayachamarajendra-wodeyar-caravanmagazine_in.jpgcaravan

ಆಗ ನಾಡಗೀತೆಯಲ್ಲಿ "ಜಯಚಾಮ" ಎಂಬ ಪದ ಬಳಸಲಾಯಿತು. ಮತ್ತೆ ಈಗಿನ ಅರಸನನ್ನು ಕಾಯಮ್ಮಾ ತಾಯಿ ಅಂತ…

ಅವರ ನಂತರ ಮೈಸೂರಿನ ಸಿಂಹಾಸನಕ್ಕಾಗಲಿ ಈ ಸುಂದರವಾದ ಗೀತೆಗಾಗಲಿ ಅರ್ಥ ಉಳಿಯದೆ ಹೋಯಿತು.

STOP_sign_wikipedia.jpgwikipedia