ಬೆಂಗಳೂರು ನಮ್ಮ ರಾಜಧಾನಿ, ಇಲ್ಲಿ ಎಲ್ಲ ಸಿಗತ್ತೆ. ಮೈಸೂರು ನಮ್ಮ ರಾಜರ ಊರು. ಇಲ್ಲಿ ನೆಮ್ಮದಿ ಸಿಗತ್ತೆ. ನೀವ್ ಏನೇ ಹೇಳಿ ಸ್ವಾಮೀ ಮೈಸೂರಲ್ಲಿ ಇದ್ದು ಬಂದ್ರಿ ಅಂದ್ರೆ ಬೆಂಗ್ಳೂರಲ್ಲಿರಕ್ಕೆ ಖಂಡಿತ ಬೇಜಾರಾಗತ್ತೆ. ಮೈಸೂರನ್ನ ಮಿಸ್ ಮಾಡ್ಕೊಳೋದು ಗ್ಯಾರಂಟಿ. ನಾನು ಬೆಂಗಳೂರಿನವನೇ, ಆದ್ರೆ ನಾಲ್ಕ್ ವರ್ಷ ಮೈಸೂರಲ್ಲಿದ್ದೆ, ಅಬ್ಬಾ ಒಂತರ ಸ್ವರ್ಗ ಮೈಸೂರು. ಬನ್ನಿ ವ್ಯತ್ಯಾಸ ನೋಡೋಣ

1. ಬೆಂಗ್ಳೂರಲ್ಲಿರೋರು ಮಗ ಈ ವೀಕೆಂಡ್ ನಂದಿ ಬೆಟ್ಟಕ್ ಹೋಗಣ ಅಂತಾರೆ. ಮೈಸೂರಿನವರು ಮಗ ಯಾವನ್ ವೀಕೆಂಡ್ ತಂಕ ಕಾಯ್ತಾನೆ, ಇವತ್ ಸಂಜೆನೇ ಚಾಮುಂಡಿ ಬೆಟ್ಟಕ್ ಹೋಗಣ ಅಂತಾರೆ

2. ಬೆಂಗಳೂರು – 2BHK ಅಪಾರ್ಟ್ಮೆಂಟ್ — 25 ಸಾವಿರ
ಮೈಸೂರು – 3BHK ಅಪಾರ್ಟ್ಮೆಂಟ್ — 20 ಸಾವಿರ

3. ಬೆಂಗಳೂರು – ಮಗ ವೀಕೆಂಡು ಊಟಿಗೆ ಹೋಗಣ
ಮೈಸೂರು – ಮಗ ಬೆಳಿಗ್ಗೆ ತಿಂಡಿ ತಿನ್ನಕ್ಕೆ ಊಟಿಗ್ ಹೋಗಣ

4.  ಬೆಂಗಳೂರು – ಪಾರ್ಕಿಂಗ್ ಚಾರ್ಜ್ ನೂರ್ ರೂಪಾಯಿ
ಮೈಸೂರು – ಪಾರ್ಕಿಂಗ್ ಚಾರ್ಜ್ ಆಹ್? ಹಂಗಂದ್ರೇನು ಗುರು?

5. ಬೆಂಗಳೂರು – ಲೋ ಮಗ ಬರಕ್ಕಾಗಲ್ಲ ಇನ್ನು ಟ್ರಾಫಿಕ್ಕಲ್ಲೇ ಸಿಗಾಕೊಂಡಿದೀನಿ
ಮೈಸೂರು – ಮಗ 10 ನಿಮಷ ತಡಿ ನೀ ಹೇಳಿದ್ ಜಾಗಕ್ ಬರ್ತೀನಿ

6. ಮೈಸೂರು – Cleanest ಸಿಟಿ

7. ಮೈಸೂರಲ್ಲಿ ಲೈಫು ಆರಾಮು

ಒಟ್ನಲ್ಲಿ ನೀವೇನೇ ಹೇಳಿ ಮೈಸೂರಲ್ಲಿರೋ ನೆಮ್ಮದಿ ಜೀವನ ನಿಮಗೆ ಬೆಂಗ್ಳೂರಲ್ಲಿ ಸಿಗಲ್ಲ