ಸಿಲಿಕಾನ್ ಸಿಟಿ, ಸಿಕ್ಕಾಪಟ್ಟೆ ಬೇಗ ಡೆವೆಲಪ್ ಆಗ್ತಿರೋ ಊರು, ನಮ್ಮ ರಾಜಧಾನಿ, ಟ್ರಾಫಿಕ್ ಸಿಟಿ, ಕೋಟಿ ಜನರಿಗೆ ಊಟ ಕೊಡುತ್ತಿರುವ ಊರು, ತಾಂತ್ರಿಕ ನಗರ… ಇಂತ ಬೆಂಗಳೂರಿನಲ್ಲಿ ಬೇಜಾನ್ ಜನ ಹೊಟ್ಟೆ ಪಾಡ್ ನೋಡ್ಕೊತಿದಾರೆ. ಈ ವಿಶಾಲವಾದ ಬೆಂಗಳೂರಿನ ಬಗ್ಗೆ ಒಂದಿಷ್ಟು ಮಜಾ ಕೊಡೊ ವಿಷವಯಗಳನ್ನ ನಾವಿವತ್ತು ಹೇಳ್ತೀವಿ ಬನ್ನಿ ನೋಡೋಣ

1 . ಬೆಂಗಳೂರಿನ ಕ್ಲಬ್ ಜಮಾನದಿಂದಾನು ಹೆಸರಾಂತ ಕ್ಲಬ್. ದೊಡ್ಡ್ ದೊಡ್ಡ್ ಮನುಷ್ಯರೆಲ್ಲ ಇಲ್ಲೇ ಬರೋದು. ಆಗಿನ ಕಾಲದಲ್ಲೇ Winston Churchil ಗೆ ರೂಪಾಯಿ ಸಾಲ ಕೊಟ್ಟಿತ್ತು ಈ ಕ್ಲಬ್. ಆ ಯಪ್ಪಾ ಇನ್ನು ತೀರಿಸಿಲ್ಲ

2. ಈಗಿನ ಸ್ವಾತಂತ್ರ್ಯ ಉದ್ಯಾನವನ (Freedom Park) ಜಮಾನದಲ್ಲಿ ಜೈಲಾಗಿತ್ತು. ದೊಡ್ಡ ದೊಡ್ಡ ರಾಜಕಾರಣಿಗಳೆಲ್ಲ ಈ ಜೈಲಲ್ಲಿ ಇದ್ರು

3. ಐ.ಟಿ. ಕಂಪನಿಗಳು ಬರಕ್ಕೆ ಮುಂಚೆ ಟ್ರಿನಿಟಿ ಸರ್ಕಲ್ ಬೆಂಗಳೂರಿನ ಕೊನೆಯಾಗಿತ್ತು, ಅಲ್ಲಿಂದ ಮುಂದಿನ ಭಾಗ ಏರ್ಪೋರ್ಟ್ ಆಗಿತ್ತು, ಏಯ್ ಊರಾಚೆ ಜಾಗ ಅದು ಅನ್ನೋರು

4. ಕೆರೆಗಳನ್ನ ಮುಚ್ಚಿ ಬೇಜ್ಜಾನ್ ಬಿಲ್ಡಿಂಗ್ ಕಟ್ಟಿದಾರೆ. 285 ಕೆರೆಗಳಿದ್ವು, ಈಗ ಅಷ್ಟೊಂದ್ ಇತ್ತು ಅನ್ನೋ ಗುರುತು ಸಿಗಲ್ಲ

5. ಕನಕಪುರ ರಸ್ತೆಯ ಕೆಬ್ಬೆದೊಡ್ಡಿಯಲ್ಲಿ ಪ್ರಪಂಚದ ಅತಿ ದೊಡ್ಡ ಧ್ಯಾನ ಮಂದಿರಗಲ್ಲಿ ಒಂದಾದ ಧ್ಯಾನ ಮಂದಿರ ಇದೆ (Maitreya Buddha Pyramid). ಸುಮಾರ್ ಸಾವಿರ ಜನ ಒಂದೇ ಸರ್ತಿ ಇಲ್ಲಿ ಸೇರ್ಬೋದು

6. ಶಿವಾಜಿನಗರಾನ ಬ್ಲಾಕ್ ಪ್ಯಾಲಿ ಅಂತ ಕರೀತಿದ್ರು. ಅಕ್ಕಿನಾ ಇಲ್ಲಿ ಸಿಕ್ಕಾಪಟ್ಟೆ ಬೆಳೀತಿದ್ರು ಅದಕ್ಕೆ ಈ ಹೆಸರು

7. ಮೀರತ್ನಲ್ಲಿ ಸಿಪಾಯಿ ದಂಗೆ ಆಗಕ್ಕೆ ಮುಂಚೆ (1857), ಬೆಂಗಳೂರು ಪೋರ್ಟಿನಲ್ಲಿ ಸಿಪಾಯಿ ದಂಗೆ ಎದ್ದಿತ್ತು (1832). ಹಾಗಾಗಿ, ಮೊದಲು ಸಿಪಾಯಿ ದಂಗೆ ಎದ್ದಿದ್ದು ನಮ್ಮ ಬೆಂಗಳೂರಲ್ಲಿ

8. ನಮ್ಮ ದೇಶದ ಮೊದಲ ಮ್ಯಾಪ್ ಶುರುವಾಗಿದ್ದು ಟ್ರಿನಿಟಿ ಚರ್ಚಿನಿಂದ. ಗುರುತಿಗೆ ಅಂತ ಇಟ್ಟಿರೋ ಕಲ್ಲು ಇವತ್ತಿಗೂ ಇಲ್ಲೇ ಇದೆ

9. ಎ.ಸಿ. ವೋಲ್ವೋ ಸಿಟಿ ಬಸ್ ನಮ್ಮ ದೇಶದಲ್ಲಿ ಮೊದಲು ಶುರುವಾಗಿದ್ದೇ ಬೆಂಗ್ಳೂರಲ್ಲಿ

10. ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಇರೋದು ನಮ್ಮ ಬೆಂಗ್ಳೂರಲ್ಲೇ

ಬರಹದ ಮೂಲ : ಗೂಗಲ್ ಬರಹಗಳು