ಮಕ್ಕಳಿರಲ್ಲವ್ವ ಮನೆ ತುಂಬ ಅಂತ ನಮ್ ಹಿಂದಿನವರು ಹೇಳ್ತಾ ಇದ್ರು. ಈಗ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಸಾಕು, ತಂದೆ ತಾಯಿಗಳು ಬರೀ ಅಂಪೈರ್ ಕೆಲಸ ಮಾಡ್ಬೇಕಾದ ಸಂದರ್ಭಾನೇ ಜಾಸ್ತಿ.

ಕೆಲಸದ ಒತ್ತಡದ ಮಧ್ಯ ಮಕ್ಕಳ ಜಗಳ ಬಗೆಹರಿಸೋದು ಬಹಳ ಕಷ್ಟ ಅನ್ನಿಸಿಬಿಡತ್ತೆ ಅಲ್ವಾ?

ಇಲ್ಲಿರುವ 6 ಸಲಹೆಗಳನ್ನು ಉಪಯೋಗಿಸಿ ಸ್ಮಾರ್ಟ್ ತಂದೆ/ತಾಯಿ ಆಗಿ!

1. ಸಮವಾಗಿ ವರ್ತಿಸಿ:

ಇಬ್ಬರು ಮಕ್ಕಳು ಹೆಚ್ಚು-ಕಡಿಮೆ ಒಂದೇ ವಯಸ್ಸಿನವರಾಗಿದ್ರೆ ಅವರ ನಡುವೆ ಜಗಳ ಬರುವುದು ಸಹಜ. ನೀವು ಒಂದು ಮಗೂನ ಬಯ್ಯೋದು, ಇನ್ನೊಂದನ್ನ ಮುದ್ದಿಸೋದು ಮಾಡಿದರೆ ಕೆಲಸ ಕೆಡೋದು ಗ್ಯಾರಂಟಿ. ಅದರ ಬದಲು ಇಬ್ಬರ ತಪ್ಪುಗಳನ್ನೂ ತೋರಿಸಿಕೊಟ್ಟು ಇಬ್ಬರೂ ಯೋಚ್ನೆ ಮಾಡೋ ಹಾಗೆ ಮಾಡಿ.

idiva

2. ಪ್ರತಿ ಮಗುವಿಗೂ ಪ್ರತ್ಯೇಕವಾಗಿ ಗಮನ ಕೊಡಿ:

ಪ್ರತಿ ಮಗುವನ್ನೂ ಒಂಟಿಯಾಗಿ ಸ್ವಲ್ಪ ಹೊತ್ತು ರೂಮಲ್ಲಿ ಕೂಡಿಸಿಕೊಂಡು ಮಾತನಾಡಿಸಿ. ಅದರ ಕಷ್ಟ-ಸುಖಗಳ ಬಗ್ಗೆ ಚರ್ಚೆ ಮಾಡಿ.

skylawn

3. ಮಗುವಿನ ಸಾಮರ್ಥ್ಯದ ಮೇಲೆ ಗಮನ ಹರಿಸಿ:

ಪ್ರತಿ ಮಗುವಿನ ಸಾಮರ್ಥ್ಯವನ್ನು ಎತ್ತಿ ಹೇಳಿ. ಇಬ್ಬರ ನಡುವೆ ವ್ಯತ್ಯಾಸಗಳನ್ನು ತೋರಿಸುವ ಮಾತಾಡಬೇಡಿ. ಇದು ಅವರ ಮನಸ್ಸಿನ ನಡುವೆ ಅಡ್ಡಗೋಡೆ ಹಾಕತ್ತೆ. ಅದು ಕೊನೆಗೆ ಜಗಳ ಆಗತ್ತೆ.

huffpost

4. ಭಾವನೆ ಹೊರ ಹಾಕಲು ಬಿಡಿ:

ಕೋಪ, ಹತಾಶೆ ಮತ್ತು ಹೊಟ್ಟೆಕಿಚ್ಚಿನಂತಹ ಭಾವನೆಗಳ್ನ ಮಕ್ಕಳು ಹೊರಗೆ ತೋರಿಸಕ್ಕೆ ಬಿಡಿ. ಅದನ್ನು ಎಷ್ಟು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಅಂತ ಹೇಳಿಕೊಡಿ.

intelligenttest

5. ತಾವೇ ಜಗಳ ಪರಿಹಾರ ಮಾಡ್ಕೊಳೋದು ಕಲಿಸಿ:

ಅವರಾಡುವ ಜಗಳ ಅವರೇ ಬಗೆಹರಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿ. ಇದರಿಂದ ಪ್ರತೀ ಸಲ ಇಬ್ಬರ ಜಗಳದ ಮಧ್ಯ ಹೋಗುವುದು ತಪ್ಪುತ್ತದೆ.

community

6. ಒಟ್ಟಿಗೆ ಆಟ ಆಡಿದಾಗ ಹೊಗಳಿ:

ಮಕ್ಕಳು ಒಟ್ಟಿಗೆ ಚೆನ್ನಾಗಿ ಆಟ ಆಡಿದಾಗ ಅವರನ್ನು ಹೊಗಳಿ. ಇದರಿಂದ ಅವರು ಪಾಸಿಟಿವ್ ಯೋಚನೆ ಮಾಡ್ತಾರೆ ಮತ್ತು ಜಗಳ ಆಡದೆ ಇದ್ದಾಗ ಪ್ರಶಂಸೆ ಸಿಗತ್ತೆ ಅಂತ ಅರ್ಥ ಮಾಡ್ಕೋತಾರೆ.

youtube

ನಿಮಗೆ ಈ 6ರಲ್ಲಿ ಯಾವುದು ಮುಖ್ಯ ಅನ್ನಿಸಿತು? ನಿಮ್ಮ ಅನುಭವದಿಂದ ಇನ್ನೂ ಸೇರಿಸುವುದೇನಾದರೂ ಇದ್ದರೆ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

ಹೊರಚಿತ್ರ: indianexpress