http://indianonlineseller.com/wp-content/uploads/2015/08/women-shopping-700x380.jpg

ಚಿಕ್ಕ ಮಕ್ಕಳಿದ್ದಾಗ ಅಪ್ಪ-ಅಮ್ಮ, ಅಜ್ಜಿ-ತಾತ, ಗುರುಗಳು, ಮಾರ್ಗದರ್ಶಿಗಳ ದಾರೀಲಿ ನಡೆದು ದೊಡ್ಡೋರಾಗ್ತೀವಿ. ಆಮೇಲೆ ನಾ ಹೀಗಿದ್ರೆ ಚೆನ್ನ, ಅದು ಮಾಡಿದ್ರೆ ಸರಿ…ಹೀಗೆ ಕೆಲವು ನಿರ್ದಿಷ್ಟ ಗುರಿಗಳತ್ತ ನಡೆಯಕ್ಕೆ ನೀವು ರೆಡಿ ಇರ್ತೀರಿ. ಇದು ಒಂದು ಹಂತ.

ಜೀವನದ ಆ ಹಂತದಲ್ಲಿ ನಿಮ್ಮ ಈ 10 ನಡವಳಿಕೆಗಳು ನಿಮ್ಮ ತಿಳುವಳಿಕೆ ಮಟ್ಟವನ್ನ ಇನ್ನಷ್ಟು ಹೆಚ್ಚಿಸತ್ತೆ. ಆಗ ನಿಮ್ಮೇಲೆ ನಿಮ್ಗೇ ಪ್ರೀತಿ ಹುಟ್ಕೊಳತ್ತೆ…

1. ನಿಮ್ಮ ಇಷ್ಟಾನಿಷ್ಟಗಳ ಬಗ್ಗೆ ಹೆಚ್ಚು ತಿಳ್ಕೊತೀರಿ, ನಿಮ್ಮ ಬಗ್ಗೆ ಜಾಸ್ತಿ ಗಮನ ಹರಿಸ್ತೀರಿ

ನಿಮ್ಮ ಪ್ರೀತಿ ಹಾಗು ಸಮಯ ಯಾವಾಗಲೂ ಒಬ್ಬ ವ್ಯಕ್ತಿಯ ಸುತ್ತಲೇ ಸುತ್ತುತ್ತಾ ಇರ್ಬೇಕು ಅಂತೇನಿಲ್ಲ. ನಿಮ್ಮ ಇಷ್ಟದ ಕೆಲಸಗಳಿಗೂ ಅದನ್ನ ಮೀಸಲಿಡ್ಬೋದು. ನಿಮಗಿಷ್ಟದ ಹವ್ಯಾಸದಲ್ಲಿ ಮುಳುಗಬಹುದು ಅಥವಾ ನಿಮಗಿಷ್ಟದ ಕೆಲಸ ಮಾಡ್ಬೋದು.

ಮೂಲ

2. ನಿಮಗೆ ಜೀವನದಲ್ಲಿ ಏನು ಬೇಕು ಅನ್ನೋದನ್ನ ಸರಿಯಾಗಿ ತಿಳ್ಕೊತೀರಿ

ನಿಮ್ಮ ಜೀವನಾನ ಒಮ್ಮೆ ಹಿಂತಿರುಗಿ ನೋಡೋಕೆ ಸಾಧ್ಯವಾದ್ರೆ, ಅದನ್ನ ಸ್ವಲ್ಪ ಬದಲಾಯಿಸೋಕೆ ಸಾಧ್ಯವಾದ್ರೆ ಏನ್ ಆಯ್ಕೆ ಮಾಡಿಕೊಳ್ತಿದ್ರಿ? ನಿಮ್ಮ ಜೀವನದಲ್ಲಿನ ಸಂಬಂಧಗಳು ನಿಮಗೆ ನಿಜವಾಗಿಯೂ ಖುಷಿ ಕೊಟ್ಟಿದೆಯಾ ಅಥವಾ ಮನಸ್ಸಿಲ್ಲದಿದ್ದರೂ ಸಂಬಂಧದಲ್ಲಿದ್ದೀರಾ? ಅಷ್ಟೇ ಅಲ್ದೆ, ಜೀವನದಲ್ಲಿ ಖುಷಿಯಾಗಿರೋಕೆ ನಿಮಗೊಂದು ಸಂಬಂಧ ಬೇಕೇ ಬೇಕಾ ಅಥ್ವಾ ನಿಜ್ವಾದ ಖುಷಿ ಕಂಡ್ಕೊಳಕ್ಕೆ ಬೇರೆ ದಾರಿಗಳಿದ್ಯ ಅಂತ ಯೋಚ್ನೆ ಮಾಡಿ.

3. ನಿಮಗೆ ತೀರಾ ಮುಖ್ಯವಾದ ಸಂಬಂಧಗಳನ್ನ ಗುರುತಿಸ್ತೀರಿ

ನಿಮ್ಮ ಕುಟುಂಬ ಹಾಗು ಸ್ನೇಹಿತರೊಂದಿಗೆ ನಿಮಗಿರೋ ಬಾಂಧವ್ಯದ ಬಗ್ಗೆ ಗಮನ ಹರಿಸ್ತೀರ. ಬರೀ ಹೆಸ್ರಿನ ಸಂಬಂಧಗಳನ್ನ ಕಿತ್ತು ಬಿಸಾಕಕ್ಕೆ ಹಿಂಜರಿಯಲ್ಲ.

ಮೂಲ

4. ಪ್ರಪಂಚ ಸುತ್ತೋ ನಿಮ್ಮ ಆಸೇನ ಪೂರೈಸ್ಕೋತೀರಿ

ಪ್ರಪಂಚದ ಎಲ್ಲಾ ಮೂಲೇನೂ ನೊಡೋಕೆ ಶುರು ಮಾಡ್ತೀರಿ. ನಿಮಗಾಗಿ ಪ್ರಕೃತಿ ಏನೇನೆಲ್ಲಾ ಕೊಟ್ಟಿದೆ ಅಂತ ಅಸ್ವಾದಿಸ್ತೀರಿ. ಇಷ್ಟು ದಿನ ನಿಮಗೆ ಗೊತ್ತಿದ್ದ ಒಂದಿಷ್ಟಗಲ ಪ್ರಪಂಚದಲ್ಲೇ ಇದ್ದು ಕಷ್ಟಪಟ್ಟ ನಿಮಗೆ, ಅದರಿಂದ ಹೊರಬಂದು ಆರಾಮವಗಿರೋಕೆ ಸಾಧ್ಯ ಆಗುತ್ತೆ, ಜೊತೆಗೆ ಇಷ್ಟಾನೂ ಆಗತ್ತೆ.

5. ನಿಮ್ಮ ಜೀವನದ ಒಳ್ಳೆ ಅಂಶಗಳಿಗೆ ಪ್ರಾಮುಖ್ಯತೆ ಕೊಡ್ತೀರಿ

ಜೀವನದಲ್ಲಿ ಕೇವಲ ಪ್ರೀತಿ ಪ್ರೇಮ ಅನ್ನೋ ಸಂಬಂಧಗಳಷ್ಟೇ ಅಲ್ಲ, ಅದನ್ನ ಬಿಟ್ಟೂ ಬೇರೆ ಸಾಕಷ್ಟಿವೆ ಅನ್ನೋದನ್ನ ತಿಳಿದು, ಅವುಗಳ ಬಗ್ಗೆ ಗಮನ ಹರಿಸ್ತೀರಿ.

ಮೂಲ

6. ಸೋಮಾರಿತನ ಬಿಡ್ತೀರಿ

ಜೀವನದಲ್ಲಿ ಮಾಡೋಕೆ ಎಷ್ಟಿದೆ ಅನ್ನೋದನ್ನ ಅರ್ಥ ಮಾಡ್ಕೊಂಡು, ಅದನ್ನ ಮಾಡೋಕೆ ಮುಂದಾಗ್ತೀರೇ ಹೊರತು ಸುಮ್ಮನೆ ಕಾಲ ಕಳೆಯಲ್ಲ. ಜೀವನ್ದಲ್ಲಿ ಏನಾದ್ರೂ ಮಾಡ್ಬೇಕು ಅಂದ್ಕೋತೀರ. ನಿಮ್ಮಗೊಬ್ಬರಿಗೇ ನಿಮ್ಮ ಜೀವನಾನ ಮೀಸಲಿಡಲ್ಲ. ಅದಕ್ಕಿಂತ ಹೆಚ್ಚಾಗಿ ಜೀವನ್ದಲ್ಲಿ ದೊಡ್ದಾಗಿ ಏನಾದ್ರೂ ಮಾಡೋಕೆ ನಿಮ್ಮಲ್ಲಿ ಲವಲವಿಕೆ ಹುಟ್ಟತ್ತೆ.

7. ನಿಮ್ಮ ಸುತ್ತಮುತ್ತ ಇರೋರ ಭಾವನೆಗಳಿಗೆ ಹೆಚ್ಚು ಕಿವಿ ಕೊಡ್ತೀರಿ

ನಿಮಗೆ ಗೊತ್ತಾಗಕ್ಕ್ ಶುರು ಆಗತ್ತೆ… ಮತ್ತೊಬ್ಬ ವ್ಯಕ್ತೀನ ಅರ್ಥ ಮಾಡಿಕೊಳ್ಳೋದು ಅಷ್ಟೇನು ಸುಲಭ ಅಲ್ಲ ಅಂತ. ಇನ್ನು ಜನರನ್ನ ಅರ್ಥಮಾಡಿಕೊಳಕ್ಕೆ ಅವರ ಒಳಹೊಕ್ಕು ನೋಡ್ಬೇಕು ಅನ್ನೋದನ್ನ ಚೆನ್ನಾಗೇ ಅರ್ಥ ಮಾಡ್ಕೊಂಡಿರ್ತೀರಿ.

ಮೂಲ

8. ನಿಮ್ಮ ಸಾಮರ್ಥ್ಯ ಗುರ್ತಿಸ್ಕೋತೀರಿ

ಜೀವನದಲ್ಲಿ ನಿಮ್ಮ ಕಷ್ಟ ಆಗೋ ಕೆಲ್ಸ ಮಾಡೋಕೆ ನಿಮ್ಮ ಸಾಮರ್ಥ್ಯಾನ ಹೆಚ್ಚಿಸ್ಕೋತೀರಿ. ಮಿಕ್ಕವರ ಹಾಗೆ, ಸಾಮಾನ್ಯವಾಗಿ ಜೀವನ ಮಾಡೋಕೆ ನಿಮಗೆ ಕಷ್ಟ. ಇನ್ನು ಇದೆಲ್ಲಾ ಮಾಡೋಕೆ ನಿಮ್ಮ ದೇಹ – ಮನಸ್ಸಿಗೆ ಶಕ್ತಿ ಎಷ್ಟು ಮುಖ್ಯ ಅಂತಾನೂ ನಿಮಗೆ ಗೊತ್ತಿರತ್ತೆ.

9. ಜೀವನದಲ್ಲಿ ಯಾರಿದ್ರೂ, ಇಲ್ದಿದ್ರೂ ಖುಷಿಯಾಗಿರ್ತೀರಿ

ನಿಮಗೆ ಬೇಕಾದೋರು ನಿಮ್ಜೊತೆ ಇದ್ರೇನೇ ಖುಷಿ ಅನ್ನೋ ಮನೋಭಾವದಿಂದ ಹೊರ ಬಂದು, ಜೀವನದಲ್ಲಿ ಯಾವುದ್ರಿಂದ ಬೇಕಾದ್ರೂ ಖುಷಿಯಾಗಿರ್ತೀನಿ ಅನ್ನೋ ದಿಟ್ಟತನ ನಿಮ್ಮಲ್ಲಿ ಬಂದ್ಬಿಡತ್ತೆ.  ಎಲ್ಲಾದ್ಕೂ ನಿಮ್ಮ ಮನಸ್ಥಿತಿ ಮುಖ್ಯ ಅನ್ನೋದು ನಿಮಗೆ ತಿಳಿದಿರುತ್ತೆ.

ಮೂಲ

ಇಲ್ಲಿ ಕೊಟ್ಟಿರೋ ಅಭ್ಯಾಸಗಳನ್ನ ಬೆಳಸ್ಕೊಳೋದು ಸುಲಭಾನೂ ಅಲ್ಲ, ಅದಷ್ಟು ಬೇಗ ಬರೋದೂ ಇಲ್ಲ. ಆದನ್ನ ನಮ್ಮಲ್ಲಿ ಬೆಳಸ್ಕೊಳಕ್ಕೆ ಸತತವಾಗಿ ಪ್ರಯತ್ನ ಮಾಡ್ತಾನೇ ಇದ್ದಾಗ ಮಾತ್ರ ನಮಗೆ ಯಶಸ್ಸು ಸಿಗೋದು.