https://urdivinityatplay.files.wordpress.com/2013/06/animanshandsholdingwater.gif

ನೀರನ್ನ ಜೀವಜಲ ಅಂತೀವಲ್ಲ ಯಾಕ್ ಹೇಳಿ? ಊಟ ತಿಂಡಿ ಇಲ್ದೇನೂ ಉಪವಾಸ ಇರ್ಬೋದು, ಆದ್ರೆ ನೀರಿಲ್ದೆ ಇರಕ್ಕಾಗತ್ತಾ?

ಬಾಯಾರಿಕೆ ಆದಾಗ ನೀರು ಬಿಟ್ಟು ಇನ್ನೆಂಥ ಅಮೃತ ಕುಡುದ್ರೂ ಸಮಾಧಾನ ಆಗಲ್ಲ. ನಿಜತಾನೆ. ಇನ್ನು, ದಿನ ಪೂರ್ತಿ ಎಷ್ಟ್ ನೀರು ಕುಡುದ್ರೂ ಒಳ್ಳೆದೆನೆ. ಆದ್ರೆ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರು ಕುಡಿಯೋದ್ರಿಂದ ಏನೇನೆಲ್ಲ ಪ್ರಯೋಜನ ಇದೆ ಗೊತ್ತ. ನಿಮ್ಗೋಸ್ಕರ ಇಲ್ಲಿ ಕೊಟ್ಟಿದಿವಿ ನೋಡಿ. ಓದಾದ್ಮೇಲೆ ಖಂಡಿತ ಈ ಅಭ್ಯಾಸ ಮಾಡ್ಕೊತಿರಿ. 

1) ದೇಹದಿಂದ ವಿಷ ಪದಾರ್ಥ ಹೊರಗೆ ಹೋಗತ್ತೆ

ನೀರ್ ಕುಡಿದ ತಕ್ಷಣ ಏನೇನಾಗತ್ತೆ? ಮೊದ್ಲು ಅದು ನಮ್ ಹೊಟ್ಟೆ ಮತ್ತೆ ಕರುಳಿಗೆ ಹೋಗಿ, ಚೆನ್ನಾಗ್ ಕ್ಲೀನ್ ಮಾಡತ್ತೆ.

ಹೇಗಪ್ಪ ಅಂತೀರಾ? ರಾತ್ರಿ ಹೊತ್ತು ನಮ್ ದೇಹ ತನ್ನನ್ ತಾನೇ ರಿಪೇರಿ ಮಾಡ್ಕೊಂಡು, ವಿಷಕಾರಿ ಪದಾರ್ಥಗಳ್ನ ಬೇರೆಯಾಗಿ ಇಡತ್ತೆ. ಈ ವಿಷ ನಮ್ ದೇಹದಿಂದ ಹೊರಗಾಕೋ ಸುಲಭವಾದ್ ಉಪಾಯ ಅಂದ್ರೆ, ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಗೆ ಗಟ ಗಟ ಅಂತ ನೀರ್ ಕುಡಿಯೋದು. ಆಗ ಎಲ್ಲಾ ವಿಷಕಾರಿ ಅಂಶಗಳೂ ಹೊಟ್ಟೆಯಿಂದ ಕೊಚ್ಕೊಂಡ್ ಹೋಗತ್ತೆ. ಮೈ ಮನಸ್ಸು ಫ್ರೆಶ್ ಆಗಿ, ಆರೋಗ್ಯ ಚೆನ್ನಾಗಿರತ್ತೆ.

ಸಾಕಷ್ಟು ನೀರು ಕುಡಿಯೋದ್ರಿಂದ, ನಮ್ ಮಾಂಸಖಂಡಗಳ ಜೀವಕೋಶ ಮತ್ತೆ ಹೊಸ ರಕ್ತ ಕಣಗಳು ಜಾಸ್ತಿ ಪ್ರಮಾಣದಲ್ಲಿ ಉತ್ಪತ್ತಿ ಆಗತ್ತೆ.

ಮೂಲ

2) ಜೀರ್ಣಶಕ್ತಿ ಜಾಸ್ತಿಮಾಡತ್ತೆ

ಖಾಲಿ ಹೊಟ್ಟೇಲಿ ನೀರ್ ಕುಡಿಯೋದ್ರಿಂದ ಜೀರ್ಣಶಕ್ತಿ ಸುಮಾರು 24% ಜಾಸ್ತಿಯಾಗತ್ತೆ. ಪಥ್ಯದಲ್ಲಿ ಇರೋರ್ಗಂತೂ ಇದು ತುಂಬ ಮುಖ್ಯ. ಒಳ್ಳೆ ಜೀರ್ಣಶಕ್ತಿ ಅಂದ್ರೆ ಪಥ್ಯ ಸುಲಭವಾಗಿ ಮಾಡ್ಬೋದು. ಬೆಳಗ್ಗೆ ಎದ್ದ ತಕ್ಷಣ ನೀರ್ ಕುಡಿಯೋದ್ರಿಂದ, ದೊಡ್ಡ ಕರುಳು ಕ್ಲೀನಾಗಿರತ್ತೆ ಮತ್ತೆ ಅದು ಪೋಷಕಾಂಷಗಳ್ನ ಚೆನ್ನಾಗ್ ಹೀರ್ಕೊಳಕ್ಕೆ ಸಹಾಯ ಮಾಡತ್ತೆ.

ಮೂಲ

3) ಯಾವ್ದೇ ಅಡ್ಡಪರಿಣಾಮ ಇಲ್ದೆ ಮೈ ತೂಕ ಕಮ್ಮಿ ಆಗೋಹಾಗೆ ಮಾಡತ್ತೆ

ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಗೆ ನೀರ್ ಕುಡಿಯೋದ್ರಿಂದ, ಜೀರ್ಣಾಂಗದಲ್ಲಿರೋ ಎಲ್ಲಾ ವಿಷ ಪದಾರ್ಥಗಳೂ ಹೊರಗೋಗಿ, ಆರಾಮ್ ಅನ್ಸೋದ್ರಿಂದ, ಕಳ್ಳ ಹಸಿವು, ಬಾಯಿಚಪಲ ಇದೆಲ್ಲ ಕಮ್ಮಿ ಆಗತ್ತೆ. ಯದ್ವಾತದ್ವಾ ತಿಂದು ಬೆಳೆಸ್ಕೊಳೊ ಬೊಜ್ಜಿಂದ ಮುಕ್ತಿ ಸಿಗತ್ತೆ.

ಮೂಲ

4) ಎದೆ ಉರಿ, ಅಜೀರ್ಣ ಕಮ್ಮಿ ಮಾಡತ್ತೆ

ಅಜೀರ್ಣ ಆಗಕ್ಕೆ ಮುಖ್ಯ ಕಾರ್ಣ ಆಸಿಡಿಟಿ. ಯಾವಾಗ ಹೊಟ್ಟೆಲಿ ಆಸಿಡಿಟಿ ಜಾಸ್ತಿಯಾಗಿ ಅದು ಎದೆ ಹತ್ರ ಇರೊ ಅನ್ನನಾಳದ ತನತ ಬರತ್ತೋ ಆಗ ಎದೆಉರಿಯಿಂದ ಒದ್ದಾಡ್ಬೇಕಾಗತ್ತೆ. ಇದಕ್ಕೆ ಪರಿಹಾರ ಅಂದ್ರೆ… ಖಾಲಿ ಹೊಟ್ಟೆಗೆ ನೀರ್ ಕುಡಿಯೋದು.

ಹೀಗ್ ಮಾಡಿದಾಗ ಹೊಟ್ಟೇಲಿ ಜಾಸ್ತಿಯಾಗಿರೋ ಆಸಿಡ್ ಎದೆಮಟ್ಟದಿಂದ ಕೆಳಕ್ ಹೋಗಿ ಡೈಲ್ಯೂಟ್ ಆಗತ್ತೆ. ಜೊತೆಗೆ ಬೆಳಗಿನ್ ತಿಂಡಿ ತಿನ್ನಕ್ ಮುಂಚೆ, ಹೊಟ್ಟೆ ಕ್ಲೀನಾಗಿ ರೆಡಿಯಾಗಿರತ್ತೆ.

ಮೂಲ

5) ಮೈಬಣ್ಣ ಮತ್ತೆ ಮೈಕಾಂತಿ ಹೆಚ್ಚಾಗತ್ತೆ

ದೇಹದಲ್ಲಿ ನೀರಿನಂಶ ಕಮ್ಮಿ ಆದ್ರೆ, ವಯಸ್ಸಿಗ್ ಮುಂಚೆ ಚರ್ಮ ಸುಕ್ಕಾಗೋದು, ಆಳವಾದ್ ತೂತ್ಬೀಳೋದು ಈ ಥರದ್ ತೊಂದ್ರೆಗಳು ಶುರುವಾಗತ್ತೆ. ಒಂದ್ ಸ್ಟಡಿ ಪ್ರಕಾರ ಖಾಲಿ ಹೊಟ್ಟೆಗೆ 500 ಎಮ್ ಎಲ್ ನಿರ್ ಕುಡಿಯೋದ್ರಿಂದ ಚರ್ಮದಲ್ಲಿ ರಕ್ತಚಲನೆ ಚೆನ್ನಾಗ್ ಆಗಿ ಚರ್ಮ ಹೊಳಿಯೋಹಾಗ್ ಮಾಡತ್ತಂತೆ.

ಜೊತೆಗೆ ದಿನಪೂರ್ತಿ ಸಾಕಷ್ಟು ನೀರ್ ಕುಡಿತನೇ ಇರೋದ್ರಿಂದ ಅಲ್ಲಲ್ಲಿ ಉತ್ಪತ್ತಿ ಆಗೋ ವಿಷಕಾರಿ ಅಂಶ ಅಲ್ಲಲ್ಲೇ ಹೊರಗೆ ಹೋಗತ್ತೆ. ಆಗ ಚರ್ಮ ಇನ್ನೂ ಕಾಂತಿ ಪಡಿಯತ್ತೆ.

ಮೂಲ

6) ಆರೋಗ್ಯವಾದ, ಫಳಫಳಾಂತ ಹೊಳಿಯೋ ಮೃದುವಾದ್ ಕೂದ್ಲು ನಿಮ್ದಾಗತ್ತೆ

ಮೈನಲ್ಲಿ ನೀರಿನಂಶ ಕಮ್ಮಿಯಾಗೋದ್ರಿಂದ, ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರತ್ತೆ. ಆದ್ರೆ ಸಾಕಷ್ಟು ನೀರ್ ಕುಡಿಯೋದ್ರಿಂದ ಕೂದಲಿನ ಬುಡದಿಂದ ತುತ್ತ ತುದಿವರ್ಗೂ ಚೆನ್ನಾಗಿ ಪೋಷಣೆ ಆಗತ್ತೆ.

ಇನ್ನೊಂದ್ ವಿಷ್ಯ ಇಲ್ಲಿ ಹೇಳ್ಲೇಬೇಕು, ಕೂದಲಿನ ಒಂದು ಎಳೆಯ ತೂಕದಲ್ಲಿ, 1/4 ಭಾಗ ನೀರೇ ಇರತ್ತೆ. ಸರಿಯಾಗ್ ನೀರು ಕುಡಿದೇ ಹೋದ್ರೆ ಕೂದ್ಲು ತೆಳುವಾಗಿ, ಒರಟು ಬಿದ್ದು, ಗುಂಚುಕ್ಕಿ ಗೂಡಾಗದಂತೂ ಗ್ಯಾರೆಂಟಿ. ಇದಾಗ್ಬಾರ್ದು ಅಂದ್ರೆ ದಿನಾ ಖಾಲಿ ಹೊಟ್ಟೆಗೆ ನೀರ್ ಕುಡಿದು ಕೂದಲ ಆರೋಗ್ಯ ಕಾಪಾಡ್ಕೊಳಿ

ಮೂಲ

7) ಕಿಡ್ನಿ ಕಲ್ಲು ಮತ್ತೆ ಬ್ಲಾಡರ್ ಸೋಂಕನ್ನ ದೂರ ಇಡತ್ತೆ

ಕಿಡ್ನಿ ಕಲ್ಲು ಮತ್ತೆ ಬ್ಲಾಡರ್ ಸೋಂಕಿಂದ ದೂರ ಇರ್ಬೇಕು ಅಂದ್ರೆ, ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರ್ ಕುಡಿಬೇಕು. ಕಿಡ್ನಿ ಕಲ್ಲು ಉತ್ಪತ್ತಿ ಆಗಕ್ಕೆ ಮುಖ್ಯ ಕಾರಣ ಅಸಿಡಿಟಿ. ಅದಕ್ಕೆ ನೀರು ಚೆನ್ನಾಗಿ ಕುಡಿಯೋದ್ರಿಂದ ಈ ಆಸಿಡಿಟಿ ಡೈಲ್ಯೂಟ್ ಆಗೋಗತ್ತೆ ಕಲ್ಲಾಗಲ್ಲ.

ಮೂಲ

8) ರೋಗನಿರೋಧಕ ಶಕ್ತಿ ಹೆಚ್ಚಾಗತ್ತೆ

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ನೀರು ಕುಡಿಯೋದ್ರಿಂದ, ದೇಹದಲ್ಲಿರೋ ಲಿಂಫ್ಯಾಟಿಕ್ ಸಿಸ್ಟಮ್; ಅಂದ್ರೆ ದೇಹ, ಸಣ್ಣ ಪುಟ್ಟ ಖಾಯಿಲೆಗೆಲ್ಲ ತಾನೇ ಔಷಧಿ ಉತ್ಪತ್ತಿ ಮಾಡ್ಕೊಳೊ ವ್ಯವಸ್ಥೆಯಿದ್ಯಲ್ಲ ಅದು ಸಮತೋಲನದಲ್ಲಿರೋ ಹಾಗ್ ನೋಡ್ಕೊಳತ್ತೆ. ಇದು ತುಂಬಾ ಮುಖ್ಯ ಯಾಕಂದ್ರೆ ನಮ್ ರೋಗನಿರೋಧಕ ವ್ಯವಸ್ಥೆ ಎಷ್ಟು ಚೆನ್ನಾಗಿರತ್ತೋ, ನಾವೂ ರೋಗ ರುಜಿನಗಳಿಂದ ದೂರ ಇರ್ತಿವಿ. ಆಗಾಗ ಖಾಯಿಲೆ ಬೀಳೋದೂ ತಪ್ಪತ್ತೆ.

ಮೂಲ

ನೋಡಿದ್ರಾ…ಓದಿದ್ರಾ? ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ನೀರ್ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜ್ನ ಇದೆ ಅಂತ. ಈ ಅಭ್ಯಾಸ, ಖರ್ಚಿಲ್ದೇ ನಮ್ ಜೀವನ ಶೈಲಿನಲ್ಲಿ ಒಳ್ಳೆ ಬದಲಾವಣೆ ತರತ್ತೆ ಅನ್ನೋದ್ರಲ್ಲಿ ಎರಡ್ನೇ ಮಾತಿಲ್ಲ.