alarmclock silhouette at sunrise cityscape

ಬೆಳಗ್ಗೆ ಬೇಗ ಏಳೋದ್ರಿಂದ ಆರೋಗ್ಯ ಚೆನ್ನಾಗಿರುತ್ತೆ ಅನ್ನೋ ಅಂತೆಕಂತೆಯಂತೂ ಎಲ್ಲರಿಗೂ ತಿಳಿದದ್ದೇ, ಆದರೆ ಬದುಕಿನ ಯಶಸ್ಸಿಗೂ ಇದೇ ದಾರಿ ಅಂತ ಬಹುಶಃ ಎಲ್ಲರಿಗೂ ತಿಳಿದಿರಲ್ಲ.ಅದು ಹೇಗೆ ಬದುಕಿನ ಮೇಲೆ ಪ್ರಭಾವ ಬೀರುತ್ತೆ ತಿಳಿಯೋಣ ಬನ್ನಿ.

  1. ಬೇಗ ಎದ್ದರೆ ಪೂರ್ತಿಯಾಗಿ ಏಳೋಕೆ ಸಾಕಷ್ಟು ಸಮಯ ಸಿಗುತ್ತೆ

ನಿಮಗೆ ಗೊತ್ತೇ ಇರತ್ತೆ ಬೆಳಗ್ಗೆ ಎದ್ದ ಮೇಲೂ ನಿದ್ದೆ ಮಂಪರು ಸ್ವಲ್ಪ ಇದ್ದೇ ಇರುತ್ತೆ. ಅದಕ್ಕೇ ನಾವು ಎದ್ದ ತಕ್ಷಣ ಮುಖ ತೊಳೆಯೋದು ಬಿಸಿ ಬಿಸಿ ಕಾಫಿ ಕುಡಿಯೋದು. ಇನ್ನು ಬೇಗ ಎದ್ದರೆ ಇದನ್ನೆಲ್ಲ ಮಾಡಿಯೂ ಆರಾಮಾಗಿ ಕೆಲಸ ಮಾಡೋಷ್ಟು ಸಮಯ ಇರುತ್ತೆ.

2. ಬೇಗ ಎದ್ದರೆ ರಾತ್ರಿ ನಿದ್ದೆನೂ ಚೆನ್ನಾಗಿ ಬರುತ್ತೆ

ಇನ್ನು ಬೇಗ ಏಳೋದ್ರಿಂದ ರಾತ್ರಿ ನಿದ್ದೆನೂ ಬೇಗ ಬರುತ್ತೆ,ಚೆನ್ನಾಗೂ ಬರುತ್ತಂತೆ. ಸಂಶೋಧನೆಗಳ ಪ್ರಕಾರ ಬೇಗ ನಿದ್ದೆ ಮಾಡೋರಲ್ಲಿ ಒಳ್ಳೆ ನಿದ್ದೆ ಬರುತ್ತಂತೆ. ಅದೇ ತಡವಾಗಿ ಮಲಗಿದರೆ ನಿದ್ದೆನೂ ಸರಿ ಹೋಗಲ್ಲ ದೇಹಕ್ಕೂ ಒಳ್ಳೆದಲ್ಲ.

3. ಎದ್ದೇಳೋವಾಗಲೇ ಒದ್ದಾಟ ಇರಲ್ಲ ನೋಡಿ

ಸಮಾನ್ಯವಾಗಿ ನಾವೆಲ್ಲ ಮಾಡೊದೇನಪ್ಪ ಅಂದರೆ ಬೆಳಗ್ಗೆ ಅಲಾರಾಂ ಹೊಡೆದ ಮೇಲೂ ಅದನ್ನ 5 ನಿಮಿಷ 5 ನಿಮಿಷ ಅಂತ ತಿರುಗಿಸಿ ತಿರುಗಿಸಿ ಮಲಗೋಕೆ ನೋಡ್ತೀವಿ. ಹೀಗೆ ಮಾಡೊದ್ರಿಂದ ನಿದ್ದೆನೂ ಹಾಳು ಹಾಗೆ ಎದ್ದಾಗ ನೀವು ಫ್ರೆಶ್ ಆಗಿ ಕೂಡ ಇರಲ್ಲ ಹಾಗಾಗಿ ಬೇಗ ಏಳೋದೇ ಉತ್ತಮ.

4. ನಿಮ್ಮ ದೇಹ ಸೌಂದರ್ಯ ಕೂಡ ಬೇಗ ಏಳೊದ್ರಿಂದ ಚೆನ್ನಾಗಿರುತ್ತಂತೆ

ಮತ್ತೆ ಮತ್ತೆ ಅಲಾರಾಂ ತಿರುಗಿಸಿ ನಿದ್ದೆ ಹಾಳುಮಾಡಿಕೊಳ್ಳೋದಷ್ಟೇ ಅಲ್ಲದೇ ದೇಹ ಕ್ರಿಯೆಗಳಲ್ಲಿ ತೊಂದರೆ ಆಗಿ ದಪ್ಪ ಕೂಡ ಆಗ್ತೀವಂತೆ ಅದರ ಬದಲು ಬೆಗ ಎದ್ದರೆ ದೇಹಾನೂ ಚೆನ್ನಾಗಿರುತ್ತೆ ವ್ಯಾಯಾಮಕ್ಕೂ ಸಮಯ ಆಗುತ್ತೆ.

5. ಬೇಗ ಏಳೋರು ವಿಷಯಗಳನ್ನ ಮುಂದಕ್ಕೆ ಹಾಕಲ್ಲವಂತೆ

ಸಂಶೋಧನೆಗಳ ಪ್ರಕಾರ ದಿನಾ ಬೇಗ ಏಳೋರು ಯಾವುದೇ ಕೆಲಸವನ್ನ ತಡವಾಗಿ ಏಳೋರ ಹಾಗೆ ಸಂಜೆಗೆ ಮುಂದೂಡಲ್ಲವಂತೆ. ಬೇಗ ಎದ್ದು ಎಲ್ಲ ಕೆಲಸ ಮುಗಿಸಿ ರಾತ್ರಿ ಆರಾಮಾಗಿ ಮಲಗೋ ಅಭ್ಯಾಸ ಮಾಡಿಕೊಂಡಿರ್ತಾರಂತೆ.

6. ಏನನ್ನಾದರೂ ಸಾಧಿಸೋಕೆ ಉತ್ಸಾಹ ಹೆಚ್ಚಿರುತ್ತಂತೆ

ಸಂಶೋಧನೆಗಳ ಪ್ರಕಾರ ಬೇಗ ಎದ್ದಾಗ ಆಫೀಸಿಗೆ ಆರಾಮಾಗಿ ಹೋಗೋದರೆ ಜೊತೆಗೆ ನೀವೇನನ್ನ ಸಾಧಿಸಬೇಕೋ ಅದರ ಬಗ್ಗೆ ಕೂಡ ಯೋಚಿಸೋಕೆ ಹೆಚ್ಚು ಸಮಯ ಸಿಗುತ್ತಂತೆ ಅದರಿಂದ ಸಾಧಿಸೋ ಉತ್ಸಾಹ ಕೂಡ ಹೆಚ್ಚುತ್ತಂತೆ.

7. ಬೇಗ ಏಳೊರಿಗೆ ಓದಿದ್ದು ಬೇಗ ತಲೆಗೆ ಹೋಗುತ್ತಂತೆ

ಸಂಶೋಧನೆಗಳ ಪ್ರಕಾರ ಬೇಗ ಏಳೋರಿಗೆ ಬೇರೆ ಯಾವುದೇ ಕಿರಿ ಕಿರಿ ಇಲ್ಲದೇ ಆರಾಮಾಗಿ ಶಾಲೆಗೆ ಹೋಗೋಕೆ ಆಗುತ್ತಂತೆ ಹಾಗಾಗಿ ಚೆನ್ನಾಗಿ ಓದುತ್ತಾರಂತೆ.

8. ಬೇಗ ಏಳೋದ್ರಿಂದ ನಿಮಗೆ ಒಳ್ಳೆ ಅಭ್ಯಾಸಗಳು ರೂಢಿ ಆಗುತ್ತವಂತೆ

ರಾತ್ರಿ ತಡಾವಾಗಿ ಮಲಗೋರಿಗೆ ಇರೋ ಯಾವುದೇ ವ್ಯಸನಗಳು ಬೇಗ ಏಳೋರನ್ನ ಅಷ್ಟು ಕಾಡಲ್ಲ ಹಾಗೇ ಆರೋಗ್ಯಕರ ಅಭ್ಯಾಸಗಳನ್ನ ಇವರು ರೂಢಿಸಿಕೊಳ್ಳುತ್ತಾರೆಂತೆ.

9. ಬೇಗ ಏಳೋರು ತುಂಬ ಖುಷಿಯಾಗಿರ್ತಾರಂತೆ

ಇನ್ನು ನೀವು ಎಷ್ಟು ಹೊತ್ತಿಗೆ ಏಳ್ತೀರಿ ಅನ್ನೋದರ ಮೇಲೆ ನಿಮ್ಮ ಮನಸಿನ ಸಮತೋಲನ ಎಷ್ಟು ಅಂತ ಹೇಳಬಹುದಂತೆ. ಬೇಗ ಏಳೋರು ಶಾಂತವಾಗಿ ಇರ್ತಾರೆ ಅನ್ನೋ ಅಂತೆಕಂತೆಯೂ ಇದೆ.