1) ಬಂಗಾಳದ "ಸೇನ್" ರಾಜಮನೆತನದೋರು ಕನ್ನಡಿಗರಾಗಿದ್ದ್ರು

ಕರ್ನಾಟಕದಿಂದ ಚಾಲುಕ್ಯ ರಾಜ ವಿಕ್ರಮಾದಿತ್ಯ IV ಬಂಗಾಲದಲ್ಲಿ ಪಾಲ ರಾಜರನ್ನು ಸೋಲಿಸಿದ್ದ. ಕರ್ನಾಟಕದಿಂದ ಹೋದವರು ಅಲ್ಲಿ ಸೇನ ರಾಜವಂಶದವರಾಗಿ1070 ಇಸವಿಯಿಂದ 1230 ತನಕ ಆಳಿದ್ದರು.

ಮೂಲ

2) ಖ್ಯಾತ ಬೆಂಗಾಲಿ ಫಿಲಂ ನಿರ್ದೇಶಕ ಶ್ಯಾಮ್ ಬೆನೆಗಲ್ ಕರ್ನಾಟಕ ಮೂಲದೋರು

ಶ್ಯಾಮ್ ಬೆನೆಗಲ್ ಅವರ ತಂದೆಯ ಅಜ್ಜಿ ಮತ್ತು ಗುರುದತ್ ತಾಯಿಯ ಅಜ್ಜಿ ಅಕ್ಕ ತಂಗಿಯರಾಗಿದ್ರು.

ಮೂಲ

3) ರಬೀಂದ್ರನಾಥ ಟ್ಯಾಗೋರ್ ಕರ್ನಾಟಕದ ಕಾರವಾರದ ಬೀಚ್ನಲ್ಲಿ ಕೂತು "ಪ್ರಕೃತಿರ್ ಪ್ರತಿಶೋಧ" ಪದ್ಯಗಳ್ನ ಬರೆದ್ರು

ಕಾರವಾರದ ಪ್ರಕೃತಿ ಸೌಂದರ್ಯ ರಬೀಂದ್ರರನ್ನು ಬರೆಯುವಂತೆ ಪ್ರೇರಣೆ ಕೊಟ್ಟಿದ್ದವು.

ಮೂಲ

4) ರಬೀಂದ್ರನಾಥ ಟ್ಯಾಗೋರ್ಗೆ ಮೈಸೂರು ಸಂಸ್ಥಾನದ ನಾಡಗೀತೆ "ಕಾಯೌ ಶ್ರೀ ಗೌರಿ" ಹಾಡು ತುಂಬಾನೇ ಇಷ್ಟ ಆಗಿ ಬೆಂಗಾಲಿಯಲ್ಲಿ "ಆನಂದಲೋಕೆ ಮಂಗಲಲೋಕೆ" ಅಂತ ಹಾಡು ಬರೆದ್ರು

1919ರಲ್ಲಿ ಬೆಂಗಳೂರಿಗೆ ಬಂದಿದ್ದ ಟ್ಯಾಗೋರರು ಆಗಿನ ನಾಡಗೀತೆಯನ್ನ ಕೇಳಿ ಧೀರಶಂಕರಾಭರಣ( ಹಿಂದುಸ್ತಾನಿಯಲ್ಲಿ ಬಿಲಾವಲ್) ರಾಗದಲ್ಲಿ ಒಂದು ಹಾಡು ರಚಿಸಿ ನಂತರ ಜನ ಗಣ ಮನ ಕೂಡ ಅದೇ ರಾಗದಲ್ಲಿ ಅದೇ ಸ್ಕೇಲ್ನಲ್ಲಿ ಮಾಡಿದ್ರು.

ಮೂಲ

5) ಖ್ಯಾತ ಬೆಂಗಾಲಿ ಫಿಲಂ ನಿರ್ಮಾಪಕ, ನಿರ್ದೇಶಕ ಮತ್ತು ನಟ ಗುರುದತ್ ನಮ್ಮ ಪಡುಕೋಣೆನೋರು

ಬೆಂಗಳೂರಿನಲ್ಲಿ ಹುಟ್ಟಿದ್ದು. ಅವರ ತಂದೆ ತಾಯಿ ಮಂಗಳೂರಿನ ಪನ್ನಂಬೂರ್ನಲ್ಲಿ ನೆಲೆಸಿದ್ದರು.

ಮೂಲ

6) ಬಂಗಾಳಿಗಳು ಮೀನ್ ತಿಂತಾರೆ ಅಂತ ಶಿವರಾಮ ಕಾರಂತ್ನ ಅವರಪ್ಪ ಕಲ್ಕತ್ತಾಲಿರೋ ವಿಶ್ವಭಾರತಿ ವಿಶ್ವವಿದ್ಯಾನಿಲಯಕ್ಕೆ ಓದಕ್ಕೆ ಕಳಿಸಲಿಲ್ಲ

ಅವರಿಗೆ ತುಂಬ ಆಸೆ ಇತ್ತು!

ಮೂಲ

7) ಐಂದ್ರಿತ ರೇ ಬಂಗಾಲಿ

ಐಂದ್ರಿತಾ ಕನ್ನಡ ಚಿತ್ರ "ಮೆರವಣಿಗೆ" ಯಿಂದ ಭಾರಿ ಫೇಮಸ್ ಆಗಿದ್ದು.

ಮೂಲ

8) ಬಂಗಾಲದ ವೈಷ್ಣವ ಧರ್ಮದೋರು ಕರ್ನಾಟಕದ ಮಧ್ವಾಚಾರ್ಯರ ತತ್ವಗಳ್ನ ಪಾಲಿಸ್ತಾರೆ

1238ರಲ್ಲಿ ಕರ್ನಾಟಕದಿಂದ ಬಂಗಾಲಕ್ಕೆ ಮಧ್ವಾಚಾರ್ಯರು ಹೋಗಿದ್ರು. ಅದೇ ಬಂಗಾಲದಿಂದ 1438ರಲ್ಲಿ ಚೈತನ್ಯ ಮಹಾಪ್ರಭುಗಳು ಉಡುಪಿಗೆ ಬಂದಿದ್ರು. ಮಧ್ವರ ತತ್ವಗಳನ್ನು ಓದಿ ಚೈತನ್ಯರು ಬ್ರಹ್ಮ-ಮಧ್ವ-ಗೌಡೀಯ ಸಂಪ್ರದಾಯವನ್ನು ಬಂಗಾಲದಲ್ಲಿ ಹರಡಿದರು. ಇಸ್ಕಾನ್ ದೇವಸ್ಥಾನ ಕೂಡ ಇದೇ ತತ್ವದ ಮೇಲೆ ನಿಂತಿರೋದು.

ಮೂಲ

9) ಬಂಗಾಲದ ಮೊದಲ ನವಾಬ ಮುರ್ಶೀದ್ ಕುಲಿ ಖಾನ್ ಕರ್ನಾಟಕ ಮೂಲದೋರು

1670ರಲ್ಲಿ ಕರ್ನಾಟಕದಲ್ಲಿ ಹುಟ್ಟಿದ್ದು. ಔರಂಗಝೇಬನು ಇವರನ್ನು ಬಂಗಾಲಕ್ಕೆ ಕಳಿಸಿದ್ದು. 

ಮೂಲ

10) ಡಾ.ರಾಜ್ ಮಾಡಿದ್ದ ಮಹಿಷಾಸುರ ಮರ್ದಿನಿ ಫಿಲಂ ಬೆಂಗಾಲಿಯಲ್ಲಿ ಆಗ್ಲೆ ತಕ್ಷಣನೇ ಡಬ್ ಮಾಡಿದ್ರು

"ದುರ್ಗಾ ಮಾ" ಅಂತ ಹೆಸ್ರು ಕೊಟ್ರು.

ಮೂಲ

11) ದಸರಾ ಹಬ್ಬ ಬಂಗಾಲದಲ್ಲಿ ನಮ್ ತರನೇ ತುಂಬಾ ಗ್ರ್ಯಾಂಡ್ ಆಗಿ ಆಚರಣೆ ಮಾಡ್ತಾರೆ – ಕಾಲಿಪೂಜೋ ಅಂತಾರೆ…

ಕರ್ನಾಟಕದ ನಾಡ ಹಬ್ಬ ದಸರಾ.

ಮೂಲ

12) ಬಂಗಾಲಿ ಭಾಷೇಲಿ "ಈ" ಅಂದ್ರೆ ಕನ್ನಡದಲ್ಲಿ ಯಾವ ಅರ್ಥ ಇದ್ಯೋ ಅದೇ

"ಈ ಸಮಯ್" ಅಂತ ಒಂದು ದೈನಿಕ ನ್ಯೂಸ್ ಪೇಪರ್ ಇದೆ.

ಮೂಲ

13) ಸ್ವಾಮಿ ವಿವೇಕಾನಂದ ಕಲ್ಕತ್ತಾದಿಂದ ಬಂದು ಮೈಸೂರು ಅರಮನೆಯಲ್ಲಿ 3-4 ವಾರ ಇದ್ರು

ಅಮೇರಿಕಾಗೆ ಹೋಗಕ್ಕೆ ಮೈಸೂರಿನ ರಾಜರು ಕೂಡ ಹಣ ಕೊಟ್ಟಿದ್ರು. ಹಾಗೆ ಕರ್ನಾಟದೆಲ್ಲೆಡೆ ರಾಮಕೃಷ್ಣ ಮಠ ಅಲಿಯಾಸ್ ಬೇಲೂರು ಮಠ ಸ್ಥಾಪನೆ ಮಾಡಿದ್ರು. ಬೇಲೂರು ಕೂಡ ನಮ್ಮ ಕನ್ನಡದ ಪದ ಅಲ್ವೇ!

ಮೂಲ

14) ಪ್ರಿಯಾಂಕ ಉಪೇಂದ್ರ ಹುಟ್ಟಿದ್ದು ಬೆಳೆದಿದ್ದು ಎಲ್ಲ ಕೋಲ್ಕತ್ತಾದಲ್ಲಿ; ಬೆಂಗಾಲಿ ಫಿಲಮ್ಮಲ್ಲೂ ಮಾಡಿದಾರೆ.

1996ರಲ್ಲಿ ಮಿಸ್ ಕೋಲ್ಕತ್ತ ಆಗಿ ನಂತರ ಕನ್ನಡ ಚಿತ್ರರಂಗಕ್ಕೆ ಬಂದಿದ್ದು. ಪ್ರಿಯಾಂಕಂದು ಮೊದಲ ಬೆಂಗಾಲಿ ಫಿಲಂ ಹೆಸ್ರು "ಯೋದ್ಧ" ಅಂತ.

ಮೂಲ

15) ಕನ್ನಡ ಮತ್ತು ಬಂಗಾಳಿ ಭಾಷೆ ಎರಡೂ ಕೂಡ ಬ್ರಾಹ್ಮಿ ಲಿಪಿಯಿಂದ ಬಂದಿದ್ದು

ಮೂಲ

16) ಬೆಂಗಾಲಿ ಕಿಶೋರ್ ಕುಮಾರ್ "ಆಡು ಆಟ ಆಡು" ಅನ್ನೋ ಸೂಪರ್ ಹಿಟ್ ಕನ್ನಡದ ಹಾಡು ಹೇಳಿದಾರೆ

 
ಹೊರಚಿತ್ರ: ಮೂಲ