http://media.indiatimes.in/media/content/2015/Nov/mol6_1446784103.jpg

ನಮ್ಮೆಲ್ರಿಗು ದೇಹದಲ್ಲಿ ಒಂದಾದ್ರು ಮಚ್ಚೆ ಇದ್ದೇ ಇರತ್ತೆ. ನಮ್ ಭಾರತೀಯ ಜ್ಯೋತಿಶ್ಯಾಸ್ತ್ರ, ಹಾಗೆ ಚೀನಾದೋರ ಜ್ಯೋತಿಶ್ಯಾಸ್ತ್ರನೂ ಮಚ್ಚೆ ಹಿಂದೆ ದೊಡ್ಡ ಅರ್ಥ ಅಡಗಿದೆ ಅಂತಾನೆ ನಂಬಿದೆ. ನಮ್ಮಲ್ಲಿ ಕಲವ್ರು, ಮಚ್ಚೆಗಳ್ ಮೂಲಕ ದೇವ್ರು ನಮ್ಗೇನೊ ಸಂದೇಶ ಕಳ್ಸಿದಾನೆ ಅಂತ ನಂಬಿದ್ರೆ, ಇನ್ಕೆಲವ್ರು, ನಮ್ ಪೂರ್ವಜನ್ಮದ್ ಪಾಪ ಪುಣ್ಯನ ಈ ಜನ್ಮದ್ ದೇಹಕ್ಕೆ ಮುದ್ರೆ ಒತ್ತಿ ಕಳ್ಸಿದಾನೆ ದೇವ್ರು ಅಂತ ನಂಬ್ತರೆ. ಯಾರ್ಯಾರ್ ನಂಬಿಕೆ ಏನೇ ಇದ್ರು, ಬೇಸಿಕ್ ಆಗಿ ಈ ಮಚ್ಚೆ ಮಹಾತ್ಮೆ ಏನು ಅಂತ ಕೆಲವನ್ನ ಇಲ್ಲಿ ಕೊಟ್ಟಿದಿವಿ. ನಿಮ್ಗೂ ಎಲ್ಲೆಲ್ಲಿ ಮಚ್ಚೆ ಇದ್ಯೋ ನೋಡ್ಕೊಂಡ್, ಅದರ್ ಮಹಿಮೆನ ಓದ್ಕೊಳಿ.

ಹಣೆ ಬಲಭಾಗಕ್ಕೆ ಮಚ್ಚೆ ಇದ್ರೆ

indiatimes.in

ನಿಮ್ಗೇನಾದ್ರು ಹಣೆ ಬಲಭಾಗಕ್ಕೆ ಮಚ್ಚೆ ಇದ್ರೆ, ಅದೃಷ್ಟ ಖುಲಾಯಿಸ್ತು ಅಂತನೇ ಅರ್ಥ. ಜೀವನ್ದಲ್ಲಿ ತುಂಬ ಸಿರಿವಂತರಾಗ್ತಿರ ಮತ್ತೆ ಯಶಸ್ಸು ಗಳಿಸ್ತಿರ.

ಹುಬ್ಬಿನ ಕೆಳಗೆ ಮಚ್ಚೆ ಇದ್ರೆ

indiatimes.in

ನಿಮ್ಗೇನಾದ್ರು ಹುಬ್ಬಿನ ಕೆಳಗೆ ಮಚ್ಚೆ ಇದ್ರೆ, ಸಿಕ್ಕಾಪಟ್ಟೆ ಬುದ್ದಿವಂತ್ರು ಜೊತೆಗೆ ತುಂಬ ಸೃಜನಶೀಲ ವ್ಯಕ್ತಿ.

ತುಟಿಯಿಂದ ಸ್ವಲ್ಪ ಮೇಲ್ಗಡೆ ಮಚ್ಚೆ ಇದ್ರೆ

acomocliticstudio.com

ಹುಡುಗೀರ್ ವಿಷ್ಯದಲ್ಲಿ ಈ ಮಚ್ಚೆ ಸಖತ್ತಾಗಿರೊ ಗುಟ್ಟು ಹೇಳತ್ತೆ. ಏನಪ್ಪ ಅಂದ್ರೆ, ಹುಡ್ಗೀರ್ಗೆ ತುಟಿಯಿಂದ ಒಂಚೂರ್ ಮೇಲ್ಗಡೆ ಮಚ್ಚೆ ಇದ್ರೆ, ಇವ್ರು ಸುಂದ್ರಿರು ಅನ್ನೋದ್ರಲ್ಲಿ ಅನುಮಾನನೇ ಬೇಡ. ಇದಕ್ಕಿಂತನೂ ಹೆಚ್ಚಾಗಿ, ಇಂಥ ಹೆಣ್ಮಕ್ಳಿಗೆ ಒಂದ್ ದೊಡ್ಡ ಸಂಸಾರನ ನಿಭಾಯಿಸೋ ತಾಕತ್ ಇರತ್ತಂತೆ.

ತುಟಿ ಮೇಲ್ಗಡೆನೇ ಮಚ್ಚೆ ಇದ್ರೆ

speakingtree.in

ನಿಮ್ಗೆ ಮೇಲ್ಗಡೆ ತುಟಿನಲ್ಲಿ ಮಚ್ಚೆ ಇದ್ರೆ, ತುಂಬ ಪರಿಶುದ್ದವಾದ ಹೃದಯ ಕಣ್ರಿ ನಿಮ್ದು. ಆದ್ರೆ ಎಲ್ಲೋ ಒಂದ್ಕಡೆ ಇದೇ ನಿಮ್ಗೆ ಮುಳುವಾಗ್ಬಹುದಂತೆ. ಸೋ ಹುಷಾರಾಗಿರಿ. ಇನ್ನು ಕೆಳತುಟಿನಲ್ಲಿ ಮಚ್ಚೆ ಇದ್ರೆ, ಸಂಕೋಚನೇ ಇಲ್ದೇ ಹೊಟ್ಟೆತುಂಬ ಬ್ಯಾಟಿಂಗ್ ಮಾಡೊ ಸಾಮರ್ಥ್ಯ ಇರತ್ತೆ. ಯಾರ್ಬೇಕಾದ್ರು ರುಚ್ರುಚಿಯಾಗ್ ಅಡುಗೆ ಮಾಡಿ ಬಡ್ಸಿ, ನಿಮ್ ಮನಸ್ಸನ್ನ ಗೆಲ್ಲಬೋದು.

ಬಲಗಡೆ ಕೆನ್ನೆ ಮೇಲೆ ಮಚ್ಚೆ ಇದ್ರೆ

indiatimes.in

ನಿಮ್ಗೆ ಬಲಗಡೆ ಕೆನ್ನೆ ಮೇಲೆ ಮಚ್ಚೆ ಇದ್ರೆ, ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿ ಅಂತೆ ನೀವು. ಯಾರಾದ್ರು ಚೂರ್ ತಪ್ಪಾಗ್ ನಡ್ಕೊಂಡ್ರೂ, ನಿಮ್ಗೆ ಬಹಳ ಬೇಗ ನೋವಾಗತ್ತಂತೆ. ಇಲ್ಲಿ ನೀವ್ ಹೆಮ್ಮೆ ಪಡೋ ವಿಷ್ಯನೂ ಇದೆ. ಏನಪ್ಪ ಅಂದ್ರೆ, ಅಪ್ಪ ಅಮ್ಮನ ಬಗ್ಗೆ ಬೇರೆಯವರ್ಗಿಂತ ಜಾಸ್ತಿ ಗೌರವ ಇಟ್ಕೊಂಡಿರ್ತೀರ. ಇವೆಲ್ಲದ್ರು ಜೊತೆ ಬೋನಸ್ ಥರ, ಈ ಮಚ್ಚೆ, ಸಂಪತ್ತು ಮತ್ತೆ ಅದೃಷ್ಟನ ತೋರ್ಸತ್ತೆ. ಬಾಯಿಗೆ ಹತ್ತಿರ್ದಲ್ಲೇ ಇರೋದ್ರಿಂದ ನೀವು ಆಸ್ತಿ ಪಾಸ್ತಿ ಎಲ್ಲ ಜೋರಾಗ್ ಮಾಡ್ಕೊಳೊ ಸಾಧ್ಯತೆ ಜಾಸ್ತಿ ಇದೆ.

ಎಡಗಡೆ ಕೆನ್ನೆ ಮೇಲೆ ಮಚ್ಚೆ ಇದ್ರೆ

huffingtonpost.com

ನಿಮ್ಗೇನಾದ್ರು ಎಡಗಡೆ ಕೆನ್ನೆ ಮೇಲೆ ಮಚ್ಚೆ ಇದ್ರೆ, ಬಲಗೆನ್ನೆ ಮೇಲಿರೋ ಮಚ್ಚೆಗಿಂತ ಈ ಮಚ್ಚೆ ವಿರುದ್ಧವಾದ್ ಅದೃಷ್ಟ ತಂದ್ಕೊಡತ್ತೆ ಅಂತ ಹೇಳ್ತರೆ. ನೀವು ಸ್ವಲ್ಪ ಅಂತರ್ಮುಖಿಯಾಗಿರ್ತೀರ ಮತ್ತೆ ಅಹಂಕಾರ ಪಡೋ ಗುಣನೂ ಇರತ್ತಂತೆ. ಈ ಸ್ವಭಾವದಿಂದ ಜೀವನ್ದಲ್ಲಿ ಸಾಕಷ್ಟು ತೊಂದರೆಗಳ್ನೂ ಅನುಭವಿಸ್ಬೇಕಾಗತ್ತಂತೆ. ಇನ್ನೂ ಕಾಲ ಮಿಂಚಿಲ್ಲ, ಸಾಧ್ಯ ಆದ್ರೆ ಈ ಸ್ವಭಾವನ ಚೂರು ಬದಲಾಯಿಸ್ಕೊಂಡ್ಬಿಡಿ.

ಪಾದದಲ್ಲಿ ಮಚ್ಚೆ ಇದ್ರೆ

indiatimes.in

ನಿಮ್ಗೇನಾದ್ರು ಪಾದದಲ್ಲಿ ಮಚ್ಚೆ ಇದ್ರೆ, ಚಕ್ರನ ಸದಾ ಕಾಲಿಗ್ ಕಟ್ಕೊಂಡೇ ಇರ್ತಿರ ಅಂತ ಹೇಳ್ಬಹುದು. ಏನೋ ಚಿಕ್ಕ್ ಚುಕ್ಕೆ ಅಂತ ಈ ಮಚ್ಚೆನ ಹಗುರವಾಗಿ ತೊಗೊಳೊ ಹಾಗೇ ಇಲ್ಲ. ಆಗಾಗ ಪ್ರವಾಸ, ಓಡಾಟ ಇದ್ದೇ ಇರತ್ತಂತೆ. ಬೇರೆ ಬೇರೆ ಊರ್ಗಳ್ನ ಸುತ್ತ್ಬೇಕು ಅಂದ್ಕೋತಿರೋರು ಒಂದ್ಸಲ ನಿಮ್ ಪಾದದಲ್ಲಿ ಮಚ್ಚೆನೂ ಇದ್ಯ ನೋಡ್ಕೊಂಬಿಡಿ. 

ಹಸ್ತದ ಮೇಲೆ ಮಚ್ಚೆ ಇದ್ರೆ

ipcdigital.co.uk

ನಿಮ್ಗೇನಾದ್ರು ಹಸ್ತದ್ ಮೇಲೆ ಮಚ್ಚೆ ಇದ್ರೆ, ಇದು ನೀವ್ ಮುಟ್ಟಿದ್ದೆಲ್ಲ ಚಿನ್ನ ಆಗೋ ಅದೃಷ್ಟದ ಸಂಕೇತ ಅಂತೆ. ಹಾಗೆನೆ ಕೈಗೆ ಸಂಬಂಧ ಪಟ್ಟಿರೋ ಯಾವ್ದೋ ಪ್ರತಿಭೆ, ನಿಪುಣತೆ ನಿಮ್ಮಲ್ಲಿದೆ ಅಂತ ತೋರ್ಸತ್ತಂತೆ.